• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಲಾಂಗ್ ವೀಕೆಂಡ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನಾಳೆ ನಮ್ಮ Metro ರೈಲು ಸೇವೆ ವಿಸ್ತರಣೆ

ಲಾಂಗ್ ವೀಕೆಂಡ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನಾಳೆ ನಮ್ಮ Metro ರೈಲು ಸೇವೆ ವಿಸ್ತರಣೆ

Namma Metro: ಮೆಟ್ರೋ ಪ್ರಯಾಣಿಕರೇ ಗುಡ್‌ ನ್ಯೂಸ್‌ ಅಕ್ಟೋಬರ್ 3ರ ಶನಿವಾರ ನಮ್ಮ ಮೆಟ್ರೋ ರೈಲು ಸೇವೆ ವಿಸ್ತರಣೆಗೊಂಡಿದೆ

Written ByRamya. R. Gowda
Published: Oct 02, 2026, 07:16 PM IST|Updated: Oct 02, 2026, 07:27 PM IST
joinshare
ಲಾಂಗ್ ವೀಕೆಂಡ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನಾಳೆ ನಮ್ಮ Metro ರೈಲು ಸೇವೆ ವಿಸ್ತರಣೆ

About the Author

Ramya. R. Gowda

Ramya. R. Gowda

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

Trending

  • News
  • Photos
  • Videos
44 ವರ್ಷಗಳ ಬಳಿಕ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ! ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು!

44 ವರ್ಷಗಳ ಬಳಿಕ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಬೇಟೆ! ಭಾರತ ಮಹಿಳಾ ಹಾಕಿ ತಂಡಕ್ಕೆ ಐತಿಹಾಸಿಕ ಗೆಲುವು!

2

ಡಾ. ಸುಭಾಷ್ ಚಂದ್ರ ಫೌಂಡೇಶನ್ ಬಾಕ್ಸಿಂಗ್ ಕೇಂದ್ರದ ಅಂಕುಶ್ ಪಂಗಲ್‌ಗೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ; ಇತಿಹಾಸ ಸೃಷ್ಟಿ!

3

ಬೇಯಿಸಿದ ಮೊಟ್ಟೆಗಳನ್ನು ಎಷ್ಟು ದಿನ ಹೊರಗೆ ಇಡಬಹುದು? ಆಹಾರ ವಿಷದ ಬಗ್ಗೆ ತಜ್ಞರ ಸಲಹೆ!

4

ಲಾಂಗ್ ವೀಕೆಂಡ್ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ನಾಳೆ ನಮ್ಮ Metro ರೈಲು ಸೇವೆ ವಿಸ್ತರಣೆ

5

ಹಣದ ಆಸೆಗೆ ಅಪಹರಣವಾಗಿದ್ದೇನೆ ಎಂದು ಡ್ರಾಮಾ..! ತಂದೆಗೆ 90ಲಕ್ಷ ಹಣಕ್ಕೆ ಬೇಡಿಕೆ ಇಟ್ಟವನು ಲಾಕ್..

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Long weekend effect Namma metro: ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದೆ.. ಹೀಗಾಗಿ ಮೆಟ್ರೋ ನಿಲ್ದಾಣಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ನ ಗಮನದಲ್ಲಿಟ್ಟುಕೊಂಡು BMRCL ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 3ರಂದು ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದ್ದು, ವಿವಿಧ ಟರ್ಮಿನಲ್‌ಗಳಿಂದ ಹೊರಡುವ ಕೊನೆಯ ರೈಲುಗಳ ಸಮಯವನ್ನೂ ಪ್ರಕಟಿಸಲಾಗಿದೆ. ಹಾಗಾದ್ರೆ ಯಾವ ಮಾರ್ಗದಲ್ಲಿ ಎಷ್ಟು ಗಂಟೆಯವರೆಗೆ ಮೆಟ್ರೋ ಸಂಚಾರ ಇರಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ..

ಲಾಂಗ್ ವೀಕೆಂಡ್.. ಬೆಂಗಳೂರಿನಿಂದ ಹೊರಡುವವರ ಸಂಖ್ಯೆ ಹೆಚ್ಚಳವಾಗಿದ್ದು, ಮೆಟ್ರೋ ನಿಲ್ದಾಣಗಳಲ್ಲೂ ಪ್ರಯಾಣಿಕರ ದಟ್ಟಣೆ ಸಾಧ್ಯತೆ.. ಪ್ರಯಾಣಿಕರ ಅನುಕೂಲಕ್ಕಾಗಿ BMRCLನಿಂದ ಮೆಟ್ರೋ ಸೇವೆ ವಿಸ್ತರಣೆ..
ಅಕ್ಟೋಬರ್ 3ರಂದು ಹೆಚ್ಚುವರಿ ಅವಧಿಗೆ ನಮ್ಮ ಮೆಟ್ರೋ ರೈಲುಗಳು ಸಂಚರಿಸಲಿವೆ. ಪ್ರಮುಖ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಕೊನೆಯ ರೈಲುಗಳ ಸಮಯವನ್ನೂ BMRCL ಪ್ರಕಟಿಸಿದೆ.

ನೇರಳೆ ಮಾರ್ಗ

ನೇರಳೆ ಮಾರ್ಗದ ಪ್ರಯಾಣಿಕರಿಗೆ ಗುಡ್‌ನ್ಯೂಸ್.. ವೈಟ್‌ಫೀಲ್ಡ್‌ ಕಾಡುಗೋಡಿಯಿಂದ ರಾತ್ರಿ 12 ಗಂಟೆಗೆ ಕೊನೆಯ ಮೆಟ್ರೋ ಹೊರಡಲಿದೆ. ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ರಾತ್ರಿ 12:20ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ಹಸಿರು ಮಾರ್ಗ
ಹಸಿರು ಮಾರ್ಗದಲ್ಲೂ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಮಾದಾವರದಿಂದ ರಾತ್ರಿ 12:15ಕ್ಕೆ ಕೊನೆಯ ರೈಲು ಹೊರಡಲಿದೆ. ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ರಾತ್ರಿ 12:20ಕ್ಕೆ ಕೊನೆಯ ಮೆಟ್ರೋ ಸಂಚರಿಸಲಿದೆ.

ಹಳದಿ ಮಾರ್ಗ
ಹಳದಿ ಮಾರ್ಗದ ಪ್ರಯಾಣಿಕರಿಗೂ ಹೆಚ್ಚುವರಿ ಸೇವೆ ಲಭ್ಯವಾಗಲಿದೆ. ಆರ್.ವಿ. ರಸ್ತೆಯಿಂದ ರಾತ್ರಿ 1:15ಕ್ಕೆ ಕೊನೆಯ ರೈಲು ಹೊರಡಲಿದೆ.ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರದಿಂದ ರಾತ್ರಿ 11:55ಕ್ಕೆ ಕೊನೆಯ ಮೆಟ್ರೋ ಹೊರಡಲಿದೆ.


ಇನ್ನು ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಪ್ರಮುಖ ಮಾಹಿತಿ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12:55ಕ್ಕೆ ಹೊರಡಲಿದೆ.ಇನ್ನು ಟಿಕೆಟ್ ಕೌಂಟರ್‌ಗಳಲ್ಲಿ ಉದ್ದನೆಯ ಸರದಿ ತಪ್ಪಿಸಲು BMRCL ಪ್ರಯಾಣಿಕರಿಗೆ ಮನವಿ ಮಾಡಿದೆ. ಸಾಧ್ಯವಾದಷ್ಟು QR ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ NCMC ಕಾರ್ಡ್ ಬಳಸುವಂತೆ ಸೂಚಿಸಲಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಲಾಗಿದ್ದು, ಮೆಟ್ರೋ ಮತ್ತು ಭದ್ರತಾ ಸಿಬ್ಬಂದಿಗಳ ಸೂಚನೆ ಪಾಲಿಸುವಂತೆ BMRCL ತಿಳಿಸಿದೆ.ಒಟ್ಟಿನಲ್ಲಿ ಲಾಂಗ್ ವೀಕೆಂಡ್ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರೋದ್ರಿಂದ BMRCL ಮೆಟ್ರೋ ಸೇವೆ ವಿಸ್ತರಿಸಿದೆ. ಹೀಗಾಗಿ ಅಕ್ಟೋಬರ್ 3ರಂದು ಮೆಟ್ರೋದಲ್ಲಿ ಪ್ರಯಾಣಿಸುವವರು ಕೊನೆಯ ರೈಲುಗಳ ಸಮಯವನ್ನ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಪ್ಲಾನ್ ಮಾಡಿಕೊಳ್ಳುವುದು ಸೂಕ್ತ.

 

Add Zee News as a Preferred Source
TAGS:
Kannada News