ಗಂಡನಿಗೆ ಮಾಟ-ಮಂತ್ರ ಮಾಡಿಸಿ ಬೇರೊಬ್ಬನ ಜೊತೆ ಹೆಂಡತಿ ಫುಲ್ ಜಾಲಿ..ಜಾಲಿ.. ಆದ್ರೆ ಆ ಜೀವ ಉಳಿಯಲಿಲ್ಲ!
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಮೃತ ವ್ಯಕ್ತಿ. ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು.
Hassan district Channarayapatna taluk Hirisave Belagihalli village: ಅನೈತಿಕ ಸಂಬಂಧದ ಜಂಜಾಟಕ್ಕೆ ಮತ್ತು ಪತ್ನಿಯ ದ್ರೋಹಕ್ಕೆ ಮನನೊಂದು ವ್ಯಕ್ತಿಯೊಬ್ಬ ತನ್ನ ಜೀವವನ್ನೇ ಕಳೆದುಕೊಂಡಿರುವ ಅತ್ಯಂತ ಮರುಕ ಹುಟ್ಟಿಸುವ, ಗಂಭೀರವಾದ ಘಟನೆಯೊಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಆತ್ಮಹತ್ಯೆಗೆ ಶರಣಾದ ದುರ್ದೈವಿ ವ್ಯಕ್ತಿ. ಸಾವಿಗೂ ಮುನ್ನ ಆತ ತನ್ನ ಮೊಬೈಲ್‌ನಲ್ಲಿ ಸೆಲ್ಫಿ ವಿಡಿಯೋ ಮಾಡಿ, ಪತ್ನಿಯ ಅಕ್ರಮ ಸಂಬಂಧದ ಕುರಿತು ಎಳೆಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟಿರುವುದು ಸದ್ಯ ಎಲ್ಲೆಡೆ ಹರಡುತ್ತಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಬೆಳಗಿಹಳ್ಳಿ ಗ್ರಾಮದ ನಿವಾಸಿ ದೊರೆ (27) ಮೃತ ವ್ಯಕ್ತಿ. ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ದಂಪತಿ ನಡುವೆ ಬಿರುಕು ಮೂಡಿದೆ. ಅದರಲ್ಲೂ ಹಿರೀಸಾವೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ದಂಪತಿಯ ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದು, ಸುಮಾರು 15 ದಿನಗಳ ಹಿಂದೆ ಪತ್ನಿ ತವರು ಮನೆಗೆ ತೆರಳಿದ್ದಳು. ಮನೆ ಬಿಟ್ಟು ಹೋದವಳು ವಾಪಸ್ ಬಾರದೇ ಇದ್ದುದರಿಂದ ದೊರೆ ಮಾನಸಿಕವಾಗಿ ತೀವ್ರ ನೊಂದಿದ್ದರು. ಇದರಿಂದ ಆತಂಕಕ್ಕೆ ಒಳಗಾಗಿದ್ದನು.
ಪತ್ನಿ ತವರು ಮನೆಗೆ ಹೋದ ಬಳಿಕ ಅಥವಾ ಅದಕ್ಕೂ ಮುನ್ನವೇ ಅವಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ದೊರೆ ವಿಡಿಯೋದಲ್ಲಿ ಆರೋಪಿಸಿದ್ದಾನೆ. ತಾನು ಪತ್ನಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆ. ಆದರೆ ಆಕೆ ಮಾತ್ರ ತನಗೆ ದ್ರೋಹ ಬಗೆದಿದ್ದಾಳೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಹೆಂಡತಿಗೆ ಪರಪುರುಷನ ಜೊತೆ ಅಕ್ರಮ ಸಂಬಂಧವಿದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಈ ವಿಷಯವು ಆಕೆಯ ಪೋಷಕರಿಗೆ ಹಾಗೂ ಕುಟುಂಬದವರಿಗೂ ಸಂಪೂರ್ಣವಾಗಿ ತಿಳಿದಿತ್ತು. ಆದರೆ ಮಗಳ ತಪ್ಪನ್ನು ತಿದ್ದುವ ಬದಲು, ಪೋಷಕರೇ ಮಗಳ ಪರವಾಗಿ ನಿಂತು ಮಾತನಾಡುತ್ತಿದ್ದರು ಎಂದು ಮೃತ ದೊರೆ ನೋವಿನಿಂದ ಹೇಳಿಕೊಂಡಿದ್ದಾರೆ.
ಈ ವಿವಾದ ಮತ್ತಷ್ಟು ಆಘಾತಕಾರಿ ತಿರುವು ಪಡೆದುಕೊಂಡಿದ್ದು, ತನ್ನ ಪತ್ನಿ ತನ್ನ ಮೇಲೆ ಮಾಟ-ಮಂತ್ರ ಅಥವಾ ಕರಾಳ ವಿದ್ಯೆ ಮಾಡಿಸಿದ್ದಾಳೆ ಎಂದೂ ಸಹ ದೊರೆ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಸಂಸಾರದಲ್ಲಿ ಇಷ್ಟೆಲ್ಲಾ ಅನಾಹುತಗಳು ಮತ್ತು ಮೋಸಗಳು ನಡೆಯುತ್ತಿದ್ದರೂ, ಮುಗ್ಧ ಮನಸ್ಸಿನ ತನಗೆ ಎಲ್ಲೂ ನ್ಯಾಯ ಸಿಗಲಿಲ್ಲ ಎಂಬ ಹತಾಶೆ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರೀತಿಯಿಂದ ನಂಬಿದವಳೇ ತನ್ನ ಜೀವನದೊಂದಿಗೆ ಆಟವಾಡಿದ್ದಾಳೆ ಎಂದು ಕಣ್ಣೀರಿಡುತ್ತಾ ಅವರು ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ತಾನು ಈ ಲೋಕ ಬಿಟ್ಟು ಹೋಗುವ ಮುಂಚೆ ನ್ಯಾಯಕ್ಕಾಗಿ ಪೊಲೀಸ್ ಇಲಾಖೆಯ ಮೊರೆ ಹೋಗಿದ್ದಾರೆ. ನಾನು ಕರ್ನಾಟಕ ಪೊಲೀಸ್‌ಗೆ ಹೇಳ್ತಾ ಇದ್ದೀನಿ, ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ನನ್ನ ಮಾತು ಕೇಳಿ, ಅವಳ ಫೋನ್ ಕಾಲ್ ರೆಕಾರ್ಡಿಂಗ್‌ಗಳು ಹಾಗೂ ಡಿಟೇಲ್ಸ್ ತೆಗೆದುಕೊಂಡು ತನಿಖೆ ನಡೆಸಿ, ಅವಳನ್ನ ಮಾತ್ರ ಬಿಡ್ಬೇಡಿ ಎಂದು ವಿಡಿಯೋದಲ್ಲಿ ಕಣ್ಣೀರಿನೊಂದಿಗೆ ಮನವಿ ಮಾಡಿಕೊಂಡಿದ್ದಾರೆ. ನನ್ನಂತ ಮುಗ್ಧ ಮನಸ್ಸಿನವನಿಗೆ ಮೋಸ ಮಾಡಿರುವ ಈ ಪ್ರಕರಣದಲ್ಲಿ ನನಗೆ ಪೊಲೀಸ್ ಇಲಾಖೆಯ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ದೊರೆ ಹೇಳಿಕೊಂಡಿದ್ದಾರೆ.
ಈ ಸೆಲ್ಫಿ ವಿಡಿಯೋವನ್ನು ಮಾಡಿ ಮುಗಿಸಿದ ನಂತರ, ನೊಂದ ದೊರೆ ಅದೇ ಬಾಡಿಗೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ದೊರೆ ಬಿಟ್ಟುಹೋಗಿರುವ ಕೊನೆಯ ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಸಮಗ್ರ ತನಿಖೆಯನ್ನು ಕೈಗೊಂಡಿದ್ದಾರೆ.
ಪತ್ನಿ ಹಾಗೂ ಈ ಕೃತ್ಯಕ್ಕೆ ಪರೋಕ್ಷವಾಗಿ ಸಾಥ್ ನೀಡಿದವರ ವಿರುದ್ಧ ಸೂಕ್ತ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಮೃತನ ಕುಟುಂಬಸ್ಥರು ಮತ್ತು ಸ್ಥಳೀಯರ ಒಕ್ಕೊರಲಿನ ಒತ್ತಾಯವಾಗಿದೆ. ಪ್ರೀತಿಯ ಹೆಸರಿನಲ್ಲಿ ನಂಬಿಸಿ ದ್ರೋಹ ಬಗೆದ ಈ ಕೃತ್ಯ ಹಿರೀಸಾವೆ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.