SOCIAL MEDIA

Newsletter

PARTNER SITES
Select Language Select State

ಪೊಲೀಸ್ ಇಲಾಖೆಯಲ್ಲಿ ಭರ್ಜರಿ ವರ್ಗಾವಣೆ: 18 ಡಿವೈಎಸ್ಪಿ, 49 ಇನ್‌ಸ್ಪೆಕ್ಟರ್ಸ್‌ ಟ್ರಾನ್ಸಫರ್‌

Karnataka Police transfer order: ವರದಿಗಳ ಪ್ರಕಾರ, ಕರ್ನಾಟಕದಲ್ಲಿ 18 ಡಿವೈಎಸ್‌ಪಿ ಹಾಗೂ 49 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಕುರಿತು ಆದೇಶ ಹೊರಬಿದ್ದಿದೆ.

Written By Chetana Devarmani
Published: Oct 02, 2026, 01:18 PM IST | Updated: Oct 02, 2026, 01:30 PM IST
Join

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿ ಆದೇಶ ಹೊರಬಿದ್ದಿದೆ. ಡಿಜಿ ಮತ್ತು ಐಜಿಪಿ ಅವರ ಅನುಮೋದನೆಯೊಂದಿಗೆ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಪರವಾಗಿ ಎಡಿಜಿಪಿ (ಆಡಳಿತ) ಸೌಮೇಂದು ಮುಖರ್ಜಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ವರ್ಗಾವಣೆಗೊಂಡ ಅಧಿಕಾರಿಗಳು ಯಾವುದೇ ಸೇರುವಿಕೆ ಕಾಲಾವಕಾಶವನ್ನು ಬಳಸಿಕೊಳ್ಳದೆ, ಕೂಡಲೇ ನೂತನ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಈ ವರ್ಗಾವಣೆ ಆದೇಶದಲ್ಲಿ ಸಿಐಡಿ, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ನಗರ ಪೊಲೀಸ್, ಡಿಸಿಆರ್‌ಇ, ಸಂಚಾರ ವಿಭಾಗ, ಕರಾವಳಿ ಕಾವಲು ಪಡೆ, ರಾಜ್ಯ ಗುಪ್ತವಾರ್ತೆ, ಆಂತರಿಕ ಭದ್ರತಾ ವಿಭಾಗ ಸೇರಿದಂತೆ ಹಲವು ವಿಭಾಗಗಳು ಹಾಗೂ ಜಿಲ್ಲೆಗಳ ಅಧಿಕಾರಿಗಳ ಜಾಗಬದಲಾವಣೆ ಮಾಡಲಾಗಿದೆ.

ಡಿವೈಎಸ್‌ಪಿ ಹಂತದ ಅಧಿಕಾರಿಗಳ ವರ್ಗಾವಣೆ

ಡಿವೈಎಸ್‌ಪಿ ಹಂತದಲ್ಲಿ ಅಂಬಾರಾಯ ಕಾಮನಮನಿ ಅವರನ್ನು ಸಿಐಡಿಯಿಂದ ಮಂಗಳೂರಿನ ವಿಶೇಷ ಕಾರ್ಯಪಡೆಗೆ ವರ್ಗಾವಣೆ ಮಾಡಲಾಗಿದೆ. ಗಿರೀಶ್ ಪಾಂಡು ರೋಡ್ಕರ್ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಬೆಂಗಳೂರಿನ ವೈಟ್‌ಫೀಲ್ಡ್ ವಿಭಾಗದ ಸಿಸಿಪಿಎಸ್‌ಗೆ ನಿಯೋಜಿಸಲಾಗಿದೆ.

ಗೌರವ್ ಕೆ.ಸಿ ಅವರನ್ನು ಸಿಐಡಿಯಿಂದ ಬೆಂಗಳೂರು ನಗರದ ವೈಟ್‌ಫೀಲ್ಡ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವೈಟ್‌ಫೀಲ್ಡ್ ಉಪ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರೀನಾ ಸುವರ್ಣ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರದ ಸಂಚಾರ ಮತ್ತು ಯೋಜನೆ ವಿಭಾಗದಲ್ಲಿದ್ದ ಪ್ರಭಾಕರ ಜಿ ಅವರನ್ನು ಸಂಚಾರ ದಕ್ಷಿಣ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಸಿಐಡಿಯಲ್ಲಿದ್ದ ಮುರುಗೇಂದ್ರಯ್ಯ ಎಂ ಅವರನ್ನು ಸಂಚಾರ ಮತ್ತು ಯೋಜನೆ ವಿಭಾಗಕ್ಕೆ ನಿಯೋಜಿಸಲಾಗಿದೆ.

ಸಂಚಾರ ದಕ್ಷಿಣ ಉಪ ವಿಭಾಗದಲ್ಲಿದ್ದ ಮಂಜುನಾಥ ಎಸ್ ಅವರನ್ನು ಕೆಎಸ್‌ಎಚ್‌ಆರ್‌ಸಿಗೆ ವರ್ಗಾವಣೆ ಮಾಡಲಾಗಿದೆ. ಡಿಸಿಆರ್‌ಇಯಲ್ಲಿದ್ದ ಬಿ.ಎಸ್. ಲೋಕಾಪುರ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಉಪ ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಕಾರವಾರ ಉಪ ವಿಭಾಗದಲ್ಲಿದ್ದ ಗಿರೀಶ್ ಎಸ್.ವಿ ಅವರನ್ನು ಉಡುಪಿಯ ಕರಾವಳಿ ಕಾವಲು ಪಡೆಗೆ ವರ್ಗಾವಣೆ ಮಾಡಲಾಗಿದ್ದು, ಉಡುಪಿಯ ಕರಾವಳಿ ಕಾವಲು ಪಡೆಯಲ್ಲಿದ್ದ ಗಣೇಶ್ ಕೆ.ಎಲ್ ಅವರನ್ನು ಡಿಸಿಆರ್‌ಇಗೆ ನಿಯೋಜಿಸಲಾಗಿದೆ.

ಬೆಂಗಳೂರು ನಗರದ ಟಿಟಿಐನಲ್ಲಿ ಕರ್ತವ್ಯದಲ್ಲಿದ್ದ ಶರಣಪ್ಪ ಅವರನ್ನು ರಾಯಚೂರು ಜಿಲ್ಲೆಯ ಲಿಂಗಸೂರು ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಲಿಂಗಸೂರು ಉಪ ವಿಭಾಗದಲ್ಲಿದ್ದ ದತ್ತಾತ್ರೇಯ ಅವರನ್ನು ಡಿಸಿಆರ್‌ಇಗೆ ವರ್ಗಾಯಿಸಲಾಗಿದೆ.

ಕರ್ನಾಟಕ ಲೋಕಾಯುಕ್ತದಲ್ಲಿದ್ದ ಗೋಪಾಲಕೃಷ್ಣ ಬಿ.ಎನ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹಿರಿಯೂರು ಉಪ ವಿಭಾಗದಲ್ಲಿದ್ದ ಶಿವಕುಮಾರ್ ಟಿ.ಎಂ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜಿಸಲಾಗಿದೆ.

ಡಿಸಿಆರ್‌ಇಯಲ್ಲಿದ್ದ ಗಿರೀಶ್ ಬಿ ಅವರನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕೆಎಸ್‌ಎಚ್‌ಆರ್‌ಸಿಯಲ್ಲಿದ್ದ ಸುಧೀರ್ ಎಂ. ಹೆಗಡೆ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿದೆ.

ಸಿಐಡಿಯಲ್ಲಿದ್ದ ಪ್ರಶಾಂತ್ ಎಂ.ಎಂ ಅವರನ್ನು ಬೆಂಗಳೂರು ನಗರದ ಸಂಚಾರ ಆಗ್ನೇಯ ಉಪ ವಿಭಾಗಕ್ಕೆ ನಿಯೋಜಿಸಲಾಗಿದೆ. ಸಂಚಾರ ಆಗ್ನೇಯ ಉಪ ವಿಭಾಗದಲ್ಲಿದ್ದ ಮಹಾದೇವ ಟಿ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.

ಹಲವು ಇನ್‌ಸ್ಪೆಕ್ಟರ್‌ಗಳಿಗೂ ಜಾಗಬದಲಾವಣೆ

ಪೊಲೀಸ್ ಇಲಾಖೆಯ ಮತ್ತೊಂದು ಆದೇಶದಲ್ಲಿ ಹಲವು ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಅವರನ್ನು ತುಂಗಾನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯ ಗುರುರಾಜ್ ಕೆ.ಟಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜಿಸಲಾಗಿದೆ. ಕರ್ನಾಟಕ ಲೋಕಾಯುಕ್ತದಿಂದ ಐಮಂಗಲ ವೃತ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಚಂದ್ರಶೇಖರ ಕೆ.ಎನ್ ಅವರನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ.

ಕೋಲಾರ ಜಿಲ್ಲೆಯ ಮಾಸ್ತಿ ಪೊಲೀಸ್ ಠಾಣೆಯಲ್ಲಿದ್ದ ಓಂಪ್ರಕಾಶಗೌಡ ಬಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಕೊಪ್ಪಳದ ಮಹಿಳಾ ಪೊಲೀಸ್ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದ ಶಿವರಾಜ್ ಎಸ್. ಇಂಗಳೆ ಅವರನ್ನು ಕನಕಗಿರಿ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ.

ಆಂತರಿಕ ಭದ್ರತಾ ವಿಭಾಗದಲ್ಲಿದ್ದ ಮಧು ಟಿ.ಎಸ್ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಕಡೂರು ವೃತ್ತದಲ್ಲಿದ್ದ ರಫೀಕ್ ಎಂ ಅವರನ್ನು ಕಡೂರಿನ ಪೊಲೀಸ್ ತರಬೇತಿ ಶಾಲೆಗೆ ನಿಯೋಜಿಸಲಾಗಿದೆ. ಪೊಲೀಸ್ ತರಬೇತಿ ಶಾಲೆಯಲ್ಲಿದ್ದ ಶಿವಪ್ರಸಾದ್ ವಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರದ ಸಿಒಡಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿದ್ದ ಉಮೇಶ್ ಕುಮಾರ್ ಎಸ್.ಎಂ ಅವರನ್ನು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕೋಲಾರದ ಬೆಸ್ಕಾಂ ಜಾಗೃತ ದಳದಲ್ಲಿದ್ದ ಸುರೇಶ್ ಎಸ್ ಅವರನ್ನು ಬೆಂಗಳೂರು ನಗರದ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿದ್ದ ರಾಮಮೂರ್ತಿ ಬಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಲೋಕಾಯುಕ್ತದ ಎಸ್‌ಐಟಿಗೆ ವರ್ಗಾವಣೆ ಆದೇಶದಲ್ಲಿದ್ದ ವೆಂಕಟೇಶ್ ಆರ್ ಅವರನ್ನು ಮೈಸೂರು ನಗರದ ವಿ.ವಿ.ಪುರಂ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ. ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿದ್ದ ವಿವೇಕಾನಂದ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಮರುಳಸಿದ್ದಪ್ಪ ಆರ್. ದೊಡ್ಡಬಸಪ್ಪ ಅವರನ್ನು ದಾವಣಗೆರೆ ಜಿಲ್ಲೆಯ ಹರಿಹರ ಟೌನ್ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ. ಕರ್ನಾಟಕ ಲೋಕಾಯುಕ್ತದಲ್ಲಿದ್ದ ಅಂಜನಪ್ಪ ಕೆ.ಎಸ್ ಅವರನ್ನು ಕೋಲಾರ ಜಿಲ್ಲೆಯ ಮುಳಬಾಗಿಲು ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಉತ್ತರ ಕನ್ನಡ, ಬೀದರ್, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲೂ ಬದಲಾವಣೆ

ಸಿಎಸ್‌ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಸುಮಾಧರ ಕೆ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಕುಮಟಾ ಪೊಲೀಸ್ ಠಾಣೆಯ ಯೋಗೇಶ್ ಕೆ.ಎಂ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜಿಸಲಾಗಿದೆ.

