SOCIAL MEDIA

Newsletter

PARTNER SITES
Select Language Select State

ಮೈಸೂರು ದಸರಾ ಉದ್ಘಾಟನೆಗೂ ಮುನ್ನ ಅವಘಡ! ನಂದಿ ಧ್ವಜದ ಕಂಬ ಮುರಿದು ಆತಂಕ

Mysore: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ.

Written By Ramya. R. Gowda
Published: Oct 11, 2026, 02:49 PM IST | Updated: Oct 11, 2026, 03:04 PM IST
Join

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬದ ಸಂಭ್ರಮಕ್ಕೆ ಮೈಸೂರು ಸಜ್ಜಾಗಿರುವ ಬೆನ್ನಲ್ಲೇ ಚಾಮುಂಡಿಬೆಟ್ಟದಲ್ಲಿ ಅವಘಡವೊಂದು ಸಂಭವಿಸಿದೆ. ಸಿಎಂ ಸ್ವಾಗತಕ್ಕಾಗಿ ತರಲಾಗಿದ್ದ ಸಾಂಪ್ರದಾಯಿಕ ನಂದಿ ಧ್ವಜದ ಕಂಬ ಏಕಾಏಕಿ ಮುರಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಅಷ್ಟಕ್ಕೂ ನಡೆದಿದ್ದೇನು? ಈ ಸ್ಟೋರಿ ನೋಡಿ.

ನಾಡಹಬ್ಬ ಮೈಸೂರು ದಸರಾ...ನಾಡಿನಾದ್ಯಂತ ಸಂಭ್ರಮ ಮನೆಮಾಡಿರುವ ಸಮಯ. ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟ ಸಕಲ ಸಿದ್ಧತೆಗಳೊಂದಿಗೆ ಸಜ್ಜಾಗಿತ್ತು. ಈ ನಡುವೆ ಮಹಿಷಾಸುರನ ಪ್ರತಿಮೆ ಬಳಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಮುಖ್ಯಮಂತ್ರಿಯವರ ಸ್ವಾಗತಕ್ಕಾಗಿ ತರಲಾಗಿದ್ದ ಸಾಂಪ್ರದಾಯಿಕ ನಂದಿ ಧ್ವಜವನ್ನು ಹಿಡಿದು ಕಲಾವಿದರು ಕುಣಿಯುತ್ತಿದ್ದ ವೇಳೆ, ಧ್ವಜದ ಕಂಬ ಏಕಾಏಕಿ ಮುರಿದುಬಿದ್ದಿದೆ.

ನಂದಿ ಧ್ವಜದ ಕಂಬ ಮುರಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಕಲಾವಿದರು ಕ್ಷಣಕಾಲ ಆತಂಕಕ್ಕೊಳಗಾಗಿದ್ದಾರೆ. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಕಲಾವಿದರು, ಮುರಿದುಬಿದ್ದ ಕಂಬದಿಂದ ಯಾವುದೇ ತೊಂದರೆಯಾಗದಂತೆ ಅದನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದಂತಾಗಿದೆ. ದಸರಾ ಮಹೋತ್ಸವದ ಆರಂಭದ ದಿನವೇ ಈ ಘಟನೆ ನಡೆದಿರುವುದು ಸಾರ್ವಜನಿಕರು ಹಾಗೂ ಕಲಾ ತಂಡದ ಸದಸ್ಯರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ಮಾಹಿತಿ ಇಲ್ಲ. ದಸರಾ ಸಂಭ್ರಮದ ನಡುವೆ ನಡೆದ ಈ ಘಟನೆ ಇದೀಗ ಗಮನ ಸೆಳೆದಿದೆ.

ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೂ ಮುನ್ನ ಚಾಮುಂಡಿಬೆಟ್ಟದಲ್ಲಿ ನಂದಿ ಧ್ವಜದ ಕಂಬ ಮುರಿದುಬಿದ್ದ ಘಟನೆ ನಡೆದಿದೆ. ಕಲಾವಿದರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿದೆ.

ನಂದಿ ಧ್ವಜದ ಕಂಬ ಮುರಿದು ಬೀಳುತ್ತಿದ್ದಂತೆ ಸ್ಥಳದಲ್ಲಿದ್ದ ಕಲಾವಿದರು ಕ್ಷಣಕಾಲ ಆತಂಕಕ್ಕೊಳಗಾಗಿದ್ದಾರೆ. ಆದರೆ ತಕ್ಷಣವೇ ಎಚ್ಚೆತ್ತುಕೊಂಡ ಕಲಾವಿದರು, ಮುರಿದುಬಿದ್ದ ಕಂಬದಿಂದ ಯಾವುದೇ ತೊಂದರೆಯಾಗದಂತೆ ಅದನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿದ್ದಾರೆ.ದಸರಾ ಮಹೋತ್ಸವದ ಆರಂಭದ ದಿನವೇ ಈ ಘಟನೆ ನಡೆದಿರುವುದು ಸಾರ್ವಜನಿಕರು ಹಾಗೂ ಕಲಾ ತಂಡದ ಸದಸ್ಯರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ಮಾಹಿತಿ ಇಲ್ಲ. ದಸರಾ ಸಂಭ್ರಮದ ನಡುವೆ ನಡೆದ ಈ ಘಟನೆ ಇದೀಗ ಗಮನ ಸೆಳೆದಿದೆ.

 


 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES