ಗದಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ಗದಗನಲ್ಲಿ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಮಾಡಿದರು. ಗದಗ ನಗರದ ಕಾರ್ಯಪ್ಪ ಸರ್ಕಲ್ ನಿಂದ ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಬಸ್ ನಿಲ್ದಾಣದ ವರೆಗೆ ನಡೆದ ಪ್ರತಿಭಟನಾ ರ‌್ಯಾಲಿ ನಡೆಸಿದರು. ಈ ವೇಳೆ ಕೆಲಕಾಲ ಬಸ್ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ನಗರ ಬಸ್ ನಿಲ್ದಾಣ ಬಿಕೋ ಅಂತಿದೆ.
ಬಸ್ ಹಾಗೂ ಆಟೋ ಸಿಗದಕ್ಕೆ ರೋಗಿಗಳು, ವೃದ್ಧರು, ಮಕ್ಕಳು, ಮಹಿಳೆಯರು ಸಾರ್ವಜನಿಕರು ಪರದಾಡಿದರು. ಕೊಪ್ಪಳ ಜಿಲ್ಲೆ ಎರೆಹಂಚಿನಾಳ ದಿಂದ ಬಂದಿದ್ದ ಬಾಣಂತಿ, ಶಿಶು ಹಾಗೂ ಪಾಲಕರು ಬಸ್ ಹಾಗೂ ಆಟೋ ಸಿಗದಕ್ಕೆ ಪರದಾಡಿದರು. ಗದಗ ಬಸ್ ನಿಲ್ದಾಣದಿಂದ ಜಿಮ್ಸ್ ಆಸ್ಪತ್ರೆಗೆ ಹೋಗುತ್ತಿದ್ದ ಈ ಬಾಣಂತಿ, ಶಿಶು, ಪಾಲಕರು. ಅನಾರೋಗ್ಯ ಸಮಸ್ಯೆಯಿಂದ ಬಾಣಂತಿ ಹಾಗೂ ಶಿಶು ನರಳಾಡುತ್ತಿದ್ದರು. ಬಸ್ ಹಾಗೂ ಆಟೋ ಸಿಗದಕ್ಕೆ ಕೈನಲ್ಲಿ ಶಿಶು ಹೊತ್ತುಕೊಂಡು ಅಲೆದಾಡುವ ದೃಶ್ಯ ಎಲ್ಲರ ಮನಕಲಕುವಂತಿತ್ತು.
ಹೀಗೆ ಸುಮಾರು ಎರಡು ಗಂಟೆಗಳ ಕಾಲ ಬಸ್ ಇಲ್ಲದಕ್ಕೆ ಜನ್ರು ಸಾಕಷ್ಟು ಪರದಾಡಿದ್ರು. ಬಿಜೆಪಿ ಕಾರ್ಯಕರ್ತರು ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ ಎಂಬ ಘೋಷಣೆ ಕೂಗುತ್ತಾ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟರ್ ನೆಲಕ್ಕೆ ಹಾಕಿ ಚಪ್ಪಲಿಯಿಂದ ತುಳಿದು, ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಬಸ್ ದರ ಏರಿಕೆ ಖಂಡಿಸಿ, ಬಸ್ ಹತ್ತಿ ಪ್ರತಿಭಟಿಸಿದರು. ಈ ವೇಳೆ ಅನೇಕ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟ ಕಾಂಗ್ರೆಸ್ ಸರ್ಕಾರ, ಬಡವರ ರಕ್ತ ಹೀರುತ್ತಿರುವ ಕೈ ಸರ್ಕಾರ, ಕಿತ್ತುಕೊಂಡು ತಿಂತಿದೆ ಕಿತ್ತೋದ ಕೈ ಸರ್ಕಾರ, ಬೆಲೆ ಏರಿಕೆಯ ಈ ದುಬಾರಿ ಸರ್ಕಾರ ತೊಲಗಲಿ ಅಂತೆಲ್ಲಾ ನಾಮಫಲ ಹಿಡಿದು ಧಿಕ್ಕಾರ ಕೂಗಿದರು. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿ ಮಾಡುತ್ತಿದ್ದರೆ, ರಾಜ್ಯ ಸರ್ಕಾರ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ.
ಎಸ್.ಐ.ಆರ್ ಬಗ್ಗೆ ಅಪಪ್ರಚಾರ ಮಾಡ್ತಿದ್ದಾರೆ. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಾಲ್ಕು ಬಾರಿ ಹಾಲಿನ ದರ ಏರಿಕೆ ಮಾಡಿದ ತುಟ್ಟಿ ಸರ್ಕಾರ, ಬಡವರ ರಕ್ತ ಹೀರುವ ಸರ್ಕಾರ ಅಂತ ಲೇವಡಿ ಮಾಡಿದರು. ಪಂಚ ಗ್ಯಾರಂಟಿಗಳ ಹೆಸರಿನಲ್ಲಿ ಜನರಿಗೆ ವಂಚನೆ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ರಾಜ್ಯವನ್ನು ದಿವಾಳಿ ಮಾಡಿದ್ದಾರೆ. ಇಂಧನ ದರ ಏರಿಕೆಯಿಂದ ಸಾರಿಗೆ ಸಂಸ್ಥೆಗೂ ನಷ್ಟವಾಗುತ್ತಿದೆ.
ಗ್ಯಾರಂಟಿ ಯೋಜನೆಗಳನ್ನು ಬದಿಗಿಟ್ಟು ಪ್ರಾಮಾಣಿಕ ಆಡಳಿತ ನೀಡಬೇಕು. ಇಲ್ಲವೇ ಕೂಡಲೇ ಡಿ.ಕೆ. ಶಿವಕುಮಾರ್ ಸಿಎಂ ಸ್ಥಾನದಿಂದ ರಾಜೀನಾಮೆ ನೀಡುವಂತೆ ಆಗ್ರಹಿಸಿದರು. ಈ ವೇಳೆ ಶಿರಹಟ್ಟಿ ಕ್ಷೇತ್ರದ ಶಾಸಕ ಡಾ ಚಂದ್ರು ಲಮಾಣಿ, ವಿಧಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರು, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.