ಬೀದರ್‌ನ ಜೆಸ್ಕಾಂ ಜಾಗೃತ ದಳದಲ್ಲಿದ್ದ ಮಲ್ಲಿಕಾರ್ಜುನ ಆರ್. ಯಾತನೂರು ಅವರನ್ನು ಬೀದರ್ ನ್ಯೂಟೌನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಬೀದರ್ ನ್ಯೂಟೌನ್ ಪೊಲೀಸ್ ಠಾಣೆಯ ವಿಜಯಕುಮಾರ್ ಅವರನ್ನು ಕಲಬುರಗಿ ಜಿಲ್ಲೆಯ ನಾಗೇನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರಕ್ಕೆ ನಿಯೋಜಿಸಲಾಗಿದೆ.

ಗದಗದ ಹೆಸ್ಕಾಂ ಜಾಗೃತ ದಳದಲ್ಲಿದ್ದ ಸುರೇಶ್ ಹೆಚ್. ಯಳ್ಳೂರು ಅವರನ್ನು ದಾವಣಗೆರೆಯ ಆಜಾದ್‌ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನಾಗೇನಹಳ್ಳಿಯ ಪಿಟಿಸಿಯಲ್ಲಿದ್ದ ವಾಹಿದ್ ಹುಸೇನ್ ಕೊತ್ವಾಲ್ ಅವರನ್ನು ವಿಜಯಪುರ ಜಿಲ್ಲೆಯ ಗಾಂಧಿಚೌಕ್ ಪೊಲೀಸ್ ಠಾಣೆಗೆ ನಿಯೋಜಿಸಲಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣೆಯ ಪ್ರದೀಪ್ ವೈ. ತಳಕೇರಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಧಾರವಾಡದ ಪೊಲೀಸ್ ತರಬೇತಿ ಶಾಲೆಯಲ್ಲಿದ್ದ ರಮೇಶ್ ಬಸಪ್ಪ ಗೋಕಾಕ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯ ಉಳಿವಪ್ಪ ಹೆಚ್. ಸಾತೇನಹಳ್ಳಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜಿಸಲಾಗಿದೆ.

ಕರ್ನಾಟಕ ಲೋಕಾಯುಕ್ತದಲ್ಲಿದ್ದ ಅಮರೇಶ್ ಹುಬ್ಬಳ್ಳಿ ಅವರನ್ನು ವಿಜಯನಗರ ಜಿಲ್ಲೆಯ ಟಿ.ಬಿ. ಡ್ಯಾಂ ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಟಿ.ಬಿ. ಡ್ಯಾಂ ವೃತ್ತದಲ್ಲಿದ್ದ ಮಹಮ್ಮದ್ ಗೌಸ್ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ನಿಯೋಜಿಸಲಾಗಿದೆ.

ಬೆಂಗಳೂರು ನಗರದಲ್ಲೂ ಹಲವು ಅಧಿಕಾರಿಗಳ ವರ್ಗಾವಣೆ

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಮಂಜು ಎಸ್.ಎಸ್ ಅವರನ್ನು ಬೆಂಗಳೂರು ನಗರದ ಸಿಸಿಬಿಗೆ ನಿಯೋಜಿಸಲಾಗಿದೆ. ಇದೇ ವೇಳೆ ಸಿಸಿಬಿಯಿಂದ ಲೋಕಾಯುಕ್ತಕ್ಕೆ ಆಗಿದ್ದ ಮಹಾದೇವಯ್ಯ ಎಸ್ ಅವರ ವರ್ಗಾವಣೆ ರದ್ದುಪಡಿಸಲಾಗಿದ್ದು, ಅವರು ಸಿಸಿಬಿ, ಬೆಂಗಳೂರು ನಗರದಲ್ಲೇ ಮುಂದುವರಿಯಲಿದ್ದಾರೆ.

