• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಡಿಜೆ ವಿಚಾರಕ್ಕೆ ಗಲಾಟೆಗೆ ಗುಂಡಿನ ಪ್ರತೀಕಾರ ಯುವಕನ ಭೀಕರ ಹ*ತ್ಯೆ, ಹೆಂಡತಿ ಜೊತೆ ಇದ್ದಾಗಲೇ ಗುಂಡು ಹಾರಿಸಿ ಎಸ್ಕೇಪ್

ಡಿಜೆ ವಿಚಾರಕ್ಕೆ ಗಲಾಟೆಗೆ ಗುಂಡಿನ ಪ್ರತೀಕಾರ ಯುವಕನ ಭೀಕರ ಹ*ತ್ಯೆ, ಹೆಂಡತಿ ಜೊತೆ ಇದ್ದಾಗಲೇ ಗುಂಡು ಹಾರಿಸಿ ಎಸ್ಕೇಪ್

ಕಳೆದ ಒಂದು ತಿಂಗಳ ಹಿಂದಷ್ಟೇ ಆತನಿಗೆ ಒಂದು ಮಗು ಜನಿಸಿದೆ. ಹೀಗಾಗಿ ತನ್ನ ಹೆಂಡತಿಗೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದು ಕೊಂಡು ಬೈಕ್ ನಲ್ಲಿ ಬಂದಿದ್ದ. ಚಿಕಿತ್ಸೆ ಕೊಡಿಸಿ ಇನ್ನೇನು ತೆರಳಬೇಕು ಅದು ಹೆಂಡತಿಗೆ ಪಕ್ಕದಲ್ಲೇ ಇರುವಾಗಲೇ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೆಂಡತಿ ಕಣ್ ಮುಂದೆಯೇ ಗಂಡ ಗುಂಡಿನ ದಾಳಿಗೆ ತುತ್ತಾಗಿ ಸಾವನಪ್ಪಿದ್ದಾನೆ. ಹಾಗಾದರೆ ಈ ಘಟನೆ ನಡೆದಿದ್ದಾರೂ ಎಲ್ಲಿ...? ಈ ಘಟನೆಗೆ ಕಾರಣವೇನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

Written ByRamya. R. Gowda
Published: Nov 08, 2026, 12:19 IST|Updated: Nov 08, 2026, 12:20 IST
joinshare
ಡಿಜೆ ವಿಚಾರಕ್ಕೆ ಗಲಾಟೆಗೆ ಗುಂಡಿನ ಪ್ರತೀಕಾರ ಯುವಕನ ಭೀಕರ ಹ*ತ್ಯೆ, ಹೆಂಡತಿ ಜೊತೆ ಇದ್ದಾಗಲೇ ಗುಂಡು ಹಾರಿಸಿ ಎಸ್ಕೇಪ್

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಕಳೆದ ಒಂದು ತಿಂಗಳ ಹಿಂದಷ್ಟೇ ಆತನಿಗೆ ಒಂದು ಮಗು ಜನಿಸಿದೆ. ಹೀಗಾಗಿ ತನ್ನ ಹೆಂಡತಿಗೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಗೆ ಕರೆದು ಕೊಂಡು ಬೈಕ್ ನಲ್ಲಿ ಬಂದಿದ್ದ. ಚಿಕಿತ್ಸೆ ಕೊಡಿಸಿ ಇನ್ನೇನು ತೆರಳಬೇಕು ಅದು ಹೆಂಡತಿಗೆ  ಪಕ್ಕದಲ್ಲೇ ಇರುವಾಗಲೇ ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹೆಂಡತಿ ಕಣ್ ಮುಂದೆಯೇ ಗಂಡ ಗುಂಡಿನ ದಾಳಿಗೆ ತುತ್ತಾಗಿ ಸಾವನಪ್ಪಿದ್ದಾನೆ. ಹಾಗಾದರೆ ಈ ಘಟನೆ ನಡೆದಿದ್ದಾರೂ ಎಲ್ಲಿ...? ಈ ಘಟನೆಗೆ ಕಾರಣವೇನು ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

ಹೌದು ವಿಜಯಪುರ ನಗರದ ಮುಂಡೆವಾಡಿ ಆಸ್ಪತ್ರೆ ಮುಂಭಾಗ ಹಾಡು ಹಗಲೇ ಗುಂಡಿನ ದಾಳಿ ನಡೆದಿದೆ. ವಿಜಯಪುರ ನಗರದ ಅಪಝಲಪುರ ಟಕ್ಕೆ ಬಡಾವಣೆಯ ನಿವಾಸಿ ಯಾಸೀನ್ ಜುಬೇರ ಎಂಬಾತ ಮೇಲೆ ದುಷ್ಕರ್ಮಿಗಳಿಂದ ಏಕಾಏಕಿ ಗುಂಡಿನ‌ ದಾಳಿ ನಡೆದಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಈತನಿಗೆ ಒಂದು ಮಗು ಕೂಡಾ ಜನಿಸಿದೆ. ರೂಟಿನ್ ಚೆಕಪ್ ಗೆಂದು ಆತ ತನ್ನ ಹೆಂಡತಿಗೆ ಆಸ್ಪತ್ರೆಗೆ ಕರೆ ತಂದಿದ್ದ, ಚಿಕಿತ್ಸೆ ಪಡೆದು ಇನ್ನೇನು ಸ್ಕೂಟಿಯಲ್ಲಿ ವಾಪಸ್ ಮನೆಗೆ ತೆರಳಬೇಕು ಎನ್ನುವಷ್ಟರಲ್ಲಿ ಆಗಮಿಸಿ ಮೂರ್ನಾಲ್ಕು ಜನರ ದುಷ್ಕರ್ಮಿಗಳ ತಂಡ ಏಕಾ ಏಕಿ ಗುಂಡಿನ‌ ದಾಳಿ ನಡೆಸಿದ್ದಾರೆ. ಹೆಂಡತಿ ಮುಂಭಾಗವೇ ಮೂರರಿಂದ ನಾಲ್ಕು ಸುತ್ತು ಗುಂಡು ಹಾರಿಸಿ ಎಸ್ಕೇಪ್ ಆಗಿದ್ದಾರೆ. ಗುಂಡುಗಳು ಯಾಸೀನ್  ಎದೆಗೆ ತಗುಲಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿಚೌಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಎಸ್ ಪಿ ಲಕ್ಷ್ಮಣ ನಿಂಬರಗಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.‌ ಆತನ‌ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ ಸಂದರ್ಭದಲ್ಲಿ ಸಾವಿರಾರು‌ ಸಂಖ್ಯೆಯಲ್ಲಿ ಜನರು ಜಿಲ್ಲಾಸ್ಪತ್ರೆಯ ಮುಂಭಾಗ ಜಮಾವಣೆಗೊಂಡಿದ್ದರು. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು...

ಇನ್ನು ಈ ಕೊಲೆಯ ಹಿಂದೆ ಹಳೆಯ ದ್ವೇಷದ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಡಿಜೆ ಸೌಂಡ್ ವಿಚಾರವಾಗಿ ಯಾಸೀನ್ ಹಾಗೂ ಮತ್ತೊಂದು ಗುಂಪಿನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆರೋಪಿಗಳ ಪತ್ತೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದ್ದು, ನಗರದ ಪ್ರಮುಖ ಪ್ರದೇಶಗಳಲ್ಲಿ ಪೊಲೀಸ್ ಬಂದೋ ಬಸ್ತ್ ಹೆಚ್ಚಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಈ ಹಿಂದೆಯೂ ಗ್ಯಾಂಗ್‌ವಾರ್, ಗುಂಡಿನ ದಾಳಿ ಹಾಗೂ ರೌಡಿಗಳ ನಡುವಿನ ವೈಷಮ್ಯಕ್ಕೆ ಹಲವು ಜೀವಗಳು ಬಲಿಯಾಗಿವೆ. ಭೀಮಾ ತೀರದ ಗ್ಯಾಂಗ್‌ ವಾರ್ ಇತಿಹಾಸವೂ ಇದಕ್ಕೆ ಸಾಕ್ಷಿಯಾಗಿದೆ. ಇದೀಗ ಕ್ಷುಲ್ಲಕ ಡಿಜೆ ಗಲಾಟೆಯೂ ಗುಂಡಿನ ದಾಳಿಗೆ ತಿರುಗಿರುವುದು ಆತಂಕ ಮೂಡಿಸಿದೆ. ಇನ್ನೂ ಜಿಲ್ಲೆಯಲ್ಲಿ ಆಕ್ರಮ‌ ಶಸ್ತ್ರಾಸ್ತ್ರ ಹೆಚ್ಚಾಗಿವೆ, ಹಾಗೆ ಗಾಂಜಾ ಮತ್ತಿನಲ್ಲಿ ಹೀಗೆ ಕೊಲೆ ಮಾಡಿ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ...

ಹಾಡು ಹಗಲೇ  ವಿಜಯಪುರದಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಕ್ಷುಲ್ಲಕ ವಿಚಾರಗಳಿಗೆ ಪಿಸ್ತೂಲ್ ಹಿಡಿದು ಜೀವ ತೆಗೆಯುವ ಮಟ್ಟಕ್ಕೆ ದುಷ್ಕರ್ಮಿಗಳು ಮುಂದಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅದರಲ್ಲೂ ಸಾರ್ವಜನಿಕವಾಗಿ ಪಿಸ್ತೂಲ್‌ಗಳು ಸುಲಭವಾಗಿ ಲಭ್ಯವಾಗುತ್ತಿರುವುದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಗಂಭೀರ ಪ್ರಶ್ನೆಯಾಗಿದೆ. ಅಕ್ರಮ ಶಸ್ತ್ರಾಸ್ತ್ರಗಳ ಪೂರೈಕೆಗೆ ಕಡಿವಾಣ ಹಾಕಿ, ಬಂದೂಕು ಸಂಸ್ಕೃತಿಗೆ ಅಂತ್ಯ ಹಾಡಬೇಕಿದೆ. ಯಾಸೀನ್ ಹತ್ಯೆಯ ಆರೋಪಿಗಳನ್ನು ಶೀಘ್ರ ಬಂಧಿಸಿ, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

 

Add Zee News as a Preferred Source
TAGS:
Kannada News