SOCIAL MEDIA

Newsletter

PARTNER SITES
Select Language Select State

ಬೆಳಗಾವಿಯಲ್ಲಿ ಸಿಸಿಬಿ ಭರ್ಜರಿ ಬೇಟೆ 3 ಕೋಟಿ ನಕಲಿ ನೋಟು ತೋರಿಸಿ 5 ಕೋಟಿ ದೋಚಲು ಯತ್ನಿಸಿದ ಖದೀಮರು ಅಂದರ್

Belagavi: ಬೆಳಗಾವಿಯಲ್ಲಿ ದೊಡ್ಡಮಟ್ಟದ ವಂಚನೆ ಜಾಲವೊಂದು ಬಯಲಾಗಿದೆ. 3 ಕೋಟಿ ರೂಪಾಯಿ ನಕಲಿ ನೋಟುಗಳನ್ನು ತೋರಿಸಿ ಬರೋಬ್ಬರಿ 5 ಕೋಟಿ ರೂಪಾಯಿ ದೋಚಲು ಸ್ಕೆಚ್ ಹಾಕಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

Written By Ramya. R. Gowda
Published: Nov 11, 2026, 16:39 IST | Updated: Nov 11, 2026, 16:51 IST
Join

Belagavi: ಬೆಳಗಾವಿಯಲ್ಲಿ ದೊಡ್ಡಮಟ್ಟದ ವಂಚನೆ ಜಾಲವೊಂದು ಬಯಲಾಗಿದೆ. 3 ಕೋಟಿ ರೂಪಾಯಿ ನಕಲಿ ನೋಟುಗಳನ್ನು ತೋರಿಸಿ ಬರೋಬ್ಬರಿ 5 ಕೋಟಿ ರೂಪಾಯಿ ದೋಚಲು ಸ್ಕೆಚ್ ಹಾಕಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಟಿಳಕವಾಡಿಯ ಶಾಂತಿನಗರದ ಮನೆಯೊಂದರ ಮೇಲೆ ದಿಢೀರ್ ದಾಳಿ ನಡೆಸಿರುವ ಪೊಲೀಸರು, ಮನಿ ಡಬ್ಲಿಂಗ್ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ

ಹೌದು, ಬೆಳಗಾವಿಯ ಟಿಳಕವಾಡಿ ವ್ಯಾಪ್ತಿಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಶಿವಾನಂದ ಮುನವಳ್ಳಿ ಎಂಬುವವರಿಗೆ ಬರೋಬ್ಬರಿ 3 ಕೋಟಿ ರೂಪಾಯಿ ನಗದು ನೀಡುವುದಾಗಿ ಖದೀಮರ ಗ್ಯಾಂಗ್ ಆಮಿಷವೊಡ್ಡಿತ್ತು. ನಗದು ಹಣವನ್ನು ನೀಡಿ, ಬದಲಿಗೆ ಅವರ ಬ್ಯಾಂಕ್ ಅಕೌಂಟ್‌ನಿಂದ 5 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಲು ಈ ಗ್ಯಾಂಗ್ ಯತ್ನಿಸಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಈ ಬೃಹತ್ ವಂಚನೆ ಜಾಲವನ್ನು ಭೇದಿಸಿದ್ದಾರೆ.

ಇನ್ನು ವಂಚಕರು ಮೋಸ ಮಾಡಲು ಬಳಸಿದ ಐಡಿಯಾ ಕೂಡ ಸಿನಿಮಾ ಸ್ಟೈಲ್‌ನಲ್ಲಿತ್ತು. ಕ್ಯಾಶ್ ಬಂಡಲ್‌ನ ಮೇಲ್ಭಾಗದಲ್ಲಿ ಮಾತ್ರ ಅಸಲಿ 500 ರೂಪಾಯಿ ಮುಖಬೆಲೆಯ ನೋಟುಗಳನ್ನಿಟ್ಟು, ಕೆಳಗಡೆಲ್ಲಾ ಮಕ್ಕಳು ಆಟಕ್ಕೆ ಬಳಸುವ 'ಚಿಲ್ಡ್ರನ್ ಬ್ಯಾಂಕ್' ನೋಟುಗಳನ್ನು ಇಟ್ಟಿದ್ದರು. ಇದನ್ನು ಅಸಲಿ ಹಣವೆಂದು ನಂಬಿಸಿ ಮೋಸ ಮಾಡಲು ಮುಂದಾಗಿದ್ದರು ವಂಚನೆಗೆ ಪಕ್ಕಾ ಸ್ಕೆಚ್ ಹಾಕಿದ್ದ ಶಿವಲಿಂಗಯ್ಯ ಗಣಾಚಾರಿ ಸಾಗರ ಕಿಳ್ಳಿಕೇತ, ವಿನಾಯಕ ನೋಕರೆ ಸೇರಿದಂತೆ ಒಟ್ಟು ನಾಲ್ವರು ಖದೀಮರು ಇದೀಗ ಜೈಲು ಕಂಬಿ ಎಣಿಸುವಂತಾಗಿದೆ.
​
ಬಂಧಿತರಿಂದ 5,000 ರೂಪಾಯಿ ಅಸಲಿ ನಗದು, 5 ಮೊಬೈಲ್ ಫೋನ್‌ಗಳು ಹಾಗೂ ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಕಾಪಿಗಳನ್ನು ಜಪ್ತಿ ಮಾಡಲಾಗಿದೆ ಅಷ್ಟೇ ಅಲ್ಲದೆ ಜನರನ್ನು ಬೆದರಿಸಲು ಬಳಸುತ್ತಿದ್ದ ಏರ್ ಪಿಸ್ತೂಲ್ ಅನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಸದ್ಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರಿದಿದೆ.

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES