• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ನಿಮಗೆ ಕೈಮುಗಿದು ಕೆಲಸ ಮಾಡಿಸಬೇಕಾ.. ಸರ್ಕಾರಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಕೃಷ್ಣ ಬೈರೇಗೌಡ

ನಿಮಗೆ ಕೈಮುಗಿದು ಕೆಲಸ ಮಾಡಿಸಬೇಕಾ.. ಸರ್ಕಾರಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು ಹೊರ ವಲಯಗಳಲ್ಲಿರುವ ಐಟಿ ಹಬ್‌ಗಳಿರುವ ಮಹದೇವಪುರ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಪರಿಹಾರ ಕೂಡ ಸೂಚಿಸಿದರು.

Written ByBhimappa
Published: Sep 30, 2026, 07:03 PM IST|Updated: Sep 30, 2026, 07:11 PM IST
joinshare
ನಿಮಗೆ ಕೈಮುಗಿದು ಕೆಲಸ ಮಾಡಿಸಬೇಕಾ.. ಸರ್ಕಾರಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಕೃಷ್ಣ ಬೈರೇಗೌಡ
Image Credit: krishna_byre_gowda

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Minister Krishna Byre Gowda inspects: ಅಧಿಕಾರಿಗಳಿಂದ ಕೆಲಸ ಮಾಡಿಸಿಯೇ ಮಾಡಿಸುತ್ತೇನೆ ಎಂದು ಪಣ ತೊಟ್ಟ ಕೃಷ್ಣ ಬೈರೇಗೌಡ ಇಂದು ಖುದ್ದು ಫೀಲ್ಡ್‌ಗಿಳಿದರು. ಬೆಂಗಳೂರು ಹೊರ ವಲಯಗಳಲ್ಲಿರುವ ಐಟಿ ಹಬ್‌ಗಳಿರುವ ಮಹದೇವಪುರ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಪರಿಹಾರ ಕೂಡ ಸೂಚಿಸಿದರು. ಈ ಕುರಿತು ಇಲ್ಲಿದೆ ಫುಲ್ ಡಿಟೈಲ್ಸ್ ಇಲ್ಲಿದೆ.

ಹೌದು ಇಂದು ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅತ್ತಿಬೆಲೆ ಹೊಸಕೋಟೆ ರಸ್ತೆ ಪರಿಶೀಲನೆಗೆ ಮುನ್ನ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಕೃಷ್ಣ ಬೈರೇಗೌಡರು, ಮೆಟ್ರೋ, ಜಿಬಿಎ, ಲೋಕೋಪಯೋಗಿ ಇಲಾಖೆಗಳ ಜೊತೆ ಪರಿಶೀಲನೆ ನಡೆಸಿದರು.  

ದೊಮ್ಮಸಂದ್ರ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲದಂತೆ ಮಳೆ ನೀರು ಹರಿಯಲು ವ್ಯವಸ್ಥಿತ ಒಳಚರಂಡಿ ಹರಿಯಲು ಕಾಮಗಾರಿ ನಡೆಸುವಂತೆ ಮೆಟ್ರೋ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ರು. ಇದೇ ವೇಳೆ ಟ್ರಾನ್ಸ್ ಫಾರಂ ಹಾಕೋಕೆ ನಿಮಗೆ ರಸ್ತೆ ತಿರುವೇ ಆಗಬೇಕಾ? ಎಂದು ಬೆಸ್ಕಾಂ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಇದೇ ವೇಳೆ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ತೇನೆ ಇರೋ ಜಾಗಕ್ಕೆ ಜೆಲ್ಲಿ ಹಾಕಿ ಅಂದ್ರೆ ಏನೇನೋ ನೆಪ ಹೇಳ್ತೀರಲ್ರಿ? ಎಂದು ಕೆಆರ್‌ಡಿಎಲ್ ಅಧಿಕಾರಿಯನ್ನು ಸಚಿವ ಕೃಷ್ಣ ಬೈರೇಗೌಡರು ತರಾಟೆ ತೆಗೆದುಕೊಂಡರು. ಗುಂಜೂರು ಗ್ರಾಮದಲ್ಲಿ ರಸ್ತೆ ಪಕ್ಕದಲ್ಲೇ ಇರುವ ಟ್ರಾನ್ಸ್ಫಾರಮ್ ಅನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡರು, ಗುಂಜೂರು ಸರ್ಕಲ್- ಸಿಡಿಪಿ ರಸ್ತೆ ಪರಿಶೀಲನೆ ನಡೆಸಿದರು.

ಇದೇ ವೇಳೆ ರಸ್ತೆ ಒತ್ತುವರಿ ಮಾಡಿಕೊಂಡ ಅಂಗಡಿ ತೆರವು ಯಾಕೆ ಮಾಡಿಲ್ಲ. ಒತ್ತುವರಿ ಬರಿಗಣ್ಣಿಗೆ ಕಾಣ್ತಾ ಇದೆ. ರೀ ಸ್ವಾಮಿ ನಾನು ಬಂದು ಒತ್ತುವರಿ ತೆರವು ಮಾಡಿ ಅಂತಾ ಹೇಳಬೇಕಾ? ಸುಮ್ಮನೆ ನನ್ನ ಪ್ರವೋಕ್ ಮಾಡಿ ಕೋಪ ಬರೆಸಬೇಡಿ ಎಇಇ ಎಇ ಗೆ ಕೆಬಿಜಿ ಕ್ಲಾಸ್ ತೆಗೆದುಕೊಂಡರು. ರಸ್ತೆ ಮೇಲೆ ಇಷ್ಟು ಮಣ್ಣಿನ ತ್ಯಾಜ್ಯ ಇದ್ದರೆ ಮಳೆ ನೀರು ಹೇಗೆ ಹೋಗಬೇಕು? ರಸ್ತೆ ಗುಂಡಿಗೆ ಪ್ಯಾಚ್ ಹಾಕಿದ್ರೂ ಉಪಯೋಗವೇನು? ಎಂದು ಅಧಿಕಾರಿಗಳ ಬಳಿ ಕೆಬಿಜಿ ಪ್ರಶ್ನಿಸಿದರು.

ವರ್ತೂರು ರಸ್ತೆ ಅಗಲೀಕರಣಕ್ಕೆ ಸೂಚನೆ ಬಳಿಕ ಖುದ್ದು ಟ್ರಾಫಿಕ್ ಜಾಮ್ ವೀಕ್ಷಿಸಿದ ಕೆಬಿಜಿ, ಬೇಗನೇ ಎಡಭಾಗದ ರಸ್ತೆ ಅಗಲೀಕರಣ ಮಾಡಿ ಎಂದು ಸೂಚಿಸಿದರು.ವರ್ತೂರು ಕೆರೆ ಏರಿ ರಸ್ತೆಯಲ್ಲಿ ಇಷ್ಟು ಜಾಗ ಇದ್ದ ಮೇಲೂ ಭೂ ಸ್ವಾಧೀನ ಏಕೆ? ಇಷ್ಟು ಜಾಗದಲ್ಲಿ ರಸ್ತೆ ಮಾಡೋಕಾಗಲ್ವ? ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡರು ತರಾಟೆಗೆ ತೆಗೆದುಕೊಂಡರು.

ಇದೇ ವೇಳೆ ಮಾತನಾಡಿದ ಕೆಬಿಜಿ, ಶಾರ್ಟ್ ಟರ್ಮ್ ಪರಿಹಾರದ ಅಡಿ ಜಂಕಷನ್ ಗಳಲ್ಲಿರುವ ಟರ್ನಿಂಗ್ ಅಭಿವೃದ್ಧಿ ಹಾಗು ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಿದ್ದೇನೆ. ಕೆಲವೆಡೆ ಎಲ್ಲಿ ಭೂಸ್ವಾಧೀನ ಆಗಿದೆ ಅಲ್ಲಿ ರಸ್ತೆ ನಿರ್ಮಿಸುವ ಜೊತೆಗೆ ಅಕ್ಕಪಕ್ಕದ ಕನೆಕ್ಟಿಂಗ್ ರಸ್ತೆಗಳ ಡಾಂಬರೀಕರಣಕ್ಕೆ ಸೂಚಿಸಿದ್ದು, ಮುಂದೆ ದೊಮ್ಮ ಸಂದ್ರ ಕ್ರಾಸ್ ನಿಂದ ವೈಟ್ ಫೀಲ್ಡ್ ಮೆಟ್ರೊ ಮಾಡೋ ಪ್ಲಾನ್ ಜೊತೆಗೆ ಎಲೆಲಿವೇಟೆಟ್ ರೂಡ್ ಮಾಡಲು ಪ್ಲಾನ್ ಇದ್ದುವೊಂದಕ್ಕೊಂದು ಪೂರಕ ಆಗಿರುವಂತೆ ಪ್ಲಾನ್ ಮಾಡಲು ಸೂಚಿಸಿರುವುದಾಗಿ ಕೆಬಿಜಿ ತಿಳಿಸಿದ್ದಾರೆ. ಸಿಲಿಕಾನ್ ಸಿಟಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಖುದ್ದು ರಸ್ತೆಗಿಳಿದು ಕಾರ್ಯನಿರ್ವಹಿಸುತ್ತಿರುವ ಕೃಷ್ಣ  ಬೈರೇಗೌಡ ಕಾರ್ಯಕ್ಕೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
 

Add Zee News as a Preferred Source
TAGS:
Karnataka Politics