SOCIAL MEDIA

Newsletter

PARTNER SITES
Select Language Select State

ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವವರಿಗಾಗಿ ರೈಲ್ವೆ ಇಲಾಖೆಯಿಂದ ಭರ್ಜರಿ ಗುಡ್‌ ನ್ಯೂಸ್

ದೀಪಾವಳಿ ಹಬ್ಬಕ್ಕೆ ರೈಲ್ವೇ ಇಲಾಖೆಯಿಂದ ಬಿಗ್ ಗಿಫ್ಟ್ ನೀಡಿದ್ದು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಘೋಷಣೆ ಮಾಡಿದೆ.

Written By Yashaswini V
Published: Oct 28, 2026, 10:59 AM IST | Updated: Oct 28, 2026, 11:02 AM IST
Join

ನೀವು ದೀಪಾವಳಿ ಹಬ್ಬ ಹಾಗೂ ಛತ್ ಪೂಜೆ ನಿಮಿತ್ತ ಊರಿಗೆ ಹೋಗಲು ಪ್ಲಾನ್‌ ಮಾಡ್ತಾ ಇದ್ರೆ ನಿಮಗಾಗಿ ಭಾರತೀಯ ರೈಲ್ವೆ ಇಲಾಖೆ ಹಬ್ಬದ ಉಡುಗೊರೆಯನ್ನು ನೀಡಿದೆ. ದೀಪಾವಳಿ, ಛತ್‌ ಪೂಜೆ ಸಂದರ್ಭದಲ್ಲಿ ನೈಋತ್ಯ ರೈಲ್ವೆ (SWR) ಹುಬ್ಬಳ್ಳಿ ಮತ್ತು ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ ಘೋಷಿಸಿದೆ.

ವಾರಕ್ಕೊಮ್ಮೆ ಸಂಚರಿಸಲಿರುವ ವಿಶೇಷ ಎಕ್ಸ್‌ಪ್ರೆಸ್‌ ಟ್ರೈನ್:‌ 
ಅಕ್ಟೋಬರ್ 31 ರಿಂದ ಡಿಸೆಂಬರ್ 07 ರವರೆಗೆ ವಾರಕ್ಕೊಮ್ಮೆ ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚರಿಸಲಿದ್ದು, ಇದರಿಂದ ಹಬ್ಬದ ಸಂದರ್ಭದಲ್ಲಿ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲವಾಗಲಿದೆ. ರೈಲಿನಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಸಹ ಈ ಹೆಜ್ಜೆ ನೆರವಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೈಋತ್ಯ ರೈಲ್ವೆ ದೀಪಾವಳಿ, ಛತ್‌ ಪೂಜೆಗಾಗಿ ಘೋಷಿಸಿರುವ ಈ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲು 31 ಅಕ್ಟೋಬರ್‌ 2026 ರಿಂದ 07 ಡಿಸೆಂಬರ್ 2026 ರವರೆಗೆ ವಾರಕ್ಕೆ ಒಮ್ಮೆ  ಸಂಚರಿಸಲಿರುವ ಈ ವಿಶೇಷ ಎಕ್ಸ್‌ಪ್ರೆಸ್‌ ಟ್ರೈನ್‌ನಿಂದಾಗಿ ದೀಪಾವಳಿ, ಛತ್‌ ಪೂಜೆ ವೇಳೆ ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ತೆರಳುವ ಅದರಲ್ಲೂ ವಿಶೇಷವಾಗಿ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಕಡೆಗೆ ಪ್ರಯಾಣಿಸುವವರಿಗೆ ಹೆಚ್ಚು ಅನುಕೂಲವಾಗಲಿದೆ ಎನ್ನಲಾಗಿದೆ.

ವಾಸ್ತವವಾಗಿ, ಉದ್ಯೋಗ, ವ್ಯವಹಾರದ ನಿಮಿತ್ತ ಬೇರೆ, ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ನೆಲೆಸಿರುವವರು ಭಾರತದಾದ್ಯಂತ ಪವಿತ್ರ ಹಬ್ಬವೆಂದು ಆಚರಿಸಲಾಗುವ ದೀಪಗಳ ಹಬ್ಬ ದೀಪಾವಳಿಯಲ್ಲಿ ಜನರು ತಪ್ಪದೇ ತಮ್ಮ ಊರುಗಳಿಗೆ ಹೋಗುತ್ತಾರೆ. ಇದಲ್ಲದೆ, ಉತ್ತರ ಭಾರತ ಕೆಲವು ರಾಜ್ಯಗಳಲ್ಲಿ ಆಚರಿಸಲಾಗುವ ಛತ್‌ ಪೂಜೆಗಾಗಿಯೂ ಜನರು ಊರುಗಳಿಗೆ ಹೋಗುವುದರಿಂದ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ವೀಕ್ಲಿ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಘೋಷಿಸಿದೆ ಎನ್ನಲಾಗಿದೆ.

ವೀಕ್ಲಿ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲು ಎಲ್ಲಿಂದ ಎಲ್ಲಿಗೆ ಸಂಚರಿಸಲಿದೆ?
ರೈಲ್ವೆ ಇಲಾಖೆಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವೀಕ್ಲಿ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲು ಶ್ರೀ ಸಿದ್ಧಾರೂಢ ಸ್ವಾಮೀಜಿ (SSS) ಹುಬ್ಬಳ್ಳಿ ಜಂಕ್ಷನ್‌ನಿಂದ ರಾಜಸ್ಥಾನದ ಖಾತಿಪುರ (ಜೈಪುರ) ನಡುವೆ ವಾರದಲ್ಲಿ ಒಮ್ಮೆ ಮಾತ್ರ ಕಾರ್ಯಾಚರಣೆ ನಡೆಸಲಿದ್ದು, ಉಭಯ ಮಾರ್ಗಗಳಲ್ಲಿ ತಲಾ 6 ಬಾರಿ ಸಂಚರಿಸಲಿದೆ. ಇದರಿಂದಾಗಿ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಹಾಗೂ ರಾಜಸ್ಥಾನದ ಪ್ರಮುಖ ನಗರಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಈ ಸೌಲಭ್ಯ ಅನುಕೂಲಕರವಾಗಲಿದೆ ಎಂದು ಮಾಹಿತಿ ನೀಡಿದೆ.

ರೈಲು ಸಂಚಾರದ ಸಮಯ ಹಾಗೂ ದಿನಾಂಕಗಳ ವಿವರ:‌
ಅಕ್ಟೋಬರ್ 31 ರಿಂದ ಸಂಚರಿಸಲಿರುವ ರೈಲು ಸಂಖ್ಯೆ 07371 SSS ಹುಬ್ಬಳ್ಳಿ – ಖಾತಿಪುರ ಸ್ಪೆಷಲ್ ಎಕ್ಸ್‌ಪ್ರೆಸ್ ಟ್ರೈನ್‌ ಪ್ರತಿ ಶನಿವಾರ ರಾತ್ರಿ 11:50ಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿಂದ ಹೊರಟು ಸೋಮವಾರ ಮಧ್ಯಾಹ್ನ 2:40ಕ್ಕೆ ರಾಜಸ್ಥಾನದ ಖಾತಿಪುರ (ಜೈಪುರ) ತಲುಪಲಿದೆ.

ಮರು ಮಾರ್ಗವಾಗಿ, ನವೆಂಬರ್ 02 ಆರಂಭವಾಗಲಿರುವ ರೈಲು ಸಂಖ್ಯೆ 07372 ಖಾತಿಪುರ – SSS ಹುಬ್ಬಳ್ಳಿ ಸ್ಪೆಷಲ್ ಎಕ್ಸ್‌ಪ್ರೆಸ್‌ ಟ್ರೈನ್‌, ಪ್ರತೀ ಸೋಮವಾರ ರಾತ್ರಿ 8:45 PM ಕ್ಕೆ ಖಾತಿಪುರದಿಂದ ಹೊರಟು, ಬುಧವಾರ ಬೆಳಿಗ್ಗೆ 09:30 ಕ್ಕೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ ಜಂಕ್ಷನ್ ತಲುಪಲಿದೆ.

ರೈಲು ನಿಲ್ಲುವ ಪ್ರಮುಖ ನಿಲ್ದಾಣಗಳು :
ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಎರಡೂ ದಿಕ್ಕುಗಳಲ್ಲಿ ಕರ್ನಾಟಕದಲ್ಲಿ ಗದಗ್, ಹೊಳೆ ಆಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ಬಸವನ ಬಾಗೇವಾಡಿ ರೋಡ್, ವಿಜಯಪುರ, ಇಂಡಿ ರೋಡ್‌ನಲ್ಲಿ ಸ್ಟಾಪ್‌ ನೀಡಲಿದೆ. ಅಂತೆಯೇ, ಮಹಾರಾಷ್ಟ್ರದ ಸೋಲಾಪುರ, ದೌಂಡ್, ಪುಣೆ, ಲೋನಾವಳ, ಕಲ್ಯಾಣ್, ವಸೈ ರೋಡ್‌ಗಳಲ್ಲಿ ನಿಲುಗಡೆ ನೀಡಲಿದ್ದು, ಗುಜರಾತ್ ಮತ್ತು ಮಧ್ಯಪ್ರದೇಶದ ವಾಪಿ, ವಲ್ಸಾದ್, ಉಧ್ನಾ, ವಡೋದರಾ, ಗೋಧ್ರಾ, ರತ್ಲಾಂ ನಿಲ್ದಾಣಗಳಲ್ಲೂ ನಿಲುಗಡೆ ನೀಡಲಿದೆ. ಇದಲ್ಲದೆ, ರಾಜಸ್ಥಾನದ ಚಿತ್ತೋರ್‌ಗಢ, ಭಿಲ್ವಾರಾ, ಬಿಜೈನಗರ, ನಾಸಿರಾಬಾದ್, ಅಜ್ಮೇರ್, ಕಿಶನ್‌ಗಢ ಹಾಗೂ ಜೈಪುರದಲ್ಲಿ ಟ್ರೈನ್‌ ನಿಲುಗಡೆ ಇರಲಿದೆ.

ಬೋಗಿಗಳ ಸಂಯೋಜನೆ :
ದೀಪಾವಳಿ, ಛತ್‌ ಪೂಜೆಗಾಗಿ ಘೋಷಿಸಲಾಗಿರುವ ಈ ವೀಕ್ಲಿ ಸ್ಪೆಷಲ್‌ ಎಕ್ಸ್‌ಪ್ರೆಸ್‌ ರೈಲುಒಟ್ಟು 20 ಬೋಗಿಗಳನ್ನು ಒಳಗೊಂಡಿದ್ದು, ಇದರಲ್ಲಿ ಮೂರು AC 2-ಟೈರ್ ಬೋಗಿಗಳು, ಎರಡು AC 3-ಟೈರ್ ಇಕಾನಮಿ ಬೋಗಿಗಳು,  ಐದು AC 3-ಟೈರ್ ಬೋಗಿಗಳು, ನಾಲ್ಕು ಸ್ಲೀಪರ್ ಕ್ಲಾಸ್ ಬೋಗಿಗಳು, ನಾಲ್ಕು ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, ಎರಡು ಲಗೇಜ್-ಕಮ್-ಬ್ರೇಕ್ ವ್ಯಾನ್ ವಿತ್ ಜೆನರೇಟರ್ ಕಾರ್ ಇರಲಿದೆ ಎನ್ನಲಾಗಿದೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES