Nandini milk price increase: ರಾಜ್ಯದ ಜನರಿಗೆ ಬೆಲೆ ಏರಿಕೆ ಶಾಕ್ ಉಂಟಾಗಿದೆ. ನಂದಿನಿ ಹಾಲಿ ದರದಲ್ಲಿ ಭಾರೀ ಏರಿಕೆ ಫಿಕ್ಸ್ ಆಗಿದ್ದು, ಹಾಲು ಉತ್ಪಾದಕರ ಸಂಘಗಳ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಹಾಲಿನ ದರದಲ್ಲಿ ಭಾರೀ ಏರಿಕೆ ಮಾಡಲು ನಿರ್ಧರಿಸಿದೆ. ಎಷ್ಟು ರೂಪಾಯಿ ಹಾಲಿ ದರ ಹೆಚ್ಚುತ್ತೆ, ಕೆಲವು ತಿಂಗಳ ಹಿಂದಷ್ಟೇ ಹಾಲಿನ ಬೆಲೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಹಾಲಿನ ದರ ಹೆಚ್ಚಳ ಮಾಡುತ್ತಿರುವುದು ಬೆಂಗಳೂರು ನಗರ ವಾಸಿಗಳಿಗೆ ಬಿಗ್ ಶಾಕ್ ಎಂತಲೇ ಹೇಳಬಹುದು. ನಂದಿನಿ ಹಾಲಿನ ಬೆಲೆಯಲ್ಲಿ ದೊಡ್ಡ ಮೊತ್ತದಲ್ಲಿ ಏರಿಕೆ ಮಾಡಲಾಗುತ್ತಿದೆ. ಹಾಲಿನ ದರ ಹೆಚ್ಚಳ ಮಾಡಿದ್ದರಲ್ಲಿ ಹೆಚ್ಚುವರಿ ಮೊತ್ತವನ್ನು ರೈತರು, ಹಾಲಿನ ಒಕ್ಕೂಟಗಳಿಗೆ ಹಂಚಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯದ ಜನತೆಗೆ ಬೆಲೆ ಏರಿಕೆ ಬಿಸಿ ಮತ್ತಷ್ಟು ತಟ್ಟುವ ಹಂತ ತಲುಪಿದೆ. ಹಾಲು ಉತ್ಪಾದನಾ ಹಾಗೂ ನಿರ್ವಹಣಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹಾಲು ಒಕ್ಕೂಟಗಳ ಬೇಡಿಕೆಯಂತೆ ರಾಜ್ಯ ಸರ್ಕಾರವು ನಂದಿನಿ ಹಾಲಿನ ದರವನ್ನು ಲೀಟರ್‌ಗೆ 4 ರಿಂದ 5 ರೂಪಾಯಿಗಳಷ್ಟು ಹೆಚ್ಚಿಸಲು ಸಮ್ಮತಿಸಿದೆ. ಇದರಿಂದ ಪ್ರಸ್ತುತ 46 ಇರುವ ದರವು 50 ರಿಂದ 51ಕ್ಕೆ ಏರಿಕೆಯಾಗಲಿದೆ. ಈ ಹೆಚ್ಚುವರಿ ಮೊತ್ತವನ್ನು ರೈತರು ಮತ್ತು ಒಕ್ಕೂಟಗಳಿಗೆ 70:30ರ ಅನುಪಾತದಲ್ಲಿ ಹಂಚಲಾಗುವುದು, ಈ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ.
ಹಾಲಿನ ಮಾರಾಟ ದರವನ್ನು ಲೀಟರ್‌ಗೆ 8 ರಿಂದ 10 ರೂ. ಮತ್ತು ಹೈನುಗಾರರಿಗೆ ನೀಡುವ ಪ್ರೋತ್ಸಾಹಧನವನ್ನು 8 ರೂಪಾಯಿಗಳಿಗೆ ಹೆಚ್ಚಳ ಮಾಡುವಂತೆ, ಒತ್ತಾಯಿಸಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ರೈತರೊಂದಿಗೆ ಮಂಗಳವಾರವಷ್ಟೇ ಪ್ರತಿಭಟನೆ ನಡೆಸಿದರು. ಹಾಗೆ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಈ ಸಂಧರ್ಭದಲ್ಲಿ ಹಾಲು ರೇಟ್ ಹೈಕ್ ಮಾಡುವ ಭರವಸೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೀಡಿದರು.
ಸದ್ಯ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸರಕಾರ, ಆರ್ಥಿಕವಾಗಿ ಗ್ರಾಹಕರಿಗೂ ಹೊರೆಯಾಗದಂತೆ ಹಾಗೂ ರೈತರಿಗೂ ಅನುಕೂಲವಾಗುವಂತೆ ಹಾಲಿನ ದರವನ್ನು ಲೀಟರ್‌ಗೆ 4 ರಿಂದ 5 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದೆ ಅನ್ನೋ ಮಾಹಿತಿ ಹೊರ ಬಂದಿದೆ. ಹಾಲಿನ ದರ ಪರಿಷ್ಕರಣೆ ಸಂಬಂಧ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ ಸೂಚಿಸಿದ್ದಾರೆ. ಹೀಗಾಗಿ ಇಂದು ಒಕ್ಕೂಟ ಮತ್ತೆ ಸಭೆ ಕರೆದಿದೆ ಎಂದು ಗೊತ್ತಾಗಿದೆ
ಸದ್ಯ ಈ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಮಾತ್ರ ಬರೆ ಎಳೆದಾಂತಾಗಿದೆ. ಯಾಕಂದ್ರೆ ಪ್ರತಿಯೊಂದರ ಬೆಲೆ ಏರಿಕೆಯಾಗ್ತಿದ್ದು, ಈ ಹಾಲಿನ ದರ ಕೂಡ ಅಧಿಕೃತವಾಗಿ ಏರಿಕೆಯಾದರೆ ಕಾಫಿ ಟೀ ಬೆಲೆ ಕೂಡ ಏರಿಕೆ ಮಾಡುವ ಸಂಭವ ಇದೆ. ಹಾಲಿನ ದರ ಹೆಚ್ಚಳವಾದರೆ ಸಾಮಾನ್ಯವಾಗಿ ಕಾಫಿ, ಟೀ ದರ ಹೆಚ್ಚಳವಾಗುವುದು ಸಾಮಾನ್ಯ. ಸದ್ಯ ನಗರದಲ್ಲಿ ಬಹುತೇಕ್ ಕಡೆ ಚಹಾ, ಕಾಫಿ ಎಲ್ಲ 10 ರೂಪಾಯಿಗೆ ಸಿಗುತ್ತಿದೆ. ಒಂದೇ ಬಾರಿ ಹಾಲಿನ ದರ 4 ರಿಂದ 5 ರೂಪಾಯಿ ಹೆಚ್ಚಳ ಮಾಡಿದರೆ ಚಹಾ, ಕಾಫಿ ಬೆಲೆಯಲ್ಲಿ ಮೂರರಿಂದ ನಾಲ್ಕು ರೂಪಾಯಿ ಅಧಿಕ ಮಾಡುವುದರಲ್ಲಿ ಯಾವುದೇ ಅನುಮಾನ ಬೇಡ. ಈ ಹೊರೆ ಮಾತ್ರ ನಗರ ವಾಸಿಗಳ ಮೇಲೆ ಬೀಳುತ್ತದೆ. ಮನೆ ಬಾಡಿಗೆ ಇರುವವರ ಮೇಲೆ ಇದು ಮತ್ತಷ್ಟು ಹೊರೆ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಏಕೆಂದರೆ ಮನೆ ಬಾಡಿಗೆ, ಕರೆಂಟ್, ವಾಟರ್ ಬಿಲ್ ಸೇರಿ ಮನೆ ಖರ್ಚುಗಳನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡರೆ ನಗರದ ಜೀವನವೇ ಬೇಡ ಎನಿಸುತ್ತದೆ.