Nandini milk price hiked: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಮುನ್ಸೂಚನೆ ಸಿಕ್ಕಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. ಪ್ರತಿ ಲೀಟರ್‌ಗೆ 8 ರಿಂದ 10 ರೂಪಾಯಿ ಹೆಚ್ಚಳ ಮಾಡುವಂತೆ ಜಿಲ್ಲಾ ಹಾಲು ಒಕ್ಕೂಟಗಳು ಪಟ್ಟು ಹಿಡಿದಿದೆ. ಇದಕ್ಕೆ ಹಾಲು ಒಕ್ಕೂಟಗಳಿಗೆ ಸಿಎಂ ಡಿ.ಕೆ ಶಿವಕುಮಾರ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸದ್ಯ ಇದರ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಒಕ್ಕೂಟ ಕೂಡ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಹುತೇಕ ಖಚಿತ!
ಹಾಲಿನ ದರ ಮಿತವಾಗಿ ಏರಿಸಿ.. ಸಿಎಂಗೆ ಪತ್ರ ಬರೆದ ಹೋಟೆಲ್ ಸಂಘ..
ಬರದ ಬಿಸಿಯಿಂದ ಕಂಗಾಲಾಗಿರುವ ಹೈನುಗಾರರಿಗೆ ಆಸರೆಯಾಗಲು ಹಾಗೂ ಹಾಲಿನ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ದರ ಹೆಚ್ಚಳ ಮಾಡಲು ಕೆಎಂಎಫ್ ಹಾಗೂ 16 ಜಿಲ್ಲಾ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಮನವಿ ಮಾಡಿದೆ. ಹೀಗಾಗಿ ಹಾಲಿನ ದರ ಮಿತವಾಗಿ ಏರಿಸಿ ಎಂದು ಹೋಟೆಲ್ ಸಂಘ ಪತ್ರ ಬರೆದಿದೆ. ಈಗಾಗಲೇ ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ. 8 ರಿಂದ 10 ರೂಪಾಯಿ ದರ ಏರಿಕೆ ಮಾಡಿದರೆ, ಮತ್ತೆ ಕಾಫಿ ಟೀ, ಬೆಲೆ ಏರಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತೆ. ಹೀಗಾಗಿ 2-3 ರೂಪಾಯಿ ಮಾಡಿ ಎಂದು ಮನವಿ ಮಾಡಿದ್ದಾರೆ.
ಸದ್ಯ ಕರ್ನಾಟಕದ ಬಹುತೇಕ ಹೋಟೆಲ್, ಬೇಕರಿಯವರು ನಂದಿನಿ ಹಾಲಿನ ಮೇಲೆಯೇ ಹೆಚ್ಚಿನ ಡಿಪೆಂಡ್ ಆಗಿವೆ. ದೊಡ್ಡ ಪ್ರಮಾಣದ ದರ ಏರಿಸಿದ್ರೆ ಗ್ರಾಹಕರ ಮೇಲೆ ಹೊರೆ ಹಾಕೋದು ಅನಿವಾರ್ಯವಾಗುತ್ತೆ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದರ ಏರಿಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಒಂದು ವೇಳೆ ದರ ಏರಿಕೆ ಮಾಡಿದಾರೆ ಹಾಲಿನಿಂದ ಮಾಡುವ ಉತ್ಮನ್ನಗಳಾದ ಟೀ, ಕಾಫಿ, ಮಾಲ್ಟ್ ಎಲ್ಲಾದಕ್ಕೂ ದರ ಏರಿಕೆ ಆಗುವುದು ಅನಿವಾರ್ಯ ಆಗಲಿದೆ.
ಸದ್ಯ ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ದರವನ್ನು 8 ರಿಂದ 10 ರೂಪಾಯಿ ಹೆಚ್ಚಳ ಮಾಡಬೇಕು ಹಾಗೂ ರೈತರಿಗೆ ನೀಡುವ ಪ್ರೋತ್ಸಾಹ ಧನವನ್ನು 8 ರೂಪಾಯಿಗೆ ಏರಿಕೆ ಮಾಡಬೇಕು ಎಂದು ಪಟ್ಟು ಹಿಡಿದಿವೆ. ಆದರೆ, ಏಕಾಏಕಿ ಇಷ್ಟೊಂದು ದರ ಹೆಚ್ಚಿಸಿದರೆ ಗ್ರಾಹಕರಿಗೆ ಭಾರೀ ಹೊರೆಯಾಗಲಿದೆ. ಹೀಗಾಗಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ದರ ಏರಿಕೆ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.
ಒಂದೆಡೆ ಬರದ ಛಾಯೆಯಿಂದ ಸಂಕಷ್ಟದಲ್ಲಿರುವ ಹೈನುಗಾರರ ಹಿತ ಕಾಯಬೇಕಾದ ಜವಾಬ್ದಾರಿ ಸರ್ಕಾರದ ಮೇಲಿದ್ದರೆ, ಇನ್ನೊಂದೆಡೆ ಗ್ರಾಹಕರ ಜೇಬಿಗೆ ಕತ್ತರಿ ಬೀಳದಂತೆ ನೋಡಿಕೊಳ್ಳಬೇಕಾದ ಸವಾಲಿದೆ. ಹೀಗಾಗಿ, ಲೀಟರ್‌ಗೆ 4 ರಿಂದ 5 ರೂಪಾಯಿ ಹೆಚ್ಚಳ ಮಾಡುವ ಮೂಲಕ ಎರಡೂ ಕಡೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ ಅನ್ನೋ ಮಾಹಿತಿ ತಿಳಿದು ಬಂದಿದೆ.
ಹಾಲಿನ ದರ ಹೆಚ್ಚಳ ಮಾಡಿದರೆ ಒಂದಲ್ಲ ಒಂದು ವಸ್ತುವಿನ ದರ ಜಾಸ್ತಿ ಆಗುತ್ತದೆ. ಇದು ಜನ ಸಾಮಾನ್ಯರ ಮೇಲೆ ದೊಡ್ಡ ಹೊರ ಆಗುತ್ತದೆ. ಇದೆಲ್ಲವನ್ನು ಮನಗಂಡು ಸರ್ಕಾರ ಉತ್ತಮ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಒಂದೇ ಸಲ 10 ರೂಪಾಯಿ ಅಂದರೆ ಎಲ್ಲರಿಗೂ ತುಸು ಕಷ್ಟನೇ ಎನ್ನಬಹುದು. ಹೋಟೆಲ್, ಬೇಕರಿ, ಟೀ ಅಂಗಡಿಗಳು ಸೇರಿ ಇನ್ನು ಕೆಲವು ಅಂಗಡಿಗಳು ಹಾಲಿನನಿಂದಲೇ ತಮ್ಮ ದಿನವನ್ನು ಆರಂಭಿಸುತ್ತಿವೆ. ಹೀಗಾಗಿ ಸರ್ಕಾರ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ತೀರ್ಮಾನ ಕೈಗೊಂಡರೆ ಗ್ರಾಹಕರಿಗೂ ಸಮಾಧಾನ ಎನಿಸುತ್ತದೆ. 4 ರಿಂದ 5 ರೂಪಾಯಿ ಹೆಚ್ಚಳ ಮಾಡುವ ಮೂಲಕ ಎರಡೂ ಕಡೆ ಸಮತೋಲನ ಕಾಪಾಡಿಕೊಳ್ಳಬೇಕು. ಏಕಾಏಕಿ ದೊಡ್ಡ ದರ ನಿಗದಿ ಮಾಡಿದರೆ ಎಲ್ಲ ಕಡೆಯಿಂದ ಟೀಕೆಗಳು ವ್ಯಕ್ತವಾಗುತ್ತವೆ.