SOCIAL MEDIA

Newsletter

PARTNER SITES
Select Language Select State

ಉಡುಪಿಯಲ್ಲೂ ದೀಪಾವಳಿಗೂ ಮುನ್ನವೇ ತರಕಾರಿ ಬೆಲೆ ಏರಿಕೆ.. ಗ್ರಾಹಕರ ಜೇಬಿಗೆ ಕತ್ತರಿ!

Deepavali: ದೀಪಾವಳಿ ಹಬ್ಬಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಉಡುಪಿಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಮಾರುಕಟ್ಟೆಗೆ ತರಕಾರಿ ಖರೀದಿಸಲು ಬರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅದರಲ್ಲೂ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಭಾರಿ ಏರಿಕೆಯಾಗಿದೆ. ಹಾಗಾದ್ರೆ ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ? ಇಲ್ಲಿದೆ ಡಿಟೇಲ್ಸ್.

Written By Ramya. R. Gowda
Published: Nov 05, 2026, 11:48 IST | Updated: Nov 05, 2026, 12:00 IST
Join

 Deepavali: ದೀಪಾವಳಿ ಹಬ್ಬಕ್ಕೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಉಡುಪಿಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಮಾರುಕಟ್ಟೆಗೆ ತರಕಾರಿ ಖರೀದಿಸಲು ಬರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅದರಲ್ಲೂ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಬೀನ್ಸ್ ಸೇರಿದಂತೆ ಹಲವು ತರಕಾರಿಗಳ ಬೆಲೆ ಭಾರಿ ಏರಿಕೆಯಾಗಿದೆ. ಹಾಗಾದ್ರೆ ಯಾವ ತರಕಾರಿ ಬೆಲೆ ಎಷ್ಟು ಹೆಚ್ಚಾಗಿದೆ? ಇಲ್ಲಿದೆ ಡಿಟೇಲ್ಸ್.

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತರಕಾರಿ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದೆ. ಉಡುಪಿಯ ಭಾನುವಾರದ ತರಕಾರಿ ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಮುಳ್ಳು ಸೌತೆಕಾಯಿ, ಬೀನ್ಸ್, ಸೀಬೆಕಾಯಿ, ಹಾವಿನಕಾಯಿ, ಹಸಿರು ಮೆಣಸಿನಕಾಯಿ ಹಾಗೂ ಗೋವಿನ ಜೋಳದ ಬೆಲೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.


ಉಡುಪಿ: ದೀಪಾವಳಿ ಹಬ್ಬಕ್ಕೆ ಒಂದು ವಾರ ಮೊದಲೇ ಉಡುಪಿಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿವೆ. ಭಾನುವಾರದ ತರಕಾರಿ ಮಾರುಕಟ್ಟೆಯಲ್ಲಿ, ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಮುಳ್ಳು ಸೌತೆಕಾಯಿ, ಬೀನ್ಸ್, ಸೀಬೆಕಾಯಿ, ಹಾವಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಗೋವಿನ ಜೋಳದ ಬೆಲೆಗಳು ಹಿಂದಿನ ವಾರಕ್ಕೆ ಹೋಲಿಸಿದರೆ ಗಣನೀಯ ಏರಿಕೆ ದಾಖಲಿಸಿವೆ.ಮಳೆ ಕಡಿಮೆಯಾಗುವುದು ಮತ್ತು ಕೀಟಗಳ ದಾಳಿ ತರಕಾರಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ. ಕರಾವಳಿ ಪ್ರದೇಶದ ಸ್ಥಳೀಯ ತರಕಾರಿ ಸರಬರಾಜು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿರುವುದರಿಂದ, ವ್ಯಾಪಾರಿಗಳು ಘಾಟ್ ಪ್ರದೇಶಗಳ ಪೂರೈಕೆಯನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಾರೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.ಬೆಳಗಾವಿಯಲ್ಲಿ ನಡೆದ ಘಟನೆಯೊಂದರಿಂದ ಕೊತ್ತಂಬರಿ ಸೊಪ್ಪಿನ ಕೊರತೆ ಉಂಟಾಗಿದ್ದು, ಬೆಲೆಯಲ್ಲಿ ಸುಮಾರು 100 ರೂ.ಗಳಷ್ಟು ಏರಿಕೆಯಾಗಿದೆ. ಕಬ್ಬು ರೈತರು ಆಯೋಜಿಸಿದ್ದ ರಸ್ತೆ ತಡೆ ಸಂದರ್ಭದಲ್ಲಿ, ಕೊತ್ತಂಬರಿ ಸೊಪ್ಪನ್ನು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಉತ್ಪನ್ನಗಳನ್ನು ರಸ್ತೆಗೆ ಎಸೆದು ನಾಶಪಡಿಸಲಾಯಿತು.

ನುಗ್ಗೆಕಾಯಿ ಬೆಲೆ ಕೆಜಿಗೆ 80 ರೂ.ನಿಂದ 160 ರೂ.ಗೆ ದ್ವಿಗುಣಗೊಂಡಿದೆ. ಬೀನ್ಸ್ ಬೆಲೆ ಕೆಜಿಗೆ 80 ರೂ.ನಿಂದ 120 ರೂ.ಗೆ ಏರಿಕೆಯಾಗಿದೆ. ಸೀಬೆಕಾಯಿ ಬೆಲೆ ಕೆಜಿಗೆ 50 ರೂ.ನಿಂದ 80 ರೂ.ಗೆ ಏರಿಕೆಯಾಗಿದೆ. ಏತನ್ಮಧ್ಯೆ, ಕುಂಬಳಕಾಯಿ ಬೆಲೆಗಳು ಯಾವುದೇ ಬದಲಾವಣೆಯಾಗಿಲ್ಲ. ಸಾಂಬಾರ್ ಸೌತೆಕಾಯಿಯ ಬೆಲೆ ಕೆಜಿಗೆ 20 ರೂ.ಗಳಷ್ಟು ಕಡಿಮೆಯಾಗಿದೆ.

ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತರಕಾರಿ ಬೆಲೆ ಏರಿಕೆ ಗ್ರಾಹಕರಿಗೆ ಶಾಕ್ ನೀಡಿದೆ. ಉಡುಪಿಯ ಭಾನುವಾರದ ತರಕಾರಿ ಮಾರುಕಟ್ಟೆಯಲ್ಲಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಕೊತ್ತಂಬರಿ ಸೊಪ್ಪು, ನುಗ್ಗೆಕಾಯಿ, ಮುಳ್ಳು ಸೌತೆಕಾಯಿ, ಬೀನ್ಸ್, ಸೀಬೆಕಾಯಿ, ಹಾವಿನಕಾಯಿ, ಹಸಿರು ಮೆಣಸಿನಕಾಯಿ ಹಾಗೂ ಗೋವಿನ ಜೋಳದ ಬೆಲೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.


ಇನ್ನು ಈ ಬೆಲೆ ಏರಿಕೆಗೆ ಮಳೆ ಪ್ರಮಾಣ ಕಡಿಮೆಯಾಗಿರುವುದು ಮತ್ತು ಕೀಟಗಳ ದಾಳಿ ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ಸ್ಥಳೀಯವಾಗಿ ತರಕಾರಿ ಉತ್ಪಾದನೆ ಕುಸಿದಿದ್ದು, ಘಾಟ್ ಪ್ರದೇಶಗಳಿಂದ ಬರುವ ತರಕಾರಿಗಳ ಮೇಲಿನ ಅವಲಂಬನೆ ಹೆಚ್ಚಾಗಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ.ಇನ್ನು ಕೊತ್ತಂಬರಿ ಸೊಪ್ಪಿನ ಬೆಲೆ ಏರಿಕೆಗೆ ಬೆಳಗಾವಿಯಲ್ಲಿ ನಡೆದ ಘಟನೆಯೂ ಕಾರಣವಾಗಿದೆ. ಕಬ್ಬು ರೈತರ ರಸ್ತೆ ತಡೆ ಪ್ರತಿಭಟನೆ ವೇಳೆ ಕೊತ್ತಂಬರಿ ಸೊಪ್ಪು ಸಾಗಿಸುತ್ತಿದ್ದ ವಾಹನಗಳನ್ನು ತಡೆದು, ಸೊಪ್ಪನ್ನು ರಸ್ತೆಗೆ ಎಸೆದು ನಾಶಪಡಿಸಲಾಗಿತ್ತು. ಇದರಿಂದ ಕೊತ್ತಂಬರಿ ಸೊಪ್ಪಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆ ಸುಮಾರು 100 ರೂಪಾಯಿಗಳಷ್ಟು ಏರಿಕೆಯಾಗಿದೆ.

ನುಗ್ಗೆಕಾಯಿ ಬೆಲೆ ಕೆಜಿಗೆ 80 ರೂಪಾಯಿಯಿಂದ 160 ರೂಪಾಯಿಗೆ ಏರಿಕೆಯಾಗಿದೆ. ಬೀನ್ಸ್ ಬೆಲೆ 80 ರೂಪಾಯಿಯಿಂದ 120 ರೂಪಾಯಿಗೆ ತಲುಪಿದೆ. ಸೀಬೆಕಾಯಿ ಬೆಲೆ 50 ರೂಪಾಯಿಯಿಂದ 80 ರೂಪಾಯಿಗೆ ಹೆಚ್ಚಳವಾಗಿದೆ. ಆದರೆ ಕುಂಬಳಕಾಯಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾಂಬಾರ್ ಸೌತೆಕಾಯಿ ಬೆಲೆ ಮಾತ್ರ ಕೆಜಿಗೆ 20 ರೂಪಾಯಿ ಇಳಿಕೆಯಾಗಿದೆ.

ಒಟ್ಟಿನಲ್ಲಿ ದೀಪಾವಳಿ ಹಬ್ಬದ ತಯಾರಿಯಲ್ಲಿರುವ ಗ್ರಾಹಕರಿಗೆ ತರಕಾರಿ ಬೆಲೆ ಏರಿಕೆ ಮತ್ತೊಂದು ಹೊರೆ ತಂದಿದೆ. ಮುಂದಿನ ದಿನಗಳಲ್ಲಿ ತರಕಾರಿ ಪೂರೈಕೆ ಹೆಚ್ಚಾಗಿ ಬೆಲೆ ಇಳಿಕೆಯಾಗುತ್ತಾ ಅಥವಾ ಹಬ್ಬದ ವೇಳೆಗೆ ಇನ್ನಷ್ಟು ದುಬಾರಿಯಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES