• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /7.05 ಕೋಟಿ ರೂಪಾಯಿ ಅನುದಾನ..ಆದ್ರೂ ಬಡಾವಣೆಗೆ ನೀರಿಲ್ಲ..!

7.05 ಕೋಟಿ ರೂಪಾಯಿ ಅನುದಾನ..ಆದ್ರೂ ಬಡಾವಣೆಗೆ ನೀರಿಲ್ಲ..!

ವಿಪರ್ಯಾಸ ಅಂದ್ರೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 2014ರಲ್ಲೇ ಗೃಹ ಮಂಡಳಿಯಿಂದ ನಗರಸಭೆಗೆ 4.50 ಕೋಟಿ ರೂಪಾಯಿ ಚೆಕ್ ನೀಡಲಾಗಿದೆ. 2016ರಲ್ಲಿ ಮತ್ತೆ 2.55 ಕೋಟಿ ರೂಪಾಯಿ ಅನುದಾನ ನೀಡಿದ್ರೂ ಕಾಮಗಾರಿ ಮಾತ್ರ ಆಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಒಟ್ಟು 7.05 ಕೋಟಿ ರೂಪಾಯಿ ಹಣ ಏನಾಯ್ತು..? ನೀರಿನ ಯೋಜನೆ ಕಾಗದದಲ್ಲೇ ಉಳಿದಿದ್ಯಾ..? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್.

Written ByChetana Devarmani
Published: Nov 08, 2026, 15:05 IST|Updated: Nov 08, 2026, 15:07 IST
joinshare
7.05 ಕೋಟಿ ರೂಪಾಯಿ ಅನುದಾನ..ಆದ್ರೂ ಬಡಾವಣೆಗೆ ನೀರಿಲ್ಲ..!

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗದಗ: ಬಡವರಿಗೊಂದು ಸ್ವಂತ ಸೂರು ಇರಬೇಕು. ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಬದುಕಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದ್ರೆ ಇಲ್ಲೊಂದು ಬಡಾವಣೆಯಲ್ಲಿ ನಿವೇಶನ ಖರೀದಿಸಿದ ಜನರ ಕನಸು ನನಸಾಗುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ ಬರೋಬ್ಬರಿ 20 ವರ್ಷಗಳಿಂದ ಈ ಬಡಾವಣೆಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ. ವಿಪರ್ಯಾಸ ಅಂದ್ರೆ ಶಾಶ್ವತ ಕುಡಿಯುವ ನೀರು ಪೂರೈಕೆಗಾಗಿ 2014ರಲ್ಲೇ ಗೃಹ ಮಂಡಳಿಯಿಂದ ನಗರಸಭೆಗೆ 4.50 ಕೋಟಿ ರೂಪಾಯಿ ಚೆಕ್ ನೀಡಲಾಗಿದೆ. 2016ರಲ್ಲಿ ಮತ್ತೆ 2.55 ಕೋಟಿ ರೂಪಾಯಿ ಅನುದಾನ ನೀಡಿದ್ರೂ ಕಾಮಗಾರಿ ಮಾತ್ರ ಆಗಿಲ್ಲ ಅನ್ನೋ ಆರೋಪ ಕೇಳಿಬಂದಿದೆ. ಹಾಗಾದ್ರೆ ಒಟ್ಟು 7.05 ಕೋಟಿ ರೂಪಾಯಿ ಹಣ ಏನಾಯ್ತು..? ನೀರಿನ ಯೋಜನೆ ಕಾಗದದಲ್ಲೇ ಉಳಿದಿದ್ಯಾ..? ಇಲ್ಲಿದೆ ಒಂದು ಸ್ಪೆಷಲ್ ರಿಪೋರ್ಟ್.

ಎಸ್..ಇದು ಗದಗ ನಗರದ ಹೊರವಲಯದಲ್ಲಿರೋ ಕಳಸಾಪುರ ಕೆಎಚ್‌ಬಿ ಬಡಾವಣೆ. ಬರೋಬ್ಬರಿ 300 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರೋ ಬಡಾವಣೆ. ಸ್ವಂತ ಮನೆ ಕಟ್ಟಿಕೊಳ್ಳುವ ಆಸೆಯಿಂದ ಬಡ, ಮಧ್ಯಮ ವರ್ಗದ ಜನ ಇಲ್ಲಿ ನಿವೇಶನ ಖರೀದಿ ಮಾಡಿದ್ದಾರೆ. ಆದ್ರೆ ನಿವೇಶನ ಖರೀದಿಸಿ ವರ್ಷಗಳೇ ಕಳೆದ್ರೂ ಮನೆ ಕಟ್ಟಿಕೊಳ್ಳುವ ಭಾಗ್ಯ ಮಾತ್ರ ಈ ಜನ್ರಿಗೆ ಸಿಕ್ಕಿಲ್ಲ. ಇದಕ್ಕೆ ಪ್ರಮುಖ ಕಾರಣ ಕುಡಿಯುವ ನೀರಿನ ಸಮಸ್ಯೆ. ಕಳೆದ 20 ವರ್ಷಗಳಿಂದ ನೀರಿಗಾಗಿ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ. ಬೋರ್‌ವೆಲ್ ಕೊರೆಸಿದ್ರೂ ಅಂತರ್ಜಲದ ಕೊರತೆಯಿಂದ ಸಮರ್ಪಕ ನೀರು ಸಿಗ್ತಿಲ್ಲ. ದೂರದ ಪ್ರದೇಶಗಳಿಂದ ನೀರು ತಂದು ಬದುಕು ಸಾಗಿಸುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ನೀರಿನ ಸೌಲಭ್ಯವೇ ಇಲ್ಲದ ಮೇಲೆ ಮನೆ ಕಟ್ಟಿಕೊಂಡು ಏನು ಮಾಡೋದು ಅನ್ನೋ ಪ್ರಶ್ನೆ ಜನರದ್ದು.

ಇನ್ನು ಈ ಬಡಾವಣೆಗೆ ಶಾಶ್ವತ ಕುಡಿಯುವ ನೀರು ಒದಗಿಸಲೆಂದೇ 2014ರಲ್ಲಿ ಕರ್ನಾಟಕ ಗೃಹ ಮಂಡಳಿ ಗದಗ-ಬೆಟಗೇರಿ ನಗರಸಭೆಗೆ 4.50 ಕೋಟಿ ರೂಪಾಯಿ ಮೊತ್ತದ ಚೆಕ್ ನೀಡಿತ್ತು. ನಂತ್ರ 2016ರಲ್ಲಿ ನಗರಸಭೆಯ ಟ್ಯಾಪಿಂಗ್ ಪಾಯಿಂಟ್‌ನಿಂದ ಬಡಾವಣೆಯ ನೆಲಮಟ್ಟದ ಸಂಗ್ರಹಾಗಾರಕ್ಕೆ ಕೊಳವೆ ಮಾರ್ಗ ಅಳವಡಿಸಲು 2.55 ಕೋಟಿ ರೂಪಾಯಿ ನೀಡಲಾಗಿದೆ. ಆದ್ರೆ ಇಷ್ಟೊಂದು ಹಣ ಬಿಡುಗಡೆಯಾದ್ರೂ ನೀರಿನ ಯೋಜನೆ ಮಾತ್ರ ಅನುಷ್ಠಾನವಾಗಿಲ್ಲ ಅನ್ನೋದು ನಿವಾಸಿಗಳ ಆರೋಪ. ಇನ್ನು 2014ರಲ್ಲಿ ಬಿಡುಗಡೆಯಾದ 4.50 ಕೋಟಿ ರೂಪಾಯಿ ಚೆಕ್ ಬಳಕೆ ಬಗ್ಗೆಯೂ ಗಂಭೀರ ಅನುಮಾನಗಳು ವ್ಯಕ್ತವಾಗಿವೆ. ಹಣ ಬಿಡುಗಡೆಯಾದ ಉದ್ದೇಶವೇ ಬೇರೆ, ಬಳಕೆಯಾದ ಉದ್ದೇಶವೇ ಬೇರೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ, ನಗರಸಭೆ ಮತ್ತು ಗೃಹ ಮಂಡಳಿಯಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳೂ ಲಭ್ಯವಿಲ್ಲ ಎಂಬ ಮಾಹಿತಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಅನುದಾನ ಬಳಕೆ ಪ್ರಮಾಣಪತ್ರವನ್ನೂ ಗೃಹ ಮಂಡಳಿ ಪಡೆದಿಲ್ಲ ಅನ್ನೋ ಆರೋಪಗಳು ಸಹ ಸ್ಥಳೀಯ ನಿವಾಸಿಗಳದ್ದು.

ಒಂದೆಡೆ ಸ್ವಂತ ಮನೆ ಕಟ್ಟಿಕೊಳ್ಳುವ ಬಡವರ ಕನಸು. ಮತ್ತೊಂದೆಡೆ ಕೋಟ್ಯಂತರ ರೂಪಾಯಿ ಅನುದಾನದ ಬಳಕೆ ಬಗ್ಗೆ ಅನುಮಾನ. ಒಟ್ಟು 7.05 ಕೋಟಿ ರೂಪಾಯಿ ಹಣದ ಲೆಕ್ಕ ಎಲ್ಲಿ.?ಕುಡಿಯುವ ನೀರಿನ ಯೋಜನೆ ಯಾಕೆ ಇನ್ನೂ ಪೂರ್ಣಗೊಂಡಿಲ್ಲ..? ಈ ಎಲ್ಲಾ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಬೇಕಿದೆ. ಹಣದ ಬಳಕೆ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಕಳಸಾಪುರ ಬಡಾವಣೆಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕಿದೆ. ಆಗ ಮಾತ್ರ ನಿವೇಶನ ಖರೀದಿಸಿದ ಸಾವಿರಾರು ಬಡವರ ಸ್ವಂತ ಮನೆಯ ಕನಸು ನನಸಾಗಲು ಸಾಧ್ಯ.

Add Zee News as a Preferred Source
TAGS:
Kannada News