SOCIAL MEDIA

Newsletter

PARTNER SITES
Select Language Select State

ಹಣದ ಆಸೆಗೆ ಅಪಹರಣವಾಗಿದ್ದೇನೆ ಎಂದು ಡ್ರಾಮಾ..! ತಂದೆಗೆ 90ಲಕ್ಷ ಹಣಕ್ಕೆ ಬೇಡಿಕೆ ಇಟ್ಟವನು ಲಾಕ್..

Man who demanded ₹90 lakh from his father: ಅಪ್ಪ ಮಗನ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲಾ. ಆದರೆ ಇಲ್ಲೊಬ್ಬ ಮಗ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ‌. ತಂದೆಯಿಂದ ಹಣ ಪೀಕೋದಕ್ಕೆ ಮಾಡಿದ್ದ ಐನಾತಿ ಐಡಿಯಾ ಅವನಿಗೆ ಮುಳುವಾಗಿದೆ. ಹಾಗಾದ್ರೆ ಆ ಕೀಚಕ ಮಗ ಮಾಡಿದ್ದೇನೂ ಅಂತೀರಾ ತೋರಿಸ್ತೀವಿ ನೋಡಿ.

Written By Ramya. R. Gowda
Published: Oct 02, 2026, 06:26 PM IST | Updated: Oct 02, 2026, 06:48 PM IST
Join

ಅಪ್ಪ ಮಗನ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲಾ. ಆದರೆ ಇಲ್ಲೊಬ್ಬ ಮಗ ಮಾಡಬಾರದ ಕೆಲಸ ಮಾಡಿಬಿಟ್ಟಿದ್ದಾನೆ‌. ತಂದೆಯಿಂದ ಹಣ ಪೀಕೋದಕ್ಕೆ ಮಾಡಿದ್ದ ಐನಾತಿ ಐಡಿಯಾ ಅವನಿಗೆ ಮುಳುವಾಗಿದೆ. ಹಾಗಾದ್ರೆ ಆ ಕೀಚಕ ಮಗ ಮಾಡಿದ್ದೇನೂ ಅಂತೀರಾ ತೋರಿಸ್ತೀವಿ ನೋಡಿ.

ಯೆಸ್ ಈ ಫೋಟೋದಲ್ಲಿ ಕಾಣುತ್ತಿರುವ ಆಸಾಮಿ ಹೆಸರು ಮನೀಶ್. ನೋಡುವುದಕ್ಕೆ ಸಚಾ ತರ ಕಂಡರೂ ಸಹ ಮಾಡಿರೋದು ಮಣ್ಣು ತಿನ್ನುವ ಕೆಲಸ. ಹೌದು ಗದಗದಲ್ಲಿ ಹಣದ ವ್ಯವಹಾರ ಇದೆ, ಅಲ್ಲಿಗೆ ಹೋಗುತ್ತಿದ್ದೇನೆ ಎಂದು ತಂದೆಗೆ ಹೇಳಿದ್ದ 40 ವರ್ಷದ ಮನೀಷ್ ಪಟೇಲ್, ರೈಲಿನಲ್ಲಿ ಹೋಗುತ್ತಿದ್ದೇನೆ, ಬೆಳಗ್ಗೆ ಫೋನ್ ಮಾಡುತ್ತೇನೆ ಎಂದು ಮನೆಯಿಂದ ಹೊರಟಿದ್ದ. ಮಗ ಹೇಳಿದಂತೆ ಬೆಳಗ್ಗೆ 8 ಗಂಟೆ ಸುಮಾರಿಗೆ ತಂದೆಗೆ ಮನೀಷ್‌ನ ಮೊಬೈಲ್ ನಂಬರ್‌ನಿಂದಲೇ ವಾಟ್ಸ್‌ಆ್ಯಪ್ ಕರೆ ಬಂದಿತ್ತು. ಆದರೆ ಫೋನ್‌ನಲ್ಲಿ ಮಾತನಾಡಿದ್ದು ಮನೀಷ್ ಅಲ್ಲ, ಅಪರಿಚಿತ ವ್ಯಕ್ತಿಗಳು. ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ, 90 ಲಕ್ಷ ರೂಪಾಯಿ ಹಣ ನೀಡಬೇಕು, ಇಲ್ಲದಿದ್ದರೆ ಮಗನನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು.


ಮಗನಿಗೆ ಏನಾಗಿದೆ ಎಂಬ ಆತಂಕದಲ್ಲಿದ್ದ 62 ವರ್ಷದ ಮನೋಹರ್ ಪಟೇಲ್, ಕೂಡಲೇ ಆರ್‌ಆರ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಈ ನಡುವೆ ಕಿಡ್ನ್ಯಾಪರ್‌ಗಳು ನಾಲ್ಕೈದು ಬಾರಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಮನೀಷ್‌ನ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಪೊಲೀಸರು ತಕ್ಷಣ ತನಿಖೆ ಆರಂಭಿಸಿ ಮೊಬೈಲ್ ಹಾಗೂ ಕರೆಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಇದೇ ವೇಳೆ ಅಪರಿಚಿತ ಸಂಖ್ಯೆಯಿಂದ ಮತ್ತೆ ತಂದೆಗೆ ಕರೆ ಮಾಡಿ ಹಣ ಅರೇಂಜ್ ಆಯ್ತಾ ಎಂದು ಕೇಳಲಾಗಿತ್ತು.


ಕರೆ ಬಂದ ಮೊಬೈಲ್ ನಂಬರ್‌ನ್ನು ಟ್ರ್ಯಾಕ್ ಮಾಡಿದ ಪೊಲೀಸರು ಹಾಸನ ಭಾಗದಲ್ಲಿ ಹುಡುಕಾಟ ನಡೆಸಿದ್ದರು. ಕೊನೆಗೆ ಶಂಕಿತ ಸ್ಥಳಕ್ಕೆ ತೆರಳಿ ಬಾಗಿಲು ತೆರೆದಾಗ ಪೊಲೀಸರಿಗೆ ಅಚ್ಚರಿಯ ದೃಶ್ಯ ಎದುರಾಗಿದೆ. ಕಿಡ್ನ್ಯಾಪ್ ಆಗಿದ್ದಾನೆ ಎಂದು ದೂರು ನೀಡಲಾಗಿದ್ದ ಮನೀಷ್ ಪಟೇಲ್, ಇಬ್ಬರು ವ್ಯಕ್ತಿಗಳ ಜೊತೆ ಜಾಲಿಯಾಗಿ ಕುಳಿತ್ತಿದ್ದ. ಮೂವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಂದೆಯಿಂದ 90 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಲು ಕಿಡ್ನ್ಯಾಪ್ ನಾಟಕ ರೂಪಿಸಿದ್ದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಮನೀಷ್ ಪಟೇಲ್ ಸೇರಿದಂತೆ ಮೂವರನ್ನು ಆರ್‌ಆರ್ ನಗರ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಅದೆನೇ ಹೇಳಿ. ತಂದೆಯಿಂದಲೇ ಹಣ ಕೀಳಬೇಕು ಎಂಬ ಉದ್ದೇಶಕ್ಕೆ ತಾನೇ ಕಿಡ್ನಾಪ್ ಆಗಿದ್ದೇನೆ ಎಂದು ನಾಟಕವಾಡಿದ್ದ ಐನಾತಿ ಜೈಲಲ್ಲಿ ಮುದ್ದೆ ಮುರಿಯುವ ಪರಿಸ್ಥಿತಿ ಬಂದಿರೋದಂತು ಸುಳ್ಳಲ್ಲ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES