• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಸರ್ಕಾರದ ಯೋಜನೆಗಳು ಉಚಿತವಾದ್ರೆ ಬೆಲೆ ಏರಿಕೆ ಖಚಿತವೇ?: ಹೈಕೋರ್ಟ್ ಅಸಮಾಧಾನ

ಸರ್ಕಾರದ ಯೋಜನೆಗಳು ಉಚಿತವಾದ್ರೆ ಬೆಲೆ ಏರಿಕೆ ಖಚಿತವೇ?: ಹೈಕೋರ್ಟ್ ಅಸಮಾಧಾನ

ಉಚಿತ ಗ್ಯಾರಂಟಿ ಯೋಜನೆಗಳ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ತುಪ್ಪದ ಬೆಲೆ ₹650ರಿಂದ ₹850ಕ್ಕೆ ಏರಿಕೆಯಾಗಿರುವುದು, ಹಾಲು ಮತ್ತು ಬಸ್ ಟಿಕೆಟ್ ದರ ಹೆಚ್ಚಳದ ವಿಚಾರವನ್ನ ನ್ಯಾಯಪೀಠ ಪ್ರಸ್ತಾಪಿಸಿದೆ. ಈ ಅಭಿಪ್ರಾಯವನ್ನ ಮುಂದಿಟ್ಟುಕೊಂಡು ಜೆಡಿಎಸ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಮೇಲೆ ಮತ್ತೊಂದೆಡೆ ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ ಎಂದು ಆರೋಪಿಸಿದೆ.

Written ByPuttaraj K Alur
Published: Nov 10, 2026, 06:49 IST|Updated: Nov 10, 2026, 07:00 IST
joinshare
ಸರ್ಕಾರದ ಯೋಜನೆಗಳು ಉಚಿತವಾದ್ರೆ ಬೆಲೆ ಏರಿಕೆ ಖಚಿತವೇ?: ಹೈಕೋರ್ಟ್ ಅಸಮಾಧಾನ
Image Credit: Karnataka High Court

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka High Court: ರಾಜ್ಯದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಹಾಗೂ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಉಚಿತ ಯೋಜನೆಗಳ ನಡುವೆ ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಪೀಠವು, ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ಹೇಗೆ ಎಂದು ಕಳವಳ ವ್ಯಕ್ತಪಡಿಸಿದೆ. ಇದೇ ವಿಚಾರವನ್ನ ಮುಂದಿಟ್ಟುಕೊಂಡು ಜೆಡಿಎಸ್ ಕೂಡ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ತುಪ್ಪದ ಬೆಲೆ ಏರಿಕೆ ಬಗ್ಗೆ ನ್ಯಾಯಪೀಠದ ಅಸಮಾಧಾನ

ಪ್ರಕರಣದ ವಿಚಾರಣೆ ವೇಳೆ ದಿನಬಳಕೆಯ ವಸ್ತುಗಳ ದರ ಹೆಚ್ಚಳದ ಬಗ್ಗೆ ನ್ಯಾಯಪೀಠ ಗಮನ ಸೆಳೆದಿದೆ. ಈ ಹಿಂದೆ 650 ರೂಪಾಯಿ ಇದ್ದ ತುಪ್ಪದ ಬೆಲೆ ಇದೀಗ 850 ರೂಪಾಯಿಗೆ ಏರಿಕೆಯಾಗಿದೆ ಎಂದು ಉಲ್ಲೇಖಿಸಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ತುಪ್ಪದ ದೀಪ ಹಚ್ಚುವ ವಿಚಾರವನ್ನೂ ಪ್ರಸ್ತಾಪಿಸಿದ ನ್ಯಾಯಪೀಠ, ದೀಪಾವಳಿಗೆ ತುಪ್ಪದ ಯಮದೀಪ ಹಚ್ಚಬೇಕು. ಇಷ್ಟು ದರ ಹೆಚ್ಚಾದರೆ ತುಪ್ಪದ ದೀಪ ಹಚ್ಚುವುದು ಹೇಗೆ? ಬೆಲೆ ಇಷ್ಟೊಂದು ಹೆಚ್ಚಾದರೆ ಸಾಮಾನ್ಯ ಜನರು ಹಬ್ಬದ ಸಂಪ್ರದಾಯಗಳನ್ನ ಹೇಗೆ ಆಚರಿಸಬೇಕು ಎಂಬ ಅರ್ಥದಲ್ಲಿ ಪ್ರಶ್ನಿಸಿದೆ.

ಇದೇ ಸಂದರ್ಭದಲ್ಲಿ ಹಾಲು ಮತ್ತು ಬಸ್ ಟಿಕೆಟ್ ದರಗಳೂ ಹೆಚ್ಚಾಗಿರುವುದನ್ನ ನ್ಯಾಯಪೀಠ ಪ್ರಸ್ತಾಪಿಸಿದೆ. ದೀಪಾವಳಿ ಹಬ್ಬದ ಬಳಿಕ ಸಕ್ಕರೆ ದರವೂ ಹೆಚ್ಚಾಗಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳ ಬೆಲೆ ಹೀಗೆ ಏರಿಕೆಯಾಗುತ್ತಿದ್ದರೆ ಜನಸಾಮಾನ್ಯರು ತಮ್ಮ ದೈನಂದಿನ ಜೀವನವನ್ನ ಹೇಗೆ ನಿರ್ವಹಿಸಬೇಕು ಎಂಬ ಕಳವಳವನ್ನ ಮೌಖಿಕವಾಗಿ ವ್ಯಕ್ತಪಡಿಸಿದೆ. ಸರ್ಕಾರದ ಯೋಜನೆಗಳು ಉಚಿತವಾಗಿದ್ದರೂ ಮತ್ತೊಂದೆಡೆ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಪರಿಸ್ಥಿತಿಯನ್ನ ನ್ಯಾಯಪೀಠ ಗಮನಕ್ಕೆ ತಂದಿದೆ. ಈ ಮೂಲಕ ಸಾಮಾನ್ಯ ಜನರ ಜೀವನದ ಮೇಲೆ ಬೆಲೆ ಏರಿಕೆ ಉಂಟುಮಾಡಬಹುದಾದ ಪರಿಣಾಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಏನಿದು ಪ್ರಕರಣ?

 

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕನ್ನಡಿಗರ ಕಿವಿಗೆ ಹೂವಿಡುತ್ತಿರುವ @INCKarnataka ಸರ್ಕಾರಕ್ಕೆ ಮಾನ್ಯ ಹೈಕೋರ್ಟ್ ಛೀಮಾರಿ ಹಾಕಿರುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಒಂದು ಕೈಯಲ್ಲಿ 'ಉಚಿತ'ದ ಆಮಿಷವೊಡ್ಡಿ, ಇನ್ನೊಂದು ಕೈಯಲ್ಲಿ ಹಾಲು, ತುಪ್ಪ, ವಿದ್ಯುತ್ ದರಗಳನ್ನು ಮನಬಂದಂತೆ ಏರಿಸಿ ಬಡವರು, ರೈತರು ಹಾಗೂ ಜನಸಾಮಾನ್ಯರ ಕತ್ತು ಹಿಸುಕುತ್ತಿದೆ ಈ ಸರ್ಕಾರ. 650 ರೂ. ಇದ್ದ ತುಪ್ಪದ ದರವನ್ನು 850 ರೂ.ಗೆ ಏರಿಸಿ ದೀಪಾವಳಿ ಹಬ್ಬದಂದೇ ಜನರ ಮನೆಗೆ ಕತ್ತಲು ಆವರಿಸುವಂತೆ ಮಾಡಿದ್ದೀರಿ. 'ಜನ ಯಮದೀಪ ಹಚ್ಚುವ ಬದಲು, ಯಮನೇ ಬರಲಿ ಎನ್ನುವಂತಾಗಿದೆ' ಎಂದು ನ್ಯಾಯಪೀಠವೇ ಕಳವಳ ವ್ಯಕ್ತಪಡಿಸುವ ಮಟ್ಟಿಗೆ ರಾಜ್ಯದ ಆಡಳಿತ ಕುಸಿದುಬಿದ್ದಿದೆ. @DKShivakumar ಅವರೇ, ಜನರನ್ನು ಮರಳು ಮಾಡುವ ನಿಮ್ಮ ಗ್ಯಾರಂಟಿಗಳೆಂಬ 'ಹಗಲು ದರೋಡೆ'ಯನ್ನು ರಾಜ್ಯದ ಜನತೆ ಅರ್ಥಮಾಡಿಕೊಂಡಿದ್ದಾರೆ. ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿರುವ ನಿಮ್ಮ ಜನವಿರೋಧಿ ಆಡಳಿತಕ್ಕೆ ಕನ್ನಡಿಗರು ಶೀಘ್ರದಲ್ಲೇ ತಕ್ಕ ಶಾಸ್ತಿ ಮಾಡಲಿದ್ದಾರೆ. ನಾಡಿನ ಜನರ ಶಾಪ ಈ ಸರ್ಕಾರಕ್ಕೆ ತಟ್ಟುವುದು ನಿಶ್ಚಿತ. #CongressTax #AntiPoorGovt

— Janata Dal Secular (JDS) (@JanataDal_S) November 9, 2026

 ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದೆ. ಮೈಸೂರಿನ ಸರ್ಕಾರಿ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಧಾನ್ಯಗಳ ಲೆಕ್ಕಪರಿಶೋಧನೆ ನಡೆಸಿದ ಸಂದರ್ಭದಲ್ಲಿ 320 ಕ್ವಿಂಟಲ್ ಅಕ್ಕಿ ಹಾಗೂ 85 ಕ್ವಿಂಟಲ್ ಗೋಧಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು ಎಂದು ವರದಿಯಾಗಿದೆ. ಈ ಅಕ್ರಮದ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನ ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠವು ಮೌಖಿಕವಾಗಿ ಬೆಲೆ ಏರಿಕೆ ಹಾಗೂ ಉಚಿತ ಯೋಜನೆಗಳ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದೆ.

 

ಹೈಕೋರ್ಟ್ ಅಭಿಪ್ರಾಯ ಮುಂದಿಟ್ಟುಕೊಂಡು ಜೆಡಿಎಸ್ ವಾಗ್ದಾಳಿ

ಹೈಕೋರ್ಟ್‌ನ ಅಭಿಪ್ರಾಯದ ವರದಿಯನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೆಡಿಎಸ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆ ಮಾಡಿದೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರಿಗೆ ಉಚಿತ ಸೌಲಭ್ಯಗಳನ್ನ ನೀಡುತ್ತಿರುವ ಸರ್ಕಾರ ಮತ್ತೊಂದೆಡೆ ಹಾಲು, ತುಪ್ಪ ಹಾಗೂ ವಿದ್ಯುತ್ ದರಗಳನ್ನ ಹೆಚ್ಚಿಸುತ್ತಿದೆ ಎಂದು ಆರೋಪಿಸಿದೆ.

650 ರೂಪಾಯಿ ಇದ್ದ ತುಪ್ಪದ ಬೆಲೆ 850 ರೂಪಾಯಿಗೆ ಏರಿಕೆಯಾಗಿರುವುದನ್ನ ಪ್ರಸ್ತಾಪಿಸಿರುವ ಜೆಡಿಎಸ್, ಬೆಲೆ ಏರಿಕೆಯಿಂದ ಬಡವರು, ರೈತರು ಮತ್ತು ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದೆ. ಉಚಿತ ಯೋಜನೆಗಳ ಹೆಸರಿನಲ್ಲಿ ಜನರಿಗೆ ಒಂದು ರೀತಿಯ ಸೌಲಭ್ಯ ನೀಡುತ್ತಾ, ಮತ್ತೊಂದೆಡೆ ಅಗತ್ಯ ವಸ್ತುಗಳ ದರ ಹೆಚ್ಚಿಸುವ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹಾಕಲಾಗುತ್ತಿದೆ ಎಂಬುದು ಜೆಡಿಎಸ್‌ನ ಆರೋಪವಾಗಿದೆ.

ನ್ಯಾಯಪೀಠವು ದೀಪಾವಳಿಯ ಯಮದೀಪದ ವಿಚಾರವಾಗಿ ವ್ಯಕ್ತಪಡಿಸಿದ ಕಳವಳವನ್ನೂ ಜೆಡಿಎಸ್ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಬೆಲೆ ಏರಿಕೆ ನಡುವಿನ ವಿಚಾರವನ್ನ ಮುಂದಿಟ್ಟುಕೊಂಡು ಆಡಳಿತ ವೈಫಲ್ಯ ಎಂದು ಟೀಕಿಸಿದೆ. ಅಲ್ಲದೆ ಜನಸಾಮಾನ್ಯರ ಸಮಸ್ಯೆಗಳನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸುವ ರೀತಿಯಲ್ಲಿ ವಾಗ್ದಾಳಿ ನಡೆಸಿದೆ.

ಒಟ್ನಲ್ಲಿ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ವ್ಯಕ್ತಪಡಿಸಿದ ಬೆಲೆ ಏರಿಕೆಯ ಕುರಿತ ಕಳವಳ ಇದೀಗ ರಾಜಕೀಯ ಚರ್ಚೆಗೂ ಕಾರಣವಾಗಿದೆ. ತುಪ್ಪ, ಹಾಲು ಹಾಗೂ ಬಸ್ ಟಿಕೆಟ್ ದರಗಳ ಹೆಚ್ಚಳದ ವಿಚಾರದೊಂದಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಜೆಡಿಎಸ್ ಸರ್ಕಾರವನ್ನ ಪ್ರಶ್ನಿಸಿದೆ.

Add Zee News as a Preferred Source
TAGS:
Karnataka Politics
Kannada News