SOCIAL MEDIA

Newsletter

PARTNER SITES
Select Language Select State

ಮೇಲುಕೋಟೆಯಲ್ಲಿ ದೀಪಾವಳಿ ಬದಲು ಕರಾಳ ದಿನ ಆಚರಣೆ ಏಕೆ? ಇಲ್ಲಿದೆ ಟಿಪ್ಪು ಕಾಲದ ಕರಾಳ ಇತಿಹಾಸ

ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮದ ವೇಳೆ ಆದರೆ ಮೇಲುಕೋಟೆಯಲ್ಲಿ ಮಾತ್ರ ಸೂತಕದ ಛಾಯೆ. ಕರಾಳ ದಿನ ಆಚರಣೆ: ಇದರ ಹಿಂದಿದೆ ಭೀಕರ ನರಮೇಧದ ಕಥೆ.

Written By Yashaswini V
Published: Nov 09, 2026, 09:36 IST | Updated: Nov 09, 2026, 09:37 IST
Join

ಒಂದೆಡೆ ನಾಡಿನೆಲ್ಲೇಡೆ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ, ರಾಜ್ಯದ ಐತಿಹಾಸಿಕ ಹಿನ್ನಲೆ ಹೊಂದಿರುವ ಮೇಲುಕೋಟೆಯಲ್ಲಿ ಮಾತ್ರ ಸೂತಕದ ಛಾಯೆ ಆವರಿಸಿದೆ. ಪ್ರತಿ ವರ್ಷ ದೀಪಾವಳಿ ಸಂಭ್ರಮ ಒಂದೆಡೆ ಆದರೆ, ನರಕ ಚತುರ್ದಶಿಯ ಸಂದರ್ಭದಲ್ಲಿ ಮೇಲುಕೋಟೆಯಲ್ಲಿ ʼಕರಾಳ ದಿನʼವನ್ನು ಆಚರಿಸಲಾಗುತ್ತದೆ. ಇದರ ಹಿಂದೆ ರೋಚಕ ಕಥೆ ಇದ್ದು, ಮಂಡ್ಯ ಮರೆತುಹೋದ ಭಯಾನಕ ಇತಿಹಾಸ ಇಲ್ಲಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಮೇಲುಕೋಟೆಯಲ್ಲಿ ಇಂದು ದೀಪಾವಳಿ ಹಬ್ಬದ ಬದಲು ಕರಾಳ ದಿನವನ್ನು ಆಚರಿಸಲಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಟಿಪ್ಪು ಆಡಳಿತದಲ್ಲಿ ನಡೆದಿದ್ದ ಮಂಡ್ಯಂ ಅಯ್ಯಂಗಾರ್‌ರ ನರಮೇಧ.

ದೀಪಾವಳಿ ಬದಲು ಕರಾಳ ದಿನ: 
ಟಿಪ್ಪು ಆಡಳಿತದಲ್ಲಿ ಮೇಲುಕೋಟೆಯಲ್ಲಿ ದೀಪಾವಳಿ ದಿನದಂದೇ ಸುಮಾರು 700ಕ್ಕೂ ಹೆಚ್ಚು ಮೇಲುಕೋಟೆ ಮಂಡ್ಯಂ ಅಯ್ಯಂಗಾರರ ಹ*ತ್ಯೆ ನಡೆದಿತ್ತು. ಘಟನೆ ಹಿನ್ನೆಲೆ ಸುಮಾರು 200 ವರ್ಷಗಳಿಂದ ಮೇಲುಕೋಟೆಯ ಮಂಡ್ಯಂ ಅಯ್ಯಂಗಾರರು ದೀಪಾವಳಿ ಆಚರಿಣೆ ಮಾಡದೇ ಇದರ ಬದಲಿಗೆ ಕರಾಳ ದಿನವನ್ನು ಆಚರಿಸುತ್ತಾರೆ.

ಹೌದು, ಒಂದೆಡೆ ಇಡೀ ದೇಶ ಬೆಳಕಿನ ಹಬ್ಬವನ್ನು ಆಚರಿಸಲು ಕಾತುರರಾಗಿ ಕಾಯುತ್ತಿದ್ದರೆ, ಮತ್ತೊಂದೆಡೆ ಈ ಒಂದು ಪಟ್ಟಣ ಮಾತ್ರ ಎಂದಿಗೂ ಬೆಳಕಿನ ಹಬ್ಬವನ್ನು ಆಚರಿಸುವುದಿಲ್ಲ. ಎಲ್ಲೆಡೆ ಪಟಾಕಿ ಧಮಾಕ ಸದ್ದು ಮಾಡುತ್ತಿದ್ದರೆ ಮಂಡ್ಯದ ಮೇಲುಕೋಟೆಯಲ್ಲಿ ಮಾತ್ರ ನೀರವ ಮೌನ ಆವರಿಸಿರುತ್ತದೆ.

ಮಂಡ್ಯ ಅಯ್ಯಂಗಾರ್‌ರ ಪ್ರತಿಜ್ಞೆ:
18ನೇ ಶತಮಾನದ ಅಂತ್ಯ ಭಾಗದಲ್ಲಿ ಟಿಪ್ಪು ಆಳ್ವಿಕೆಯಲ್ಲಿ ನರಕ ಚತುರ್ದಶಿ ಆಚರಣೆಗಾಗಿ ನೆರೆದಿದ್ದ ಮಂಡ್ಯ ಅಯ್ಯಂಗಾರ್‌ ಸಮುದಾಯಕ್ಕೆ ಸೇರಿದ್ದ 700 ರಿಂದ 800 ಮಂದಿಯನ್ನು ನಿರ್ಧಾಕ್ಷಿಣ್ಯವಾಗಿ ಟಿಪ್ಪು ಸುಲ್ತಾನ್‌ ಸೈನಿಕರು ಭೀಕರವಾಗಿ ಹ*ತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಬದುಕುಳಿದಿದ್ದ ಮಂಡ್ಯ ಅಯ್ಯಂಗಾರ್‌ರು ʼನರಕ ಚತುರ್ದಶಿಯಂದು ಮತ್ತೆ ಎಂದಿಗೂ ದೀಪಗಳನ್ನು ಹಚ್ಚುವುದಿಲ್ಲʼ ಎಂದು ಪ್ರತಿಜ್ಞೆ ಮಾಡಿದ್ದರು. ತಮ್ಮ ಹಿರಿಯರ ಪ್ರತಿಜ್ಞೆಯನ್ನು ಇಂದಿಗೂ ಉಳಿಸಿಕೊಂಡು ಪಾಲಿಸುತ್ತಿರುವ ಮಂಡ್ಯ ಅಯ್ಯಂಗಾರ್‌ ಸಮುದಾಯದ ಪೀಳಿಗೆಯವರು ದೀಪಾವಳಿಯ ದಿನ ʼಕರಾಳ ದಿನʼವನ್ನಾಗಿ ಆಚರಿಸಲಾಗುತ್ತದೆ.

ಟಿಪ್ಪು ನರಮೇಧ ಖಂಡಿಸಿ ಮೇಲುಕೋಟೆಯಲ್ಲಿ ಕರಾಳ ದಿನ ಆಚರಣೆ: 
ಅಂದಿನಿಂದ ಮಂಡ್ಯಂ ಅಯ್ಯಂಗಾರರ ಹ*ತ್ಯೆ ಖಂಡಿಸಿ ದೀಪಾವಳಿ ದಿನ ಕರಾಳ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷವೂ ಕೂಡ ಮೇಲುಕೋಟೆಯಲ್ಲಿ ಬಿಜೆಪಿ ಮತ್ತು ಹಿಂದುಪರ ಕಾರ್ಯಕರ್ತರಿಂದ ಕರಾಳ ದಿನ ಆಚರಣೆ ನಡೆಸಿದ್ದು, ಮೇಲುಕೋಟೆಯ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ಮೂಲಕ ಕರಾಳ ದಿನವನ್ನು ಆಚರಿಸಿದ್ದಾರೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES