SOCIAL MEDIA

Newsletter

PARTNER SITES
Select Language Select State

ಒಂದು ಪಕ್ಷದ ಅನುಕೂಲಕ್ಕೆ SIR ಪ್ರಕ್ರಿಯೆ, ರದ್ದು ಪಡಿಸಬೇಕು.. ನಾಳೆ ಬೃಹತ್‌ ಪ್ರತಿಭಟನೆ

ಕಾಕ್ರೋಚ್ ಪಾರ್ಟಿಯ ನಿಲುವು ಅವರಿಗೆ ಬಿಟ್ಟದ್ದು. ನಾವು ಯಾರು ಕೈಜೋಡಿಸ್ತಾರೆ ಅವರನ್ನು ಆಹ್ಚಾನ ಮಾಡುತ್ತೇವೆ. ಗ್ಯಾನೇಶ್ ಅವರನ್ನ ವಜಾಗೊಳಿಸಬೇಕು. ಮೊದಲು ಅವರನ್ನ ಅರೆಸ್ಟ್ ಮಾಡಬೇಕು.

Written By Bhimappa
Published: Sep 25, 2026, 01:13 PM IST | Updated: Sep 25, 2026, 01:18 PM IST
Image Credit: bk_hariprasad
Join

SIR process should be cancelled immediately, massive protest: ಎಸ್‌ಐಆರ್ ವಿಶೇಷ ತೀವ್ರ ಪರೀಕ್ಷರಣೆ ಪ್ರಕ್ರಿಯೆ ರದ್ದು ಪಡಿಸಬೇಕು ಎಂದು ಕಾಂಗ್ರೆಸ್‌ ಮೊದಲಿನಿಂದಲೂ ಹೇಳುತ್ತಾ ಬಂದಿದೆ. ಎಸ್‌ಐಆರ್‌ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ. ಹಾಗಾಗಿ ಮೊದಲು ಎಸ್‌ಐಆರ್ ರದ್ದು ಪಡಿಸಬೇಕು. ಗ್ಯಾನೇಶ್ ಕುಮಾರ್ ಮಾಡಿರುವ ದುರಂತ ಇದು. ಹತ್ತು ತಿಂಗಳಲ್ಲಿ ಇಬ್ಬರು ಆಯುಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಮುಖ್ಯ ಆಯುಕ್ತರ ನಡೆಯ ಬಗ್ಗೆ ಆಕ್ಷೇಪ ಇದೆ. ಒಂದು ರಾಜಕೀಯ ಪಕ್ಷಕ್ಕೆ ಅನುಕೂಲ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಆರೋಪ ಮಾಡಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು, ಗ್ಯಾನೇಶ್ ಕುಮಾರ್ ಮಾಡಿರುವ ದುರಂತದಿಂದ ಹತ್ತು ತಿಂಗಳಲ್ಲಿ ಇಬ್ಬರು ಆಯುಕ್ತರಿಂದ ಆಕ್ಷೇಪ ವ್ಯಕ್ತವಾಗಿದೆ. ಮುಖ್ಯ ಆಯುಕ್ತರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತ ಮಾಡಲಾಗುತ್ತಿದೆ. ಒಂದು ರಾಜಕೀಯ ಪಕ್ಷಕ್ಕೆ ಅನುಕೂಲಕ್ಕಾಗಿ ಇದೆಲ್ಲ ಮಾಡಲಾಗುತ್ತಿದೆ. ಬಿಹಾರದಲ್ಲಿ ಮತ ಪಟ್ಟಿ ಪರಿಷ್ಕರಣೆ ಆಗಿದೆ. ಪಶ್ಚಿಮ ಬೆಂಗಾಳದಲ್ಲಿ 97 ಲಕ್ಷ ಮತದಾರರನ್ನು ತೆಗೆದು ಹಾಕಿದ್ದಾರೆ. ಇಲ್ಲಿ 1.7 ಕೋಟಿ ಮತಗಳನ್ನು ತೆಗೆಯುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ರಾಹುಲ್ ಗಾಂಧಿಯವರು ಸ್ಪಷ್ಟವಾಗಿ ಈ ಹಿಂದೆಯೇ ಹೇಳಿದ್ದರು. ಫೆಬ್ರುವರಿ 25 ರಂದೇ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದರು. ಕೇಂದ್ರ ಚುನಾವಣಾ ಆಯೋಗಕ್ಕೆ ಬರೆದಿದ್ದರು. ಆದರೆ ಆಯೋಗ ರಾಹುಲ್‌ ಗಾಂಧಿ ಅವರ ಪತ್ರಕ್ಕೆ ಗೌರವ ಕೊಟ್ಟಿರಲಿಲ್ಲ. ಪ್ರಜಾಪ್ರಭುತ್ವ, ಸಂವಿಧಾನದ ವಿರುದ್ಧ ಮಾಡಿದ್ದಾರೆ. ಇದನ್ನ ನಾವು ದೇಶದ್ರೋಹ ಅಂತ ಕರೆಯಬೇಕು. ಗ್ಯಾನೇಶ್ ಕುಮಾರ್ ದೇಶದ್ರೋಹ ಮಾಡಿದ್ದಾರೆ. ತಕ್ಷಣ ಅವರನ್ನ ರಾಜೀನಾಮೆ ಪಡೆಯಬೇಕು. ಗ್ಯಾನೇಶ್ ಕುಮಾರ್ ರಾಜೀನಾಮೆ ಪಡೆಯಬೇಕು. ಅವರನ್ನ ತಕ್ಷಣ ಅರೆಸ್ಟ್ ಮಾಡಬೇಕು ಎಂದು ಆರೋಪಿಸಿದ್ದಾರೆ.

ನಾಳೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತೇವೆ. ಬೇರೆ ಪಕ್ಷಗಳಿಗೂ ಆಹ್ವಾನ ನೀಡಿದ್ದೇವೆ. ರಾಜೀನಾಮೆ ಕೊಡುವುವವರೆಗೆ ಪ್ರತಿಭಟನೆ ಮಾಡುವ ನಿರ್ಧಾರ ಮಾಡಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲೂ ನಮ್ಮ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದ್ದೇವೆ. ಆಯೋಗದ ಬಗ್ಗೆ ಮೊದಲೇ ಧ್ವನಿ ಎತ್ತಿದ್ದೇವೆ. ರಾಹುಲ್ ಗಾಂಧಿ ಮೊದಲೇ ಈ ಕುರಿತು ಆರೋಪ ಮಾಡಿದ್ದರು. ಈಗ ಅದರಂತೆಯೇ ನಡೆದಿದೆ. ಇಬ್ಬರು ಆಯುಕ್ತರು ಆಕ್ಷೇಪ ಹೊರ ಹಾಕಿದ್ದಾರೆ. ಮುಖ್ಯ ಆಯುಕ್ತರ ವಿರುದ್ಧ ಹೊರ ಹಾಕಿದ್ದಾರೆ. 10 ತಿಂಗಳಲ್ಲಿ 14 ಬಾರಿ ಆಕ್ಷೇಪ ಮಾಡಿದ್ದಾರೆ ಎಂದು ಹೇಳಿದ್ದಾರೆ. 
 
ಫಾರಂ 6 ಅನ್ನ ಮಾಡಿ ಫೈ ಮಾಡಿದ್ದಾರೆ. ಅಲ್ಲಿ ಅಕ್ರಮವನ್ನ ಮಾಡಿದ್ದಾರೆ. ಮುಖ್ಯ ಆಯುಕ್ತ ಗ್ಯಾನೇಶ್ ಅಕ್ರಮ ವೆಸಗಿದ್ದಾರೆ. ತಕ್ಷಣ ಅವರು ರಾಜೀನಾಮೆ ಕೊಡಬೇಕು. ಇಲ್ಲವೇ ಅವರ ರಾಜೀನಾಮೆ ಪಡೆಯಬೇಕು. ಜೊತೆಗೆ ಕೂಡಲೇ ಅವರನ್ನ ಬಂಧಿಸಬೇಕು. ಯಾರು ಯಾರು ಸ್ವಯಂಪ್ರೇರಿತವಾಗಿ ಬರುತ್ತಾರೆ ಬರಲಿ. ಕಾಕ್ರೋಚ್ ಪಾರ್ಟಿಯ ನಿಲುವು ಅವರಿಗೆ ಬಿಟ್ಟದ್ದು. ನಾವು ಯಾರು ಕೈಜೋಡಿಸ್ತಾರೆ ಅವರನ್ನು ಆಹ್ಚಾನ ಮಾಡುತ್ತೇವೆ. ಗ್ಯಾನೇಶ್ ಅವರನ್ನ ವಜಾಗೊಳಿಸಬೇಕು. ಮೊದಲು ಅವರನ್ನ ಅರೆಸ್ಟ್ ಮಾಡಬೇಕು. ಸಂಖ್ಯಾಬಲ ಇದೆ ಅಂತ ಕೇಂದ್ರ ಅವರನ್ನ ನೇಮಕ ಮಾಡಿದೆ. ಹಾಗಾಗಿ ಅವರೇ ವಾಜಗೊಳಿಸಬೇಕು ಎಂದು ಹೇಳಿದ್ದಾರೆ.

ಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ವಿವಿಧ ರಾಜಕೀಯ ನಾಯಕರು ಮತ್ತು ಸಂಘಟನೆಗಳು ಎಸ್‌ಐಆರ್‌ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದು ಮಾಡಬೇಕು. ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧ ಪಡಿಸಬೇಕು. ಕೆಲವು ಕಡೆ ಅರ್ಹ ಮತದಾರರನ್ನು ಕಡೆಗಣಿಸಲಾಗಿದೆ. ಇದು ಹೀಗೆ ಆದರೆ ಒಂದು ಕಡೆ ಮಾತ್ರ ಎಸ್‌ಐಆರ್‌ ಒಲವು ಹೊಂದಿರುತ್ತದೆ. ಎಸ್‌ಐಆರ್‌ ಪ್ರಕ್ರಿಯೆ ಬಿಟ್ಟು ಮತದಾರರ ಪಟ್ಟಿಯನ್ನು ಹೊಸದಾಗಿ ರೆಡಿ ಮಾಡಬೇಕು ಎಂದು ಭಾರತದ ಚುನಾವಣಾ ಆಯೋಗಕ್ಕೆ ಈ ಹಿಂದೆಯೇ ಒತ್ತಾಯ ಮಾಡಲಾಗಿದೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES