ಮೈಸೂರು ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ವರ್ಗಾವಣೆಗೆ ಆ ಘಟನೆ ಕಾರಣನಾ ?? ಎಂಬ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ..ಸ್ಥಳ ತೋರಿಸದೆ ಸೀಮಾ ಲಾಟ್ಕರ್ ವರ್ಗಾವಣೆ ಮಾಡಿರುವ ಸರ್ಕಾರದ ನಡೆ ಇದೊಂದು ಪನಿಷ್ಮೆಂಟ್ ಟ್ರಾನ್ಸ್ ಫರ್ ಆಗಿದೆ ಎಂಬ ಸಂದೇಶ ಸಾರುತ್ತಿದೆ ..ಈ ಕುರಿತು ಇಲ್ಲಿದೆ ಡಿಟೈಲ್ ಸ್ಟೋರಿ .....
ಹೌದು ...ದಸರಾ ಅಂಬಾರಿ ಕಾರ್ಯಕ್ರಮದಲ್ಲಿ ಸಚಿವರಿಗೆ ಪೊಲೀಸರಿಂದ ಆದ ಅವಮಾನ ಪ್ರಕರಣಕ್ಕೆ ಮೈಸೂರು ಕಮಿಷನರ್ ವರ್ಗಾವಣೆಯಾಗಿದೆ ಎಂದು ವಿಧಾನಸೌಧದ ರಾಜಕೀಯ ಪಡಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಾ ಇದೆ.. ಮೈಸೂರು ದಸರಾ ನಂದಿಧ್ವಜ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಅಧಿಕಾರಿಗಳು ಕೆಲ ದಲಿತ ಸಚಿವರನ್ನು ನಿರ್ಬಂಧಿಸಿದ್ದಾರೆ ಎಂಬ ಆರೋಪ ಬಂತು...ದಸರಾದ ನಂದಿಧ್ವಜ ಪೂಜೆ ವೇಳೆ ಸಚಿವರಾದ ಶಿವರಾಜ್ ತಂಗಡಗಿ ,ಬಾಲಕೃಷ್ಣ, ನರೇಂದ್ರ ಸ್ವಾಮಿ ಹಾಗೂ ಬಸವಂತಪ್ಪ ಅವರನ್ನು ಪೊಲೀಸರು ನಿರ್ಬಂಧಿಸಿದ ಘಟನೆ ನಡೆದಿತ್ತು
ಹಿರಿಯ ಐಪಿಎಸ್ ಅಧಿಕಾರಿ ರಿಷ್ಯಂತ್ ಸಿಎಮ್ ಹಿಂದೆ ಹೋಗುತ್ತಿದ್ದ ಸಚಿವರನ್ನು ತಡೆದಿದ್ದರು ..ಘಟನೆಯಿಂದ ಸಚಿವರು ನಾನು ಮಿನಿಸ್ಟರ್ ಅಂತಾ ಹೇಳಿ ರಿಷ್ಯಂತ್ ಗೆ ರೇಗಿ ಒಳಹೋದರು..ಸಚಿವ ಚೆಲುವರಾಯಸ್ವಾಮಿ ರಿಷ್ಯಂತ್ ಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡಿದ್ದರು ..ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ ಕೂಡ ಕೊಟ್ಟಿದ್ದರು
ತನಿಖೆ ವೇಳೆ ಕಮಿಷನರ್ ಸೀಮಾಲಾಟ್ಕರ್ ತಮಗೆ ನೀಡಿರುವ ಸೂಚನೆಯಂತೆ ನಡೆದುಕೊಂಡಿರುವುದಾಗಿ ರಿಷ್ಯಾಂತ್ ತನಿಖೆಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ .
ಘಟನೆಯಿಂದ ತೀವ್ರ ಕಸಿವಿಸಿಗೊಂಡಿದ್ದ ಸಚವರು ಕಠಿಣ ಕ್ರಮಕ್ಕೆ ಸಿಎಮ್ ಬಳಿ ಪಟ್ಟು ಹಿಡಿದಿದ್ದರು.. ಸಿಎಸ್ ಅವರ ವರದಿ ಆಧರಿಸಿ ಇದೀಗ ಸೀಮಾ ಲಾಟ್ಕರ್ ಗೆ ಸ್ಥಳ ತೋರಿಸಿದೇ ಎತ್ತಂಗಡಿ ಮಾಡಲಾಗಿದೆ ..ಈ ಮೂಲಕ ಅವಮಾನಿತ ಸಚಿವರ ಆಕ್ರೋಶ ತಣ್ಣಗಾಗಿದೆ ಎನ್ನಲಾಗಿದೆ ...
ಇದೇ ವೇಳೆ ಸೀಮಾ ಲಟ್ಕರ್ ಸ್ಥಾನಕ್ಕೆ ಡಿಐಜಿ ಅಧಿಕಾರಿ ವಿಷ್ಣುವರ್ಧನ್ ನೇಮಕ ಮಾಡಲಾಗಿದೆ. ಮೈಸೂರು ಪೊಲೀಸ್ ಅಕಾಡೆಮಿಯ ಡಿಐಜಿ ಆಗಿದ್ದ ವಿಷ್ಣುವರ್ಧನ್ ನೂತನ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ..ಅಧಿಕಾರ ಹಸ್ತಾಂತರದ ವೇಳೆ ಸೀಮಾ ಲಾಟ್ಕರ್ ಗೈರು ತಮ್ಮ ವರ್ಗಾವಣೆ ಕುರಿತು ಅಸಮಧಾನ ಹೊರಹಾಕಿದೆ. ತಮಗೆ ಆದ ಅವಮಾನದ ಸೇಡು ತೀರಿಸಿಕೊಂಡ್ರಾ ಸಚಿವರು ??ಸೀಮಾ ಲಾಟ್ಕರ್ ಅವರಿಗೆ ಎಕ್ಸಿಕ್ಯೂಟಿವ್ ಪೋಸ್ಟ್ ನೀಡದಂತೆ ಒತ್ತಡ ಹಾಕಿದ್ರಾ ಅವಮಾನಿತ ಸಚಿವರು??ಎಂಬ ಚರ್ಚೆ ಐಪಿಎಸ್ ವಲಯದಲ್ಲಿ ನಡೀತಾ ಇದೆ ..
ಇದೇ ಸಾಲದು ಅಂತಾ ದಸರಾದಲ್ಲಿ ಪೊಲೀಸರು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ರಾಣಿ ಪ್ರಮೋದಾದೇವಿ ಸರ್ಕಾರಕ್ಕೆ ಲೆಟರ್ ಬರೆದಿದ್ದರು ..ಅರಮನೆ ಸಿಬ್ಬಂದಿಗಳ ಜೊತೆ ಪೊಲೀಸರ ದುರ್ವತನೆ ,ಪೂಜೆಗಳಿಗೆ ಅಡ್ಡಿಗೆ ಪೊಲೀಸರು ಕಾರಣ ಅಂತಾ ರಾಣಿ ತೀವ್ರ ಅಸಮಧಾನ ಕೂಡ. ವ್ಯಕ್ತಪಡಿಸಿದ್ರು...ಒಟ್ಟಾರೆ ದಸರಾ ಹಬ್ಬದ ವ್ಯವಸ್ಥೆ ರೂಪಿಸುವಲ್ಲಿ ಲಾಟ್ಕರ್ ಅವರು ವೈಫಲ್ಯವೇ ಅವರಿಗೆ ಹುದ್ದೆ ತೋರಿಸದೇ ಸರ್ಕಾರ ಟ್ರಾನ್ಸ್ ಫರ್ ಮಾಡಿರೋದಕ್ಕೆ ಕಾರಣ ಎನ್ನಲಾಗುತ್ತಿದೆ..