ಅವರೆಲ್ಲ ತಮ್ಮ ತಮ್ಮ ಕೆಲಸಗಳನ್ನು ಮುಗಿಸಿ ಮನೆಗಳತ್ತ ತೆರಳುತ್ತಿದ್ದರು. ಆದರೆ, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾದು ಕುಳಿತ್ತಿದ್ದ ಜವರಾಯ ಅವರನ್ನ ಸೇರಿಸಿದ್ದು ಮಾತ್ರ ಮಸಣದತ್ತ. ಕೊಡಗಿನ ಆನೆಕಾಡು ಬಳಿ ನಡೆದ ಭೀಕರ ರಸ್ತೆ ಅಪಘಾತ ಕೊಡಗಿನ ಜನತೆಯನ್ನ ಬೆಚ್ಚಿ ಬಿಳಿಸಿದ್ರೆ ಕುಟುಂಬುದವರನ್ನ ಶೋಕ ಸಾಗರದಲ್ಲಿ ಮುಳುಗಿಸಿದೆ.
ಸರಣಿ ಅಪಘಾತಕ್ಕೆ ಮೂರು ವಾಹನಗಳು ಸಂಪೂರ್ಣ ಜಖಂ:
ಹೌದು, ಹೀಗೊಂದು ಘನಘೋರ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಸಮೀಪದ ಆನೆಕಾಡು. ಕೆಲಸ ಮುಗಿಸಿ ಮನೆಯತ್ತ ಬೈಕ್ ಸವಾರ ತೆರಳುತ್ತಿದ್ರೆ, ಕೇರಳದ ನೊಂದಣಿಕ ಪಿಕಪ್ ವಾಹನ ಗೂಡ್ಸ್ ಡಂಪ್ ಮಾಡಿ ಮಡಿಕೇರಿಯತ್ತ ತೆರಳುತ್ತಿತ್ತು. ಹಾಗೆ ಗೌರಿ ಗಣೇಸೋತ್ಸವ ನೋಡಿ ಸ್ನೇಹಿತರ ತಂಡ ಕಾರಿನಲ್ಲಿ ಕುಶಾಲನಗರದತ್ತ ಪ್ರಯಾಣ ಬೆಳೆಸಿದ್ರು. ಆದ್ರೆ ಆನೆಕಾಡು ನೇರ ರಸ್ತೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಕೇರಳ ನೋಂದಣಿಯ ಪಿಕಪ್ ವಾಹನ ಹಾಗೂ ಕಾರು ಬೈಕ್ ನಡುವೆ ನಡೆದ ಸರಣಿ ಅಪಘಾತ ಸಂಭವಿಸಿದ್ದು ನಾಲ್ವರು ದಾರುಣವಾಗಿ ಸಾವನ್ನಪಿದ್ದರೆ, ಐದಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಮೂರು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಭೀಕರ ರಸ್ತೆ ಅಪಘಾತದಲ್ಲಿ ಕುಶಾಲನಗರ ಸಮೀಪದ. ಹೊಸಕೋಟೆ ನಿವಾಸಿ ಉಣ್ಣಿ, ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಆದರ್ಶ್ ಹಾಗೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕುಮಾರ್ ಮೃತಪಟ್ಟಿದ್ದಾರೆ. ಜೊತೆಗೆ ಮಂಗಳೂರಿಗೆ ಸಾಗಿಸುವಾಗ ಕೇರಳದ ಪಿಕಪ್ ಚಾಲಕ ಕೂಡ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.
ಮೂರು ವಾಹನಗಳಲ್ಲಿ ಒಟ್ಟು ಒಂಬತ್ತು ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಪಿಕಪ್ ವಾಹನದಲ್ಲಿ ಇಬ್ಬರು, ಕಾರಿನಲ್ಲಿ 6 ಹಾಗೂ ಬೈಕ್‌ನಲ್ಲಿ ಒಬ್ಬ ಇದ್ದ ಎನ್ನಲಾಗಿದ್ದು, ಅಪಘಾತದಲ್ಲಿ ನಾಲ್ವರು ಮೃತಪಟ್ಟರೆ ಉಳಿದರವ ಸ್ಥತಿ ಕೂಡ ಗಂಭೀರವಾಗಿದ್ದು ಕುಶಾಲನಗರ ಮೈಸೂರು ಹಾಗೂ ಮಡಿಕೇರಿ ಮಂಗಳೂರಿಗೆ ರವಾನಿಸಲಾಗಿದೆ.
ಭೀಕರ ರಸ್ತೆ ಅಪಘಾತ ಆಗುತ್ತಿದಂತೆ ಕೂಡಲೆ ಸ್ಥಳೀಯರು ಆಗಮಿಸಿ ಕಾರು ಪಿಕಪ್ ನಲ್ಲಿ ಸಿಲುಕಿದ್ದವರನ್ನ ಹೊರ ತೆಗೆದು ಆಸ್ಪತ್ರೆಗೆಗೆ ಸಾಗಿಸಿದ್ದಾರೆ. ಈ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.
ಒಟ್ಟಿನಲ್ಲಿ ತಮ್ಮೆಲ್ಲ ಕೆಲಸಗಳನ್ನ ಮುಗಿಸಿ ಮನೆಗಳನ್ನು ಸೇರಬೇಕಿದ್ದವರು ಸೇರಿದ್ದು ಮಾತ್ರ ಮಸಣಕ್ಕೆ ಈ ಒಂದು ಬೀಕರ ಅಪಘಾತ ನಿಜಕ್ಕೂ ಕೊಡಗಿನ ಜನತೆಯನ್ನ ಬೆಚ್ಚಿಬೀಳಿಸಿದ್ದಂತ್ತು ಸತ್ಯ.