• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಸಿಲಿಕಾನ್ ಸಿಟಿಯಲ್ಲಿ ಮಧ್ಯಪ್ರದೇಶದ ಪಿಸ್ತೂಲ್ ದಂಧೆ ಬಯಲು: 5 ಗನ್, 10 ಗುಂಡು ಜಪ್ತಿ ಮಾಡಿದ ಆನೇಕಲ್ ಪೊಲೀಸರು!

ಸಿಲಿಕಾನ್ ಸಿಟಿಯಲ್ಲಿ ಮಧ್ಯಪ್ರದೇಶದ ಪಿಸ್ತೂಲ್ ದಂಧೆ ಬಯಲು: 5 ಗನ್, 10 ಗುಂಡು ಜಪ್ತಿ ಮಾಡಿದ ಆನೇಕಲ್ ಪೊಲೀಸರು!

ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ 'ಆರ್ಮ್ಸ್ ಆಕ್ಟ್' (ಆಯುಧ ಕಾಯ್ದೆ) ಅಡಿ ದಾಖಲಾಗಿದ್ದ ಈ ಪ್ರಕರಣದಲ್ಲಿ, ತನಿಖೆ ಮುಂದುವರಿದಂತೆ ಸಂಘಟಿತ ಅಪರಾಧ ಜಾಲ ಬಯಲಾದ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ

Reported ByManjunath NaragundEdited ByManjunath Naragund
Published: Sep 22, 2026, 08:26 AM IST|Updated: Sep 22, 2026, 08:51 AM IST
joinshare
ಸಿಲಿಕಾನ್ ಸಿಟಿಯಲ್ಲಿ ಮಧ್ಯಪ್ರದೇಶದ ಪಿಸ್ತೂಲ್ ದಂಧೆ ಬಯಲು: 5 ಗನ್, 10 ಗುಂಡು ಜಪ್ತಿ ಮಾಡಿದ ಆನೇಕಲ್ ಪೊಲೀಸರು!
Image Credit: Representation only

About the Author

Manjunath Naragund

Manjunath Naragund

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.
Read More

Trending

  • News
  • Photos
  • Videos
ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

ನಾವೂ ಯಾರಿಗೂ ಜೀವ ಬೆದರಿಕೆ‌ ಹಾಕಿಲ್ಲ: ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ

2

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

3

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

4

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

5

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

 

ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಬಯಲಾಗಿದ್ದ ಕಂಟ್ರಿಮೇಡ್ ಪಿಸ್ತೂಲ್ (ಅಕ್ರಮ ಗನ್) ಪೂರೈಕೆ ಮತ್ತು ಮಾರಾಟ ಪ್ರಕರಣಕ್ಕೆ ಈಗ ತೀವ್ರ ಸ್ವರೂಪದ ತಿರುವು ಸಿಕ್ಕಿದೆ. ರಾಜಧಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡುಕ ಸೃಷ್ಟಿಸಿದ್ದ ಈ ಅಕ್ರಮ ಅಸ್ತ್ರ ಜಾಲವನ್ನು ಭೇದಿಸಿರುವ ಆನೇಕಲ್ ಪೊಲೀಸರು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಬಂಧಿತ ಏಳು ಮಂದಿ ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ 'ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ' (KOKA - KOCA) ಜಾರಿಗೊಳಿಸಿದ್ದಾರೆ.

 

ಆನೇಕಲ್ ಪೊಲೀಸ್ ಠಾಣೆಯಲ್ಲಿ ಮೊದಲಿಗೆ 'ಆರ್ಮ್ಸ್ ಆಕ್ಟ್' (ಆಯುಧ ಕಾಯ್ದೆ) ಅಡಿ ದಾಖಲಾಗಿದ್ದ ಈ ಪ್ರಕರಣದಲ್ಲಿ, ತನಿಖೆ ಮುಂದುವರಿದಂತೆ ಸಂಘಟಿತ ಅಪರಾಧ ಜಾಲ ಬಯಲಾದ ಹಿನ್ನೆಲೆಯಲ್ಲಿ ಕೋಕಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಡಿವೈಎಸ್ಪಿ ಗೋಪಾಲ್ ನಾಯಕ್ ಹಾಗೂ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ನಡೆದ ರೋಚಕ ಕಾರ್ಯಾಚರಣೆಯಲ್ಲಿ ಐದು ಕಂಟ್ರಿಮೇಡ್ ಪಿಸ್ತೂಲ್, 10 ಸಜೀವ ಗುಂಡುಗಳು ಹಾಗೂ ಏಳು ಮಂದಿ ಕ್ರಿಮಿನಲ್‌ಗಳನ್ನು ಬಂಧಿಸಿ ಹೆಡೆಮುರಿ ಕಟ್ಟಲಾಗಿದೆ.

 

ಬಂಧಿತ ಏಳು ಮಂದಿ ಆರೋಪಿಗಳಲ್ಲಿ ಆರು ಮಂದಿ ಸಾಲು ಸಾಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಕುಖ್ಯಾತ ರೌಡಿಶೀಟರ್‌ಗಳಾಗಿದ್ದಾರೆ!

 

  1. ಪ್ರದೀಪ್ ರಮೇಶ್ (ಗನ್ ಸಾಗಾಟಗಾರ)


 

ಮನೋಜ್ ಅಲಿಯಾಸ್ ಜಾಕಿ (ನಟೋರಿಯಸ್ ರೌಡಿಶೀಟರ್)


 

ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್ (ಕೆಜಿ ಹಳ್ಳಿ ರೌಡಿಶೀಟರ್)


 

ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ (ರೌಡಿಶೀಟರ್)


 

ವೆಂಕಟರಾಜು ಅಲಿಯಾಸ್ ತುಕಡಿ (ರೌಡಿಶೀಟರ್)


 

ಗೋಪಿ ಅಲಿಯಾಸ್ ಸುಣವಾರ ಗೋಪಿ (ರೌಡಿಶೀಟರ್)


 

ಶಿವರಾಜ್


 

ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ಸಿಕ್ಕಿಬಿದ್ದ 'ಕಿಂಗ್‌ಪಿನ್ ಲಿಂಕ್':

 

ಕಳೆದ ತಿಂಗಳು 14ರಂದು ರಾತ್ರಿ ಗಸ್ತಿನಲ್ಲಿದ್ದ ಆನೇಕಲ್ ಇನ್ಸ್‌ಪೆಕ್ಟರ್ ಪ್ರಕಾಶ್ ಅವರ ತಂಡಕ್ಕೆ ಸಿಕ್ಕ ಸಣ್ಣ ಸುಳುವು ಈ ಬೃಹತ್ ದಂಧೆಯನ್ನು ಬಯಲಿಗೆಳೆಯಿತು. ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಗೇಟ್ ಬಳಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದು ನಿಂತಿದ್ದ ಪ್ರದೀಪ್ ರಮೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಪರಿಶೀಲಿಸಿದಾಗ, ಆತನ ಬ್ಯಾಗ್‌ನಲ್ಲಿ ಮೂರು ಕಂಟ್ರಿಮೇಡ್ ಪಿಸ್ತೂಲ್ ಹಾಗೂ 10 ಸಜೀವ ಗುಂಡುಗಳು ಪತ್ತೆಯಾಗಿದ್ದವು.

 

ಪೋಲಿಸರ ಶೈಲಿಯ ತೀವ್ರ ವಿಚಾರಣೆ ವೇಳೆ ಅಸಲಿ ಕಥೆ ಹೊರಬಂತು. ಮಧ್ಯಪ್ರದೇಶದ ಭೇಡಘಾಟ್ ಗ್ರಾಮದ ದಾವೂದ್ ಎಂಬಾತನೇ ಈ ಅಕ್ರಮ ಗನ್ ದಂಧೆಯ ಮುಖ್ಯ ಕಿಂಗ್‌ಪಿನ್. ಈತ ರೈಲಿನ ಮೂಲಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿಕೊಡುತ್ತಿದ್ದ. ಪ್ರದೀಪ್ ರಮೇಶ್ ಹಾಲ್ದೇನಹಳ್ಳಿ ರೈಲು ನಿಲ್ದಾಣಕ್ಕೆ ಬಂದು ಆ ಗನ್‌ಗಳನ್ನು ರೌಡಿಗಳಿಗೆ ಮತ್ತು ಗ್ರಾಹಕರಿಗೆ ಡೆಲಿವರಿ ಮಾಡಲು ಕಾಯುತ್ತಿದ್ದಾಗ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದ.

 

ತನಿಖೆ ವೇಳೆ ಪ್ರದೀಪ್ ಈಗಾಗಲೇ ಎರಡು ಕಂಟ್ರಿಮೇಡ್ ಪಿಸ್ತೂಲ್‌ಗಳನ್ನು ಕೆಜಿ ಹಳ್ಳಿಯ ಕುಖ್ಯಾತ ರೌಡಿ ಕುಳ್ಳ ರಿಜ್ವಾನ್ ಮತ್ತು ಮನೋಜ್ ಅಲಿಯಾಸ್ ಜಾಕಿಗೆ ಮಾರಾಟ ಮಾಡಿದ್ದ ವಿಷಯ ಬಯಲಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಆ ಇಬ್ಬರ ಮೇಲೆ ದಾಳಿ ನಡೆಸಿ ಅವರ ಬಳಿಯಿದ್ದ ಅಕ್ರಮ ಪಿಸ್ತೂಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಾಲದಲ್ಲಿದ್ದ ಉಳಿದ ಆರೋಪಿಗಳನ್ನೂ ಬೆನ್ನಟ್ಟಿ ಬಂಧಿಸಲಾಗಿದೆ.

 

ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೂ ಹರಡಲಿದೆ ಕಂಟಕ!

 

ಪ್ರಕರಣದಲ್ಲಿ ಕೋಕಾ ಕಾಯ್ದೆ ಜಾರಿಯಾಗಿರುವುದರಿಂದ ತನಿಖೆ ಮತ್ತಷ್ಟು ಕಠಿಣಗೊಳ್ಳಲಿದೆ. ತನಿಖಾಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಈ ಅಕ್ರಮ ಪಿಸ್ತೂಲ್‌ಗಳನ್ನು ಕೇವಲ ರೌಡಿಶೀಟರ್‌ಗಳು ಮಾತ್ರವಲ್ಲದೆ, ಆಸ್ತಿ ವಿವಾದ ಹಾಗೂ ವೈಯಕ್ತಿಕ ರಕ್ಷಣೆಗಾಗಿ ಬೆಂಗಳೂರಿನ ಕೆಲ ಪ್ರಭಾವಿ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ದಂಧೆಕೋರರು ಖರೀದಿಸಲು ಸಂಚು ರೂಪಿಸಿದ್ದರು! ಮುಂಬರುವ ದಿನಗಳಲ್ಲಿ ಈ ಅಕ್ರಮ ಶಸ್ತ್ರಾಸ್ತ್ರ ದಂಧೆಗೆ ಹಣ ಹೂಡಿಕೆ ಮಾಡಿದ ಮತ್ತು ಗನ್ ಖರೀದಿಸಲು ಯತ್ನಿಸಿದ ಪ್ರಭಾವಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈಗೂ ಕೋಳ ಬೀಳುವುದು ಬಹುತೇಕ ಖಚಿತವಾಗಿದೆ.

 

Add Zee News as a Preferred Source
TAGS:
Kannada News