ಲಾಂಗ್ ವೀಕೆಂಡ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ ನಾಳೆ ನಮ್ಮ Metro ರೈಲು ಸೇವೆ ವಿಸ್ತರಣೆ
Namma Metro: ಮೆಟ್ರೋ ಪ್ರಯಾಣಿಕರೇ ಗುಡ್ ನ್ಯೂಸ್ ಅಕ್ಟೋಬರ್ 3ರ ಶನಿವಾರ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆಗೊಂಡಿದೆ
Long weekend effect Namma metro: ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದೆ.. ಹೀಗಾಗಿ ಮೆಟ್ರೋ ನಿಲ್ದಾಣಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನ ಗಮನದಲ್ಲಿಟ್ಟುಕೊಂಡು BMRCL ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 3ರಂದು ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದ್ದು, ವಿವಿಧ ಟರ್ಮಿನಲ್‌ಗಳಿಂದ ಹೊರಡುವ ಕೊನೆಯ ರೈಲುಗಳ ಸಮಯವನ್ನೂ ಪ್ರಕಟಿಸಲಾಗಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ಎಷ್ಟು ಗಂಟೆಯವರೆಗೆ ಮೆಟ್ರೋ ಸಂಚಾರ ಇರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..
ಲಾಂಗ್ ವೀಕೆಂಡ್.. ಬೆಂಗಳೂರಿನಿಂದ ಹೊರಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಮೆಟ್ರೋ ನಿಲ್ದಾಣಗಳಲ್ಲೂ ಪ್ರಯಾಣಿಕರ ದಟ್ಟಣೆ ಸಾಧ್ಯತೆ.. ಪ್ರಯಾಣಿಕರ ಅನುಕೂಲಕ್ಕಾಗಿ BMRCLನಿಂದ ಮೆಟ್ರೋ ಸೇವೆ ವಿಸ್ತರಣೆ..
ಅಕ್ಟೋಬರ್ 3ರಂದು ಹೆಚ್ಚುವರಿ ಅವಧಿಗೆ ನಮ್ಮ ಮೆಟ್ರೋ ರೈಲುಗಳು ಸಂಚರಿಸಲಿವೆ. ಪ್ರಮುಖ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ಸಮಯವನ್ನೂ BMRCL ಪ್ರಕಟಿಸಿದೆ.
ನೇರಳೆ ಮಾರ್ಗ
ನೇರಳೆ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್.. ವೈಟ್‌ಫೀಲ್ಡ್ ಕಾಡುಗೋಡಿಯಿಂದ ರಾತ್ರಿ 12 ಗಂಟೆಗೆ ಕೊನೆಯ ಮೆಟ್ರೋ ಹೊರಡಲಿದೆ. ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ರಾತ್ರಿ 12:20ಕ್ಕೆ ಕೊನೆಯ ರೈಲು ಸಂಚರಿಸಲಿದೆ.
ಹಸಿರು ಮಾರ್ಗ
ಹಸಿರು ಮಾರ್ಗದಲ್ಲೂ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಮಾದಾವರದಿಂದ ರಾತ್ರಿ 12:15ಕ್ಕೆ ಕೊನೆಯ ರೈಲು ಹೊರಡಲಿದೆ. ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ರಾತ್ರಿ 12:20ಕ್ಕೆ ಕೊನೆಯ ಮೆಟ್ರೋ ಸಂಚರಿಸಲಿದೆ.
ಹಳದಿ ಮಾರ್ಗ
ಹಳದಿ ಮಾರ್ಗದ ಪ್ರಯಾಣಿಕರಿಗೂ ಹೆಚ್ಚುವರಿ ಸೇವೆ ಲಭ್ಯವಾಗಲಿದೆ. ಆರ್.ವಿ. ರಸ್ತೆಯಿಂದ ರಾತ್ರಿ 1:15ಕ್ಕೆ ಕೊನೆಯ ರೈಲು ಹೊರಡಲಿದೆ.ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ರಾತ್ರಿ 11:55ಕ್ಕೆ ಕೊನೆಯ ಮೆಟ್ರೋ ಹೊರಡಲಿದೆ.
ಇನ್ನು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಪ್ರಮುಖ ಮಾಹಿತಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12:55ಕ್ಕೆ ಹೊರಡಲಿದೆ.ಇನ್ನು ಟಿಕೆಟ್ ಕೌಂಟರ್‌ಗಳಲ್ಲಿ ಉದ್ದನೆಯ ಸರದಿ ತಪ್ಪಿಸಲು BMRCL ಪ್ರಯಾಣಿಕರಿಗೆ ಮನವಿ ಮಾಡಿದೆ. ಸಾಧ್ಯವಾದಷ್ಟು QR ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ NCMC ಕಾರ್ಡ್ ಬಳಸುವಂತೆ ಸೂಚಿಸಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದ್ದು, ಮೆಟ್ರೋ ಮತ್ತು ಭದ್ರತಾ ಸಿಬ್ಬಂದಿಗಳ ಸೂಚನೆ ಪಾಲಿಸುವಂತೆ BMRCL ತಿಳಿಸಿದೆ.ಒಟ್ಟಿನಲ್ಲಿ ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರೋದ್ರಿಂದ BMRCL ಮೆಟ್ರೋ ಸೇವೆ ವಿಸ್ತರಿಸಿದೆ. ಹೀಗಾಗಿ ಅಕ್ಟೋಬರ್ 3ರಂದು ಮೆಟ್ರೋದಲ್ಲಿ ಪ್ರಯಾಣಿಸುವವರು ಕೊನೆಯ ರೈಲುಗಳ ಸಮಯವನ್ನ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಪ್ಲಾನ್ ಮಾಡಿಕೊಳ್ಳುವುದು ಸೂಕ್ತ.