• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಧಾರವಾಡ ಕೃಷಿಮೇಳಕ್ಕೆ ಇಂದು ತೆರೆ: ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ!

ಧಾರವಾಡ ಕೃಷಿಮೇಳಕ್ಕೆ ಇಂದು ತೆರೆ: ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ!

ಧಾರವಾಡ ಕೃಷಿಮೇಳಕ್ಕೆ ಇಂದು ಅದ್ಧೂರಿ ತೆರೆಬೀಳಲಿದೆ. ಕಳೆದ ಕೆಲ ವರ್ಷಗಳಿಂದ ಈ ಮೇಳಕ್ಕೆ ಹೊಸದೊಂದು ಪ್ರದರ್ಶನ ಪರಿಚಯಿಸಲಾಗಿದೆ. ಅದುವೇ ವಿಸ್ಮಯಕಾರಿ ಕೀಟ ಪ್ರಪಂಚ..! ಕೀಟಶಾಸ್ತ್ರ ವಿಭಾಗ ಆಯೋಜಿಸಿದ್ದ ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನ ಜನಮನ ಗೆದ್ದಿದ್ದು, ಕೀಟಗಳ ಖಾದ್ಯ, ಆಭರಣ ಹಾಗೂ ಕೀಟಗಳಿಂದ ಅಪರಾಧ ಪತ್ತೆ ಹೀಗೆ ಈ ಬಾರಿಯ ಕೃಷಿ ಮೇಳದಲ್ಲಿನ ಕೀಟ ಪ್ರಪಂಚ ಹೇಗಿದೆ? ಇಲ್ಲಿದೆ ಮಹತ್ವದ ಮಾಹಿತಿ.

Written ByYashaswini V
Published: Sep 28, 2026, 11:50 AM IST|Updated: Sep 28, 2026, 11:52 AM IST
joinshare
ಧಾರವಾಡ ಕೃಷಿಮೇಳಕ್ಕೆ ಇಂದು ತೆರೆ: ʼವಿಸ್ಮಯಕಾರಿ ಕೀಟ ಪ್ರಪಂಚʼ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ!

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ನಿತ್ಯ ಬದುಕಿನಲ್ಲಿ ನಾವು ನೂರಾರು ಬಗೆಯ ಕೀಟಗಳನ್ನು ನೋಡುತ್ತಲೇ ಇರುತ್ತೇವೆ. ಅವುಗಳ ಬದುಕು, ಆಹಾರ, ವಿಶ್ರಾಂತಿ, ಜೀವನ ಕ್ರಮಗಳ ಬಗ್ಗೆ ಹೆಚ್ಚಿಗೆ ನಾವು ಗಮನ ಹರಿಸಿರೋದಿಲ್ಲ. ಆದರೆ ಅವುಗಳ ಬಣ್ಣ, ನೋಟ, ಆಕಾರವನ್ನು ಗಮನಿಸಿದಾಗ ಒಂದು ಕ್ಷಣ ಎಂಥವರನ್ನೂ ಅವು ಆಕರ್ಷಿಸೋದಂತೂ ಸತ್ಯ. ಹೀಗೆ ನಮ್ಮೆದುರಿಗೆ ಇರುವ ಹತ್ತಾರು, ಸಾವಿರಾರು ಕೀಟಗಳ ಬಗ್ಗೆ ಕುತೂಹಲಕಾರಿ, ಅಪೂರ್ವ ಸಂಗತಿಗಳನ್ನು ಒಳಗೊಂಡು ಅವುಗಳ ಜೀವನ, ಸಂತೋನೋತ್ಪತ್ತಿ ಹಾಗೂ ಮಾನವನ ಜೊತೆಗಿನ ಸಂಬಂಧವನ್ನು ವಿಶಿಷ್ಠವಾಗಿ, ವಿಭಿನ್ನವಾಗಿ ಹಾಗೂ ಜನಾಕರ್ಷಣೆಯಾಗಿ ಧಾರವಾಡ ಕೃಷಿ ಮೇಳದಲ್ಲಿ ಕೀಟಶಾಸ್ತ್ರ ವಿಭಾಗದ ವತಿಯಿಂದ ತೋರಿಸಲಾಗಿದೆ. ಸಾಮಾನ್ಯವಾಗಿ ನಾವು ನಿತ್ಯ ನೋಡುವ, ಗಮನಿಸುವ ಪಾತರಗಿತ್ತಿ, ದುಂಬಿ, ಜೇನು ನೊಣ, ಇರುವೆ, ಮಿಡತೆ, ಕುಂಬಾರ ಹುಳು, ಜಿರಳೆ, ಶಿವನ ಕುದುರೆ, ರೇಷ್ಮೆಯಂತಹ ಹಲವು ಕೀಟಗಳನ್ನು ಬಳಸಿಕೊಂಡು ರೈತರ ಜಾನಾಭಿವೃದ್ಧಿ ಕೇಂದ್ರದಲ್ಲಿ ಈ ಕೀಟ ಪ್ರಪಂಚದ ಪ್ರದರ್ಶನವನ್ನು ಆಯೋಜಿಸಲಾಗಿದೆ. ಹತ್ತಾರು ಕೀಟ ಮಾದರಿ ಜನರನ್ನು ತೀವ್ರವಾಗಿ ಸೆಳೆಯುತ್ತಿದೆ. ಕೃಷಿ ಮೇಳಕ್ಕೆ ಬರುತ್ತಿರೋ ಜನರು ಇವುಗಳ ಪ್ರಪಂಚವನ್ನು ನೋಡಿ ಅಚ್ಚರಿಪಡುತ್ತಿದ್ದಾರೆ.

ನಮ್ಮ ಸುತ್ತ ಇರೋ ಕೀಟಗಳಲ್ಲಿಯೇ ಹೆಚ್ಚಿನ ಪ್ರಮಾಣದ ಪ್ರೋಟಿನ್, ಕ್ಯಾಲ್ಸಿಯಂ, ಕೊಬ್ಬಿನಾಂಶ, ಐರನ್ ಕಟೆಂಟ್ ಎಲ್ಲವೂ ಇದೆ. ಇದೇ ಕಾರಣಕ್ಕೆ ಚೀನಾ, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಇವುಗಳ ಆಹಾರ ತುಂಬಾನೇ ಅಚ್ಚುಮೆಚ್ಚು. ಇದಕ್ಕೆ ಕಾರಣವೇನೆಂದರೆ ಅವುಗಳಲ್ಲಿರೋ ಪೋಷಕಾಂಶ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ದೇಶದಲ್ಲಿಯೂ ಈ ಆಹಾರ ಪದ್ಧತಿ ಜಾರಿಗೆ ಬರಬಹುದು ಅನ್ನೋ ಲೆಕ್ಕಾಚಾರವಿದೆ. ಇದೇ ಕಾರಣಕ್ಕೆ ಈ ಕೀಟಗಳಿಂದ ಬಗೆ ಬಗೆಯ ಖಾದ್ಯವನ್ನು ತಯಾರಿಸಿ, ಪ್ರದರ್ಶನದಲ್ಲಿ ಇಡಲಾಗಿದೆ.

ಕೀಟಗಳಿಂದ ಆಹಾರ:
ಉಳಿದ ದೇಶಗಳಂತೆಯೇ ನಮ್ಮ ದೇಶದಲ್ಲಿಯೂ ಕೀಟಗಳನ್ನು ಸಹ ಆಹಾರವಾಗಿ ಸ್ವೀಕರಿಸಬಹುದು ಅನ್ನೋದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇಳದಲ್ಲಿ ಈ ಪ್ರದರ್ಶನಕ್ಕಿಡಲಾಗಿದೆ. ಮಿಡತೆ ಬರ್ಗರ್, ಪ್ಯೂಪಾ ಸಲಾಡ್, ಸಿಕಾಡ ಡ್ರೈ, ಮಿಶ್ರ ಕೀಟಗಳ ಡ್ರೈ, ಮಿಡತೆ ಫ್ರೈ, ಸ್ಯಾಂಡ್ವಿಚ್, ಕಪ್ಪು ಸೈನಿಕ ನೊಣದ ಮಸಾಲ ಸೇರಿದಂತೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿ, ಪ್ರದರ್ಶಿಸಲಾಗುತ್ತಿದೆ.

ಇನ್ನು ಈ ಎಲ್ಲ ಕೀಟಗಳನ್ನು ಎಷ್ಟೋ ರೈತರು ಮತ್ತು ಜನ ನೋಡಿಯೇ ಇರುತ್ತಾರೆ. ಆದರೆ ಅದೇ ಕೀಟಗಳನ್ನು ಹೀಗೆ ಆಹಾರವಾಗಿ, ಆಭರಣಗಳನ್ನಾಗಿಯೂ ಮಾಡಬಹುದು ಅನ್ನೋದನ್ನು ಇಲ್ಲಿ ತೋರಿಲಾಗುತ್ತಿದೆ. ಇದು ಸಹಜವಾಗಿ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.

ಕೀಟಗಳಿಂದ ಅಪರಾಧ ಕೃತ್ಯ ಪತ್ತೆ:
ಇದೇ ವೇಳೆ ಕೀಟಗಳಿಂದ ಅಪರಾಧ ಕೃತ್ಯಗಳನ್ನು ಸಹ ಪತ್ತೆ ಹಚ್ಚಬಹುದು ಎಂಬುದನ್ನು ತೋರಿಸಲಾಗಿದೆ. ವ್ಯಕ್ತಿ ಸಹಜ ಹಾಗೂ ಹತ್ಯೆಯಂತಹ ಘಟನೆಗಳು ಸಂಂಭವಿಸಿದಾದ ಮನುಷ್ಯನ ಮೃತದೇಹ ಡಿ ಕಾಂಪೋಸ್ ಆಗಿರುತ್ತದೆ. ಅದರ ಮೇಲೆ ಕೂತಿರುವ ಕೀಟಗಳಿಂದ ಮೃತಪಟ್ಟು ಎಷ್ಟು‌ದಿನ ಆಗಿರಬಹುದು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಅನುಕೂಲವಾಗುತ್ತದೆ.

ಕೀಟಗಳಿಂದ ಆಭರಣ:
ಇನ್ನೂ ಈ ವರ್ಷ ನಡೆದ ಬ್ರಿಕ್ಸ್ ಶೃಂಗಸಭೆ ಹಾಗೂ ಪುಟ್ ಬಾಲ್ ವಿಶ್ವಕಪ್ ಕುರಿತು ಮಾಹಿತಿ ನೀಡಲಾಗಿದೆ. ಅನೇಕ ಕೀಟಗಳನ್ನು ಬಳಸಿ ಆಭರಣಗಳನ್ನು ಕೂಡ ಮಾಡಲಾಗಿದೆ. ರೇಷ್ಮೆ ಗೂಡಿನಿಂದ ಪುರುಷ ಹಾಗೂ ಮಹಿಳೆಯರ ಪ್ರತಿಕೃತಿಯನ್ನು ನಿರ್ಮಿಸಲಾಗಿದ್ದು, ಅದು ಎಲ್ಲರನ್ನು ಸೆಳೆಯುತ್ತಿದೆ. ಒಟ್ಟಿನಲ್ಲಿ ನಮ್ಮೊಂದಿಗೆ ನಿತ್ಯದ ಬದುಕಿನಲ್ಲಿ ಅನೇಕ ಕೀಟಗಳು ಬದುಕುತ್ತಿದ್ದರೂ ಅವುಗಳ ಜೀವನಕ್ರಮಗಳ ಬಗ್ಗೆ ಹೆಚ್ಚಿನ ಅರಿವು ಇರೋದಿಲ್ಲ. ಹೀಗಾಗಿ ಇಂಥ ಪ್ರದರ್ಶನಗಳಿಂದ ಅವುಗಳ ಬದುಕಿನ ಇನ್ನೊಂದು ಮಗ್ಗಲಿನ ಮಾಹಿತಿ ಸಿಗುತ್ತಿರೋದು ಸಂತಸದ ವಿಚಾರವಾಗಿದೆ.

Add Zee News as a Preferred Source
TAGS:
Kannada News