• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಮೈಸೂರು
  • /ಮೈಸೂರು ದಸರಾದಲ್ಲಿ ಸಚಿವರನ್ನೇ ಒಳಬಿಡದ ವಿಚಾರ... ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

ಮೈಸೂರು ದಸರಾದಲ್ಲಿ ಸಚಿವರನ್ನೇ ಒಳಬಿಡದ ವಿಚಾರ... ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

ಈ ಬಾರಿಯ ಮೈಸೂರು ದಸರಾ ಆಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದಸರಾ ಆಚರಣೆಯಲ್ಲಿ ಧ್ವಜ ಕಂಬದ ಪೂಜೆಗೆ ಅವರ ಕ್ಯಾಬಿನೆಟ್‌ ಸಚಿವರನ್ನೇ ಒಳಬಿಡದ ವಿಚಾರವಾಗಿಯೂ ಪ್ರತಿಕ್ರಿಯಿಸಿದರು.

Written ByYashaswini V
Published: Oct 22, 2026, 12:00 PM IST|Updated: Oct 22, 2026, 12:04 PM IST
joinshare
ಮೈಸೂರು ದಸರಾದಲ್ಲಿ ಸಚಿವರನ್ನೇ ಒಳಬಿಡದ ವಿಚಾರ... ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದೇನು?

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ಟೈಗರ್ ಶ್ರಾಫ್ ಬಳಿಕ ಈಗ ರಣಬೀರ್ ಕಪೂರ್ ಮೇಲೂ ದಾಳಿಗೆ ಸಂಚು!

ಟೈಗರ್ ಶ್ರಾಫ್ ಬಳಿಕ ಈಗ ರಣಬೀರ್ ಕಪೂರ್ ಮೇಲೂ ದಾಳಿಗೆ ಸಂಚು!

2

ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ನೈರುತ್ಯ ರೈಲು ನಿಲ್ದಾಣಗಳಲ್ಲಿ ರೈಲ್ ಜನ ಸಂವಾದ ಯಶಸ್ವಿ

3

ಮೈಸೂರು ದಸರಾದಲ್ಲಿ ಸುದೀಪ್‌ ಎದುರು ಬಂದರೂ ಮಾತನಾಡದೇ ನಿರ್ಲಕ್ಷಿಸಿದ್ರಾ ಸಿಎಂ ಡಿಕೆ ಶಿವಕುಮಾರ್‌?

4

ಫ್ಯಾಷನ್‌ಗಾಗಿ ಹೈ ಹೀಲ್ಸ್ ಧರಿಸುತ್ತಿದ್ದೀರಾ? ಎಚ್ಚರ, ನಿಮ್ಮ ಆರೋಗ್ಯಕ್ಕೆ ಕಾದಿವೆ ಈ 5 ಅಪಾಯಗಳು!

5

ಈ ದೀಪಾವಳಿಗೆ ಸುಂದರವಾಗಿ ಕಾಣಬೇಕೆ? ನಿಮ್ಮ ಕೂದಲು ಮತ್ತು ಚರ್ಮದ ಆರೈಕೆಯನ್ನು ಈಗಲೇ ಪ್ರಾರಂಭಿಸಿ! ತಜ್ಞರ ಸಲಹೆಯನ್ನು ತಿಳಿಯಿರಿ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಮೈಸೂರು ದಸರಾ... ಎಷ್ಟೊಂದು ಸುಂದರ.. ಎಂಬ ಹಾಡಿನಂತೆಯೇ ಬರಗಾಲದ ಛಾಯೆಯ ನಡುವೆಯೂ ರಾಜ್ಯ ಸರ್ಕಾರ ಅದ್ಧೂರಿಯಾಗಿ ಮೈಸೂರು ದಸರಾ ಆಚರಣೆಯನ್ನು ನಡೆಸುವಲ್ಲಿ ಯಶಸ್ವಿ ಆಗಿದೆ. ಏತನ್ಮಧ್ಯೆ, ಧ್ವಜ ಕಂಬದ ಪೂಜೆಗೆ ತೆರಳುವ ಸಮಯದಲ್ಲಿ ಸಿಎಂ ಡಿ.ಕೆ. ಶಿವಕುಮಾರ್‌ ಸಚಿವ ಸಂಪುಟದ ಮಂತ್ರಿಗಳನ್ನೇ ಪೊಲೀಸರು ಒಳ ಬಿಡದೆ ತಡೆದು ಅವಮಾನ ಮಾಡಿದ ದೃಶ್ಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮುಖ್ಯಮಂತ್ರಿಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

ದಸರಾದಲ್ಲಿ ಮುಖ್ಯಮಂತ್ರಿಗಳ ಹಿಂದೆಯೇ ಸಾಗುತ್ತಿದ್ದ ಸಚಿವರನ್ನ ಒಳ ಬಿಡದ ವಿಚಾರವಾಗಿ
ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾರೋ ಅಧಿಕಾರಿಗಳು ಹೀಗೆ ಮಾಡಿದ್ದಾರೆ. ಮತ್ತೆ ನಾನೇ ಬಂದು ಅವರನ್ನು ಒಳ ಬಿಡುವಂತೆ ತಿಳಿಸಿದೆ. ಧ್ವಜ ಕಂಬದ ಪೂಜೆಗೆ ತೆರಳುವಾಗ ಅಧಿಕಾರಿಗಳು ಮಂತ್ರಿಗಳನ್ನು ಒಳಬಿಟ್ಟಿರಲಿಲ್ಲ. ಈ ಸಂದರ್ಭದಲ್ಲಿ ನಾನೇ ಬಂದು  ಬಿಡಿಸಬೇಕಾಗಿಯಿತು. ಅದಕ್ಕೆಲ್ಲ ನಾನು ಏನು ಮಾಡೋಕೆ ಆಗಲ್ಲ. ನಮ್ಮ ಚೀಫ್ ಸೆಕ್ರೆಟರಿ ಅವರ ಮೇಲೆ ತನಿಖೆ ಮಾಡಿ, ವಿಡಿಯೋ ಶಾಟ್ಸ್ ತೆಗೆದು ಏನು ಎತ್ತ ಎಂದು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಂಬಾರಿ ಪುಷ್ಪಾರ್ಚನೆಗೆ ಸಚಿವರಿಗೇ ಇಲ್ಲದ ಅವಕಾಶ:
ಅಂಬಾರಿ ಪುಷ್ಪಾರ್ಚನೆಗೆ ಸಚಿವರಿಗೆ ಅವಕಾಶ ನೀಡದ ವಿಚಾರವಾಗಿ ಸಚಿವರ ಅಸಮಾಧಾನದ ಬೆನ್ನಲ್ಲೇ ವರದಿ ನೀಡುವಂತೆ ಸಿಎಂ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ ಎನ್ನಲಾಗಿದೆ.

ಅಂಬಾರಿ ಪುಷ್ಪಾರ್ಚನೆಗೆ ಸಚಿವರಿಗೆ ಅವಕಾಶ ನೀಡದ ವಿಚಾರವಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿ ನೀಡುವಂತೆ ಸೂಚಿಸಿರುವ ಸಿಎಂ, ತಮ್ಮ ಹಿಂದೆ ತೆರಳುತ್ತಿದ್ದ ಮೂವರು ಸಚಿವರನ್ನ ತಡೆದ ಬಗ್ಗೆಯೂ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ವ್ಯವಸ್ಥಿತವಾಗಿ ಜರುಗಿದ ಮೈಸೂರು ದಸರಾ:
ವಿಶ್ವವಿಖ್ಯಾತ ದಸರಾ ಇದು, ಬಹಳ ಚನ್ನಾಗಿ ನಡೆದಿದೆ. ಎರಡು ರಾಜ್ಯದ ಸಿಎಂ ಅವರು ಬಂದಿದ್ದರು, ನೋಡಿ ಖುಷಿ ಪಟ್ಟಿದ್ದಾರೆ. ಈ ಬಾರಿ ಮೈಸೂರು ದಸರಾ ಬಹಳ ವ್ಯವಸ್ಥಿತವಾಗಿ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದ ಸಿಎಂ ಡಿ.ಕೆ. ಶಿವಕುಮಾರ್‌, ಅದಕ್ಕೆ ನಾನು ಒಬ್ಬೊಬ್ಬರು ಒಂದೊಂದು ಜವಾಬ್ದಾರಿ ತಗಬೇಕು ಎಂದು ಹೇಳಿದ್ದೆ. ಸಚಿವ ಯತೀಂದ್ರ ಸಿದ್ದರಾಮಯ್ಯ ಒಬ್ಬರ ಕೈಯಲ್ಲಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ, ಮೈಸೂರು ದಸರಾ ಆಚರಣೆಗೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಲೆಂದು ಒಬ್ಬೊಬ್ಬ ಸಚಿವರಿಗೂ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿತ್ತು ಎಂದರು.

ಎಲೆಕ್ಷನ್ ಇರೋದ್ರಿಂದ ಕೆಲವರಿಗೆ ಫೋರ್ಸ್‌ ಮಾಡಲಿಲ್ಲ:
ಫಾರೇನ್ ಡೆಲಿಗೆಟ್ಸ್ ನ ರಾಯರೆಡ್ಡಿ ನೋಡಿಕೊಂಡ್ರು. ಆದರೆ, ಎಲೆಕ್ಷನ್ ಇರೋ ಕಾರಣದಿಂದಾಗಿ ಸಂತೋಷ ಲಾಡ್‌ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಬರಲಾಗಲಿಲ್ಲ. ಕೆ.ಜೆ. ಜಾರ್ಜ್ ಬಹಳ ಅಚ್ಚುಕಟ್ಟಾಗಿ ಲೈಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಹೀಗೆ, ದಸರಾ ಜವಾಬ್ದಾರಿ ವಹಿಸಿಕೊಂಡವರು ಬಹಳ ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಎಲೆಕ್ಷನ್ ಇರುವುದರಿಂದ ಕೆಲವರಿಗೆ ನಾನು ಪೋರ್ಸ್ ಮಾಡಲು ಹೋಗಿಲ್ಲ ಎಂದು ತಿಳಿಸಿದರು.

ಸ್ಯಾಂಡಲ್‌ವುಡ್‌ ತಾರೆಯರಿಗೆ ಧನ್ಯವಾದ ತಿಳಿಸಿದ ಸಿಎಂ:
ಇದೇ ಸಂದರ್ಭದಲ್ಲಿ ದಸರಾದಲ್ಲಿ ಸಹಕರಿಸಿದ ಎಲ್ಲಾ ಚಂದನವನದ ತಾರೆಯರಿಗೂ ಧನ್ಯವಾದ ತಿಳಿಸಿದ ಸಿಎಂ ಡಿಕೆ ಶಿವಕುಮಾರ್, ಜಯಮಾಲ, ರಾಕ್‌ಲೇನ್‌ ವೆಂಕಟೇಶ್‌ ಟೀಮ್ ಬಹಳ ಚೆನ್ನಾಗಿ ಸಂಯೋಜನೆ ಮಾಡಿದ್ದರು. ಎಲ್ಲಾ ನಟ, ನಟಿಯರು ಬಂದಿದ್ದರು. ಅವರಿಗೆ ನಾನು ಪ್ರತ್ಯೇಕವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ HMT, HAL, ಇಂಡಿಯನ್ ಆರ್ಮಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಸಿಎಂ ಡಿ.ಕೆ. ಶಿವಕುಮಾರ್‌, ಡ್ರೋನ್ ಕಾರ್ಯಕ್ರಮವೂ ಚೆನ್ನಾಗಿತ್ತು. ನೆಕ್ಸ್ಟ್ ಟೈಮ್ ಇನ್ನೂ ಚೆನ್ನಾಗಿ ಮಾಡಬಹುದು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಸೋಮಣ್ಣ ಆನೆಯಿಂದ ದುರ್ಘಟನೆ:
ಇದೇ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಸೋಮಣ್ಣ ಆನೆಯಿಂದ ದುರ್ಘಟನೆಗೆ ಸಂಬಂಧಿಸಿದಂತೆಯೂ ಪ್ರತಿಕ್ರಿಯಿಸಿದ ಸಿಎಂ ಡಿ.ಕೆ. ಶಿವಕುಮಾರ್‌, ಆ ಘಟನೆ ಇಂತಹದ್ದು ಆಗುತ್ತೆ ಅಂತನೇ ನನಗೆ ಅರಿವಿದೆ. ಅದಕ್ಕಾಗಿ ನಾನು ಮುಂಚಿತವಾಗಿ ರಾಮಲಿಂಗ ರೆಡ್ಡಿ ಅವರಿಗೆ ಹುಷಾರ್ ಆಗಿರುವಂತೆ ಹೇಳಿದ್ದೆ.

ಮೈಸೂರಿನಲ್ಲಿ ಅಂಬಾರಿ ಹೊರಲು ಮೊದಲಿಗೆ ಬೇರೆ ಆನೆ ಆಯ್ಕೆ ವಿಚಾರವಾಗಿ ಚಿಂತಿಸಲಾಗಿತ್ತು, ಕೊನೆಗೆ ಪ್ರಶಾಂತ್ ನನ್ನೇ ಆಯ್ಕೆ ಮಾಡಿದ್ವಿ. ಮೈಸೂರಿನಲ್ಲಿ ಅಂಬಾರಿ ಹೊರಲು ಪ್ರಶಾಂತ ಆನೆಯನ್ನೇ ಆಯ್ಕೆ ಮಾಡಲು ನಾನು ಸೂಚಿಸಿದ್ದೆ. ಆದರೆ, ಆದ್ರೆ ಶಿವಮೊಗ್ಗ ದಲ್ಲಿ ಸ್ವಲ್ಪ ಯಾಮಾರಿದ್ದಾರೆ. ಅದೃಷ್ಟವಶಾತ್‌ ಯಾರಿಗೂ ತೊಂದ್ರೆ ಆಗಿಲ್ಲ. ಇನ್ಮುಂದೆ ಈ ರೀತಿಯ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. 
 

Add Zee News as a Preferred Source
TAGS:
D K Shivakumar
Kannada News