‘ನನ್ನ ಮೇಲಿನ ಆರೋಪಗಳೆಲ್ಲ ಸುಳ್ಳು’ ಎಂದ ಪವಿತ್ರಾ ಗೌಡ! ಪವಿತ್ರಾ ಗೌಡಗೆ ಇಂದು ಜಾಮೀನು ಭವಿಷ್ಯ ನಿರ್ಧಾರ?
Pavithra Gowda: ಬ್ಯಾರಕ್ ಬದಲಾಯಿಸಿಕೊಳ್ಳುವಲ್ಲಿ ಪವಿತ್ರಾ ಗೌಡಗೆ ಕೊಂಚ ರಿಲೀಫ್ ಸಿಕ್ಕಿದೆ..ಆದ್ರೆ ಬ್ಯಾರಕ್ ಬದಲಾದಷ್ಟು ಸುಲಭವಾಗಿ ಬೇಲ್ ಸಿಗುತ್ತಾ..? ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಹಾಗಾದ್ರೆ ಪವಿತ್ರಾ ಗೌಡ ಜಾಮೀನು ಅರ್ಜಿಯಲ್ಲಿ ಏನೆಲ್ಲಾ ಹೇಳಿದ್ದಾರೆ..?ಬ್ಯಾರಕ್ ಬದಲಾವಣೆಗೆ ಕೋರ್ಟ್ ಕೊಟ್ಟಿದ್ದ ಆದೇಶ ಏನು..?ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ..
ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣ ಸಂಬಂಧಪಟ್ಟಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana agrahara jail) ಪವಿತ್ರಾ ಗೌಡಗೆ ಕೊಂಚ ರಿಲೀಫ್ ಸಿಕ್ಕಂತೆ ಆಗಿದೆ.
ಪರಪ್ಪನ ಅಗ್ರಹಾರದಲ್ಲಿ 30 ಮಂದಿ ಕೈದಿಗಳ ನಡುವೆ ಸಂಕಷ್ಟಕ್ಕೆ ಪವಿತ್ರಾ ಗೌಡ ಸಿಲುಕಿದ್ದರು. ಇದೀಗ ಆ ಬ್ಯಾರಕ್‌ನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಇದೀಗ ಆರೋಪಿಯನ್ನ ಜೈಲು ಅಧಿಕಾರಿಗಳು ಮತ್ತೊಂದು ಬ್ಯಾರಕ್‌ಗೆ ಶಿಫ್ಟ್ ಮಾಡಿದ್ದು, ಪವಿತ್ರಾ ಗೌಡಗೆ ಕೊಂಚ ರಿಲೀಫ್ ಸಿಕ್ಕಿದೆ.
ಪವಿತ್ರಾ ಗೌಡಗೆ ಕೊಂಚ ರಿಲೀಫ್
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡಗೆ ಬ್ಯಾರಕ್ ವಿಚಾರದಲ್ಲಿ ಕೊಂಚ ರಿಲೀಫ್ ಸಿಕ್ಕಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸುಮಾರು 30 ಮಂದಿ ಮಹಿಳಾ ಕೈದಿಗಳಿದ್ದ ಬ್ಯಾರಕ್‌ನಲ್ಲಿ ಪವಿತ್ರಾ ಗೌಡ ಅವರನ್ನು ಇರಿಸಲಾಗಿತ್ತು. ಅಲ್ಲಿನ ಸ್ವಚ್ಛತೆ, ಶೌಚಾಲಯ ಸೇರಿದಂತೆ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಉಲ್ಲೇಖಿಸಿ ಪವಿತ್ರಾ ಗೌಡ ಕೋರ್ಟ್ ಮೊರೆ ಹೋಗಿದ್ದರು.
ಪವಿತ್ರಾ ಗೌಡ ಮನವಿಯನ್ನು ಪರಿಗಣಿಸಿದ್ದ ಸೆಷನ್ಸ್ ಕೋರ್ಟ್, ಕಡಿಮೆ ಜನಸಾಂದ್ರತೆ ಇರುವ ಬ್ಯಾರಕ್‌ಗೆ ಶಿಫ್ಟ್ ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚಿಸಿತ್ತು. ಇದೀಗ ಕೋರ್ಟ್ ಸೂಚನೆಯಂತೆ ಪವಿತ್ರಾ ಗೌಡ ಅವರನ್ನು ಐವರು ಸಜಾಬಂಧಿಗಳಿರುವ ಬ್ಯಾರಕ್‌ಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ. ಅಂದಹಾಗೆ ಬ್ಯಾರಕ್ ಬದಲಾವಣೆಗೆ ಕಾರಣವಾಗಿದ್ದು ಆರೋಗ್ಯ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೆಂದು ಪವಿತ್ರಾ ಗೌಡ ಪರ ವಕೀಲರು ಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಇನ್ನು ಇದೇ ವೇಳೆ ಪವಿತ್ರಾ ಗೌಡ ಜಾಮೀನಿಗಾಗಿ ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದಾರೆ. ಅರೆಸ್ಟ್ ಆಗಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಆರೋಗ್ಯ ಸಮಸ್ಯೆಗಳನ್ನು ಕೂಡ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.ಅಲ್ಲದೇ ತಮ್ಮ ಮೇಲಿರುವ ಆರೋಪಗಳನ್ನು ನಿರಾಕರಿಸಿರುವ ಪವಿತ್ರಾ ಗೌಡ, ಆರೋಪಗಳು ಸುಳ್ಳು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪವಿತ್ರಾಗೌಡ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ನಡೆಯಲಿದೆ.. ಹೀಗಾಗಿ ಎಲ್ಲರ ಚಿತ್ತ ಇದೀಗ ಕೋರ್ಟ್ ವಿಚಾರಣೆಯತ್ತ ನೆಟ್ಟಿದೆ
ಇದರ ಮಧ್ಯೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ.
ಪ್ರಕರಣದ ಆರೋಪಿ ಸಂಖ್ಯೆ 14 ಆಗಿರುವ ಪ್ರದೂಷ್‌ಗೆ ಮಾಫಿ ಸಾಕ್ಷಿಯಾಗಲು ನ್ಯಾಯಾಲಯ ಅನುಮತಿ ನೀಡಿದೆ. ಪ್ರಕರಣದ ಬಗ್ಗೆ ಸಂಪೂರ್ಣ ಹಾಗೂ ಸತ್ಯವಾದ ಮಾಹಿತಿ ನೀಡುವುದಾಗಿ ಪ್ರದೂಷ್ ಮನವಿ ಮಾಡಿದ್ದರು.
ಬ್ಯಾರಕ್ ಬದಲಾವಣೆಯಲ್ಲಿ ಪವಿತ್ರಾ ಗೌಡಗೆ ರಿಲೀಫ್ ಸಿಕ್ಕಿದೆ.. ಆದ್ರೆ ಜಾಮೀನು ವಿಚಾರದಲ್ಲಿ ಕೋರ್ಟ್‌ನಿಂದ ಏನು ತೀರ್ಪು ಬರುತ್ತೆ ಅನ್ನೋದು ಸದ್ಯದ ಕುತೂಹಲ ಹೆಚ್ಚಿದೆ. ಪವಿತ್ರಾಗೌಡ ಅವರನ್ನು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಸೆಷನ್ಸ್ ಕೋರ್ಟ್ ಆದೇಶ ಹೊರಡಿತ್ತು.
ಕೋರ್ಟ್ ಸೂಚನೆಯಂತೆ ನಾಲ್ಕೈದು ಮಂದಿ ಕೈದಿಗಳಿರುವ ಬ್ಯಾರಕ್‌ಗೆ ಪವಿತ್ರಾಗೌಡ ಅವರನ್ನು ಶಿಫ್ಟ್ ಮಾಡಲಾಗಿದೆ.. ಕೋರ್ಟ್ ಆದೇಶದಂತೆ ಕಡಿಮೆ ಜನಸಾಂದ್ರತೆ ಇರುವ ಬ್ಯಾರಕ್‌ಗೆ ಇದೀಗ ಪವಿತ್ರಾಗೌಡ ಅವರನ್ನು ಶಿಪ್ಟ್ ಮಾಡಲಾಗಿತ್ತು. ದರ್ಶನ್ ಗೆಳತಿಗೆ ಇದು ಕೊಂಚ ಸಮಾಧಾನ ತಂದಿದೆ.
ಹೌದು ಪವಿತ್ರಾ ಗೌಡಗೆ ಇಷ್ಟಪಟ್ಟಂತೆ ಬ್ಯಾರಕ್ ಸಿಕ್ಕಿರಬಹುದು. ಆದರೆ ಬ್ಯಾರಕ್ ಸಿಕ್ಕಿದಷ್ಟು ಸುಲಭವಾ ಬೇಲ್ ಸಿಗೋದು? ಸದ್ಯ ಪವಿತ್ರಾ ಗೌಡ ಸಲ್ಲಿಸಿದ ಅರ್ಜಿಯ ವಿಚಾರಣೆಯೂ ಇಂದೇ ನಡೆಯಲಿದೆ.
ರೇಣುಕಾಸ್ವಾಮಿಯ ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪವಿತ್ರಾ ಗೌಡ ಅರೆಸ್ಟ್ ಆಗಿ ಒಂದು ವರ್ಷ ಕಳೆದ ಹಿನ್ನಲೆ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ತನ್ನ ಆರೋಗ್ಯ ಸಮಸ್ಯೆಯೂ ಇದೆ. ಹಾಗೆಯೇ ತನ್ನ ಮೇಲಿನ ಆರೋಪಗಳೆಲ್ಲವು ಸುಳ್ಳು ಎಂದು ಅರ್ಜಿಯಲ್ಲಿ ಪವಿತ್ರಾ ಗೌಡ ಹೇಳಿದ್ದಾರೆ. ಈ ಅರ್ಜಿಯನ್ನು 59ನೇ ಸೆಷನ್ಸ್ ಕೋರ್ಟ್ ಇಂದು ವಿಚಾರಣೆ ನಡೆಸಲಿದೆ.
ಪ್ರಜ್ವಲ್ ರೇವಣ್ಣ ಬಳಿ ಫೋನ್ ಪತ್ತೆಯಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಹಾಗೂ ಕೈದಿ ಬ್ಯಾರಕ್ಗಳನ್ನ ಬದಲಿಸಲಾಯ್ತು. ಈ ವೇಳೆ ಪವಿತ್ರಾ ಗೌಡ ಅವರನ್ನ 30 ಮಂದಿ ಇರುವ ಸೆಲ್ಗೆ ಶಿಫ್ಟ್ ಮಾಡಿದ್ರು. ಅಲ್ಲೇ ಪವಿತ್ರಾ ಗೌಡಗೆ ನಿಜ ನರಕದ ದರ್ಶನವಾಗಿದೆ. ಬೇಸತ್ತ ಪವಿತ್ರಾ ಬೇರೆ ಸೆಲ್ಗೆ ಶಿಫ್ಟ್ ಮಾಡುವಂತೆ ಕೋರ್ಟ್ ಮೊರೆ ಹೋಗಿದ್ರು.
ಪವಿತ್ರಾ ಗೌಡ ಅವರನ್ನ ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿತ್ತು. ಕೋರ್ಟ್ ಸೂಚನೆಯಂತೆ ನಾಲ್ಕೈದು ಮಂದಿ ಕೈದಿಗಳಿರುವ ಬ್ಯಾರಕ್‌ಗೆ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದೆ. ಕೋರ್ಟ್ ಆದೇಶದಂತೆ ಕಡಿಮೆ ಜನಸಾಂದ್ರತೆ ಇರುವ ಬ್ಯಾರಕ್‌ಗೆ ಇದೀಗ ಪವಿತ್ರಾ ಗೌಡ ಅವರನ್ನ ಶಿಫ್ಟ್ ಮಾಡಲಾಗಿದ್ದು, ದರ್ಶನ್ ಗೆಳತಿಗೆ ಇದು ಕೊಂಚ ಸಮಾಧಾನ ತಂದಿದೆ.