SOCIAL MEDIA

Newsletter

PARTNER SITES
Select Language Select State

ವಾಷಿಂಗ್ ಮೆಷಿನ್‌ನಲ್ಲಿ ಅಡಗಿದ್ದ 10 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ!

King Cobra was hiding inside a washing machine : ವಮನೆಯ ವಾಷಿಂಗ್ ಮೆಷಿನ್‌ನಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದು, ಮನೆಮಂದಿ ಬೆಚ್ಚಿಬಿದ್ದಿದ್ದಾರೆ.

Written By Ramya. R. Gowda
Published: Nov 09, 2026, 10:40 IST | Updated: Nov 09, 2026, 10:48 IST
Join

King Cobra was hiding inside a washing machine: ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಬಟ್ಟೆ ತೊಳೆಯಲು ಹೋಗುವ ಮುನ್ನ ಸ್ವಲ್ಪ ಎಚ್ಚರ! ಯಾಕಂದ್ರೆ ಇಲ್ಲೊಂದು ಮನೆಯ ವಾಷಿಂಗ್ ಮೆಷಿನ್‌ನಲ್ಲೇ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಮೆಷಿನ್ ಒಳಗೆ ಬೃಹತ್ ಹಾವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಬಳಿಕ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ವಾಷಿಂಗ್ ಮೆಷಿನ್ ಒಳಗೆ ಕಾಳಿಂಗ ಸರ್ಪ ಸೇರಿದ್ದೇಗೆ?

ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ. ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ. ಕೊಡಗಿನ ಮಡಿಕೇರಿ ತಾಲೂಕಿನ ದೊಡ್ಡಪುಲಿಕೋಟು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಳಿಕ ಉರಗ ರಕ್ಷಕ ಯದುಕುಮಾರ್ ಅವರು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಅಡಗಿದ್ದ ಬೃಹತ್ ಕಾಳಿಂಗ ಸರ್ಪ.. ಹಾವನ್ನು ಕಂಡು ಮನೆಯವರೇ ಶಾಕ್.. ಹೌದು, ಕೊಡಗಿನ ಮಡಿಕೇರಿ ತಾಲೂಕಿನ ದೊಡ್ಡಪುಲಿಕೋಟು ಗ್ರಾಮದ ಸಚಿನ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ವಾಷಿಂಗ್ ಮೆಷಿನ್‌ನಲ್ಲಿ ಬರೋಬ್ಬರಿ 10 ಅಡಿ ಉದ್ದದ ಕಾಳಿಂಗ ಸರ್ಪ ಅಡಗಿಕೊಂಡಿತ್ತು. ಇದನ್ನು ಗಮನಿಸಿದ ಮನೆಯವರು ಆತಂಕಗೊಂಡು ಉರಗ ರಕ್ಷಕ ಯದುಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಗ ರಕ್ಷಕ ಯದುಕುಮಾರ್, ಸಾಕಷ್ಟು ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ವಾಷಿಂಗ್ ಮೆಷಿನ್‌ನಲ್ಲಿ ಅಡಗಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಹಾವನ್ನು ಯಾವುದೇ ಅಪಾಯವಾಗದಂತೆ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.ಇನ್ನು ಮನೆಯಲ್ಲೇ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದ್ದರಿಂದ ಆತಂಕದಲ್ಲಿದ್ದ ಮನೆಮಂದಿ, ಯದುಕುಮಾರ್ ಅವರ ಸಮಯಪ್ರಜ್ಞೆ ಹಾಗೂ ಸಾಹಸದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಮನೆಯ ಸುತ್ತಮುತ್ತ ಹಾವುಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಬೇಡಿ. ಅದರಲ್ಲೂ ವಾಷಿಂಗ್ ಮೆಷಿನ್, ಶೂ ರ‍್ಯಾಕ್, ಹಳೆಯ ವಸ್ತುಗಳನ್ನು ಬಳಸುವ ಮುನ್ನ ಪರಿಶೀಲಿಸುವುದು ಉತ್ತಮ. ಹಾವು ಕಂಡರೆ ಸ್ವತಃ ಹಿಡಿಯಲು ಪ್ರಯತ್ನಿಸದೆ ತಕ್ಷಣ ತಜ್ಞ ಉರಗ ರಕ್ಷಕರಿಗೆ ಮಾಹಿತಿ ನೀಡುವುದು ಉತ್ತಮ.ಹಾವುಗಳು ಮನೆಗೆ ಬರುವುದಕ್ಕೆ ಮುಖ್ಯವಾಗಿ ಆಹಾರ, ಆಶ್ರಯ ಮತ್ತು ಸುರಕ್ಷಿತ ಸ್ಥಳದ ಹುಡುಕಾಟವೇ ಕಾರಣ. ಹಾವುಗಳು ಉದ್ದೇಶಪೂರ್ವಕವಾಗಿ ಮನುಷ್ಯರ ಮನೆಗೆ ಬರುವುದಿಲ್ಲ. ಕೆಲವು ಪರಿಸ್ಥಿತಿಗಳಲ್ಲಿ ಮನೆಗಳ ಸುತ್ತಮುತ್ತ ಅವುಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತದೆ.

ಹಾವು ಮನೆಗೆ ಬರಲು 7 ಪ್ರಮುಖ ಕಾರಣಗಳು

ಇಲಿಗಳ ಕಾಟ: ಮನೆಯಲ್ಲಿ ಅಥವಾ ಮನೆಯ ಸುತ್ತಮುತ್ತ ಇಲಿಗಳಿದ್ದರೆ ಅವುಗಳನ್ನು ಬೇಟೆಯಾಡಲು ಹಾವುಗಳು ಬರುತ್ತವೆ.

ಮನೆಯ ಸುತ್ತ ಪೊದೆಗಳು: ಗಿಡಗಂಟಿಗಳು, ಹುಲ್ಲು ಮತ್ತು ಕಳೆ ಹೆಚ್ಚಾಗಿದ್ದರೆ ಹಾವುಗಳಿಗೆ ಅಡಗಿಕೊಳ್ಳಲು ಸುಲಭವಾಗುತ್ತದೆ.

ತಂಪಾದ ಸ್ಥಳದ ಹುಡುಕಾಟ: ಬೇಸಿಗೆಯಲ್ಲಿ ತಂಪಾದ ಜಾಗಕ್ಕಾಗಿ ಮನೆಯ ನೆಲಮಾಳಿಗೆ, ಬಚ್ಚಲುಮನೆ ಅಥವಾ ವಸ್ತುಗಳ ಕೆಳಗೆ ಸೇರಿಕೊಳ್ಳಬಹುದು.

ಮಳೆಗಾಲದ ಸಂದರ್ಭದಲ್ಲಿ: ಮಳೆ ನೀರು ಬಿಲಗಳಿಗೆ ನುಗ್ಗಿದಾಗ ಹಾವುಗಳು ಒಣ ಹಾಗೂ ಸುರಕ್ಷಿತ ಸ್ಥಳ ಹುಡುಕುತ್ತವೆ.

ಆಹಾರದ ಲಭ್ಯತೆ: ಕಪ್ಪೆಗಳು, ಹಲ್ಲಿಗಳು, ಇಲಿಗಳು ಹೆಚ್ಚಾಗಿರುವ ಜಾಗಕ್ಕೆ ಹಾವುಗಳು ಆಕರ್ಷಿತವಾಗುತ್ತವೆ.

ಮನೆಯಲ್ಲಿರುವ ಕಸ ಮತ್ತು ಕಟ್ಟಿಗೆ: ಹಳೆಯ ಕಟ್ಟಿಗೆ, ಇಟ್ಟಿಗೆ, ಕಲ್ಲು ಮತ್ತು ಕಸದ ರಾಶಿಗಳು ಹಾವುಗಳಿಗೆ ಅಡಗಿಕೊಳ್ಳುವ ತಾಣಗಳಾಗಬಹುದು.

ಮನೆಯಲ್ಲಿನ ಸಣ್ಣ ಬಿರುಕುಗಳು: ಬಾಗಿಲಿನ ಕೆಳಗಿನ ಅಂತರ, ಗೋಡೆಯ ಬಿರುಕು, ಪೈಪ್‌ಗಳ ಸುತ್ತಲಿನ ಖಾಲಿ ಜಾಗದ ಮೂಲಕ ಹಾವುಗಳು ಒಳಬರಬಹುದು.

ಹಾವು ಮನೆಗೆ ಬರದಂತೆ ತಡೆಯುವುದು ಹೇಗೆ?
* ಮನೆಯ ಸುತ್ತಮುತ್ತ ಪೊದೆ, ಕಸ ಮತ್ತು ಎತ್ತರದ ಹುಲ್ಲು ತೆಗೆಯಿರಿ.
*ಇಲಿಗಳ ಕಾಟವನ್ನು ನಿಯಂತ್ರಿಸಿ

* ಬಾಗಿಲು ಮತ್ತು ಗೋಡೆಗಳಲ್ಲಿರುವ ಬಿರುಕುಗಳನ್ನು ಮುಚ್ಚಿ.
*ಕಟ್ಟಿಗೆ, ಇಟ್ಟಿಗೆಗಳನ್ನು ಮನೆಯ ಗೋಡೆಗೆ ಹೊಂದಿಕೊಂಡಂತೆ ಸಂಗ್ರಹಿಸಬೇಡಿ.
* ಬಾಗಿಲಿನ ಕೆಳಗೆ ಸರಿಯಾದ ಸೀಲ್ ಅಳವಡಿಸಿ.

ಮನೆಯಲ್ಲಿ ಹಾವು ಕಂಡರೆ ಅದನ್ನು ಮುಟ್ಟಲು, ಓಡಿಸಲು ಅಥವಾ ಹಿಡಿಯಲು ಪ್ರಯತ್ನಿಸಬೇಡಿ. ಸುರಕ್ಷಿತ ಅಂತರ ಕಾಯ್ದುಕೊಂಡು ಮಕ್ಕಳನ್ನು ಮತ್ತು ಸಾಕುಪ್ರಾಣಿಗಳನ್ನು ದೂರವಿಡಿ. ಸ್ಥಳೀಯ ಅರಣ್ಯ ಇಲಾಖೆ ಅಥವಾ ತರಬೇತಿ ಪಡೆದ ಹಾವು ರಕ್ಷಕರನ್ನು ಸಂಪರ್ಕಿಸಿ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES