• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಡ್ರೈವಿಂಗ್ ಕಲಿಯುವಾಗ ಮಹಿಳೆಯಿಂದ ಭೀಕರ ಅಪಘಾತ : ಕಬಾಬ್ ಅಂಗಡಿಗೆ ನುಗ್ಗಿದ ಕಾರು

ಡ್ರೈವಿಂಗ್ ಕಲಿಯುವಾಗ ಮಹಿಳೆಯಿಂದ ಭೀಕರ ಅಪಘಾತ : ಕಬಾಬ್ ಅಂಗಡಿಗೆ ನುಗ್ಗಿದ ಕಾರು

ನೋಡನೋಡುತ್ತಿದ್ದಂತೆಯೇ ನಗು ನಗುತ್ತಾ ವ್ಯಾಪಾರ ಮಾಡುತ್ತಿದ್ದ ಅಂಗಡಿ ರಣರಂಗವಾಗಿ ಬದಲಾಗಿದೆ. ಅಷ್ಟಕ್ಕೂ ಈ ಭೀಕರ ಅಪಘಾತ ನಡೆದಿದ್ದೆಲ್ಲಿ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇನು, ತೋರಿಸ್ತೀವಿ ನೋಡಿ.

Written ByChetana Devarmani
Published: Nov 03, 2026, 10:06 PM IST|Updated: Nov 03, 2026, 10:14 PM IST
joinshare
ಡ್ರೈವಿಂಗ್ ಕಲಿಯುವಾಗ ಮಹಿಳೆಯಿಂದ ಭೀಕರ ಅಪಘಾತ : ಕಬಾಬ್ ಅಂಗಡಿಗೆ ನುಗ್ಗಿದ ಕಾರು

About the Author

Chetana Devarmani

Chetana Devarmani

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಕಬ್ಬಿಗೆ ₹4,200 ಬೆಂಬಲ ಬೆಲೆಗೆ ಪಟ್ಟು: ಮುಧೋಳದಲ್ಲಿ ಸಾವಿರಾರು ರೈತರಿಂದ ಬೃಹತ್ ಪಾದಯಾತ್ರೆ!

ಕಬ್ಬಿಗೆ ₹4,200 ಬೆಂಬಲ ಬೆಲೆಗೆ ಪಟ್ಟು: ಮುಧೋಳದಲ್ಲಿ ಸಾವಿರಾರು ರೈತರಿಂದ ಬೃಹತ್ ಪಾದಯಾತ್ರೆ!

2

ಸದ್ದಿಲ್ಲದೆ ಮದುವೆಯಾದ ‘ಪವಿತ್ರ ಬಂಧನ’ ನಟಿ ಅಮೂಲ್ಯ ಭಾರದ್ವಾಜ್; ವರ ಯಾರು ಗೊತ್ತಾ?

3

ಮದುವೆಯ ಫೋಟೋ ಹಂಚಿಕೊಂಡ ಅನಿರುದ್ಧ್ ರವಿಚಂದರ್ - ಕಾವ್ಯಾ ಮಾರನ್

4

‘ಸೀತಾ-ರಾಮ್’ ಜಪಿಸುತ್ತಲೇ ಭರ್ಜರಿ ಶತಕ ಸಿಡಿಸಿದ ವೀರೇಂದ್ರ ಸೆಹ್ವಾಗ್ ಪುತ್ರ!

5

ಮಲಗುವ ಮುನ್ನ ಹೊಕ್ಕಳಿಗೆ ಎರಡು ಹನಿ ಎಣ್ಣೆ ಹಾಕಿ ಮಸಾಜ್ ಮಾಡಿದರೆ ಗುಣವಾಗುತ್ತೆ ಈ ಕಾಯಿಲೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು: ಡ್ರೈವಿಂಗ್ ಕಲಿಯುವಾಗ ಒಂದು ಕ್ಷಣದ ಎಚ್ಚರ ತಪ್ಪಿದ್ರೆ ಎಂತಹ ಭೀಕರ ಅನಾಹುತ ಸಂಭವಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬರು ಚಾಲನೆ ಮಾಡುತ್ತಿದ್ದ ದುಬಾರಿ ಪಜೆರೋ ಸ್ಪೋರ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದು, ಬಳಿಕ ನೇರವಾಗಿ ಕಬಾಬ್ ಅಂಗಡಿಯೊಳಗೆ ನುಗ್ಗಿದೆ. ಕಾರು ಅಪ್ಪಳಿಸಿದ ರಭಸಕ್ಕೆ ಅಂಗಡಿಯಲ್ಲಿದ್ದ ಬಿಸಿ ಎಣ್ಣೆ ಮೂವರ ಮೈಮೇಲೆ ಚೆಲ್ಲಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನೋಡನೋಡುತ್ತಿದ್ದಂತೆಯೇ ನಗು ನಗುತ್ತಾ ವ್ಯಾಪಾರ ಮಾಡುತ್ತಿದ್ದ ಅಂಗಡಿ ರಣರಂಗವಾಗಿ ಬದಲಾಗಿದೆ. ಅಷ್ಟಕ್ಕೂ ಈ ಭೀಕರ ಅಪಘಾತ ನಡೆದಿದ್ದೆಲ್ಲಿ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳೇನು, ತೋರಿಸ್ತೀವಿ ನೋಡಿ.

ಇದು ಯಾವುದೋ ಸಿನಿಮಾದಲ್ಲಿ ಚಿತ್ರೀಕರಿಸಿದ ಆ್ಯಕ್ಷನ್ ದೃಶ್ಯವಲ್ಲ. ಕಣ್ಣೆದುರೇ ನಡೆದ ಭೀಕರ ಅಪಘಾತದ ದೃಶ್ಯ. ರಸ್ತೆಯಲ್ಲಿ ವೇಗವಾಗಿ ಬಂದ ಪಜೆರೋ ಸ್ಪೋರ್ಟ್ ಕಾರು ಕ್ಷಣಾರ್ಧದಲ್ಲೇ ನಿಯಂತ್ರಣ ಕಳೆದುಕೊಂಡಿದೆ. ಮೊದಲು ರಸ್ತೆಯ ಬದಿಯಲ್ಲಿದ್ದ ಬೈಕ್‌ಗಳಿಗೆ ಬಲವಾಗಿ ಡಿಕ್ಕಿ ಹೊಡೆದ ಕಾರು, ಬಳಿಕ ಅಲ್ಲೇ ಇದ್ದ ಕಬಾಬ್ ಅಂಗಡಿಯೊಳಗೆ ನುಗ್ಗಿದೆ. ಕಾರಿನ ವೇಗ ಮತ್ತು ಡಿಕ್ಕಿಯ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿವೆ. ಬೈಕ್‌ಗಳು ಜಖಂಗೊಂಡಿದ್ದು,ಅಂಗಡಿಯೊಳಗಿದ್ದವರು ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಭಾರೀ ಅನಾಹುತವೇ ಸಂಭವಿಸಿದೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಹೊಮ್ಮದೇವನಹಳ್ಳಿಯಲ್ಲಿ ಅಕ್ಟೋಬರ್ 28ರಂದು ಈ ಭೀಕರ ಅಪಘಾತ ನಡೆದಿದ್ದು,ಸಜೀನಾ ಬೇಗಂ ಎಂಬ ಮಹಿಳೆ KA-05-MR-3925 ನೋಂದಣಿ ಸಂಖ್ಯೆಯ ಪಜೆರೋ ಸ್ಪೋರ್ಟ್ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ನಿಯಂತ್ರಣ ತಪ್ಪುತ್ತಿದ್ದಂತೆ ಅಂಗಡಿ ಬಳಿ ನಿಲ್ಲಿಸಿದ್ದ ಬೈಕ್‌ಗಳಿಗೆ ಡಿಕ್ಕಿ ಹೊಡೆದು, ನೇರವಾಗಿ ಕಬಾಬ್ ಅಂಗಡಿಗೆ ನುಗ್ಗಿದೆ. ಕ್ಷಣಮಾತ್ರದಲ್ಲಿ ಅಂಗಡಿಯ ಪರಿಸ್ಥಿತಿಯೇ ಸಂಪೂರ್ಣ ಬದಲಾಗಿದೆ. ಈ ಭೀಕರ ಅಪಘಾತದ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮೈ ಜುಮ್ಮೆನಿಸುವಂತಿವೆ.

ಇನ್ನು ಕಾರು ಅಂಗಡಿಗೆ ನುಗ್ಗಿದ ರಭಸಕ್ಕೆ ಅಡುಗೆ ಮಾಡುತ್ತಿದ್ದ ಬಿಸಿ ಎಣ್ಣೆ ಅಂಗಡಿಯಲ್ಲಿದ್ದ ಬಸವರಾಜ್, ಮುನಿಕೃಷ್ಣ ಹಾಗೂ ಮಂಜೇಶ್ ಅವರ ಮೈಮೇಲೆ ಚೆಲ್ಲಿದೆ. ಪರಿಣಾಮ ಮೂವರಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ಏಕಾಏಕಿ ಸಂಭವಿಸಿದ ಈ ಅನಾಹುತದಿಂದ ಅಂಗಡಿಯಲ್ಲಿದ್ದವರು ದಿಕ್ಕುತೋಚದೆ ಕಂಗಾಲಾಗಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಮೆಡೆಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಡ್ರೈವಿಂಗ್ ಕಲಿಯುವ ಸಂದರ್ಭದಲ್ಲಿ ಕಾರಿನ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ. ಜನನಿಬಿಡ ರಸ್ತೆಯಲ್ಲಿ ನಡೆದ ಈ ಅಪಘಾತ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಒಂದು ಕ್ಷಣದ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದ ಮೂವರು ಅಮಾಯಕರು ಗಂಭೀರವಾಗಿ ಗಾಯಗೊಂಡಿರುವುದು ದುರಂತವೇ ಸರಿ.

ಒಟ್ಟಿನಲ್ಲಿ, ವಾಹನ ಚಾಲನೆ ಕಲಿಯುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸದಿದ್ದರೆ ಎಂತಹ ದೊಡ್ಡ ಅನಾಹುತ ಸಂಭವಿಸಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಅದೃಷ್ಟವಶಾತ್ ಭಾರೀ ಅನಾಹುತ ಸಂಭವಿಸಿದರೂ ಪ್ರಾಣಹಾನಿಯಾಗಿಲ್ಲ. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾರಿನಲ್ಲಿದ್ದ ಮಹಿಳೆ ಸೇರಿದಂತೆ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

 

Add Zee News as a Preferred Source
TAGS:
Accident