SOCIAL MEDIA

Newsletter

PARTNER SITES
Select Language Select State

ರೈತರಿಗೆ 7, ಒಕ್ಕೂಟಗಳಿಗೆ 3.. ರಾಜ್ಯದಲ್ಲಿ ನಂದಿನಿ ಹಾಲಿನ ದರ ಬರೋಬ್ಬರಿ 10 ರೂಪಾಯಿ ಹೆಚ್ಚಳ?

ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಇದರಿಂದ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಬೇಕು.

Written By Bhimappa
Published: Sep 26, 2026, 12:54 PM IST | Updated: Sep 26, 2026, 12:58 PM IST
Image Credit: nandini_milk_price
Join

Nandini milk price likely to increase by Rs 10 per litre: ಬೇರೆ ರಾಜ್ಯದಲ್ಲಿ ರೈತರಿಗೆ 35 ರೂಪಾಯಿಯಿಂದ 41 ರೂಪಾಯಿ ಕೊಡಲಾಗುತ್ತಿದೆ. ಇವತ್ತು ಕುಡಿಯುವ ನೀರಿನ ಪ್ಯಾಕೇಜ್ ಬಾಟಲ್ ಬೆಲೆ 25 ರೂಪಾಯಿ ಆಗಿದೆ. ಅದಕ್ಕೆ ಯಾರು ವಿರೋಧ ಮಾಡುತ್ತಿಲ್ಲ. ಆದರೆ ಹಾಲಿನ ದರ ಜಾಸ್ತಿ ಮಾಡಿದರೆ ಸಾಕು ಎಲ್ಲರೂ ನೆಗೆಟಿವ್ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಸದ್ಯ ರೈತರು ಸಂಕಷ್ಟದಲ್ಲಿ ಇದ್ದಾರೆ. ಗ್ರಾಹಕರು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು. ಉತ್ಪಾದನಾ ವೆಚ್ಚ ಅಧಿಕವಾಗಿದೆ. ಇದರಿಂದ ಬೆಲೆ ಏರಿಕೆ ಅನಿವಾರ್ಯ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನ ಭೇಟಿ ಮಾಡಿದ ಬಳಿಕ ಬಮೂಲ್‌ ಅಧ್ಯಕ್ಷ ಡಿ.ಕೆ ಸುರೇಶ್‌ ಅವರು ಹೇಳಿದ್ದಾರೆ.  

ಬೆಂಗಳೂರಿನ ಸದಾಶಿವನಗರದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರನ್ನ ಭೇಟಿ ಮಾಡಿದ ಬಳಿಕ ಬಮೂಲ್‌ ಅಧ್ಯಕ್ಷ ಡಿ.ಕೆ ಸುರೇಶ್‌ ಅವರು ಮಾತನಾಡಿ, ಹಾಲಿನ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಸಹಾಯ ಧನ ಹೆಚ್ಚಳದ ಕುರಿತು ಯಾವುದೇ ಚರ್ಚೆ ಆಗಿಲ್ಲ. 5 ರೂಪಾಯಿ ಸಹಾಯಧನ ಈಗಾಗಲೇ ಸರ್ಕಾರ ನೀಡುತ್ತಿದೆ. ಇದಕ್ಕಾಗಿ ಸರ್ಕಾರ ವಾರ್ಷಿಕ 2.5 ಲಕ್ಷ ಕೋಟಿ ಖರ್ಚು ಮಾಡಲಾಗುತ್ತಿದೆ. ಗ್ರಾಹಕರು ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು ಆಂತ ವಿನಂತಿ ಮಾಡಿಕೊಳ್ಳುತ್ತೇನೆ. ನಮ್ಮ ಸಮಸ್ಯೆಗಳನ್ನು ಸಿಎಂ ಬಳಿ ಹೇಳಿಕೊಂಡಿದ್ದೇವೆ. ಸಿಎಂ ಡಿ.ಕೆ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ‌ ಎಂದು ಹೇಳಿದ್ದಾರೆ.

ಬಮೂಲ್‌ ಅಧ್ಯಕ್ಷ ಡಿ.ಕೆ ಸುರೇಶ್‌ ಅವರು ಮುಂದುವರೆದು ಮಾತನಾಡಿ, ಇವತ್ತು ನಮ್ಮ ಹಾಲಿನ ಒಕ್ಕೂಟಗಳು ನಷ್ಟದಲ್ಲಿವೆ. ಸಕ್ಕರೆ ಮೈದಾ ಸೇರಿದಂತೆ ಉತ್ಪನ್ನಗಳು ಹೆಚ್ಚಳದಿಂದ ನಮಗೆ ನಷ್ಟ ಆಗುತ್ತಿದೆ. ಬೇರೆ ರಾಜ್ಯಗಳು ಈಗಾಗಲೇ ಹಾಲಿನ ದರ ಹೆಚ್ಚಳ ಮಾಡಿವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಹೆಚ್ಚಳ ಮಾಡುವ ಭರವಸೆಯನ್ನು ಸಿಎಂ ಡಿ.ಕೆ ಶಿವಕುಮಾರ್‌ ಅವರು ನೀಡಿದ್ದಾರೆ. ಯುದ್ದದಿಂದ ಡಿಸೇಲ್ ಬೆಲೆ ಹೆಚ್ಚಾಗಿ ಸಾಗಣೆ ವೆಚ್ಚ ಹೆಚ್ಚಾಗಿದೆ. 10 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ರೈತರಿಗೆ 7 ರೂಪಾಯಿ ಒಕ್ಕೂಟಗಳಿಗೆ 3 ರೂಪಾಯಿ ಸಿಗಲಿದೆ ಎಂದು ಹೇಳಿದ್ದಾರೆ.

ಕೋಮಲ್ ಅಧ್ಯಕ್ಷ ಕೆ.ವೈ ನಂಜುಂಡೇಗೌಡ ಅವರು ಮಾತನಾಡಿ, ಇವತ್ತು ಬೇರೆ ರಾಜ್ಯದ ರೈತರಿಗೂ ನಮ್ಮ ರೈತರಿಗೂ ಸಿಗುತ್ತಿರುವುದು ಬೆಲೆಯಲ್ಲಿ ವ್ಯತ್ಯಾಸ ಇದೆ. ಇವತ್ತು ನಮ್ಮ ರೈತರಿಗೆ 10 ರೂಪಾಯಿ ಕಡಿಮೆ ಕೊಡಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ಇದರಿಂದ ಹಾಲಿನ ದರ ಹೆಚ್ಚಳ ಮಾಡಿ ರೈತರಿಗೆ ಅನುಕೂಲ ಮಾಡಬೇಕು. ಈ ಕುರಿತು ಸಿಎಂ ಡಿ.ಕೆ ಶಿವಕುಮಾರ್‌ಗೆ ಮನವಿ ಮಾಡಲಾಗಿದೆ. ಸಿಎಂ ಡಿ.ಕೆ ಶಿವಕುಮಾರ್‌ ಶೀಘ್ರವೇ ನಮ್ಮ ಬೇಡಿಕೆ ಈಡೇರಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ವಿವಿಧ ಹಾಲು ಉತ್ಪಾಕರ ಸಂಘಗಗಳು ಸೇರಿದಂತೆ ಒಟ್ಟು 16 ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳು ಹಾಲಿನ ದರವನ್ನು ಪ್ರತಿ ಲೀಟರ್‌ಗೆ 10 ರೂಪಾಯಿ ಹೆಚ್ಚಳ ಮಾಡುವಂತೆ ಸಿಎಂ ಡಿ.ಕೆ ಶಿವಕುಮಾರ್‌ ಅವರ ಮುಂದೆ ಬೇಡಿಕೆ ಇಟ್ಟಿವೆ. ಈಗಾಗಲೇ ಸರ್ಕಾರ ಹಾಲಿನ ದರ ಅಧಿಕ ಮಾಡುವುದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಇಂದಿನ ಸಭೆ ಬಳಿಕ ದರ ಏರಿಕೆಯ ಕುರಿತು ಅಧಿಕೃತವಾದ ಮಾಹಿತಿ ಹೊರ ಬೀಳಲಿದೆ. ಕೇವಲ ಹಾಲಿನ ದರ ಹೆಚ್ಚಳ ಮಾಡಿದರೆ, ತುಪ್ಪ, ಬೆಣ್ಣೆ, ಮೊಸರು ಸೇರಿ ನಂದಿನಿಯ ಎಲ್ಲ ಉತ್ಪನ್ನಗಳ ದರ ಏರಿಕೆ ಆಗಲಿದೆ.                          

ಸದ್ಯ ಸರ್ಕಾರ ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗುತ್ತಿದೆ ಎಂದು ಹೇಳುತ್ತಿದೆ. ಒಂದು ಬಾರಿ ಬೆಲೆ ಹೆಚ್ಚಳಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕರೆ ನಂದಿನ ಹಾಲಿನ ಉತ್ಪನ್ನಗಳು ಎಲ್ಲ ಜಾಸ್ತಿ ಆಗಲಿವೆ. ಮೊಸರು, ತುಪ್ಪ, ಕೊವ, ಬೆಣ್ಣೆ ಸೇರಿದಂತೆ ಎಲ್ಲ ಉತ್ಪನ್ನಗಳ ಬೆಲೆ ಗಗನಕ್ಕೆ ಏರಲಿವೆ. ಇದು ಸಾಮಾನ್ಯ ಜನರ ಮೇಲೆ ದೊಡ್ಡ ಹೊರೆ ಬೀಳಲಿದೆ. ಏಕೆಂದರೆ ಒಂದೇ ಬಾರಿ ಪ್ರತಿ ಲೀಟರ್‌ ಹಾಲಿಗೆ 10 ರೂಪಾಯಿ ಹೆಚ್ಚಳ ಎಂದರೆ ಸಾಮಾನ್ಯವಲ್ಲ. ಈ ಮೊದಲಿ ಪೈಸೆ, ಒಂದು, ಎರಡು ರೂಪಾಯಿಗಳ ಮಟ್ಟದಲ್ಲಿ ಹಾಲಿನ ದರಗಳನ್ನು ಅಧಿಕ ಮಾಡಲಾಗುತ್ತಿತ್ತು. ಆದರೆ ಈಗ ಏಕಾಏಕಿ 10 ರೂಪಾಯಿಗಳು ಎಂದರೆ ಗ್ರಾಹಕರು ಬೇರೆ ಕಂಪನಿಗಳ ಹಾಲಿನ ಪಾಕೇಟ್‌ಗಳಿಗೆ ಮೊರೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸರ್ಕಾರ ದರವನ್ನು ನೋಡಿಕೊಂಡು ಅನುಕೂಲವಾಗುವ ರೀತಿಯಲ್ಲಿ ಹೆಚ್ಚಳ ಮಾಡಿದರೆ ಉತ್ತಮ ಎನ್ನಬಹುದು.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES