• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಹುಬ್ಬಳ್ಳಿ ಧಾರವಾಡ
  • /ಗದಗದಲ್ಲಿ AEE ಅಧಿಕಾರಿ ನಾಪತ್ತೆ, ದಾಖಲಾಯ್ತು ಕೇಸ್‌

ಗದಗದಲ್ಲಿ AEE ಅಧಿಕಾರಿ ನಾಪತ್ತೆ, ದಾಖಲಾಯ್ತು ಕೇಸ್‌

ಈ ಪ್ರಕರಣ ವಿಪಕ್ಷಗಳಿಗೆ ಆಹಾರವಾಗ್ತಿದೆ. ಹಾಗಾದ್ರೆ ಯಾರು ಆ ಅಧಿಕಾರಿ.? ಯಾಕೆ ನಾಪತ್ತೆಯಾದ್ರು.? ಎಲ್ಲಿ, ಅಲ್ಲಿ ನಡೆಯುತ್ತಿರುವುದಾದ್ರೂ ಏನು ಅಂತಿರಾ.? ಹಾಗಾದ್ರೆ ಈ ಸ್ಟೋರಿ ಓದಿ.

Written ByChetana Devarmani
Published: Sep 26, 2026, 03:44 PM IST|Updated: Sep 26, 2026, 03:45 PM IST
joinshare
ಗದಗದಲ್ಲಿ AEE ಅಧಿಕಾರಿ ನಾಪತ್ತೆ, ದಾಖಲಾಯ್ತು ಕೇಸ್‌

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಗದಗ: ಸರ್ಕಾರದ ಅನುದಾನ ಬಾರದಕ್ಕೆ ಬೇಸತ್ತು ಅಧಿಕಾರಿಯೋರ್ವ ಪತ್ರ ಬರೆದು ನಾಪತ್ತೆಯಾಗಿದ್ದಾರೆ. ಅಧಿಕಾರಿಯ ನಾಪತ್ತೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡ್ತಿದೆ. ನಾಪತ್ತೆಯಾದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ಈ ಪ್ರಕರಣ ವಿಪಕ್ಷಗಳಿಗೆ ಆಹಾರವಾಗ್ತಿದೆ. ಹಾಗಾದ್ರೆ ಯಾರು ಆ ಅಧಿಕಾರಿ.? ಯಾಕೆ ನಾಪತ್ತೆಯಾದ್ರು.? ಎಲ್ಲಿ, ಅಲ್ಲಿ ನಡೆಯುತ್ತಿರುವುದಾದ್ರೂ ಏನು ಅಂತಿರಾ.? ಹಾಗಾದ್ರೆ ಈ ಸ್ಟೋರಿ ಓದಿ.

ಗದಗನ KRIDL AEE ಪರ್ವೇಜ್ ಧಾರವಾಡ ಎಂಬ ಅಧಿಕಾರಿ ನಾಪತ್ತೆಯಾಗಿದ್ದಾರೆ. ಇದನ್ನೆಲ್ಲಾ ನೋಡ್ತಿದ್ರೆ ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎನ್ನುವ ಪ್ರಶ್ನೆ ಕಾಡ್ತಿದೆ. ಬೆಂಗಳೂರಿನ KRIDLನ MDಗೆ ಪತ್ರ ಬರೆದು ಗದಗನ ಅಧಿಕಾರಿ ನಾಪತ್ತೆಯಾಗಿದ್ದಾರೆ. ಕೋಟ್ಯಾಂತರ ರೂಪಾಯಿ ಹಣ ಅನುದಾ‌ನ ಬಾರದಿದ್ದಕ್ಕೆ ಅಧಿಕಾರಿ ಮನನೊಂದಿರುವುದು ಬೆಳಕಿಗೆ ಬಂದಿದೆ. ಪತ್ರದಲ್ಲಿ ಅನುದಾನ ಬಿಡುಗಡೆಯಾಗದ ಕುರಿತು ಉಲ್ಲೇಖವಿದೆ. ಮನೆಯ ಮುಂದೇ ಸಬ್ ಗುತ್ತಿಗೆದಾರರು ಬಂದು ಕೂಗಾಟ ಮಾಡ್ತಿದ್ರು. ಸರ್ಕಾರದ ಅನುದಾನ ಬಾರದ ಕಾರಣ ನಿತ್ಯ ಫೋನ್ ಮಾಡಿ ಕಿರುಕುಳ ನೀಡ್ತಿದ್ರು. ಇದು ನನ್ನ ಮಾನಸಿಕ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ. ನನ್ನ ಜೀವನವನ್ನೇ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ.

ನಾನು ಪರಿಸ್ಥಿತಿ ನಿಭಾಯಿಸುವಲ್ಲಿ ಸೋತಿದ್ದೇನೆ. ಸದರಿ ಉಪವಿಭಾಗಕ್ಕೆ ಅನುದಾ‌ನ ನೀಡಿ ಸಮಸ್ಯೆ ಬಗೆಹರಿಸಿ. ಬೇರೆ ಎಇಇ ಅನ್ನು ನಿಯೋಜನೆಗೊಳಿಸಿ. ದಯವಿಟ್ಟು ನನ್ನ ಕುಟುಂಬದವರಿಗೆ ಕಿರುಕುಳ ನೀಡಬೇಡಿ ಅಂತ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ ಅಧಿಕಾರಿ ಪರ್ವೇಜ್. ಇನ್ನು ಕುಟುಂಬ ಸದಸ್ಯನ ಒಬ್ಬ ಬರೆದ ಪತ್ರದಿಂದ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಎರಡು ವರ್ಷದ ಹಿಂದಷ್ಟೆ ಮದುವೆಯಾದ ಅಧಿಕಾರಿ ಒಂದು ವರ್ಷದ ಪುಟ್ಟ ಕಂದಮ್ಮನನ್ನು ಹೊಂದಿದ್ದಾನೆ. ಪರ್ವೇಜ್ ನ ನಾಪತ್ತೆಯಿಂದ ಪತ್ನಿ, ಮಗು, ಪೋಷಕರು, ಸಹೋದರ ಹಾಗೂ ಸಂಬಂಧಿಗಳು ಕಂಗಾಲಾಗಿದ್ದಾರೆ. ಇನ್ನು ನನ್ನ ಸಹೋದರ ನಾಪತ್ತೆಯಾಗಿದ್ದಾರೆ. ಕುಟುಂಬದಲ್ಲಿ ಆತಂಕ ಮೂಡಿದೆ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಚಿಕ್ಕ ಮಗು ಇರುವುದರಿಂದ ಮನೆಯಲ್ಲಿ ಎಲ್ಲರಿಗೂ ಆತಂಕ ಹಚ್ಚಾಗಿದೆ. ಆದಷ್ಟು ಬೇಗ ನನ್ನ ಸಹೋದರನನ್ನು ಹುಡುಕಿಕೊಡಿ ಅಂತಿದ್ದಾರೆ ನಾಪತ್ತೆಯಾದ ಅಧಿಕಾರಿ ಪರ್ವೇಜ್ ನ ಸಹೋದರ.

ಅಧಿಕಾರಿ ಪರ್ವೇಜ್ ಅವರು ದಿನಾಂಕ 12-9-2026 ರಂದು MD ಗೆ ಪತ್ರ ಬರೆದಿದ್ದಾರೆ. ಮರುದಿನ 13-9-2026 ರಂದು ಬೆಂಗಳೂರಿನಲ್ಲಿ ಮೀಟಿಂಗ್ ಇದೆ‌ ಅಂತ ಮನೆಗೆ ಬಂದು ಟ್ರೈನ್ ಬುಕ್ ಮಾಡಿದ್ದಾರೆ. ಗದಗನಿಂದ ಬೆಂಗಳೂರಿಗೆ ಹಂಪಿ ಎಕ್ಸಪ್ರೆಸ್ ರೈಲು ಮೂಲಕ ಹೋಗ್ತೆನಿ ಅಂತ ಹೇಳಿ ಮನೆಯಿಂದ ಹೊರಗೆ ಹೋಗಿದ್ದಾರೆ. ಬೆಂಗಳೂರು ಮುಟ್ಟಿದ ನಂತ್ರವೂ ಮನೆಯವ್ರ ಸಂಪರ್ಕದಲ್ಲಿದ್ರಂತೆ. ಆದ್ರೆ 14-9-2026 ರಿಂದ AEE ಪರ್ವೇಜ್ ನ ಮೊಬೈಲ್ ಸ್ವಿಚ್ ಆಫ್‌ ಆಗಿದೆ. ಎರಡು ದಿನಗಳಿಂದಲೂ ಆನ್ ಆಗದ ಮೊಬೈಲ್ ನೋಡಿ ಮನೆಯವ್ರು ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ 16-9-2026 ರಂದು ನಾಪತ್ತೆಯಾಗಿರುವ ಬಗ್ಗೆ ಸ್ಥಳೀಯ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಬಡಾವಣೆ ಪೊಲೀಸರು ಕೇಸ್ ಫೈಲ್ ಸ್ಟಡಿ ಮಾಡಿ ಲೊಕೇಶನ್ ಚೆಕ್ ಮಾಡಿದ್ದಾರೆ. ನಂತ್ರ ಪೊಲೀಸ್ ಇಲಾಖೆ ತಂಡ ರಚಿಸಿ ಆಂದ್ರ ಪ್ರದೇಶದ ವಿಜವಾಡಕ್ಕೆ ತೇರಳಿ ಇನ್ನು ಸರ್ಚ ಮಾಡ್ತಿದ್ದಾರೆ. ಆದ್ರೆ ಕುಟುಂಬಸ್ಥರು ಆದಷ್ಟು ಬೇಗನೆ ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ. ತನಗಾದ ನೋವಿನ ಬಗ್ಗೆ ಮನೆಯಲ್ಲಿ ಯಾರಿಗೂ ಹೇಳಿಕೊಳ್ಳದೇ, ತನ್ನ ನೋವು ತಾನೆ ನುಂಗಿದ್ದಾನೆ. ಪತ್ರದಲ್ಲಿ 2 ಕೋಟಿ ಅನುದಾನ ಬಗ್ಗೆ ಬರೆದಿದ್ದಾರೆ. ಅದಕ್ಕೂ ಹೆಚ್ಚಿನ ಹಣ ಕೊಡುವುದು ಇರಬಹುದು. ಈ ಬಗ್ಗೆ ತನಿಖೆ ಮಾಡಬೇಕು ಅಂತಿದ್ದಾರೆ ಅಧಿಕಾರಿ ಸಂಬಂಧಿ.

ಪತ್ರದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಅನುದಾನದ ಬಗ್ಗೆ ಉಲ್ಲೇಖವಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದಕ್ಕಿಂತ ಹೆಚ್ಚಿನ ಹಣ ಬಾಕಿ ಇದೆಯೇ.? ಯಾವ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರಿಂದ ಅಧಿಕಾರಿಗೆ ಎಷ್ಟು ಒತ್ತಡವಿತ್ತು.? ಈ ಪ್ರಶ್ನೆಗಳೇ ಈಗ ತನಿಖೆಯ ಕೇಂದ್ರಬಿಂದುವಾಗಿವೆ. ಪೊಲೀಸರು ಈಗ ಅಧಿಕಾರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೊಬೈಲ್ ಲೊಕೇಷನ್, ಪ್ರಯಾಣದ ಮಾಹಿತಿ, ಸಿಸಿಟಿವಿ ದೃಶ್ಯಗಳು ಹಾಗೂ ಪತ್ರದಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಮುಂದುವರಿಯುತ್ತಿದೆ. ಇತ್ತ ಪ್ರಕರಣ ರಾಜಕೀಯ ಸ್ವರೂಪವನ್ನೂ ಪಡೆದುಕೊಳ್ಳುತ್ತಿದೆ.

ಅನುದಾನ ಕೊರತೆಯಿಂದಲೇ ಅಧಿಕಾರಿ ಇಂತಹ ಪರಿಸ್ಥಿತಿಗೆ ಸಿಲುಕಿದ್ದಾರಾ.? ಎಂಬ ಪ್ರಶ್ನೆಗಳನ್ನು ವಿರೋಧ ಪಕ್ಷಗಳು ಸರ್ಕಾರದ ಮುಂದೆ ಇಡುತ್ತಿವೆ.ಆದ್ರೆ ನಾಪತ್ತೆಯ ಹಿಂದಿನ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿ ಸುರಕ್ಷಿತವಾಗಿ ಪತ್ತೆಯಾಗುವುದು ಈಗ ಮೊದಲ ಆದ್ಯತೆ. ಅದರ ಬಳಿಕ, ಪತ್ರದಲ್ಲಿ ಮಾಡಿರುವ ಆರೋಪಗಳಿಗೆ ಸತ್ಯಾಸತ್ಯತೆ ಏನು.? ಅನುದಾನ ಎಷ್ಟು ಬಾಕಿ.? ಗುತ್ತಿಗೆದಾರರ ಒತ್ತಡ ಇತ್ತಾ.? ಅಧಿಕಾರಿ ನಾಪತ್ತೆಯಾಗಲು ನಿಜವಾದ ಕಾರಣವೇನು.?ಎಂಬ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ.

 

Add Zee News as a Preferred Source
TAGS:
Kannada News