ಕರ್ನಾಟಕ ಲೋಕಾಯುಕ್ತದಲ್ಲಿದ್ದ ಸಿದ್ರಾಯ್ ಬಾಳೋರ್ಗಿ ಅವರನ್ನು ಯಾದಗಿರಿ ಜಿಲ್ಲೆಯ ಸುರಪುರ ಟೌನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಸುರಪುರ ಟೌನ್ ಪೊಲೀಸ್ ಠಾಣೆಯ ಉಮೇಶ್ ಎಂ ಅವರನ್ನು ರಾಜ್ಯ ಗುಪ್ತವಾರ್ತೆಗೆ ನಿಯೋಜಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ನಗರದ ಸಿಸಿಬಿಯಲ್ಲಿ ಕರ್ತವ್ಯದಲ್ಲಿದ್ದ ಮಾರುತಿ ಎಸ್. ಗುಳ್ಳಾರಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಪ್ರಮೋದ್ ಕುಮಾರ್ ಅವರನ್ನು ಬೆಂಗಳೂರು ನಗರದ ಟಿಟಿ ಮತ್ತು ಆರ್‌ಎಸ್‌ಐ ವಿಭಾಗಕ್ಕೆ ನಿಯೋಜಿಸಲಾಗಿದೆ. ಟಿಟಿ ಮತ್ತು ಆರ್‌ಎಸ್‌ಐ ವಿಭಾಗದಲ್ಲಿದ್ದ ಮಂಜೇಗೌಡ ಎ.ಜಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರದ ವಿಐಪಿ ಭದ್ರತಾ ವಿಭಾಗದಲ್ಲಿದ್ದ ಅನಿಲ್ ಕುಮಾರ್ ಪಿ.ಎನ್ ಅವರನ್ನು ಮಾಜಿ ಪ್ರಧಾನ ಮಂತ್ರಿಗಳ ಭದ್ರತಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಮಾಜಿ ಪ್ರಧಾನ ಮಂತ್ರಿಗಳ ಭದ್ರತಾ ವಿಭಾಗದಲ್ಲಿದ್ದ ನಾಗರಾಜ್ ಎ.ಡಿ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಡಿಸಿಆರ್‌ಬಿಗೆ ನಿಯೋಜಿಸಲಾಗಿದೆ. ಡಿಸಿಆರ್‌ಬಿಯಲ್ಲಿದ್ದ ಸಂದೀಪ್ ಪಿ. ಕೌರಿ ಅವರನ್ನು ಕರ್ನಾಟಕ ಲೋಕಾಯುಕ್ತದ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿದೆ.

ಬಳ್ಳಾರಿ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿದ್ದ ರಮೇಶ್ ಕುಲಕರ್ಣಿ ಅವರನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ನಗರದ ಸಿಸಿಬಿಯಲ್ಲಿದ್ದ ದೇವೇಂದ್ರಪ್ಪ ಕೆ.ಎಸ್ ಅವರನ್ನು ರಾಜ್ಯ ಗುಪ್ತವಾರ್ತೆಗೆ ನಿಯೋಜಿಸಲಾಗಿದೆ.

ಇನ್ನೂ ಹಲವು ಅಧಿಕಾರಿಗಳಿಗೆ ಹೊಸ ಜವಾಬ್ದಾರಿ

ಹಾಸನ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿದ್ದ ಸತೀಶ್ ಡಿ ಅವರನ್ನು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಜೈಪಾಲ್ ಎ. ಪಾಟೀಲ್ ಅವರನ್ನು ಧಾರವಾಡದ ಪೊಲೀಸ್ ತರಬೇತಿ ಶಾಲೆಗೆ ನಿಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆ ಆದೇಶದಲ್ಲಿದ್ದ ಶಿವಶರಣ ಎಂ. ಅವಜಿ ಅವರನ್ನು ಬಾಗಲಕೋಟೆಯ ಹೆಸ್ಕಾಂ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿದೆ.

ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದ ಶೀಲಾ ಕೆ ಅವರನ್ನು ಬೆಂಗಳೂರಿನ ಥಣಿಸಂದ್ರದ ಪೊಲೀಸ್ ತರಬೇತಿ ಶಾಲೆಗೆ ನಿಯೋಜಿಸಲಾಗಿದೆ. ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ರೇವತಿ ಎನ್ ಅವರನ್ನು ಸಿಎಸ್‌ಪಿ, ಕರಾವಳಿ ಕಾವಲು ಪಡೆಗೆ ವರ್ಗಾವಣೆ ಮಾಡಲಾಗಿದೆ.

ರಾಜ್ಯ ಗುಪ್ತವಾರ್ತೆಗೆ ಸ್ಥಳ ನಿಯುಕ್ತಿ ಆದೇಶದಲ್ಲಿದ್ದ ಉದಯರವಿ ನಿಂಗಪ್ಪ ಅವರನ್ನು ರಾಯಚೂರು ಜಿಲ್ಲೆಯ ಡಿಎಸ್‌ಬಿಗೆ ನಿಯೋಜಿಸಲಾಗಿದೆ. ರಾಯಚೂರು ಡಿಎಸ್‌ಬಿಯಲ್ಲಿದ್ದ ರಾಮಪ್ಪ ಜಲಗೇರಿ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.

ನಗರ ವಿಶೇಷ ಶಾಖೆ, ಬೆಂಗಳೂರಿಗೆ ವರ್ಗಾವಣೆ ಆದೇಶದಲ್ಲಿದ್ದ ಭವ್ಯ ಡಿ.ಎಂ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ನಿಯೋಜಿಸಲಾಗಿದೆ. ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಮುದ್ದುರಾಜು ವೈ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಚನ್ನಯ್ಯ ಹಿರೇಮಠ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಡಿಎಸ್‌ಬಿಗೆ ನಿಯೋಜಿಸಲಾಗಿದೆ. ಇದೇ ರೀತಿಯಾಗಿ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ವಸಂತ್ ಎಸ್.ಹೆಚ್ ಅವರನ್ನು ಚಾಮರಾಜನಗರ ಜಿಲ್ಲೆಯ ಡಿಎಸ್‌ಬಿಗೆ ವರ್ಗಾವಣೆ ಮಾಡಲಾಗಿದೆ.

ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ

ಪೊಲೀಸ್ ಇಲಾಖೆಯ ಈ ವರ್ಗಾವಣೆ ಆದೇಶದ ಪ್ರಮುಖ ಅಂಶವೆಂದರೆ, ವರ್ಗಾವಣೆಗೊಂಡಿರುವ ಎಲ್ಲ ಅಧಿಕಾರಿಗಳು ಯಾವುದೇ ಸೇರುವಿಕೆ ಕಾಲಾವಕಾಶವನ್ನು ಉಪಯೋಗಿಸಿಕೊಳ್ಳದೆ ಕೂಡಲೇ ನೂತನ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು ಎಂಬ ಸೂಚನೆ.

ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಯ ಮೂಲಕ ವಿವಿಧ ಪೊಲೀಸ್ ಘಟಕಗಳು, ಜಿಲ್ಲೆಗಳು ಮತ್ತು ವಿಭಾಗಗಳಲ್ಲಿ ಅಧಿಕಾರಿಗಳ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದೇಶದಲ್ಲಿ ಉಲ್ಲೇಖಿಸಿರುವಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ತಮ್ಮ ಹೊಸ ಕರ್ತವ್ಯಸ್ಥಳಕ್ಕೆ ತೆರಳಿ ವರದಿ ಮಾಡಿಕೊಳ್ಳಬೇಕಿದೆ
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES