ಪೊಲೀಸರ ಭರ್ಜರಿ ಕಾರ್ಯಾಚರಣೆ.. ವಶಪಡಿಸಿಕೊಂಡ ಕೊಟ್ಯಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರ...
ಈ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9.43 ಕೋಟಿ ರೂ. ಮೌಲ್ಯದ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು ಹಾಗೂ ವಾಹನಗಳ ಹಸ್ತಾಂತರ ಸಚಿವರ ನೇತೃತ್ವದಲ್ಲಿ ಮಾಡಿದರು. ಇನ್ನೂ ತಾವು ಕಳೆದು ಕೊಂಡ ವಸ್ತು, ಹಣ ಮರಳಿ ಬರುವದಿಲ್ಲ ಎಂದು ಕೊಂಡಿದ್ದ ಜನರು ಸಹಿತ ಸಂತಸ ಗೊಂಡಿದ್ದರು. ಹಾಗಾದರೆ ಅಲ್ಲಿ ಎಷ್ಟು ಪ್ರಕರಣಗಳಿಂದ ಇಷ್ಟೊಂದು ಹಣ ವಶಕ್ಕೆ ಪಡೆದರು ಎಂಬುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಈ ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 9.43 ಕೋಟಿ ರೂ. ಮೌಲ್ಯದ ವಶಪಡಿಸಿಕೊಂಡ ಚಿನ್ನ, ಬೆಳ್ಳಿ, ನಗದು ಹಾಗೂ ವಾಹನಗಳ ಹಸ್ತಾಂತರ ಸಚಿವರ ನೇತೃತ್ವದಲ್ಲಿ ಮಾಡಿದರು. ಇನ್ನೂ ತಾವು ಕಳೆದು ಕೊಂಡ ವಸ್ತು, ಹಣ ಮರಳಿ ಬರುವದಿಲ್ಲ ಎಂದು ಕೊಂಡಿದ್ದ ಜನರು ಸಹಿತ ಸಂತಸ ಗೊಂಡಿದ್ದರು. ಹಾಗಾದರೆ ಅಲ್ಲಿ ಎಷ್ಟು ಪ್ರಕರಣಗಳಿಂದ ಇಷ್ಟೊಂದು ಹಣ ವಶಕ್ಕೆ ಪಡೆದರು ಎಂಬುದರ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ...
ಹೌದು ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಕಳ್ಳರು ಹಾಗೂ ಸೈಬರ್ ಖದೀಮರ ಹೆಡಿಮುರಿ ಕಟ್ಟಿದ್ದಾರೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಕಳುವಾಗಿದ್ದ ಸ್ವತ್ತುಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ, ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಬರೋಬ್ಬರಿ 9.43 ಕೋಟಿ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಾಹನ ಹಾಗೂ ನಗದನ್ನು ನಿಜವಾದ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಕಳೆದುಕೊಂಡಹಣ ಮರಳಿ ಸಿಕ್ಕ ಖುಷಿಯಲ್ಲಿ ಜನರಿದ್ದರು...
ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದ ಸಂತ್ರಸ್ತರ ಮುಖದಲ್ಲಿ ಇಂದು ಮಂದಹಾಸ ಮೂಡಿತ್ತು. ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ 28 ಠಾಣೆಗಳ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಿನಾಂಕ 11.02.2026 ರಿಂದ 01.11.2026 ರ ಅವಧಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 115 ಸ್ವತ್ತಿನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ಒಟ್ಟು 9,43,34,447 ರೂಪಾಯಿ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪೋಲಿಸರು ವಶಪಡಿಸಿಕೊಂಡ ಒಟ್ಟು 5,23,66,285 ರೂಪಾಯಿ ಮೌಲ್ಯದ ಭೌತಿಕ ಸ್ವತ್ತುಗಳಲ್ಲಿ: 39.99 ಲಕ್ಷ ಮೌಲ್ಯದ 1.794 ಕೆಜಿ ಚಿನ್ನ, 21.08 ಲಕ್ಷ ಮೌಲ್ಯದ 8.919 ಕೆಜಿ ಬೆಳ್ಳಿ, 1,35,99,250 ರೂಪಾಯಿ ನಗದು ಹಣ, 21.12 ಲಕ್ಷ ಮೌಲ್ಯದ 46 ದ್ವಿಚಕ್ರ ವಾಹನಗಳು, 1.26 ಕೋಟಿ ಮೌಲ್ಯದ 16 ನಾಲ್ಕು ಚಕ್ರದ ವಾಹನಗಳು, 3.35 ಲಕ್ಷ ಮೌಲ್ಯದ ರೈತರ ಪಂಪ್‌ಸೆಟ್‌ಗಳು, ಬ್ಯಾಟರಿ ಹಾಗೂ 4 ಕ್ವಿಂಟಲ್ ಹತ್ತಿ ಸೇರಿವೆ. ಹಾಗೂ ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳಿಗೂ ಪೊಲೀಸರು ಬ್ರೇಕ್ ಹಾಕಿದ್ದು, 20 ಸೈಬರ್ ವಂಚನೆ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ವಂಚಕರಿಂದ ಬರೋಬ್ಬರಿ 4,19,68,162 ರೂಪಾಯಿ ಹಣವನ್ನು ಪತ್ತೆ ಹಚ್ಚಿ ದೂರುದಾರರಿಗೆ ಮರುಪಾವತಿ ಮಾಡಿದರು..
ಕಳ್ಳತವಾದ ವಸ್ತುಗಳು ಮರಳಿ ಸಿಗುವುದು ಕಷ್ಟ. ಆದರೆ ವಿಜಯಪುರ ಜಿಲ್ಲಾ ಪೊಲೀಸರು ಕೇವಲ 10 ತಿಂಗಳುಗಳಲ್ಲಿ ಸುಮಾರು 9.43 ಕೋಟಿಗೂ ಅಧಿಕ ಮೌಲ್ಯದ ಸ್ವತ್ತನ್ನು ಪತ್ತೆ ಹಚ್ಚಿ ವಾರಸುದಾರರಿಗೆ ನೀಡುವ ಮೂಲಕ ನಿಜಕ್ಕೂ ಮಾದರಿ ಕೆಲಸ ಮಾಡಿದ್ದಾರೆ. ಇನ್ನೂ ಕಳತನ ಆಗುವ ಮುನ್ನವೇ ಜನರು ಸಹಿತ ಜಾಗೃತಿ ವಹಿಸುವದು ಅವಶ್ಯಕವಾಗಿದೆ...