SOCIAL MEDIA

Newsletter

PARTNER SITES
Select Language Select State

Satyatma Teertha Swamiji accident: ಅಪಘಾತದ ಬಳಿಕ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಮೊದಲ ಪ್ರತಿಕ್ರಿಯೆ

ಸೀಮೋಲ್ಲಂಘನ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ಸಂದರ್ಭದಲ್ಲಿ ಅಪಘಾತ ಸಂಭವಿಸಿತು ಎಂದು ಉತ್ತರಾದಿಮಠದ ಗುರುಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ತಿಳಿಸಿದ್ದಾರೆ.

Written By Chetana Devarmani
Published: Sep 27, 2026, 05:51 PM IST | Updated: Sep 27, 2026, 05:53 PM IST
Image Credit: Image courtesy : Sri Uttaradi matha instagram page
Join

Satyatma Teertha Swamiji reaction after accident : ಧಾರವಾಡದಿಂದ ಸವಣೂರಿನತ್ತ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ಶ್ರೀಪಾದಂಗಳವರು ಸೇರಿದಂತೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಮಠದ ಶಿಷ್ಯಂದಿರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಶ್ರೀಮಠದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಶ್ರೀಪಾದಂಗಳವರ ಆರೋಗ್ಯದ ಕುರಿತು ಭಕ್ತರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಶ್ರೀಮಠದ ವತಿಯಿಂದ ಮನವಿ ಮಾಡಲಾಗಿದೆ. ಶ್ರೀರಾಮ ದೇವರು ಹಾಗೂ ಗುರುಗಳ ಅನುಗ್ರಹದಿಂದ ದೊಡ್ಡ ಅನಾಹುತ ತಪ್ಪಿದ್ದು, ಶ್ರೀಪಾದಂಗಳವರು ಮತ್ತು ಅವರ ಶಿಷ್ಯರು ಚೇತರಿಸಿಕೊಂಡಿದ್ದಾರೆ ಎಂದು ಮಠದ ಆಡಳಿತ ಅಧಿಕಾರಿ ವಿದ್ಯಾಧೀಶ ಆಚಾರ್ಯರು ತಿಳಿಸಿದ್ದಾರೆ.

ತಮ್ಮ ಆರೋಗ್ಯದ ಕುರಿತು ಆತಂಕಗೊಂಡಿರುವ ಭಕ್ತರಿಗೆ ಸ್ವತಃ ಉತ್ತರಾದಿಮಠದ ಗುರುಗಳಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ವಿಡಿಯೋ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ. ಸೀಮೋಲ್ಲಂಘನ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುವ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಅಪಘಾತ ಸಂಭವಿಸಿತು ಎಂದು ಅವರು ತಿಳಿಸಿದ್ದಾರೆ. ಗುರುಗಳ ಅನುಗ್ರಹ, ಮೂಲರಾಮ, ದಿಗ್ವಿಜಯರಾಮ ಹಾಗೂ ವೇದವ್ಯಾಸ ದೇವರ ಅನುಗ್ರಹದಿಂದ ಯಾವುದೇ ಗಂಭೀರ ಸಮಸ್ಯೆ ಉಂಟಾಗಿಲ್ಲ ಎಂದು ಶ್ರೀಪಾದಂಗಳವರು ಹೇಳಿದ್ದಾರೆ. ವೈದ್ಯರು ಕೂಡ ಯಾವುದೇ ಚಿಂತಾಜನಕ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ ಎಂದು ಅವರು ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಭಕ್ತರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಶ್ರೀಪಾದಂಗಳವರು ಮನವಿ ಮಾಡಿದ್ದಾರೆ. ಎಲ್ಲರೂ ದೇವರಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಅವರು ಕೋರಿದ್ದು, ಹರಿ, ವಾಯು ಮತ್ತು ಗುರುಗಳ ಅನುಗ್ರಹದಿಂದ ಎಲ್ಲವೂ ಕ್ಷೇಮವಾಗಿದೆ ಎಂದು ಭಕ್ತರಿಗೆ ಧೈರ್ಯ ತುಂಬಿದ್ದಾರೆ.

ಈ ನಡುವೆ ಶ್ರೀಪಾದಂಗಳವರಿಗೆ ವಿಶ್ರಾಂತಿ ಅಗತ್ಯವಿರುವ ಹಿನ್ನೆಲೆಯಲ್ಲಿ ಭಕ್ತರು ಆಸ್ಪತ್ರೆಗೆ ಅಥವಾ ಶ್ರೀಪಾದಂಗಳವರು ಇರುವ ಸ್ಥಳಕ್ಕೆ ಭೇಟಿ ನೀಡದಂತೆ ಮಠದ ಆಡಳಿತದಿಂದ ಮನವಿ ಮಾಡಲಾಗಿದೆ. ವಿದ್ಯಾಧೀಶ ಆಚಾರ್ಯರು ನೀಡಿರುವ ಮತ್ತೊಂದು ವಿಡಿಯೋ ಸಂದೇಶದಲ್ಲಿ, ಶ್ರೀಪಾದಂಗಳವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಯಾವುದೇ ಗಂಭೀರ ಸಮಸ್ಯೆ ಇಲ್ಲದಿದ್ದರೂ ವೈದ್ಯರ ಸಲಹೆಯಂತೆ ವಿಶ್ರಾಂತಿ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಭಕ್ತರು ತಮ್ಮ ಪ್ರಾರ್ಥನೆ, ಪಾರಾಯಣ ಹಾಗೂ ಧಾರ್ಮಿಕ ಸೇವೆಗಳ ಮೂಲಕ ಶ್ರೀಪಾದಂಗಳವರು ಮತ್ತು ಅವರ ಶಿಷ್ಯ ವರ್ಗದವರ ಕ್ಷೇಮಕ್ಕಾಗಿ ಪ್ರಾರ್ಥಿಸಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಯಾವುದೇ ಪರಿಶೀಲಿಸದ ಮಾಹಿತಿ ಅಥವಾ ವದಂತಿಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಶ್ರೀಮಠದ ವತಿಯಿಂದ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಶ್ರೀಪಾದಂಗಳವರ ಆರೋಗ್ಯದ ಕುರಿತು ಅಗತ್ಯ ಮಾಹಿತಿಯನ್ನು ಅಧಿಕೃತವಾಗಿ ಮಠದ ವತಿಯಿಂದಲೇ ಭಕ್ತರಿಗೆ ತಲುಪಿಸಲಾಗುವುದು ಎಂದು ಆಡಳಿತ ತಿಳಿಸಿದೆ. ಸದ್ಯ ಶ್ರೀಪಾದಂಗಳವರು ಚೇತರಿಸಿಕೊಂಡಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಭಕ್ತರು ಆತಂಕಪಡದೆ ಶ್ರೀಪಾದಂಗಳವರ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಶ್ರೀಮಠ ಮನವಿ ಮಾಡಿದೆ.

 

 

ಶ್ರೀಮಠದ ಆಡಳಿತ ಅಧಿಕಾರಿ ವಿದ್ಯಾಧೀಶ ಆಚಾರ್ಯರಿಂದ ಮಾಹಿತಿ :

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರವಾಡದಿಂದ ಸವಣೂರಿಗೆ ತೆರಳುವ ಮಾರ್ಗದಲ್ಲಿ ಉತ್ತರಾದಿ ಶ್ರೀಪಾದರ ವಾಹನಕ್ಕೆ ಅಪಘಾತವಾಗಿದೆ. ಶ್ರೀಗಳಿಗೆ ಸಣ್ಣ ಪುಟ್ಟ ಗಾಯ, ಯಾವುದೇ ತರಹದ ತೊಂದರೆ ಇಲ್ಲ ಎಂದು ಶ್ರೀಮಠದ ಆಡಳಿತ ಅಧಿಕಾರಿ ವಿದ್ಯಾಧೀಶ ಆಚಾರ್ಯರಿಂದ ಮಾಹಿತಿ ನೀಡಿದ್ದಾರೆ. ಸ್ವಾಮಿಗಳು ಮತ್ತವರ ಪರಿವಾರದವರು ಎಲ್ಲರೂ ಆರೋಗ್ಯವಾಗಿದ್ದಾರೆ. ಶ್ರೀರಾಮ ದೇವರ ಅನುಗ್ರಹದಿಂದ ಎಲ್ಲರೂ ಮೂಲ ರಾಮದೇವರ ಅನುಗ್ರಹದಿಂದ ಅಪಾಯದಿಂದ ಪಾರಾಗಿದ್ದಾರೆ. ದಯವಿಟ್ಟು ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ. ಅನವಶ್ಯಕ ತಪ್ಪು ಮಾಹಿತಿ ನೀಡಿ ಜನರಲ್ಲಿ ಗೊಂದಲ ಉಂಟು ಮಾಡಬೇಡಿ ಎಂದ ವಿದ್ಯಾಧೀಶ ಆಚಾರ್ಯ ಮನವಿ ಮಾಡಿದ್ದಾರೆ. 

 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES