ಡಿಕೆಶಿ ವಿರುದ್ಧ ನೇರವಾಗಿಯೇ ಪ್ರೊಟೆಸ್ಟ್ ಮಾಡಬೇಕಿತ್ತು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್
ಮುಖ್ಯಮಂತ್ರಿಗಳು ಯೋಗ್ಯ ನಾಯಕರಲ್ಲ ಎಂದಾದರೆ ಅವರ ವಿರುದ್ಧ ಓಪನ್ ಆಗಿ ಪ್ರೊಟೆಸ್ಟ್ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಮತ ಬರಲ್ಲ, ಅವರು ಯೋಗ್ಯ ನಾಯಕರು ಅಲ್ಲ ಎನ್ನುವುದಾದರೆ ಓಪನ್ ಆಗಿ ಶಿವಕುಮಾರ್ ವಿರುದ್ಧ ಪ್ರೊಟೆಸ್ಟ್ ಮಾಡಬೇಕಿತ್ತು ಎಂದು ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒತ್ತಾಯ ಮಾಡಿದರು.
ಹುಬ್ಬಳ್ಳಿ ನಗರದಲ್ಲಿ ಶುಕ್ರವಾರ (ಸೆ. 18) ಸುದ್ದಿಗಾರರ ಜೊತೆಗೆ ಮಾತನಾಡಿದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಸಿದ್ದರಾಮಯ್ಯಾ ಬಲಿಷ್ಠರಾಗಿದ್ದರೆ ಕಾಂಗ್ರೆಸ್ ಬಲಿಷ್ಠ, ಡಿ.ಕೆ ಶಿವಕುಮಾರ್ ಗೆ ಒಕ್ಕಲಿಗರು ಮಹತ್ವ ಕೊಡಲ್ಲ ಎಂಬ ಮಾಜಿ ಸಚಿವ ಕೆ.ಎನ್ .ರಾಜಣ್ಣ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ.. ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಯಿಂದ ಗೊತ್ತಾಗುತ್ತದೆ. ಸ್ವತಃ ಮುಖ್ಯಮಂತ್ರಿ ಶಿವಕುಮಾರ್ ಅವರಿಂದ ಮತ ಪಡೆಯಲು ಆಗಲ್ಲ ಎಂದರೆ ಯಾಕೆ ಸಿಎಂ ಆಗಿ ಆಯ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಇದೇ ವೇಳೆ, ಡಿ.ಕೆ. ಶಿವಕುಮಾರ್ ಸಮರ್ಥ ನಾಯಕರಲ್ಲದಿದ್ದರೆ ನೇರವಾಗಿ ಅವರ ವಿರುದ್ಧ ಪ್ರೊಟೆಸ್ಟ್ ಮಾಡಬೇಕಿತ್ತು, ಈ ವಿಚಾರವನ್ನು ಅವರ ಪಕ್ಷದ ಹೈಕಮಾಂಡ್ ಗಮನಕ್ಕೂ ತರಬೇಕಿತ್ತು ಎಂದು ಹೇಳಿದರು.
ಸ್ವತಃ ಸಿದ್ದರಾಮಯ್ಯ ಅವರೇ ಹೀಗೆ ಹೇಳಿದ್ದಾರೆ...!
ಇನ್ನು ಸ್ವತಃ ಸಿದ್ದರಾಮಯ್ಯ ಸಹ ನನ್ನ ಮಾತು ಎಲ್ಲಿ ನಡೆಯುತ್ತದೆ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ ಕೆ. ಹರಿಪ್ರಸಾದ್ ಹಾಗೂ ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ ಸುರ್ಜೇವಾಲ್ ಸಹ ಬಂದು ಹೋದರು. ಆದರೂ ಸಹ ಯಾವುದೇ ಭಿನ್ನಾಭಿಪ್ರಾಯ ಬಗೆಹರಿಸಲು ಆಗಿಲ್ಲ. ಇದೊಂದು ಅಸ್ಥಿರ ಸರಕಾರಕ್ಕೆ ಕಾರಣ ಆಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರಕ್ಕೆ ಕಷ್ಟ ದಿನಗಳು, ಬಹಳಷ್ಟು ಡೇಂಜರಸ್ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ!
ಕಲಬುರಗಿಯಲ್ಲಿ ಸಿಎಂ ಶಿವಕುಮಾರ್ ಭೇಟಿ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವು ವಿಚಾರವಾಗಿ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಅಂತಾ ಗೊತ್ತಾಗುತ್ತದೆ. ಕಾಂಗ್ರೆಸ್ ಸಣ್ಣ ಸರಕಾರ, ಕಾಂಗ್ರೆಸ್ ನಾಯಕರ ಮೂರ್ತಿ ಅದು. ಭಾರತೀಯ ಜನತಾ ಪಕ್ಷದ ನಾಯಕರು ಅಲ್ಲಾ ವಾಜಪೇಯಿ ಮೂರ್ತಿ ಅಲ್ಲಾ. ಸಿಎಂ ಶಿವಕುಮಾರ್ ಬರುವ ಮುನ್ನವೇ ಸಿದ್ದರಾಮಯ್ಯನವರ ಮೂರ್ತಿ ತೆರವು ಮಾಡಲಾಗಿದೆ ಎಂದರೆ ಗೊತ್ತಾಗುತ್ತದೆ ಕಾಂಗ್ರೆಸ್ ನಲ್ಲಿ ಏನು ನಡೆತಾ ಇದೆ ಅಂತಾ ಎಂದು ಲೇವಡಿ ಮಾಡಿದರು.