• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಗದಗದ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದಲ್ಲ.. ಎರಡಲ್ಲ.. ಹತ್ತಾರು ಸಮಸ್ಯೆ

ಗದಗದ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದಲ್ಲ.. ಎರಡಲ್ಲ.. ಹತ್ತಾರು ಸಮಸ್ಯೆ

Gadag Laxmishwara shigli hospital problems: ಸರ್ಕಾರಿ ಆಸ್ಪತ್ರೆ ಬಂದ್ರೆ ಬಡವರ ಪಾಲಿನ ಸಂಜೀವಿನಿ ಆದ್ರೆ ಈ ಸರ್ಕಾರಿ ಆಸ್ಪತ್ರೆಯ ಕಥೆಯೇ ಬೇರೆ. ಇಲ್ಲಿ ರೋಗಿಗಳಿದ್ದಾರೆ. ಆದ್ರೆ ವೈದ್ಯರಿಲ್ಲ. ಜನರೇಟರ್ ಇದೆ. ಆದ್ರೆ ಕರೆಂಟ್ ಬ್ಯಾಕಪ್ ಇಲ್ಲ. ಪ್ರಸೂತಿ ತಜ್ಞ ವೈದ್ಯರಿಲ್ಲದೇ, ನರ್ಸ್‌ಗಳೇ ಹೆರಿಗೆ ಮಾಡಿಸ್ತಿದ್ದಾರೆ.

Written ByRamya. R. Gowda
Published: Oct 06, 2026, 04:27 PM IST|Updated: Oct 06, 2026, 04:48 PM IST
joinshare
ಗದಗದ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದಲ್ಲ.. ಎರಡಲ್ಲ.. ಹತ್ತಾರು ಸಮಸ್ಯೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
ಇತಿಹಾಸ ಪ್ರಸಿದ್ಧ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ.. SP ಗೆ ನೋಟಿಸ್ ಜಾರಿ, ಹೆಚ್.ಡಿ ರೇವಣ್ಣ ಕಿಡಿ!

ಇತಿಹಾಸ ಪ್ರಸಿದ್ಧ ಕೊಳದಲ್ಲಿ ಗಣಪತಿ ಮೂರ್ತಿ ವಿಸರ್ಜನೆ.. SP ಗೆ ನೋಟಿಸ್ ಜಾರಿ, ಹೆಚ್.ಡಿ ರೇವಣ್ಣ ಕಿಡಿ!

2

ಧ್ರುವ ಸರ್ಜಾ ಕೊಟ್ಟ ಸರ್ಪ್ರೈಸ್‌ನಿಂದ ಫ್ಯಾನ್ಸ್‌ ಫುಲ್ ಫಿದಾ.. ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇ ಸಂಭ್ರಮ ಹೇಗಿತ್ತು?

3

ಕಾಂಗ್ರೆಸ್‌ಗೆ ಕುಬೇರಪ್ಪ ಶಾಕ್! ಅಹಿಂದ ಬಂಡಾಯ ಅಭ್ಯರ್ಥಿಯಾಗಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧೆ

4

ಶಾಲೆಗೆ ರಜೆ, ಈಜಲು ಹೋದ ಮಕ್ಕಳು ಹೆ*ಣವಾದ್ರು! ಚಿಕ್ಕಮಗಳೂರಿನಲ್ಲಿ ಹೃದಯವಿದ್ರಾವಕ ಘಟನೆ

5

ಗಿಲ್ಲಿ ಬಗ್ಗೆ ಲಘು ಹೇಳಿಕೆ.. ಜಗ್ಗ ಮಮ್ಮಿ ವಿರುದ್ಧ ತೀವ್ರ ಆಕ್ರೋಶ..! ಅಷ್ಟಕ್ಕೂ ಆಗಿದ್ದೇನು?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Gadag Laxmishwara shigli hospital problems: ಸರ್ಕಾರಿ ಆಸ್ಪತ್ರೆ ಬಂದ್ರೆ ಬಡವರ ಪಾಲಿನ ಸಂಜೀವಿನಿ ಆದ್ರೆ ಈ ಸರ್ಕಾರಿ ಆಸ್ಪತ್ರೆಯ ಕಥೆಯೇ ಬೇರೆ. ಇಲ್ಲಿ ರೋಗಿಗಳಿದ್ದಾರೆ. ಆದ್ರೆ ವೈದ್ಯರಿಲ್ಲ. ಜನರೇಟರ್ ಇದೆ. ಆದ್ರೆ ಕರೆಂಟ್ ಬ್ಯಾಕಪ್ ಇಲ್ಲ. ಪ್ರಸೂತಿ ತಜ್ಞ ವೈದ್ಯರಿಲ್ಲದೇ, ನರ್ಸ್‌ಗಳೇ ಹೆರಿಗೆ ಮಾಡಿಸ್ತಿದ್ದಾರೆ. 

ಎರಡು ವರ್ಷದಿಂದ ಕೆಟ್ಟು ನಿಂತ ಜನರೇಟರ್ ಅಗತ್ಯ ಔಷಧಿಗಳ ಕೊರತೆ. ಹೀಗೆ ಒಂದಲ್ಲ.. ಎರಡಲ್ಲ.. ಹತ್ತಾರು ಸಮಸ್ಯೆಗಳ ನಡುವೆ ನರಳ್ತಿದೆ ಪ್ರಾಥಮಿಕ ಆರೋಗ್ಯ ಕೇಂದ್ರ. ಬಡವರ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆ, ಇದೀಗ ಅವ್ಯವಸ್ಥೆಯ ಆಗರವಾಗಿದೆ. ಮೂಲಸೌಕರ್ಯದ ಕೊರತೆಯಿಂದ ಇದ್ದು ಇಲ್ಲದಂತಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟೋರಿ ನಿಮ್ಮ ಮುಂದೆ..

ಇದು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ. ಶಿಗ್ಲಿ ಮಾತ್ರವಲ್ಲ. ಸುತ್ತಮುತ್ತಲಿನ ದೊಡ್ಡೂರು ಸೇರಿದಂತೆ ಹಲವು ಗ್ರಾಮಗಳ ನೂರಾರು ಜನರು ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಜ್ವರ, ಕಾಯಿಲೆ, ಸಣ್ಣಪುಟ್ಟ ಚಿಕಿತ್ಸೆಗಳಿಂದ ಹಿಡಿದು ಗರ್ಭಿಣಿಯರ ಹೆರಿಗೆವರೆಗೂ, ಗ್ರಾಮೀಣ ಭಾಗದ ಬಡ ಜನರಿಗೆ ಈ ಆಸ್ಪತ್ರೆಯೇ ಪ್ರಮುಖ ಆಸರೆ. ಆದ್ರೆ ಇದೇ ಆಸ್ಪತ್ರೆ ಇದೀಗ ಮೂಲಸೌಕರ್ಯ ಕೊರತೆಯಿಂದಾಗಿ ಪರದಾಡ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ.

ಆರು ಬೆಡ್‌ಗಳ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ರೋಗಿಗಳು ಬರ್ತಾರೆ. ಆದ್ರೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇದೆ ಅನ್ನೋ ದೊಡ್ಡ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ. ರಾತ್ರಿಯ ವೇಳೆ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಯ ಸೇವೆಯೇ ಅಸ್ತವ್ಯಸ್ತವಾಗುತ್ತದೆ ಎನ್ನಲಾಗಿದೆ. ವೈದ್ಯರ ಕೊರತೆಯ ನಡುವೆ ಇರುವ ಸಿಬ್ಬಂದಿಯೇ ರೋಗಿಗಳ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಶಿಗ್ಲಿ ಆಸ್ಪತ್ರೆಯಲ್ಲಿನ ಅತಿದೊಡ್ಡ ಆತಂಕದ ವಿಚಾರ ಅಂದ್ರೆ, ಪ್ರಸೂತಿ ಸೇವೆ. ಪ್ರಸೂತಿ ತಜ್ಞ ವೈದ್ಯರಿಲ್ಲದಿದ್ದರೂ ಇಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಅಂದ್ರೆ ತಜ್ಞ ವೈದ್ಯರಿಲ್ಲ. ಆದ್ರೆ ಡೆಲಿವರಿ ಮಾತ್ರ ನಡೀತಿದೆ. ಗರ್ಭಿಣಿಯರಿಗೆ ತುರ್ತು ಪರಿಸ್ಥಿತಿ ಎದುರಾದ್ರೆ ಏನು ಮಾಡಬೇಕು..? ತಜ್ಞ ವೈದ್ಯರ ಅಗತ್ಯ ಬಂದ್ರೆ ಏನು ಮಾಡಬೇಕು..? ಇಂತಹ ಪ್ರಶ್ನೆಗಳು ಇದೀಗ ಸ್ಥಳೀಯರನ್ನು ಕಾಡ್ತಿವೆ. ಡೆಲಿವರಿಗೆ ಬರುವ ಗರ್ಭಿಣಿಯರಿಗೆ ಬೇಕಾದಷ್ಟು ಮೂಲಸೌಕರ್ಯವೂ ಇಲ್ಲ ಅನ್ನೋ ಮಾತುಗಳು ಕೇಳಿ ಬಂದಿವೆ. ಕಿರಿದಾದ ಬೆಡ್‌ನಲ್ಲೇ ಬಾಣಂತಿ ಮತ್ತು ನವಜಾತ ಶಿಶುವಿನ ಆರೈಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಮಗುವಿಗೆ ಜನ್ಮ ನೀಡಿದ ಬಳಿಕ ತಾಯಿ ಮತ್ತು ಮಗುವಿಗೆ ಬೇಕಾದ ಸೂಕ್ತ ಆರೈಕೆ, ಸ್ಥಳಾವಕಾಶ ಸಿಗುತ್ತಿಲ್ಲ ಅನ್ನೋದು ರೋಗಿಗಳ ಅಳಲು.


ಚಿಕಿತ್ಸೆ ಕೊಡಿಸೋಕೆ ಬಂದವರಿಗೆ ಮತ್ತೊಂದು ಸಮಸ್ಯೆ ಎದುರಾಗ್ತಿದೆ. ಪ್ರಸೂತಿ ವಿಭಾಗದಲ್ಲಿ ಅಗತ್ಯವಿರುವ ಕೆಲವು ಔಷಧಿಗಳ ಕೊರತೆ ಸಹ ಇದೆ ಅಂತ ಹೇಳಲಾಗ್ತಿದೆ. ಹೊಲಿಗೆಗೆ ಬಳಸುವ ಕ್ಯಾಟ್‌ಗಟ್, ಗರ್ಭಿಣಿಯರಿಗೆ ನೀಡುವ ಕ್ಯಾಲ್ಸಿಯಂ ಇಂಜೆಕ್ಷನ್, ಜೀವ ರಕ್ಷಕ ಇಂಜೆಕ್ಷನ್‌ಗಳಿಗೂ ಕೊರತೆ ಇದೆ ಎನ್ನಲಾಗಿದೆ. ಹಾಗಾದ್ರೆ ತುರ್ತು ಪರಿಸ್ಥಿತಿಯಲ್ಲಿ ಔಷಧಿ ಬೇಕಾದ್ರೆ, ಬಡ ರೋಗಿಗಳು ಹೊರಗಿನಿಂದಲೇ ಖರೀದಿ ಮಾಡಬೇಕಾ ಅನ್ನೋ ಪ್ರಶ್ನೆ ಎದುರಾಗಿದೆ. ಇಷ್ಟೇ ಅಲ್ಲ. ನವಜಾತ ಶಿಶುಗಳ ಆರೈಕೆಗೆ ಬಳಸುವ ಯುನಿಟ್‌ನಲ್ಲೂ ದೋಷವಿದೆ. ಮಗು ಹುಟ್ಟಿದ ಬಳಿಕ ತಕ್ಷಣ ಬೇಕಾಗುವ ಆರೈಕೆ ವ್ಯವಸ್ಥೆಯೇ ಸಮರ್ಪಕವಾಗಿಲ್ಲ. ಜೊತೆಗೆ ಈ ಆಸ್ಪತ್ರೆಯ ಮತ್ತೊಂದು ದೊಡ್ಡ ಸಮಸ್ಯೆ ಅಂದ್ರೆ ಜನರೇಟರ್. ಜನರೇಟರ್ ಇದೆ, ಆದ್ರೆ ಅದು ಕೆಲಸ ಮಾಡ್ತಿಲ್ಲ. ಕಳೆದ ಎರಡು ವರ್ಷದಿಂದ ಜನರೇಟರ್ ಕೆಟ್ಟು ಬಿದ್ದಿದೆ. ಹಗಲು-ರಾತ್ರಿ ವೇಳೆ ವಿದ್ಯುತ್ ಕೈಕೊಟ್ಟರೆ ಆಸ್ಪತ್ರೆಯಲ್ಲಿ ವಿದ್ಯುತ್ ಬ್ಯಾಕಪ್ ಇಲ್ಲದಂತಾಗಿದೆ. ಹೆಸರಿಗೆ ಮಾತ್ರ ಇರುವ ಜನರೇಟರ್ ಇದ್ದೂ ಪ್ರಯೋಜನವಿಲ್ಲ. ವಿದ್ಯುತ್ ಸಮಸ್ಯೆ ಎದುರಾದ್ರೆ ರೋಗಿಗಳು, ಗರ್ಭಿಣಿಯರು, ನವಜಾತ ಶಿಶುಗಳ ಪರಿಸ್ಥಿತಿ ಏನು ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡಿದೆ.

ಒಂದೆಡೆ ವೈದ್ಯರ ಕೊರತೆ. ಮತ್ತೊಂದೆಡೆ ಸಿಬ್ಬಂದಿ ಕೊರತೆ. ಇನ್ನೊಂದೆಡೆ ಔಷಧಿಗಳ ಕೊರತೆ. ಇದರ ಜೊತೆಗೆ ಜನರೇಟರ್ ಸಮಸ್ಯೆ. ಹೀಗೆ ಒಂದಾದ ಮೇಲೊಂದು ಸಮಸ್ಯೆಗಳು ಈ ಆರೋಗ್ಯ ಕೇಂದ್ರಕ್ಕೆ ಎದುರಾಗ್ತಿವೆ. ಆದ್ರೂ ಈ ಆಸ್ಪತ್ರೆಯನ್ನೇ ನಂಬಿಕೊಂಡು ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರ್ತಿದ್ದಾರೆ. ಅಗತ್ಯ ಸೌಲಭ್ಯಗಳಿಲ್ಲದ ಆಸ್ಪತ್ರೆಯಲ್ಲಿ ಸಿಬ್ಬಂದಿಯೂ ಒತ್ತಡದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ರೋಗಿಗಳೂ ಅನಿವಾರ್ಯವಾಗಿ ಅದೇ ಆಸ್ಪತ್ರೆಯನ್ನು ಅವಲಂಬಿಸಬೇಕಾದ ಸ್ಥಿತಿ ಬಂದೊದಗಿದೆ.

ಸರ್ಕಾರಿ ಆಸ್ಪತ್ರೆ ಅಂದ್ರೆ ಬಡವರಿಗೆ ದೊಡ್ಡ ಭರವಸೆ. ಖಾಸಗಿ ಆಸ್ಪತ್ರೆಯ ದುಬಾರಿ ಚಿಕಿತ್ಸೆಗೆ ಹಣ ಹೊಂದಿಸಲಾಗದ ಕುಟುಂಬಗಳಿಗೆ ಸರ್ಕಾರಿ ಆಸ್ಪತ್ರೆಯೇ ಆಶಾಕಿರಣ. ಅಂತಹ ಆಸ್ಪತ್ರೆಯಲ್ಲೇ ವೈದ್ಯರು, ಔಷಧಿ, ವಿದ್ಯುತ್ ಬ್ಯಾಕಪ್, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆಯಾದ್ರೆ, ಬಡವರು ಹೋಗೋದು ಎಲ್ಲಿಗೆ..? ಗದಗ ಜಿಲ್ಲೆಯ ಶಿಗ್ಲಿ ಆಸ್ಪತ್ರೆಯ ಸಮಸ್ಯೆಗಳು ಇವತ್ತು ನಿನ್ನೆಯದಲ್ಲ. ಹಾಗಾದ್ರೆ ಶಿಗ್ಲಿ ಆಸ್ಪತ್ರೆಯನ್ನೇ ನಂಬಿರುವ ಬಡ ಜನರಿಗೆ ಸರ್ಕಾರ ಯಾವಾಗ ಸಂಜೀವಿನಿಯಾಗುತ್ತೆ..? ಈ ಆಸ್ಪತ್ರೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಯಾವಾಗ ಅನ್ನೋದು ಮಾತ್ರ ಯಕ್ಷಪ್ರಶ್ನೆಯಾಗಿದೆ.

 

Add Zee News as a Preferred Source
TAGS:
Kannada News