ರಕ್ತ ಕೊಡಿ.. ಮೀನು ಫ್ರೈ ತಿನ್ನಿ! 150 ಕೆ.ಜಿ. ಮೀನು ಹಂಚಿ ರಕ್ತದಾನಕ್ಕೆ ಪ್ರೇರಣೆ ನೀಡಿದ ಮಂಡ್ಯದ ಹೈದರು!
Blood donation Camp Free Fish Fry for Blood Donors : ರಕ್ತದಾನ ಮಹಾದಾನ ಅನ್ನೋ ಮಾತನ್ನೇ ಕೇಳಿದ್ದೇವೆ. ಆದ್ರೆ ರಕ್ತದಾನ ಮಾಡಿದವರಿಗೆ ಉಚಿತವಾಗಿ ಫಿಶ್ ಫ್ರೈ ಕೊಟ್ರೆ ಹೇಗಿರುತ್ತೆ? ಹೌದು.. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಯುವಕರ ತಂಡವೊಂದು ರಕ್ತದಾನದ ಜಾಗೃತಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ರಕ್ತದಾನ ಮಾಡಿದವರಿಗೆ ಹೊಟ್ಟೆ ತುಂಬಾ ತವಾ ಫಿಶ್ ಫ್ರೈ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ.
Blood donation Camp Free Fish Fry for Blood Donors : ರಕ್ತದಾನ ಮಹಾದಾನ ಅಂತಾರೆ.. ರಕ್ತದಾನ ಮಾಡಿ ಜೀವ ಉಳಿಸುವ ಕೆಲಸಕ್ಕೆ ಕೈಜೋಡಿಸುವಂತೆ ಜನರಿಗೆ ಜಾಗೃತಿ ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತೆ.. ಆದ್ರೆ ಮಂಡ್ಯದಲ್ಲಿ ಯುವಕರ ತಂಡವೊಂದು ಕೊಂಚ ವಿಭಿನ್ನವಾಗಿ ಯೋಚಿಸಿದೆ.. ರಕ್ತದಾನ ಮಾಡಿದವರಿಗೆ ಹೊಟ್ಟೆ ತುಂಬಾ ರುಚಿಕರವಾದ ಹೊಳೆ ಮೀನು ಫ್ರೈ ಉಚಿತವಾಗಿ ನೀಡಿದೆ.. ಬರೋಬ್ಬರಿ 150 ಕೆ.ಜಿ. ಮೀನು ತರಿಸಿ ರಕ್ತದಾನಿಗಳಿಗೆ ಆತಿಥ್ಯ ನೀಡಿದೆ.. ಅಷ್ಟಕ್ಕೂ ಈ ವಿಶೇಷ ಅಭಿಯಾನ ನಡೆದಿದ್ದು ಎಲ್ಲಿ? ಹೇಗಿತ್ತು ಈ ಕಾರ್ಯಕ್ರಮ? ನೋಡೋಣ ಈ ವರದಿಯಲ್ಲಿ..
ರಕ್ತದಾನ ಮಾಡಿ.. ಜೀವ ಉಳಿಸಿ.. ಜೊತೆಗೆ ಹೊಟ್ಟೆ ತುಂಬಾ ಮೀನಿನೂಟ ಸವಿಯಿರಿ.. ಹೀಗೊಂದು ವಿಭಿನ್ನ ಆಹ್ವಾನ ನೀಡಿದ್ದು ಮಂಡ್ಯ ಜಿಲ್ಲೆಯ ಮದ್ದೂರಿನ ಯುವಕರ ತಂಡ.. ಸಾಮಾನ್ಯವಾಗಿ ಹೊಳೆ ಮೀನಿನ ಗಾತ್ರಕ್ಕೆ ಅನುಗುಣವಾಗಿ ಒಂದು ಮೀನಿಗೆ 60ರಿಂದ 100 ರೂಪಾಯಿವರೆಗೆ ಬೆಲೆ ಇರುತ್ತೆ.. ಆದ್ರೆ ಇಲ್ಲಿ ಮಾತ್ರ ರಕ್ತದಾನ ಮಾಡಿದವರಿಗೆ ಹೊಳೆ ಮೀನಿನ ತವಾ ಫ್ರೈ ಸಂಪೂರ್ಣ ಉಚಿತ..!
ಹೌದು.. ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಗ್ರಾಮದ ಸಮೀಪದ ಮದ್ದೂರು–ಮಳವಳ್ಳಿ ರಸ್ತೆಯಲ್ಲಿರುವ ದೇವಿಪುರ ಫಿಶ್ ತವಾ ಫ್ರೈ ಹೋಟೆಲ್ ಆವರಣದಲ್ಲಿ ಈ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.. ನವೆಂಬರ್ 15ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆದ ಶಿಬಿರದಲ್ಲಿ ಹಲವು ಮಂದಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಕೈಜೋಡಿಸಿದ್ರು..
ರಕ್ತದಾನ ಮಹಾದಾನ ಅನ್ನೋ ಮಾತನ್ನೇ ಕೇಳಿದ್ದೇವೆ. ಆದ್ರೆ ರಕ್ತದಾನ ಮಾಡಿದವರಿಗೆ ಉಚಿತವಾಗಿ ಫಿಶ್ ಫ್ರೈ ಕೊಟ್ರೆ ಹೇಗಿರುತ್ತೆ? ಹೌದು.. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಯುವಕರ ತಂಡವೊಂದು ರಕ್ತದಾನದ ಜಾಗೃತಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ರಕ್ತದಾನ ಮಾಡಿದವರಿಗೆ ಹೊಟ್ಟೆ ತುಂಬಾ ತವಾ ಫಿಶ್ ಫ್ರೈ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಈ ವಿಭಿನ್ನ ಆಫರ್ ಹಿಂದಿನ ಉದ್ದೇಶ ಏನು ಅಂತಾ ತಿಳಿಯಲು ಈ ಸ್ಟೋರಿ.
ರಕ್ತದಾನ ಮಾಡಿ.. ಜೀವ ಉಳಿಸಿ.. ಜೊತೆಗೆ ಹೊಟ್ಟೆ ತುಂಬಾ ಫಿಶ್ ಫ್ರೈ ತಿನ್ನಿ.. ಹೀಗೊಂದು ವಿಭಿನ್ನ ಆಫರ್ ನೀಡಿದ್ದು ಮದ್ದೂರಿನ ಯುವಕರ ಬಳಗ. ಮದ್ದೂರು ತಾಲೂಕಿನ ಹುಣ್ಣನದೊಡ್ಡಿ ಗ್ರಾಮದಲ್ಲಿ ರಕ್ತದಾನದ ಮಹತ್ವ ಸಾರಲು ಯುವಕರು ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ. ರಕ್ತದಾನಿಗಳನ್ನ ಆಕರ್ಷಿಸಲು ಉಚಿತ ತವಾ ಫಿಶ್ ಫ್ರೈ ಆಫರ್ ನೀಡಿದ್ದಾರೆ ಮದ್ದೂರು ಪಟ್ಟಣದ ದೇವಿಪುರ ತವಾ ಫಿಶ್ ಫ್ರೈ ಸೆಂಟರ್ ಹಾಗೂ ಮಂಡ್ಯ ಮಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರದ ಜೊತೆಗೆ ತಿನ್ನುವಷ್ಟು ಉಚಿತ ಫಿಶ್ ಫ್ರೈ ನೀಡಲಾಗಿದೆ. ಹೀಗಾಗಿ ರಕ್ತದಾನ ಮಾಡಿದ ದಾನಿಗಳು ಖುಷಿಯಿಂದಲೇ ಫಿಶ್ ಫ್ರೈ ಸವಿದಿದ್ದಾರೆ.
ಇನ್ನು ಶಿಬಿರದಲ್ಲಿ ಸಂಗ್ರಹವಾದ ರಕ್ತವನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಕೊಡುಗೆಯಾಗಿ ನೀಡಲಾಗಿದೆ. ರಕ್ತದ ಕೊರತೆಯಿಂದ ಯಾರ ಜೀವವೂ ಹೋಗಬಾರದು ಅನ್ನೋ ಉದ್ದೇಶದಿಂದ ಯುವಕರ ತಂಡ ಈ ಕಾರ್ಯಕ್ರಮ ಆಯೋಜಿಸಿದೆ. ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನ ಈ ಯುವಕರ ಬಳಗ ನಡೆಸುತ್ತಾ ಬಂದಿದೆ.
ಇನ್ನು ರಕ್ತದಾನಿಗಳಿಗೆ ಆತಿಥ್ಯ ನೀಡಲು ಬರೋಬ್ಬರಿ 150 ಕೆ.ಜಿ. ಹೊಳೆ ಮೀನು ತರಿಸಲಾಗಿತ್ತು.. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ರುಚಿಕರವಾದ ಮೀನು ಫ್ರೈ ಉಚಿತವಾಗಿ ಹಂಚಲಾಯ್ತು.. ಹಳ್ಳಿ ಹೈಕ್ಲು ಯುವಕರ ಬಳಗದ ನೇತೃತ್ವದಲ್ಲಿ ದೇವಿಪುರ ಮಲ್ಲೇಶ್, ಡಿ.ಎಂ. ಮಂಜು ಹಾಗೂ ರವಿಚಂದ್ರ ಈ ವಿನೂತನ ಕಾರ್ಯಕ್ರಮ ರೂಪಿಸಿದ್ರು.. ರಕ್ತದಾನ ಮಾಡಿದವರಿಗೆ ಕೇವಲ ಊಟದ ಆತಿಥ್ಯ ನೀಡುವುದಷ್ಟೇ ಈ ಯುವಕರ ಉದ್ದೇಶವಾಗಿರಲಿಲ್ಲ.. ರಕ್ತದಾನದ ಮಹತ್ವ ಸಾರಬೇಕು.. ಹೆಚ್ಚು ಹೆಚ್ಚು ಜನರು ರಕ್ತದಾನಕ್ಕೆ ಮುಂದಾಗಬೇಕು.. ರಕ್ತದಾನಿಗಳೊಂದಿಗೆ ಆತ್ಮೀಯತೆ ಹಂಚಿಕೊಳ್ಳಬೇಕು ಅನ್ನೋ ಉದ್ದೇಶದಿಂದ ಈ ವಿಶೇಷ ಪರಿಕಲ್ಪನೆ ಹುಟ್ಟಿಕೊಂಡಿತ್ತು.. ಒಟ್ಟಿನಲ್ಲಿ ರಕ್ತದಾನದಂತಹ ಮಹತ್ಕಾರ್ಯಕ್ಕೆ ಮೀನಿನೂಟದ ಆತಿಥ್ಯ ಸೇರಿಸಿ ಮದ್ದೂರಿನ ಯುವಕರು ಎಲ್ಲರ ಗಮನ ಸೆಳೆದಿದ್ದಾರೆ..
ಒಟ್ಟಿನಲ್ಲಿ ರಕ್ತದಾನಕ್ಕೆ ಜನರನ್ನ ಪ್ರೇರೇಪಿಸಲು ಯುವಕರು ಕಂಡುಕೊಂಡಿದ್ದು ವಿಭಿನ್ನ ಹಾದಿ. ರಕ್ತ ಕೊಟ್ಟು ಜೀವ ಉಳಿಸುವ ಮಹತ್ಕಾರ್ಯದಲ್ಲಿ ಭಾಗಿಯಾದವರಿಗೆ ರುಚಿಕರ ಫಿಶ್ ಫ್ರೈ ಉಡುಗೊರೆ. ಯುವಕರ ಈ ಪ್ರಯತ್ನಕ್ಕೆ ಸಾರ್ವಜನಿಕರು ಹಾಗೂ ರಕ್ತದಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.