SOCIAL MEDIA

Newsletter

PARTNER SITES
Select Language Select State

ಮುಂದಿನ ಮೂರು ದಿನ ಕರ್ನಾಟಕದ ಹಲವೆಡೆ ಭಾರಿ ಮಳೆ

ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು ಕರಾವಳಿಗೆ 'ರೆಡ್ ಅಲರ್ಟ್ ಹಾಗೂ ದಕ್ಷಿಣ ಒಳನಾಡಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ.

Written By Ramya. R. Gowda
Published: Sep 23, 2026, 07:22 AM IST | Updated: Sep 23, 2026, 07:29 AM IST
Join

ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗಲಿದ್ದು ಕರಾವಳಿಗೆ 'ರೆಡ್ ಅಲರ್ಟ್ ಹಾಗೂ ದಕ್ಷಿಣ ಒಳನಾಡಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. 


ಮತ್ತೊಂದೆಡೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ ಹಿಂದಿನ ಮುಂಗಾರು ತಿಂಗಳ ಮಳೆ ಕೊರತೆಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಅತ್ಯಧಿಕವಾಗಿದೆ ಎಂಬುದೂ ಬಹಿರಂಗಗೊಂಡಿದೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ (KSNDMC) ಅಂಕಿಅಂಶಗಳ ಪ್ರಕಾರ, ರಾಜ್ಯವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕಳಪೆ ಮುಂಗಾರು ಋತುವನ್ನು ಎದುರಿಸುತ್ತಿದೆ. ಹಿಂದಿನ ಮುಂಗಾರು ತಿಂಗಳ ಮಳೆ ಕೊರತೆಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ ಅತ್ಯಧಿಕವಾಗಿದ್ದು, ಆತಂಕ ಹೆಚ್ಚಿಸಿದೆ. ಪ್ರಸ್ತುತ ಸೆಪ್ಟೆಂಬರ್‌ನಲ್ಲಿ ಮಳೆ ಕೊರತೆ 67% ಇದೆ. ಸಾಮಾನ್ಯವಾಗಿ 107 ಮಿ.ಮೀ.ಮಳೆಯಾಗಬೇಕಿತ್ತಾದರೂ ಇದುವರೆಗೆ ರಾಜ್ಯದಲ್ಲಿ ಕೇವಲ 35 ಮಿ.ಮೀ. ಮಳೆಯಾಗಿದೆ.ಜೂನ್‌ನಲ್ಲಿ ಸಾಮಾನ್ಯ 199 ಮಿ.ಮೀ. ಬದಲಿಗೆ 116 ಮಿ.ಮೀ. ಅಂದರೆ 42% ಮಳೆ ಕೊರತೆ ದಾಖಲಾಗಿತ್ತು.

ಜುಲೈನಲ್ಲಿ 29% ಕೊರತೆ ಇದ್ದು, ಸಾಮಾನ್ಯ 271 ಮಿ.ಮೀ. ಬದಲಿಗೆ 192 ಮಿ.ಮೀ. ಮಳೆಯಾಗಿತ್ತು. ಆಗಸ್ಟ್‌ನಲ್ಲಿ 23% ಕೊರತೆ ದಾಖಲಾಗಿದ್ದು, ಸಾಮಾನ್ಯ 220 ಮಿ.ಮೀ. ಬದಲಿಗೆ ಇದರ ಪ್ರಮಾಣ 169 ಮಿ.ಮೀ. ಆಗಿತ್ತು
ಮಳೆಯ ಅಭಾವದಿಂದ ಜಲಾಶಯಗಳಲ್ಲಿನ ನೀರಿನ ಸಂಗ್ರಹವೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ. ಸೆಪ್ಟೆಂಬರ್ 21ರಂದು ಕೆಆರ್‌ಎಸ್ ಜಲಾಶಯದಲ್ಲಿ 27.76 ಟಿಎಂಸಿ ನೀರಿನ ಸಂಗ್ರಹವಿತ್ತಾದರೆ, ಇದೇ ದಿನ ಕಳೆದ ವರ್ಷ ಜಲಾಶಯದಲ್ಲಿ 47.73 ಟಿಎಂಸಿ ನೀರಿತ್ತು.ಆದರೆ ಉತ್ತರ ಕರ್ನಾಟಕದ ಜಲಾಶಯಗಳ ಸ್ಥಿತಿ ದಕ್ಷಿಣ ಕರ್ನಾಟಕದ ಅಣೆಕಟ್ಟುಗಳಿಗೆ ಹೋಲಿಸಿದರೆ ಉತ್ತಮವಾಗಿದೆ.

 

ಮುಂದಿನ 3 ದಿನ ಕರ್ನಾಟಕದಲ್ಲಿ ಭಾರಿ ಮಳೆ..! ಕರಾವಳಿಗೆ ರೆಡ್ ಅಲರ್ಟ್, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್


ಕರ್ನಾಟಕದಲ್ಲಿ ಮತ್ತೆ ವರುಣಾರ್ಭಟದ ಮುನ್ಸೂಚನೆ ಸಿಕ್ಕಿದೆ..ಮುಂದಿನ ಮೂರು ದಿನ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ..ವಿಶೇಷವಾಗಿ ಕರಾವಳಿ ಕರ್ನಾಟಕದಲ್ಲಿ ಮಳೆ ಅಬ್ಬರಿಸಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ..ದಕ್ಷಿಣ ಒಳನಾಡಿಗೂ ಆರೆಂಜ್ ಅಲರ್ಟ್ ನೀಡಲಾಗಿದೆ..

ಆದ್ರೆ, ಇದೇ ವೇಳೆ ರಾಜ್ಯದ ಮುಂಗಾರು ಮಳೆ ಕೊರತೆ ಆತಂಕ ಹೆಚ್ಚಿಸಿದೆ..ಸೆಪ್ಟೆಂಬರ್‌ನಲ್ಲಿ ಬರೋಬ್ಬರಿ 67% ಮಳೆ ಕೊರತೆ ದಾಖಲಾಗಿದ್ದು, ಜಲಾಶಯಗಳ ನೀರಿನ ಮಟ್ಟವೂ ಕಳೆದ ವರ್ಷಕ್ಕೆ ಹೋಲಿಸಿದ್ರೆ ಗಣನೀಯವಾಗಿ ಕುಸಿದಿದೆ..

 

ಮಳೆ ಎಚ್ಚರಿಕೆ
ಕರ್ನಾಟಕದಲ್ಲಿ ಮತ್ತೆ ವರುಣನ ಆರ್ಭಟಕ್ಕೆ ಮುನ್ಸೂಚನೆ ಸಿಕ್ಕಿದೆ..ಮುಂದಿನ ಮೂರು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ..ಕರಾವಳಿ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ನೀಡಲಾಗಿದೆ..ದಕ್ಷಿಣ ಒಳನಾಡಿನ ಹಲವು ಭಾಗಗಳಿಗೂ ಆರೆಂಜ್ ಅಲರ್ಟ್ ಘೋಷಿಸಲಾಗಿದೆ..ಮಳೆ ಹಿನ್ನೆಲೆಯಲ್ಲಿ ಜನರು ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ..


ಕರ್ನಾಟಕ ಮಳೆ ಮುನ್ಸೂಚನೆ

ಮುಂದಿನ 3 ದಿನ ಭಾರಿ ಮಳೆ

ಕರಾವಳಿ – RED ALERT

ದಕ್ಷಿಣ ಒಳನಾಡು – ORANGE ALERT

ಸೆಪ್ಟೆಂಬರ್‌ನಲ್ಲಿ 67% ಮಳೆ ಕೊರತೆ ಒಂದೆಡೆ ಭಾರಿ ಮಳೆಯ ಎಚ್ಚರಿಕೆ ಮತ್ತೊಂದೆಡೆ ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಆತಂಕ ಮೂಡಿಸಿದೆ..

ಜಲಾಶಯಗಳಲ್ಲೂ ಆತಂಕ
ಮಳೆಯ ಅಭಾವದ ಪರಿಣಾಮ ರಾಜ್ಯದ ಜಲಾಶಯಗಳ ನೀರಿನ ಸಂಗ್ರಹದ ಮೇಲೂ ಪರಿಣಾಮ ಬೀರಿದೆ..ಕಳೆದ ವರ್ಷಕ್ಕೆ ಹೋಲಿಸಿದ್ರೆ ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದೆ..ಸೆಪ್ಟೆಂಬರ್ 21ರಂದು ಕೆಆರ್‌ಎಸ್‌ನಲ್ಲಿ 27.76 ಟಿಎಂಸಿ ನೀರು ಸಂಗ್ರಹವಾಗಿತ್ತು..ಆದ್ರೆ ಇದೇ ದಿನ ಕಳೆದ ವರ್ಷ 47.73 ಟಿಎಂಸಿ ನೀರಿತ್ತು..ಅಂದರೆ, ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಕೆಆರ್‌ಎಸ್‌ನಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕುಸಿದಿದೆ..

 ಉತ್ತರ ಕರ್ನಾಟಕದ ಜಲಾಶಯಗಳ ಸ್ಥಿತಿ
ಆದ್ರೆ ಉತ್ತರ ಕರ್ನಾಟಕದ ಜಲಾಶಯಗಳ ಪರಿಸ್ಥಿತಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದ್ರೆ ತುಸು ಉತ್ತಮವಾಗಿದೆ..ಉತ್ತರ ಕರ್ನಾಟಕದ ಪ್ರಮುಖ ಆಲಮಟ್ಟಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 123 ಟಿಎಂಸಿ ನೀರಿತ್ತು..ಈ ಬಾರಿ ಆಲಮಟ್ಟಿಯಲ್ಲಿ ಸುಮಾರು 115 ಟಿಎಂಸಿ ನೀರು ಸಂಗ್ರಹವಾಗಿದೆ..ಅಂದರೆ, ಉತ್ತರ ಕರ್ನಾಟಕದ ಜಲಾಶಯಗಳಲ್ಲೂ ಕಳೆದ ವರ್ಷಕ್ಕೆ ಹೋಲಿಸಿದ್ರೆ ನೀರಿನ ಸಂಗ್ರಹ ಕಡಿಮೆಯಾಗಿದ್ರೂ, ದಕ್ಷಿಣ ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ಹೋಲಿಸಿದ್ರೆ ಪರಿಸ್ಥಿತಿ ಉತ್ತಮವಾಗಿದೆ..

ಒಟ್ಟಾರೆ ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಆತಂಕ ಮೂಡಿಸಿರುವ ಬೆನ್ನಲ್ಲೇ, ಮುಂದಿನ ಮೂರು ದಿನ ಭಾರಿ ಮಳೆಯ ಮುನ್ಸೂಚನೆ ಸಿಕ್ಕಿದೆ..ಕರಾವಳಿಗೆ ರೆಡ್ ಅಲರ್ಟ್ ಹಾಗೂ ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್ ನೀಡಲಾಗಿದ್ದು, ಮಳೆ ಪರಿಸ್ಥಿತಿ ಮೇಲೆ ಜಿಲ್ಲಾಡಳಿತಗಳು ನಿಗಾ ವಹಿಸಬೇಕಿದೆ..

 

 

 

 

 

 

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES