SOCIAL MEDIA

Newsletter

PARTNER SITES
Select Language Select State

ಹೂವುಗಳೋ, ಚೆಲುವೆಯರೋ.. ಕೃಷಿಮೇಳದಲ್ಲಿ ಕಣ್ಮನ ಸೆಳೆದ ಬಣ್ಣದ ಲೋಕ, ಫಲಪುಷ್ಪ ಪ್ರದರ್ಶನ ಹೈಲೈಟ್

ಇಡೀ ಕೃಷಿ ಮೇಳಕ್ಕೆ ಒಂದು ಬಗೆಯ ಆಕರ್ಷಣೆ ಇದ್ದರೆ, ಅದೆಲ್ಲಕ್ಕಿಂತ ದೊಡ್ಡದಾದ ಆಕರ್ಷಣೆ ಈ ಫಲ-ಪುಷ್ಪ ಪ್ರದರ್ಶನಕ್ಕೆ ಇರುತ್ತೆ. ಕೃಷಿ ಮೇಳಕ್ಕೆ ಬರೋ ಬಹುತೇಕರು ಮರೆಯದೇ ಭೇಟಿ ಕೊಡೋದು ಈ ಫಲ-ಪುಷ್ಪ ಪ್ರದರ್ಶನದ ಸ್ಥಳಕ್ಕೆ.

Written By Bhimappa
Published: Sep 27, 2026, 01:01 PM IST | Updated: Sep 27, 2026, 01:08 PM IST
Image Credit: Agriculture_Fair
Join

2026 Dharwad Agriculture Fair: ಕೃಷಿ ವಿಶ್ವವಿದ್ಯಾಲಯದ ಕೃಷಿಮೇಳ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಲಕ್ಷಾಂತರ ಸಂಖ್ಯೆಯಲ್ಲಿ ರೈತರು ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಮೇಳದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಗಮನ ಸೆಳೆಯುತ್ತಿದೆ. ಹೂವಿನ ಸೌಂದರ್ಯಕ್ಕೆ ಸ್ಪರ್ಧೆ ನೀಡುವಂಥ ಸುಂದರಿಯರು ಕೂಡ ಅಲ್ಲಿ ನೆರೆದಿದ್ದರೆ?, ಅಲ್ಲಿಗೆ ಆ ವಿಚಿತ್ರ ಜಗತ್ತಿನ ಬಗ್ಗೆ ಹೇಳುವ ಅವಶ್ಯಕತೆಯೇ ಅಲ್ಲವೇ?, ಅಂಥದ್ದೊಂದು ಅನುಭವವನ್ನು ನೀಡುತ್ತಿದೆ ಧಾರವಾಡದ ಕೃಷಿ ಮೇಳ 2026.

ಗುಲಾಬಿ, ಸೇವಂತಿಗೆ, ಕಾರ್ನೇಶನ್, ಅಂಥೋರಿಯಂ, ಗ್ಲ್ಯಾಡಿಯೋಲಸ್, ಲಿಲ್ಲಿ, ಜರ್ಬೆರಾ- ಒಂದಾ? ಎರಡಾ? ಹತ್ತಾರು ಬಗೆಯ ಹೂವುಗಳ ರಾಶಿ. ಅದನ್ನ ಅಚ್ಚರಿ ಹಾಗೂ ಸಂತೋಷದಿಂದ ಯುವತಿಯರು ನೋಡುತ್ತಿದ್ದಾರೆ. ಹೂವಿಗಿಂತಲೂ ತಾವೇ ಸುಂದರ ಅನ್ನುವಂತೆ ನಸುನಗುತ್ತಾ ನಲಿಯುತ್ತಿರೋ ಕಾಲೇಜು ಬೆಡಗಿಯರು. ನಿಮಗಿಂತಲೂ ನಾನೇನು ಕಮ್ಮಿ ಅಂತಾ ಇಷ್ಟಗಲಾ ಮುಖವರಳಿಸಿ ನಿಂತ ಬಗೆ ಬಗೆಯ ಹೂವುಗಳು. ಅವುಗಳೊಂದಿಗೆ ಬಗೆ ಬಗೆಯ ಆ್ಯಂಗಲ್‌ಗಳಲ್ಲಿ ಸೆಲ್ಫಿ ತೆಗೆಸಿಕೊಳ್ಳುತ್ತಿರೋ ಚೆಲುವೆಯರು.

ಇಂಥಹ ಬಗೆ ಬಗೆಯ ಬಣ್ಣ ಬಣ್ಣದ ಹೂವುಗಳ ಹಾಗೂ ಸುಂದರ ಯುವತಿಯರ ಸ್ಪರ್ಧೆಗೆ ಸಾಕ್ಷಿಯಾಗಿದ್ದು ಧಾರವಾಡದ ಕೃಷಿ ಮೇಳ-2025. ಇಡೀ ಕೃಷಿ ಮೇಳಕ್ಕೆ ಒಂದು ಬಗೆಯ ಆಕರ್ಷಣೆ ಇದ್ದರೆ, ಅದೆಲ್ಲಕ್ಕಿಂತ ದೊಡ್ಡದಾದ ಆಕರ್ಷಣೆ ಈ ಫಲ-ಪುಷ್ಪ ಪ್ರದರ್ಶನಕ್ಕೆ ಇರುತ್ತೆ. ಕೃಷಿ ಮೇಳಕ್ಕೆ ಬರೋ ಬಹುತೇಕರು ಮರೆಯದೇ ಭೇಟಿ ಕೊಡೋದು ಈ ಫಲ-ಪುಷ್ಪ ಪ್ರದರ್ಶನದ ಸ್ಥಳಕ್ಕೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾದ ನಾಲ್ಕು ದಿನಗಳ ಕೃಷಿ ಮೇಳದ ಹೈಲೈಟ್ ಅಂದ್ರೆ ಇದೇ ಫಲ-ಪುಷ್ಪ ಪ್ರದರ್ಶನ. ಆವರಣದಲ್ಲಿರೋ ರೈತರ ಜಾನಾಭಿವೃದ್ಧಿ ಕೇಂದ್ರದಲ್ಲಿ ಈ ಮೇಳವನ್ನು ಆಯೋಜಿಸಲಾಗಿದ್ದು, ಮೇಳಕ್ಕೆ ಬರೋ ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಲೇಬೇಕು ಅನ್ನುವಷ್ಟರಮಟ್ಟಿಗೆ ಈ ಪ್ರದರ್ಶನ ಜನರನ್ನು ಸೆಳೆಯುತ್ತಿದೆ.

ಈ ಪ್ರದರ್ಶನದಲ್ಲಿ ಬರೀ ಹೂವುಗಳಷ್ಟೇ ಅಲ್ಲದೇ ಬಗೆ ಬಗೆಯ ದೃಶ್ಯಗಳು ಕೂಡ ಕಂಡು ಬಂದವು. ಕಲ್ಲಂಗಡಿ ಹಣ್ಣಿನಲ್ಲಿ ಅರಳಿದ ಮಹನೀಯರ ಕೃತಿಗಳು, ತೆಂಗಿನ ಕಾಯಿಯಲ್ಲಿ ಅರಳಿದ ದೇವರ ಮೂರ್ತಿಗಳು ಗಮನ ಸೆಳೆದವು. ಇದರೊಂದಿಗೆ ಮತ್ತೊಂದು ಗಮನ ಸೆಳೆದ ಸಂಗತಿ ಎಂದರೆ ನಿತ್ಯ ಬದುಕಿನಲ್ಲಿ ಕಂಡು ಬರೋ ಬೀಜಗಳಿಂದಲೇ ವಿದ್ಯಾರ್ಥಿನಿಯರು ಆಭರಣಗಳನ್ನು ತಯಾರಿಸಿದ್ದು. ಹೆಸರು, ಅವರೆ ಕಾಳು, ಸುಬಾಬುಲ್ ಬೀಜಗಳನ್ನು ಬಳಸಿಕೊಂಡು ಬಗೆ ಬಗೆಯ ಕಲಾಕೃತಿಗಳನ್ನು ಹಾಗೂ ಆಭರಣಗಳನ್ನು ತಯಾರಿಸಲಾಗಿದೆ. ಈ ಆಭರಣಗಳಿಗೆ ಬೀಜಾಭರಣೆ ಅಂತಾ ಹೆಸರಿಡಲಾಗಿದೆ.

ಇನ್ನು ಇವುಗಳೊಂದಿಗೆ ವಿವಿಧ ಔಷಧಿ ಸಸ್ಯಗಳ ಪ್ರದರ್ಶನವನ್ನೂ ಇಡಲಾಗಿದೆ. ಮಧುನಾಶಿನಿ, ಅಶ್ವಗಂಧ, ಸರ್ಪಗಂಧ, ಬಾಸ್ಮತಿ ಎಲೆ ಸೇರಿದಂತೆ ಹಲವಾರು ಔಷಧಿ ಸಸ್ಯಗಳು ಕೂಡ ಜನರ ಆಕರ್ಷಣೆಗೆ ಕಾರಣವಾಗಿವೆ. ಇನ್ನು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿಯೇ ಬೆಳೆದಿರೋ ಎಷ್ಟೋ ಹೂವುಗಳು ನಮ್ಮ ಗಮನಕ್ಕೆ ಬಂದಿರೋದೇ ಇಲ್ಲ. ಅವುಗಳನ್ನು ಚೆಂದಾಗಿ ಹೊಂದಿಸಿ ಇಟ್ಟರೆ ಅದರ ಸೌಂದರ್ಯ ಹೇಗಿರುತ್ತೆ ಅನ್ನೋದಕ್ಕೆ ಈ ಪ್ರದರ್ಶನವೇ ಸಾಕ್ಷಿ.

ಇತ್ತೀಚಿನ ದಿನಗಳಲ್ಲಿ ಹೂವು ಕೂಡ ಪ್ರಮುಖ ಬೆಳೆಯಾಗಿ, ಆ ಮೂಲಕ ರೈತರ ಬಲು ಮುಖ್ಯ ಆದಾಯದ ಬೆಳೆಯಾಗಿ ಬದಲಾಗಿದೆ. ಎಷ್ಟೋ ಜನ ರೈತರು ಸಾಂಪ್ರದಾಯಿಕ ಹಾಗೂ ವಿದೇಶಿ ತಳಿಗಳ ಹೂವುಗಳಿಂದಲೇ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ರೈತರ ಆದಾಯದಲ್ಲಿ ಹೂವು ತೀರಾನೇ ಪ್ರಮುಖ ಪಾತ್ರ ವಹಿಸುತ್ತಿವೆ. ಇದೇ ಕಾರಣಕ್ಕೆ ರೈತರಿಗೆ ಈ ಆದಾಯ ತರೋ ಹೂವುಗಳ ಬಗ್ಗೆ ಹಾಗೂ ಸಾಂಪ್ರದಾಯಿಕ ತಳಿಗಳ ಬಗ್​ಗೆ ಅರಿವು ಮೂಡಿಸಲು ಇಂಥದ್ದೊಂದು ಮೇಳವನ್ನು ಆಯೋಜಿಸಲಾಗಿದೆ. ಒಟ್ಟಿನಲ್ಲಿ ಬಗೆ ಬಗೆಯ ಪ್ರದರ್ಶನಗಳಲ್ಲಿ ಫಲ-ಪುಷ್ಪ ಪ್ರದರ್ಶನ ಸಾಕಷ್ಟು ಗಮನ ಸೆಳೆಯುತ್ತಿರೋದು ಮಾತ್ರ ಸತ್ಯ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES