SOCIAL MEDIA

Newsletter

PARTNER SITES
Select Language Select State

ಕೋಟಿ ಕೋಟಿ ರೂಪಾಯಿ ವೆಚ್ಚದ ಬ್ರಿಡ್ಜ್‌ ಕಂ ಬ್ಯಾರೇಜ್‌ ಅವಾಂತರ.. ಕಣ್ಣೆದುರೇ ಎಲ್ಲ ವ್ಯರ್ಥ

ಬರಗಾಲದ ನಡುವೆ ರೈತರ ಜಮೀನುಗಳಿಗೆ ಆಸರೆ ಆಗಬೇಕಿದ್ದ ನೀರು, ಇದೀಗ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಈ ಅವಾಂತರ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.

Written By Bhimappa
Published: Sep 30, 2026, 07:38 PM IST | Updated: Sep 30, 2026, 07:43 PM IST
Image Credit: Kumudvathi_River
Join

Kumudvathi river: ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚದ ನೀರಾವರಿ ಯೋಜನೆಯೊಂದು ಈಗ ಅವ್ಯವಸ್ಥೆಯ ಆರೋಪಕ್ಕೆ ಗುರಿಯಾಗಿದೆ. ಬರಗಾಲದ ನಡುವೆ ರೈತರ ಜಮೀನುಗಳಿಗೆ ಆಸರೆ ಆಗಬೇಕಿದ್ದ ನೀರು, ಇದೀಗ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಈ ಅವಾಂತರ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರೇಜ್‌ನ ನೀರು ಪೋಲು
ಕಳೆದ ವರ್ಷ ಗೇಟ್ ಅಳವಡಿಕೆಯಲ್ಲಿ ವಿಳಂಬ. ಈ ವರ್ಷ ನೀರೇ ಪೋಲು

ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಬ್ರಿಡ್ಜ್ ಕಂ ಬ್ಯಾರೇಜ್. ಸಾವಿರಾರು ಎಕರೆ ಕೃಷಿ ಜಮೀನುಗಳಿಗೆ ನೀರಿನ ಅನುಕೂಲ ಕಲ್ಪಿಸಬೇಕಿದ್ದ ಯೋಜನೆ. ಆದರೆ ಈಗ ಇದೇ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರು ಕಣ್ಣೆದುರೇ‌ ಪೋಲು ಆಗ್ತಿದೆ. ಇದು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಸಣ್ಣಗುಬ್ಬಿ- ಹೀರೆಮಾದಾಪೂರ ನಡುವಿನ ಕುಮದ್ವತಿ ನದಿಯ ದೃಶ್ಯ. ಬರಗಾಲದ ಪರಿಸ್ಥಿತಿಯಲ್ಲಿ ಬ್ಯಾರೇಜ್‌ನಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು. ಈ ನೀರನ್ನು ಕೃಷಿ ಚ ಟುವಟಿಕೆಗಳಿಗೆ ಬಳಸಿಕೊಳ್ಳಬೇಕಿತ್ತು.

ಆದರೆ ಬ್ಯಾರೇಜ್‌ನ ಗೇಟ್‌ಗಳೇ ನೀರು ತಡೆಯುವ ಸ್ಥಿತಿಯಲ್ಲಿ ಇಲ್ಲ ಎಂಬುದು ದುರಂತ. ಒಂದು ಗೇಟ್ ಕಿತ್ತುಕೊಂಡು ಹೋಗಿದ್ದು ಉಳಿದ ಗೇಟ್‌ಗಳೂ ಸಡಿಲಗೊಂಡಿವೆ. ಇದರ ಪರಿಣಾಮ ನೀರನ್ನು ಸಂಗ್ರಹಿಸಿ ರೈತರ ಜಮೀನುಗಳಿಗೆ ಹರಿಸಬೇಕಿದ್ದ ಬ್ಯಾರೇಜ್‌ನಿಂದಲೇ ನೀರು ನದಿಗೆ ವ್ಯರ್ಥವಾಗಿ ಹರಿ ಯುತ್ತಿದೆ. ಕಳೆದ ಎರಡು–ಮೂರು ದಿನಗಳಿಂದ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿದ್ದ ನೀರು ನಿರಂತರವಾಗಿ ಹೊರಗೆ ಹರಿದುಹೋಗುತ್ತಿದ್ದು, ನೀರನ್ನು ಸಮರ್ಪಕವಾಗಿ ತಡೆಹಿ ಡಿಯಲು ಸಾಧ್ಯವಾಗದೇ ನೀರಾವರಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಅಷ್ಟಕ್ಕೂ ಈ ಯೋಜನೆ ನಿರ್ಮಾಣಕ್ಕೆ ಖರ್ಚಾಗಿದ್ದು ಬರೋಬ್ಬರಿ 4.60 ಕೋಟಿ ರೂಪಾಯಿ; 
ಸಾವಿರಾರು ಎಕರೆ ಜಮೀನುಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ .ಆದರೆ ಕಾಮಗಾರಿ ಮುಗಿದ ಕೆಲವೇ ಅವಧಿಯಲ್ಲಿ ಗೇಟ್‌ಗಳ ಸ್ಥಿತಿ ಹದಗೆಟ್ಟಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಗೇಟ್ ಅಳವಡಿಕೆಯಲ್ಲೇ ವಿಳಂಬವಾಗಿತ್ತು. ಈ ವರ್ಷ ನೀರು ಬಂದರೂ ಅದನ್ನು ಉಳಿಸಿ ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಪೆ ಗುಣಮಟ್ಟದ ಗೇಟಗಳನ್ನು ಅಳವಡಿಸಿರುವುದರಿಂದಲೇ ಅವು ನೀರಿನ ಒತ್ತಡವನ್ನು ತಡೆದುಕೊಳ್ಳದೆ ಹಾನಿಗೊಳಗಾಗಿವೆ. ಒಂದೆಡೆ ಮಳೆ ಕೊರತೆ ಮತ್ತೊಂದೆಡೆ ನೀರಿಗಾಗಿ ರೈತರ ಪರದಾಟ ಆಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿರುವ ನೀರನ್ನೇ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಯೋಜನೆ ನಿರ್ಮಾಣದ ಉದ್ದೇಶವೇನು ಎಂಬ ಪ್ರಶ್ನೆಯನ್ನ ಸ್ಥಳೀಯರು ಮುಂದಿಟ್ಟಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದ ಯೋಜನೆಯ ನಿರ್ವಹಣೆ ಹೇಗಿದೆ ಎಂಬುದಕ್ಕೂ ಇದು ಪ್ರಶ್ನೆ ಎತ್ತಿದ್ದು‌. ಈ ಬಗ್ಗೆ ಮಾಜಿ ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿ ಕಾರಿದ್ದಾರೆ. ಮೂರುವರೆ ವರ್ಷಗಳಿಂದ ಬ್ರಿಡ್ಜ್ ಕಂ ಬ್ಯಾರೇಜ್ ಅಧಿಕಾರಿಗಳು ನಿರ್ವಹಣೆ ಮಾಡಿಲ್ಲ, ಇದರಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ರೈತರ ಜಮೀನುಗಳಿಗೆ ಆಸರೆ ಆಗಬೇಕಿದ್ದ ನೀರು, ಇದೀಗ ನದಿಗೆ ವ್ಯರ್ಥವಾಗಿ ಹರಿದು ಹೋಗುತ್ತಿದೆ. ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಈ ಅವಾಂತರ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. 

ಯಾವುದೇ ನೀರಾವರಿ ಇಂಜಿನಿಯರ್‌ಗಳನ್ನ ಕೇಳಿದರೂ ಸಿಬ್ಬಂದಿ ಕೊರತೆಯಿದೆ ಅಂತೇಳಿ ಕಾರಣ ನೀಡ್ತಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಬರ ಉಂಟಾದರೆ ಅದಕ್ಕೆ ರಾಜ್ಯ ಸರ್ಕಾರ ನೇರ ಹೊಣೆ ಅಂತೇಳಿ ವಾಗ್ದಾಳಿ ನಡೆಸಿದ್ದಾರೆ. ಬ್ಯಾರೇಜ್‌ನ ಗೇಟ್‌ಗಳನ್ನು ತಕ್ಷಣ ದುರಸ್ತಿ ಮಾಡಬೇಕು. ಕಿತ್ತುಹೋದ ಗೇಟ್ ಬದಲಿಗೆ ಹೊಸ ಗೇಟ್ ಅಳವಡಿಸಬೇಕು. ಸಂಗ್ರಹವಾಗುವ ನೀರು ಮತ್ತೆ ವ್ಯರ್ಥವಾಗಿ ನದಿಗೆ ಹರಿದು ಹೋಗದಂತೆ ನೀರಾವರಿ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES