• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಹಂಪಿಗೆ ಚಿನ್ನ ಎಲ್ಲಿಂದ, ಹೇಗೆ ಬರುತ್ತಿತ್ತು.. ಗಣಿ ಎಲ್ಲಿತ್ತು, ಯುವರಾಣಿಯರು ಧರಿಸುತ್ತಿದ್ದ ಆಭರಣಗಳ ಬಗ್ಗೆ ಗೊತ್ತಾ?

ಹಂಪಿಗೆ ಚಿನ್ನ ಎಲ್ಲಿಂದ, ಹೇಗೆ ಬರುತ್ತಿತ್ತು.. ಗಣಿ ಎಲ್ಲಿತ್ತು, ಯುವರಾಣಿಯರು ಧರಿಸುತ್ತಿದ್ದ ಆಭರಣಗಳ ಬಗ್ಗೆ ಗೊತ್ತಾ?

ಚಿನ್ನದ ನಾಣ್ಯವನ್ನು ವರಹ ಅಥವಾ ಹೊನ್ನು ಎಂದು ಕರೆಯಲಾಗುತ್ತಿತ್ತು. ನಾಣ್ಯದ ಮೈಮೇಲ್ಮೈ ಮೇಲೆ ವರಾಹ ಅಥವಾ ವಿಷ್ಣುವಿನ ಅವತಾರ, ಉಮಾ ಮಹೇಶ್ವರ ಅಥವಾ ಗುರುಡನ ಚಿಹ್ನೆಗಳನ್ನು ಮುದ್ರಿಸಲಾಗುತ್ತಿತ್ತು.

Reported ByBhimappaEdited ByBhimappa
Published: Sep 15, 2026, 02:47 PM IST|Updated: Sep 15, 2026, 03:35 PM IST
joinshare
ಹಂಪಿಗೆ ಚಿನ್ನ ಎಲ್ಲಿಂದ, ಹೇಗೆ ಬರುತ್ತಿತ್ತು.. ಗಣಿ ಎಲ್ಲಿತ್ತು, ಯುವರಾಣಿಯರು ಧರಿಸುತ್ತಿದ್ದ ಆಭರಣಗಳ ಬಗ್ಗೆ ಗೊತ್ತಾ?
Image Credit: File Photo

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

ತಿಂಗಳಿಗೆ ₹1.5 ಲಕ್ಷ ದಾಟುವುದೇ ಸರ್ಕಾರಿ ನೌಕರರ ವೇತನ? ಇಲ್ಲಿದೆ ಕಂಪ್ಲೀಟ್ ಲೆಕ್ಕಾಚಾರ

2

ಇನ್ನು ಕೆಲವೇ ಗಂಟೆಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

3

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಸುಖದ ಸುಪ್ಪತ್ತಿಗೆ, ದಿಢೀರ್‌ ಧನಯೋಗ! 12 ರಾಶಿಗಳ ಭವಿಷ್ಯ ಇಲ್ಲಿದೆ

4

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

5

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ವಿಶಾಲ ಕರ್ನಾಟಕವನ್ನು ಹಲವಾರು ರಾಜಮನೆತನಗಳು, ಸಾಮ್ರಾಜ್ಯಗಳು, ರಾಜವಂಶಸ್ಥರು ಆಳಿದ್ದಾರೆ. ಇತಿಹಾಸದ ಪುಟಗಳಲ್ಲಿ ನೋಡುತ್ತ ಹೋದಾಗ ಕಣ್ಣಿಗೆ ಹಲವಾರು ಸಾಮ್ರಾಜ್ಯಗಳು ಶ್ರೀಮಂತಿಕೆ ಊಹೆಗೂ ನಿಲುಕದಂಗೆ ಇದೆ. ಸಾಮಾನ್ಯ ಜನರ ಬಳಿಯೂ ಬಂಗಾರದ ವಸ್ತುಗಳು ಇರುತ್ತಿದ್ದವು. ಬೀದಿ ಬೀದಿಗಳಲ್ಲಿ ಚಿನ್ನವನ್ನು ಅಳೆದು, ತೂಗಿ ವ್ಯಾಪಾರ ಮಾಡುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ. ಆದರೆ ಇವತ್ತಿನ ಕಾಲದಲ್ಲಿ ಹುಡುಕಿದರೂ ಚಿನ್ನ ಸಿಗುವುದು ಕಷ್ಟವಾಗಿದೆ. ದೊಡ್ಡ ದೊಡ್ಡ ತಂತ್ರಜ್ಞಾನ, ಯಂತ್ರಗಳು ಇದ್ದರೂ ಇತಿಹಾಸ ಕಾಲದಲ್ಲಿ ಇದ್ದಷ್ಟು ಬಂಗಾರ ಈಗ ಇಲ್ಲ ಎನ್ನಬಹುದು. ಕರ್ನಾಟಕದಲ್ಲಿ ಚಿನ್ನ ಎಂದು ಹೇಳಿದಾಗ ಮೊದಲು ವಿಜಯನಗರ ಸಾಮ್ರಾಜ್ಯ ಅದರಲ್ಲಿ ಹಂಪಿ ವೈಭೋಗ ಕಣ್ಣ್ಮುಂದೆ ಬರುತ್ತದೆ. ಹಂಪಿಯಲ್ಲಿಯೇ ಅಷ್ಟೊಂದು ಗೋಲ್ಡ್‌ ಇರಲು ಕಾರಣವೇನು?.  

ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ. ಬೃಹತ್‌ ದೇವಾಲಯಗಳನ್ನು, ಅರಮನೆಗಳನ್ನು, ಗುಡಿಗೋಪುರಗಳನ್ನು ಹೊಂದಿಂತಹ ಶ್ರೀಮಂತವಾದ ಹಂಪಿ ಇಂದು ಇತಿಹಾಸದ ನೆಲೆ ಎಂದು ಹೇಳಲಾಗುತ್ತಿದೆ ಅಷ್ಟೇ. 14 ರಿಂದ 16ನೇ ಶತಮಾನಗಳ ನಡುವೆ ದಕ್ಷಿಣ ಭಾರತದ ರಾಜಕೀಯ ಮತ್ತು ಆರ್ಥಿಕವಾಗಿ ಹೆಚ್ಚು ಖ್ಯಾತಿ ಗಳಿಸಿದ್ದ ವಿಜಯನಗರದ ವೈಭವ, ಶ್ರೀಮಂತಿಕೆ ಇತಿಹಾಸದಲ್ಲಿ ವಿದೇಶಿ ಪ್ರವಾಸಿಗರು ಬರಹಗಳೇ ಹೇಳುತ್ತವೆ. ಹಂಪಿಯ ಮಾರುಕಟ್ಟೆಗಳಲ್ಲಿ ರತ್ನಗಳು, ಮುತ್ತುಗಳು, ವಜ್ರಗಳು ಮತ್ತು ಮೌಲ್ಯಯುತವಾದ ವಸ್ತುಗಳ ವ್ಯಾಪಾರ ನಡೆಯುತ್ತಿತ್ತು ಎಂದು ಇತಿಹಾಸ ಹೇಳುತ್ತದೆ.  

ಪೋರ್ಚುಗೀಸ್‌ನ ಪ್ರಸಿದ್ಧ ಪ್ರವಾಸಿಗ ಡೊಮಿಂಗೊ ಪಯಾಸ್‌ ಮತ್ತು ಪರ್ಷಿಯನ್‌ ರಾಯಬಾರಿ ಅಬ್ದುಲ್‌ ರಜಾಕ್‌ ಅವರು ತಮ್ಮ ಪ್ರವಾಸಿ ಕಥೆಗಳಲ್ಲಿ ಹಂಪಿ ವೈಭವ ಕುರಿತು ಚೆನ್ನಾಗಿ ವಿವರಿಸಿದ್ದಾರೆ. ಹಂಪಿಯಲ್ಲಿನ ವಿರೂಪಾಕ್ಷ ಬಜಾರ್‌ ಮತ್ತು ಸುಲೇ ಬಜಾರ್‌ಗಳಲ್ಲಿ ಚಿನ್ನದ ನಾಣ್ಯಗಳು, ಆಭರಣಗಳು, ವಜ್ರಗಳು ಮತ್ತು ಚಿನ್ನವನ್ನು ಅಳತೆ ಮಾಡಿ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪ್ರಮುಖ ಚಿನ್ನದ ನಾಣ್ಯವನ್ನು ವರಹ ಅಥವಾ ಹೊನ್ನು ಎಂದು ಕರೆಯಲಾಗುತ್ತಿತ್ತು. ನಾಣ್ಯದ ಮೈಮೇಲ್ಮೈ ಮೇಲೆ ವರಾಹ ಅಥವಾ ವಿಷ್ಣುವಿನ ಅವತಾರ, ಉಮಾ ಮಹೇಶ್ವರ ಅಥವಾ ಗುರುಡನ ಚಿಹ್ನೆಗಳನ್ನು ಮುದ್ರಿಸಲಾಗುತ್ತಿತ್ತು. ಸಣ್ಣ ವಹಿವಾಟುಗಳಿಗೆ ಪ್ರತಾಪ ಅಂದರೆ ಅರ್ಧ ವರಾಹ, ಫಣಂ ಅಂದರೆ ಚಿನ್ನದ ಸಣ್ಣ ನಾಣ್ಯಗಳಂತಹ ಬಳಕೆಯಲ್ಲಿ ಇದ್ದವು.    

ಅಂದಿನ ವಿಜಯನಗರ ವ್ಯಾಪ್ತಿಗೆ ಒಳಪಟ್ಟಿದ್ದ ರಾಯಚೂರು ದೋಆಬ್‌ ಪ್ರದೇಶದ ಹಟ್ಟಿ ಚಿನ್ನದ ಗಣಿ ಮತ್ತು ಕರ್ನೂಲ್‌ ಮತ್ತು ಅನಂತಪುರದಲ್ಲಿ ಗಣಿ ಪ್ರದೇಶಗಳು ಆಗಿದ್ದವು. ಈ ಗಣಿಗಳಿಂದ ಬಂಗಾರ, ರತ್ನಗಳನನು ಹೊರ ತೆಗೆಯಲಾಗುತ್ತಿತ್ತು. ತುಂಗಭದ್ರಾ ನದಿ ಮತ್ತು ಕೃಷ್ಣಾ ನದಿಯ ಪಾತ್ರದಲ್ಲಿ ಸಿಗುತ್ತಿದ್ದ ಮರಳಿನಲ್ಲಿ ಸ್ವರ್ಣ ಇರುತ್ತಿತ್ತು. ಈ ಎರಡು ನದಿಗಳ ಪಾತ್ರಗಳಲ್ಲಿ ಇರುತ್ತಿದ್ದ ಮರಳನ್ನು ಸಂಸ್ಕರಿಸಿದರೆ ಚಿನ್ನದ ಧೂಳುನ್ನು ಸಂಗ್ರಹಿಸುವ ತಂತ್ರಜ್ಞಾನ ಅಂದಿನ ಗಣಿಗಾರಿಕೆ ಮಾಡುವವರಿಗೆ ತಿಳಿದಿತ್ತು.  

ಹಂಪಿಗೆ ಚಿನ್ನ ಹರಿದು ಬರುಲು ಇನ್ನೊಂದು ಹಾದಿ ಎಂದರೆ ಸಾಮಂತ ರಾಜರು. ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಸಾಮಂತ ರಾಜರು ಕರಾವಳಿ ಬಂದರುಗಳ ಸುಂಕ ಮತ್ತು ವಿದೇಶಿ ಮೂಲಗಳಿಂದ ಕಪ್ಪ ಬರುತ್ತಿತ್ತು. ಈ ಕಪ್ಪ ಕಾಣಿಕೆಯೂ ವಿಜಯನಗರ ಸಾಮ್ರಾಜ್ಯದ ರಾಜರಿಗೆ ಚಿನ್ನದ ನಾಣ್ಯ, ಆಭರಣಗಳ ರೂಪದಲ್ಲೇ ಸಾಮಂತ ರಾಜರು ಸಲ್ಲಿಕೆ ಮಾಡುತ್ತಿದ್ದರು. ಹಂಪಿ ಕೇವಲ ದಕ್ಷಿಣ ಭಾರತದ ಕೇಂದ್ರವಾಗಿರಲಿಲ್ಲ. ಜಾಗತಿಕ ವ್ಯಾಪಾರ ನಗರವಾಗಿತ್ತು. ಚಿನ್ನದ ಬದಲಿಯಾಗಿ ಅಂದರೆ ರಾಜರು ಚಿನ್ನವನ್ನು ನೀಡಿ ವಿದೇಶಿ ವ್ಯಾಪಾರಗಳಿಂದ ಅತ್ಯಮೂಲ್ಯ ಸರಕುಗಳನ್ನು ಪಡೆದುಕೊಳ್ಳುತ್ತಿದ್ದರು.  

ವಿಜಯನಗರ ಸಾಮ್ರಾಜ್ಯದ ಸೈನ್ಯಕ್ಕೆ ಅತ್ಯಂತ ಸುಧಾರಿತ ತಳಿಯ ಕುದುರೆಗಳು ಬೇಕಾಗುತ್ತಿದ್ದವು. ಹೀಗಾಗಿ ಅರೇಬಿಯನ್‌ ಮತ್ತು ಪರ್ಷಿಯನ್‌ ತಳಿಯ ಕುದುರೆಗಳನ್ನು ಖರೀದಿ ಮಾಡಲು ಪೋರ್ಚುಗೀಸ್‌ ಮತ್ತು ಅರಬ್‌ ವ್ಯಾಪಾರಿಗಳಿಗೆ ಚಿನ್ನ ಮತ್ತು ವರಹಗಳನ್ನು ನೀಡಿ ಕುದುರೆಗಳನ್ನು ಪಡೆಯಲಾಗುತ್ತಿತ್ತು. ಇಷ್ಟೇ ಅಲ್ಲ, ಚೀನಾದಿಂದ ಬರುತ್ತಿದ್ದ ಅತ್ಯುತ್ತಮ ರೇಷ್ಮೆ ಮತ್ತು ಪಾತ್ರೆಗಳನ್ನು ಪಡೆಯಲು, ಮಲಬಾರ್‌ ಕರಾವಳಿ ಪ್ರದೇಶಗಳಿಂದ ಬರುತ್ತಿದ್ದ ಸಾಂಬಾರು ಪದಾರ್ಥಗಳನ್ನು ಪಡೆಯಲು ವಿಜಯನಗರದ ರಾಜರು ಚಿನ್ನದ ನಾಣ್ಯಗಳನ್ನು ನೀಡುತ್ತಿದ್ದರು.

ಗೋಲ್ಕಂಡ ಮತ್ತು ಕೃಷ್ಣ ನದಿ ಪಾತ್ರಗಳಲ್ಲಿ ಸಿಗುತ್ತಿದ್ದ ವಜ್ರ- ಮಾಣಿಕ್ಯಗಳನ್ನು ವಿದೇಶಗಳಿಗೆ ರಫ್ತು ಮಾಡಲು ಚಿನ್ನವನ್ನು ಮುಖ್ಯವಾಗಿ ಮೌಲ್ಯಮಾಪನವಾಗಿ ಉಪಯೋಗಿಸಲಾಗುತ್ತಿತ್ತು. ಸಾಮ್ರಾಜ್ಯದ ಇತರೆ ಭಾಗಗಳಿಗಿಂತ ಹಂಪಿಯಲ್ಲಿಯೇ ಅತಿ ಹೆಚ್ಚು ಚಿನ್ನ ಅಧಿಕವಾಗಿರಲು ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಕಾರಣಗಳು ಆಗಿವೆ. ಹಂಪಿಯು ಇಡೀ ಸಾಮ್ರಾಜ್ಯದ ಆಡಳಿತದ ಕೇಂದ್ರವಾಗಿತ್ತು. ಸಾಮ್ರಾಜ್ಯದ ನಾನಾ ಮೂಲೆಗಳಿಂದ ದೊಡ್ಡ ಮಟ್ಟದಲ್ಲಿ ಚಿನ್ನ ಸಂಗ್ರಹವಾಗುತ್ತಿತ್ತು. ತೆರಿಗೆ, ಸುಂಕ, ಕಪ್ಪಕಾಣಿಕೆಗಳಿಂದ ಬರುತ್ತಿದ್ದ ಬಂಗಾರವನ್ನು ಹಂಪಿಯ ಖಜಾನೆಗೆ ತಂದು ಇಡಲಾಗುತ್ತಿತ್ತು. 

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸಾಮಂತ ರಾಜರು, ವಿದೇಶಿ ರಾಯಭಾರಿಗಳು ಕೃಷ್ಣದೇವರಾಯ ಸೇರಿದಂತೆ ಅಂದಿನ ರಾಜರುಗಳಿಗೆ ಚಿನ್ನದ ಕಿರೀಟಗಳು, ಆಭರಣಗಳು ಮತ್ತು ಬಂಗಾರದ ನಾಣ್ಯಗಳನ್ನು ಗಿಫ್ಟ್‌ ಆಗಿ ನೀಡುತ್ತಿದ್ದರು. ಕರಾವಳಿ ಬಂದರುಗಳಾದ ಹೊನ್ನಾವರ, ಭಟ್ಕಳ ಮತ್ತು ಗೋವಾ ಮೂಲಕ ಭಾರತಕ್ಕೆ ಪ್ರಮುಖ ಅಂತಾರಾಷ್ಟ್ರೀ ವರ್ತಕರು ಅಂತಿಮವಾಗಿ ತಮ್ಮ ಸರಕುಗಳ ಮಾರಾಟಕ್ಕಾಗಿ ಹಂಪಿಗೆ ಬರುತ್ತಿದ್ದರು. ಹಂಪಿಯ ಪ್ರಸಿದ್ಧ ಚಿನ್ನದ ಬಜಾರ್‌ಗಳಲ್ಲಿ ವ್ಯಾಪಾರ ನಡೆಯುತ್ತಿತ್ತು. ವಿಶ್ವದ ಚಿನ್ನದ ವಹಿವಾಟು, ವ್ಯಾಪಾರ ಹಂಪಿಯಲ್ಲೇ ಕೇಂದ್ರಿಕೃತವಾಗಿತ್ತು.

ವಿಜಯನಗರ ಸಾಮ್ಯಾಜ್ಯದ ಯುವರಾಣಿಯರು ಕೊರಳಲ್ಲಿ ಧರಿಸುತ್ತಿದ್ದ ಸರಗಳು ಅತ್ಯಂತ ಸಂಕೀರ್ಣವಾಗಿ ವಿನ್ಯಾಸ ಮಾಡಲಾಗಿದ್ದವು. ಚಿನ್ನದ ಸರಗಳಲ್ಲಿ ಕೆಂಪು ಅಥವಾ ರಬ್ಬೀಸ್‌, ಮರಕತ ಮತ್ತು ಮುತ್ತುಗಳನ್ನು ಪೋಣಿಸಲಾಗುತ್ತಿತ್ತು. ನೂನಿಸ್‌ ಎಂಬ ವಿದೇಶಿ ಪ್ರವಾಸಿಗನು ಇತಿಹಾಸದಲ್ಲಿ ಹೇಳಿದಂತೆ ಯವರಾಣಿಯರು ಧರಿಸುತ್ತಿದ್ದ ಚಿನ್ನದ ಹಾರಗಳು ಮತ್ತು ಸರಗಳು ಜಾಸ್ತಿ ತೂಕದಿಂದ ಇರುತ್ತಿದ್ದವು. ಕೆಲವೊಮ್ಮೆ ರಾಜಕುಮಾರಿಯರು ಆಭರಣಗಳನ್ನು ಹೊತ್ತು ನಡೆಯಲು ಆಗದೇ ದಾಸಿಯರ ಸಹಾಯ ಪಡೆಯುತ್ತಿದ್ದರು. ಸೊಂಟಕ್ಕೆ ನವಿಲು ಅಥವಾ ಗಂಡಭೇತುಂಡ ವಿನ್ಯಾಸದ ಚಿನ್ನದ ಒಡ್ಯಾಣಗಳನ್ನು ಧರಿಸುತ್ತಿದ್ದರು. ರಾಜಮನೆತನದ ಮಹಿಳೆಯರಿಗೆ ಮಾತ್ರ ಚಿನ್ನದ ಕಾಲಿನ ಬೆರಳು, ಕಾಲ್ಚೈನು ಹಾಕಿಕೊಳ್ಳಲು ಸೌಲಭ್ಯ ಇತ್ತು.

ಹಂಪಿಯನ್ನು ಸುತ್ತಾಡಿ ನೋಡಿದರೆ ಅಲ್ಲಿ ಕಲ್ಲುಗಳ ಮೇಲೆ, ದೇವಾಲಯಗಳಲ್ಲಿನ ಸ್ತ್ರೀ ವಿಗ್ರಹಗಳ ಮೇಲೆ ವಿವಿಧ ರೀತಿಯ ಆಭರಣಗಳ ವಿನ್ಯಾಸಗಳು ಕಾಣುತ್ತವೆ. ಬಳೆಗಳು, ಸರಗಳು, ಕಿವಿಯೋಲೆ, ಸೊಂಟದ ಆಭರಣ ಸೇರಿದಂತೆ ಹಲವು ಆಭರಣ ರೂಪಗಳು ಸಾಮ್ರಾಜ್ಯಗಳಲ್ಲಿ ಮಹಿಳೆಯರು ಧರಿಸುತ್ತಿದ್ದರು ಎಂದು ಇದರಿಂದ ತಿಳಿಯುತ್ತದೆ. ಹಂಪಿಯ ಶಿಲ್ಪಕಲೆ ಮತ್ತು ರಾಜಮನೆತನದ ವೈಭವವನ್ನು ಗಮನಿಸಿದಾಗ ಚಿನ್ನದ ಮತ್ತು ರತ್ನಗಳಿಂದ ಮಾಡಲ್ಪಟ್ಟ ಆಭರಣಗಳು ರಾಜವಂಶದ ಪ್ರತಿಷ್ಠೆಯ ಸಂಕೇತ ಆಗಿದ್ದವು. 

ಹಂಪಿಯ ಅವಶೇಷಗಳ ನಡುವೆ ನಿಂತಾಗ ಕಾಣುವುದು ಕೇವಲ ಕಲ್ಲಿನ ಕಟ್ಟಡಗಳಲ್ಲ. ಆ ಕಲ್ಲುಗಳ ಹಿಂದೆ ಒಂದು ದೊಡ್ಡ ಆರ್ಥಿಕ ಜಗತ್ತು ಇದ್ದಿತ್ತು. ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನವೇ ಹಣವಾಗಿತ್ತು, ಆಭರಣವಾಗಿತ್ತು, ರಾಜಕೀಯ ಪ್ರತಿಷ್ಠೆ ಆಗಿತ್ತು. ಇದು ಅಲ್ಲದೇ ಧಾರ್ಮಿಕ ದಾನದ ವಸ್ತುವಾಗಿ ಮತ್ತು ಅಂತರಾಷ್ಟರೀಯ ವ್ಯಾಪಾರದ ಪ್ರಮುಖ ಮಾಧ್ಯಮವಾಗಿತ್ತು. ಹಂಪಿಯ ಚಿನ್ನದ ಬಗ್ಗೆ ಎಷ್ಟು ಹೇಳಿದರೂ ಸಾಕಾಗಲ್ಲ. ನೆಲದೊಳಗಿನ ಚಿನ್ನ ತೆಗೆದು ನಗರವನ್ನು ಕಟ್ಟಿದ ಕಥೆಗಿಂತಲೂ ದೊಡ್ಡದು. ಆಗಿನ ಕಾಲದಲ್ಲಿ ಚಿನ್ನ ಹೇಗೆ ತೆಗೆಯುತ್ತಿದ್ದರು ಎನ್ನುವುದೇ ಅಂದಿನ ತಂತ್ರಜ್ಞಾನದ ವಿಶೇಷವಾಗಿದೆ. 

Add Zee News as a Preferred Source