SOCIAL MEDIA

Newsletter

PARTNER SITES
Select Language Select State

ಮನೆಯ ಪೇಟಿಂಗ್ ಕೆಲಸಕ್ಕೆ ಬಂದವನು ಮನೆಯೊಡತಿಯನ್ನೆ ಪಟಾಯಿಸಿದ್ದ, ಅನೈತಿಕ ಸಂಬಂಧಕ್ಕೆ ಗಂಡನ ಚಟ್ಟ ಕಟ್ಟಿದ ಹೆಂಡತಿ

ಇಲ್ಲೊಬ್ಬ ಮಹಿಳೆ ಗಂಡನಿಗೆ ಚಟ್ಟ ಕಟ್ಟಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹಾಗಾದರೆ ಏನಿದು ಪ್ರಕರಣ...? ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

Written By Ramya. R. Gowda
Published: Oct 19, 2026, 06:55 PM IST | Updated: Oct 19, 2026, 07:15 PM IST
Join

ಅವರ ಮುದುವೆಯಾಗಿ 10 ವರ್ಷಗಳೇ ಕಳೆದಿವೆ, ಅವರು ಸುಂದರ ಸಂಸಾರಕ್ಕೆ ಸಾಕ್ಷಿ ಎಂಬಂತೆ ಎರಡು ಅವಳಿ ಗಂಡು ಮಕ್ಕಳು ಜನಿಸಿವೆ. ಆದ್ರೆ ಮನೆಯಲ್ಲಿ ಗಂಡ ಹೆಂಡತಿ ಮದ್ಯೆ ಒಂದಿಷ್ಟು ಬಿರುಕಿತ್ತು. ಇದರ ಮದ್ಯೆ ಅವರ ಹೊಸ ಮನೆಯ ಪೇಟಿಂಗ್ ಕೆಲಸಕ್ಕೆಂದು ಬಂದವನ‌ಸ್ನೇಹ ಬೆಳೆಸಿಕೊಂಡು ಆತನೊಂದಿಗೆ ಸೇರಿ ಗಂಡನನ್ನೆ ಚಟ್ಟ ಕಟ್ಟಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಹಾಗಾದರೆ ಏನಿದು ಪ್ರಕರಣ...? ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...

ಹೌದು ಕಳೆದ ಆಗಸ್ಟ್ 4 ರಂದು‌ ವಿಜಯಪುರ ನಗರದ ಹೊರ ಭಾಗದ ಚಿದಂಬರ ದೇವಸ್ಥಾನದ ರಸ್ತೆಯಲ್ಲಿ ಅಪಘಾತವಾದ ರೀತಿಯಲ್ಲಿ 42 ವರ್ಷದ ರಾಜಶೇಖರ್ ಬಿರಾದಾರ್ ಎಂಬಾತನ ಮೃತದೇಹ ಪತ್ತೆಯಾಗಿತ್ತೆ.‌ ಬೆಳಿಗ್ಗೆ ವಾಯು ವಿಹಾರಕ್ಕೆ ಹೋದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನಪ್ಪಿದ್ದರು ಎನ್ನಲಾಗಿತ್ತು.

ಈ ಸಂಬಂಧ ಆತನ ಪತ್ನಿ 30 ವರ್ಷದ ಅಶ್ವಿನಿ ಬಿರಾದಾರ್ ದೂರು ಸಹ ನೀಡಿದ್ದಳು. ದೂರು ದಾಖಲಿಸಿಕೊಂಡು ಘಟನಾ ಸ್ಥಳದ ಸಿಸಿಟಿವಿ ಪರಿಶೀಲನೆ ಮಾಡಿದಾಗ ನಂಬರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ಹಾಗೂ ಬೈಕ್ ಹೋಗಿರುವುದು ಪತ್ತೆಯಾಗಿದೆ. ಬೈಕ್ ಮೇಲಿದ್ದವನನ್ನು ಕರೆತಂದು ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಕಹಾನಿ ಹೊರ ಬಿದ್ದಿದೆ. ಇದು ಅಪಘಾತವಲ್ಲ ಕೊಲೆ ಎಂಬುದು. ಇನ್ನೂ ಈ ಕೊಲೆಯ ಹಿಂದೆ ಮೃತನ ಹೆಂಡತಿಯೇ ಇದರ ಮಾಸ್ಟರ್ ಮೈಂಡ್ ಎನ್ನುವುದು ಬಯಲಿಗೆ ಬಂದಿದೆ. ಈ ಸಂಬಂಧ ಮೃತ ರಾಜಶೇಖರ ಪತ್ನಿ ಅಶ್ವಿನಿ (30), ಆಕೆಯ ಪ್ರಿಯಕರ 25 ವರ್ಷದ ಆನಂದ್ ಕಲ್ಲೂರ್, 24 ವರ್ಷದ ಸಚಿನ್ ಬಡಳ್ಳಿ ಹಾಗೂ ಅಪ್ರಾಪ್ತ ಬಾಲಕನನ್ನ ಬಂಧಿಸಲಾಗಿದೆ...


ವಿಜಯಪುರದ ಏಕತಾ ನಗರದಲ್ಲಿ ನಿವಾಸವಾಗಿದ್ದ ಮೃತ ರಾಜಶೇಖರ ಸಂಬಂಧಿಯಾಗಿದ್ದ ಅಶ್ವಿನಿಯನ್ನು 10 ವರ್ಷಗಳ ಹಿಂದೆ ಮದುವೆಯಾಗಿದ್ದಾನೆ. 6 ವರ್ಷದ ಅವಳಿ ಗಂಡು ಮಕ್ಕಳಿದ್ದಾರೆ. ಕುಟುಂಬದಲ್ಲಿ ಆಗಾಗಾ ಸಣ್ಣಪುಟ್ಟ ಗಲಾಟೆ ನಡೆಯುತ್ತಿದ್ದವು. ಇದರ ನಡುವೆ 7 ತಿಂಗಳ ಹಿಂದೆ ಇದೇ ಏರಿಯಾದಲ್ಲಿ ರಾಜಶೇಖರ್ ಹೊಸ ಮನೆ ಕಟ್ಟಿಸಿದ್ದು ಮನೆ ಪೇಂಟಿಂಗ್‌ ಕೆಲಸವನ್ನು ಆನಂದ ಕಲ್ಲೂರ ಈತನಿಗೆ ಕೊಟ್ಟಿದ್ದ. ಈತ ಪೇಂಟಿಂಗ್ ಕೆಲಸಕ್ಕೆ ಬರುವಾಗ ಅಶ್ವಿನಿ ಪರಿಚಯವಾಗಿ ಮುಂದೆ ಸ್ನೇಹವಾಗಿದೆ. ಹಲವು ದಿನಗಳ ಬಳಿಕ ಅಶ್ವಿನಿ ತನ್ನ ಗಂಡನಿಂದ ಬಿಡುಗಡೆ ಬಯಸಿ, ಆತನಿಗೆ ಕೊಲೆ ಮಾಡುವ ಬಗ್ಗೆ ಪೇಂಟರ್ ಆನಂದ್ ಗೆ ಹೇಳಿದ್ದು, ಇದಕ್ಕೆ ಆನಂದ್ ಕೈ ಜೊಡಿಸಿದ್ದಾನೆ.

ಆಗಸ್ಟ್ 4 ರಂದು ಮುಂಜಾನೆ 5.30 ಗಂಟೆ ಸುಮಾರಿಗೆ ರಾಜಶೇಖರ್ ತನ್ನ ಮನೆಯಿಂದ ಜುಮನಾಳ್ ರಸ್ತೆಯಲ್ಲಿ ವಾಕಿಂಗ್ ಹೋಗಿದ್ದ.‌ ಈ ವಿಷಯವನ್ನು ಅಶ್ವಿನಿಯು ತನ್ನ ಪ್ರಿಯಕರ ಆನಂದ್ ಗೆ ಮಾಹಿತಿ ನೀಡಿದ್ದಾಳೆ. ಈ ವೇಳೆ ತನ್ನ ಬೈಕ್‌ ಬಂದ ಆನಂದ್ ಮೇಲೆ ಮೃತ ರಾಜಶೇಖರ ಹಿಂಬಾಲಿಸಿ ತನ್ನ ಸಹಚರರು ಜೊತೆಗೆ ‌ಸೇರಿ ಕೊಲೆ ಮಾಡಲು ಹೊಂಚು ಹಾಕಿದ್ದ. ಆನಂದ್ ಸೂಚನೆಯಂತೆ ನಂಬರ ಪ್ಲೇಟ್‌ ಇಲ್ಲದ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ತಗೆದುಕೊಂಡು ಬಂದ ಸ್ನೇಹಿತರು ರಸ್ತೆ ಮೇಲೆ ಹೊರಟಿದ್ದ ರಾಜಶೇಖರಗೆ ಹಿಂದಿನಿಂದ ಸ್ಕಾರ್ಪಿಯೋ ವಾಹನ ಹಾಯಿಸಿ ಕೊಲೆ ಮಾಡಿ ಪರಾರಿಯಾಗಿದ್ದರು. ಘಟನಾ ಸ್ಥಳಕ್ಕೆ ಬಂದಿದ್ದ ಪತ್ನಿ ಹಾಗೂ ಕುಟುಂಬಸ್ಥರು ಗೋಳಾಡಿ ಅತ್ತಿದ್ದರು. ಆದರೆ ಹೆಂಡತಿಯ ಇದರ ರೂವಾರಿ ಅನ್ನೋದು ತನಿಖೆಯ ಬಳಿಕ ಹೊರ ಬಿದ್ದಿದೆ.

ಕುಟುಂಬದಲ್ಲಿ ಆಗಾಗಾ ಸಣ್ಣಪುಟ್ಟ ಗಲಾಟೆ ನಡೆಯುತ್ತಿದ್ದವು. ಇದರ ನಡುವೆ 7 ತಿಂಗಳ ಹಿಂದೆ ಇದೇ ಏರಿಯಾದಲ್ಲಿ ರಾಜಶೇಖರ್ ಹೊಸ ಮನೆ ಕಟ್ಟಿಸಿದ್ದು ಮನೆ ಪೇಂಟಿಂಗ್‌ ಕೆಲಸವನ್ನು ಆನಂದ ಕಲ್ಲೂರ ಈತನಿಗೆ ಕೊಟ್ಟಿದ್ದ. ಈತ ಪೇಂಟಿಂಗ್ ಕೆಲಸಕ್ಕೆ ಬರುವಾಗ ಅಶ್ವಿನಿ ಪರಿಚಯವಾಗಿ ಮುಂದೆ ಸ್ನೇಹವಾಗಿದೆ. ಹಲವು ದಿನಗಳ ಬಳಿಕ ಅಶ್ವಿನಿ ತನ್ನ ಗಂಡನಿಂದ ಬಿಡುಗಡೆ ಬಯಸಿ, ಆತನಿಗೆ ಕೊಲೆ ಮಾಡುವ ಬಗ್ಗೆ ಪೇಂಟರ್ ಆನಂದ್ ಗೆ ಹೇಳಿದ್ದು, ಇದಕ್ಕೆ ಆನಂದ್ ಕೈ ಜೊಡಿಸಿದ್ದಾನೆ.

ಸದ್ಯ ಪೊಲೀಸರ ತನಿಖೆಯಿಂದ ನಿಜಾಂಶ ಬಯಲಾಗಿದೆ. ಗಂಡನ ಕೊಲೆ‌ ಮಾಡಿಸಿದ ಹೆಂಡತಿ ಹಾಗು ಆಕೆಯೆ ಪ್ರಿಯಕರ ಅಂದರ್ ಆಗಿದ್ದಾರೆ.‌‌ ಯಾವುದೋ ಆಸೆಗೆ ಬಿದ್ದ ಅಶ್ವಿನಿ ಇಡೀ ಕುಟುಂಬವನ್ನೆ ಸಂಕಷ್ಟಕ್ಕೆ ದೂಡಿದ್ದಾಳೆ. ಇತ್ತು ತಂದೆ ಅಪಘಾತದಲ್ಲಿ ಸಾವನಪ್ಪಿದರೆ ತಾಯಿ ಕಂಬಿ ಎಣೆಸುವಂತಾಗಿದ್ದು ಈ ಪ್ರಕರಣದಲ್ಲಿ ಅವರಿಬ್ಬರ ಪುಟ್ಟ ಅವಳಿ ಮಕ್ಕಳು ಮಾತ್ರ ಅನಾಥವಾಗಿವೆ...

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES