SOCIAL MEDIA

Newsletter

PARTNER SITES
Select Language Select State

ಫೇಮಸ್ 5 ಸ್ಟಾರ್ ಹೋಟೆಲ್‌ ಸ್ವಿಮ್ಮಿಂಗ್ ನಲ್ಲಿ ಇಬ್ಬರು ವಿದೇಶಿಗರ ಸಾವು.‌!

Foreingns died in five star hotel in bangalore: ಅದು ಬೆಂಗಳೂರಿನ ಫೇಮಸ್ 5 ಸ್ಟಾರ್ ಹೋಟೆಲ್. ಪ್ರವಾಸಕ್ಕೆ ಅಂತಾ ಬರೋ ವಿದೇಶಿಗರು ಈ ಹೋಟೆಲ್ ನಲ್ಲಿ ಉಳಿದುಕೊಳ್ತಾರೆ. ವಿವಿಐಪಿಗಳು ಇಲ್ಲಿ ರೂಂ‌ ಮಾಡ್ತಾರೆ.ಅಷ್ಟೇ ಸ್ಪೆಷಾಲಿಟಿಸ್ ಕೂಡ ಆ ಹೋಟೆಲ್ ನಲ್ಲಿದೆ. ಫಾರಿನ್ ನಂತೆಯೇ ಭಾಸವಾಗುವ ಈ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅಲ್ಲಿನ ಅತಿಥಿಗಳ ಜೀವಕ್ಕೆ ಗ್ಯಾರೆಂಟಿ ಇಲ್ಲ ಅನ್ನೋ ಪ್ರಶ್ನೆ ಮೂಡಿದೆ.ಯಾಕಂದ್ರೆ ಆ ಹೋಟೆಲ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಇಬ್ಬರು ವಿದೇಶಗರು ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಯಾವುದು ಆ ಹೋಟೆಲ್..? ಏನಾಗಿತ್ತು ಅಂತೀರಾ ಹೇಳ್ತೀವಿ ನೋಡಿ.

Written By Ramya. R. Gowda
Published: Oct 31, 2026, 04:34 PM IST | Updated: Oct 31, 2026, 04:43 PM IST
Join

Foreingns died in five star hotel in bangalore:  ಅದು ಬೆಂಗಳೂರಿನ ಫೇಮಸ್ 5 ಸ್ಟಾರ್ ಹೋಟೆಲ್. ಪ್ರವಾಸಕ್ಕೆ ಅಂತಾ ಬರೋ ವಿದೇಶಿಗರು ಈ ಹೋಟೆಲ್ ನಲ್ಲಿ ಉಳಿದುಕೊಳ್ತಾರೆ. ವಿವಿಐಪಿಗಳು ಇಲ್ಲಿ ರೂಂ‌ ಮಾಡ್ತಾರೆ.ಅಷ್ಟೇ ಸ್ಪೆಷಾಲಿಟಿಸ್ ಕೂಡ ಆ ಹೋಟೆಲ್ ನಲ್ಲಿದೆ. ಫಾರಿನ್ ನಂತೆಯೇ ಭಾಸವಾಗುವ ಈ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅಲ್ಲಿನ ಅತಿಥಿಗಳ ಜೀವಕ್ಕೆ ಗ್ಯಾರೆಂಟಿ ಇಲ್ಲ ಅನ್ನೋ ಪ್ರಶ್ನೆ ಮೂಡಿದೆ.ಯಾಕಂದ್ರೆ ಆ ಹೋಟೆಲ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಇಬ್ಬರು ವಿದೇಶಗರು ಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಅಷ್ಟಕ್ಕೂ ಯಾವುದು ಆ ಹೋಟೆಲ್..? ಏನಾಗಿತ್ತು ಅಂತೀರಾ ಹೇಳ್ತೀವಿ ನೋಡಿ.

ಈ ಐಷಾರಾಮಿ ಹೋಟೆಲ್ ನ ಬಹುತೇಕ ನೀವು ನೋಡಿಯೇ ಇರ್ತೀರಾ. ಹಲಸೂರು ಬಳಿಯ ಈ ಫೇಮಸ್ ಫೈವ್ ಸ್ಟಾರ್ ಹೋಟೆಲ್ ಹೆಸ್ರು ಕಾನ್ರಾಡ್ ಹೋಟೆಲ್ ಅಂತಾ. ಕಾನ್ರಾಡ್ ಅಂತಾ ಗೂಗಲ್ ಮಾಡಿದ್ರೆ ತುಂಬಾ ಡೀಟೆಲ್ಸ್ ಸಿಕ್ಕುತ್ತೆ. ಹಲವರು ಹೋಟೆಲ್ ಟೂರ್ ಮಾಡಿ ಒಳಗಡೆ ಹಂಗಿದೆ ಹಿಂಗಿದೆ ಅಂತಾ ವಿವರಣೆ ಕೂಡ ಮಾಡಿ ಅಪ್ ಲೋಡ್ ಮಾಡಿದ್ದಾರೆ.ಇಂಟೀರಿಯರ್,ಕ್ವಾಲಿಟಿ, ಮಸ್ತ್ ಸ್ವಿಮ್ಮಿಂಗ್ ಫೂಲ್ ಅಂತಾ ಎಕ್ಸ್ ಪ್ಲೇನ್ ಮಾಡಿದ್ದಾರೆ.‌ಇದ್ರ ಕ್ವಾಲಿಟಿ ನೋಡಿ ಹಲವು ವಿವಿಐಪಿಗಳು, ವಿದೇಶಿಗರು ಇಲ್ಲಿ ರೂಂ ಪಡೆದು ವಾಸ ಕೂಡ ಮಾಡ್ತಾರೆ. ಆದ್ರೆ ಇಷ್ಟು ದಿನ ಇದು ಫೈವ್ ಸ್ಟಾರ್ ಹೋಟೆಲ್ ಅನ್ನಿಸಿಕೊಳ್ತಿತ್ತು.. ಆದ್ರೀಗ ಸೇಫ್ಟಿ ಇಲ್ಲದ ಸ್ಟಾರ್ ಹೋಟೆಲ್ ಅನ್ನೋ ಹೆಸರು ಕರೆಸಿಕೊಳ್ತಿದೆ.ಯಾಕಂದ್ರೆ ಈ ಹೋಟೆಲ್‌ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಇಬ್ಬರು ವಿದೇಶಿಗರು ಅನುಮಾಸ್ಪದವಾಗಿ ಸಾವನ್ನಪ್ಪಿದ್ರೆ, ಇನ್ನಿಬ್ಬರು ಆಸ್ಪತ್ರೆ ಸೇರಿದ್ದಾರೆ.

ಅಂದ್ಹಾಗೆ ಆಗಿದ್ದೇನು ಅಂತಾ ಹೇಳ್ತೀವಿ ನೋಡಿ. ಈ ಹೋಟೆಲ್ ನಲ್ಲಿ ಹಲವು ವಿದೇಶಿಗರು, ವಿವಿಐಪಿಗಳು,ಬೇರೆ ರಾಜ್ಯದಿಂದ ಬಂದವರು ಉಳಿದುಕೊಂಡಿದ್ದಾರೆ. ಫ್ಯಾಮಿಲಿ ಸಮೇತ ಇಲ್ಲಿ ರೂಂ ಪಡೆದಿದ್ದಾರೆ.ಅದೇ ರೀತಿ ಸ್ಲೋವಾಕೀಯ ರಿಪಬ್ಲಿಕ್ ದೇಶದ 45 ವರ್ಷದ ಜೂರಾಜ್ ಹೋವರ್ತ್ ಹಾಗೂ ಜರ್ಮನ್ ಮೂಲದ 57 ವರ್ಷದ ಅಲೆಕ್ಸಾಂಡರ್ ಇಬ್ಬರೂ ಕುಟುಂಬ ಸಮೇತ ರೂಂ ಬಾಡಿಗೆ ಪಡೆದಿದ್ರು.ನಿನ್ನೆ ರಾತ್ರಿ 11.30ರ ಸುಮಾರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಸ್ನಾನ ಮಾಡಿ ಹೊರಗೆ ಬರ್ತಿದ್ರು. ಈ ವೇಳೆ ಇದ್ದಕ್ಕಿದ್ದಂತೆ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿದ್ದಾರೆ. ಯಾವಾಗ ಅವ್ರಿಗೆ ಕರೆಂಟ್ ಹೊಡೀತೋ ಕೂಡಲೇ ಅಲ್ಲಿದ್ದ ಮತ್ತೋರ್ವ ಯು ಎಸ್ ಮೂಲದ ವ್ಯಕ್ತಿ ಮ್ಯಾಥ್ಯೂ ಹಾಗೂ ಪೂಲ್ ನ ನಿರ್ವಾಹಕ ರಾಹುಲ್ ತ್ರಿಪಾಠಿ ಇಬ್ರೂ ರಕ್ಷಣೆಗೆ ಮುಂದಾಗಿ ಅವ್ರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ..


ಸದ್ಯ ಎರಡು ಮೃತದೇಹಗಳನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಿ ಮರಣೋತ್ತರ ಪರೀಕ್ಷೆ ನಡೆಸಲಾಗ್ತಿದೆ.ಗಾಯಾಳು ಇಬ್ಬರಿಗೆ ಚಿಕಿತ್ಸೆ ಕೊಡಿಸಲಾಗ್ತಿದೆ.ಘಟನೆಗೆ ಹೋಟೆಲ್ ಮ್ಯಾನೇಜ್ಮೆಂಟ್ ನವರ ನಿರ್ಲಕ್ಷ್ಯಯೇ ಕಾರಣ ಅಂತಾ ಮರೆತ ಅಲೆಕ್ಸಾಂಡರ್ ಪತ್ನಿ ದೂರು ನೀಡಿದ್ದಾರೆ.ನಿರ್ಲಕ್ಷ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವ ಹಲಸೂರು ಪೊಲೀಸ್ರು ತನಿಖೆ ಮುಂದುವರೆಸಿದ್ದಾರೆ. ಏನೇ ಹೇಳಿ.ಇಂತಹ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇಂತಹ ದಿವ್ಯ ನಿರ್ಲಕ್ಷ್ಯ ಅಂದ್ರೆ ಇನ್ನೆಲ್ಲಿ ಸೇಫ್ಟಿ ಅನ್ನೋದು ಬೇಸರದ ಸಂಗತಿ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES