ಬೇಸಿಗೆ ಬರ್ಲಿ ಚಳಿ ಇರ್ಲಿ ,ಮಳೆ ಬಿಡ್ಲಿ, ಐಸ್‌ಕ್ರೀಮ್ ಅಂದ್ರೆ ನಮಗೆಲ್ಲಾ ಸಕ್ಕತ್ ಇಷ್ಟ...ಆದ್ರೆ ನೀವು ತಿಂತಿರೋ ಐಸ್‌ಕ್ರೀಮ್ ಅಸಲಿ ಮಜಾ ಕೊಡ್ತಿದೆಯಾ ಅಥವಾ ನಿಮ್ಮ ಹೆಲ್ತ್‌ಗೆ ಕೊಳ್ಳಿ ಇಡ್ತಿದೆಯಾ ಅಂತ ಒಮ್ಮೆ ಯೋಚನೆ ಮಾಡಿದ್ದೀರಾ? ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿರೋ ಬರೋಬ್ಬರಿ 45 ಐಸ್‌ಕ್ರೀಮ್ ಫ್ಯಾಕ್ಟರಿಗಳ ಮೇಲೆ ಫುಡ್ ಸೇಫ್ಟಿ ಆಫೀಸರ್ಸ್ ದಾಳಿ ಮಾಡಿದ್ದು, ಅಲ್ಲಿ ಎಕ್ಸ್ಪೈರ್ ಆಗಿರುವ ಡೇಂಜರಸ್ ಐಸ್‌ಕ್ರೀಮ್‌ಗಳು ಪತ್ತೆಯಾಗಿವೆ..ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ....
ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡ್ತಿರುವ ಐಸ್‌ಕ್ರೀಮ್ ಫ್ಯಾಕ್ಟರಿಗಳ ಅಸಲಿ ಬಣ್ಣ ಈಗ ಹೊರಬಂದಿದೆ...ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಪಾಡೋ ಉದ್ದೇಶದಿಂದ ಫುಡ್ ಸೇಫ್ಟಿ ಆಫೀಸರ್ಸ್ ಒಟ್ಟು 45 ಐಸ್‌ಕ್ರೀಮ್ ಮೇಕಿಂಗ್ ಯೂನಿಟ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ ಸಖತ್ ತಪಾಸಣೆ ಮಾಡಿದ್ದಾರೆ.
ಯಾವೆಲ್ಲಾ ಕಡೆ ಈ ರೇಡ್ ನಡೆದಿದೆ?
* ಬೆಂಗಳೂರಿನ ಜಯನಗರ 3ನೇ ಬ್ಲಾಕ್‌ನಲ್ಲಿರುವ ಸಾವರ ಐಸ್‌ಕ್ರೀಮ್ ಕೆಫೆ'
* ಬಿಳೇಕಹಳ್ಳಿಯ ಬನ್ನೇರುಘಟ್ಟ ರಸ್ತೆಯಲ್ಲಿರೋ ಎನ್ ಎಂಟರ್‌ಪ್ರೈಸಸ್'
* ಮೈಸೂರಿನ ಜಾನ್ ಕ್ಯಾಂಡಿ ಐಸ್‌ಕ್ರೀಂ ಘಟಕ'
* ಹಾಗೂ ರಾಯಚೂರಿನ ಜೆಮಿನಿ ಐಸ್‌ಕ್ರೀಂ ಘಟಕ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ಒಳನುಗ್ಗಿ ಇನ್‌ಸ್ಪೆಕ್ಷನ್ ಮಾಡಿದ್ದಾರೆ.
ಈ ತಪಾಸಣೆ ವೇಳೆ ತಯಾರಿಕಾ ಘಟಕಗಳಲ್ಲಿ ನೈರ್ಮಲ್ಯ ಹೇಗಿದೆ, ಹಾಲಿನ ಪ್ರಾಡಕ್ಟ್ಸ್ ಹೇಗೆ ಸ್ಟೋರ್ ಮಾಡಿದ್ದಾರೆ ಅಂತ ಪರಿಶೀಲಿಸಿದ ಅಧಿಕಾರಿಗಳು, ಒಟ್ಟು 70 ಆಹಾರ ಮಾದರಿಗಳನ್ನು ಸ್ಯಾಂಪಲ್ ರೂಪದಲ್ಲಿ ಕಲೆಹಾಕಿದ್ದಾರೆ. ಐಸ್‌ಕ್ರೀಮ್, ಹಾಲಿನ ಪೌಡರ್, ಫ್ಲೇವರ್ ಕೊಡುವ ವಸ್ತುಗಳು ಹಾಗೂ ಸಕ್ಕರೆಯನ್ನು ಸೀಜ್ ಮಾಡಿ, ಮುಂದಿನ ಟೆಸ್ಟಿಂಗ್‌ಗಾಗಿ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿದೆ. ಲ್ಯಾಬ್ ವರದಿ ಬಂದಮೇಲೆ ಯಾರ್ಯಾರು ಏನೇನು ಕಲಬೆರಕೆ ಮಾಡಿದ್ದಾರೆ ಅನ್ನೋ ಅಸಲಿ ಸತ್ಯ ಹೊರಬರಲಿದೆ.
ಇನ್ನು ಅತಿ ದೊಡ್ಡ ಶಾಕಿಂಗ್ ಮ್ಯಾಟರ್ ಅಂದ್ರೆ, ಈ ಫ್ಯಾಕ್ಟರಿಗಳಲ್ಲಿ ಅವಧಿ ಮೀರಿದ ಐಸ್‌ಕ್ರೀಮ್, ಹಾಲು, ಬಿಸ್ಕತ್ ಹಾಗೂ ಕೊಬ್ಬರಿ ಪುಡಿ ರಾಶಿ ರಾಶಿಯಾಗಿ ಪತ್ತೆಯಾಗಿದೆ...ಅಷ್ಟೇ ಅಲ್ಲ, ಪ್ರಾಡಕ್ಟ್ಸ್ ಮೇಲೆ ಹಾಕಬೇಕಾದ ಕಡ್ಡಾಯ ಲೇಬಲಿಂಗ್ ರೂಲ್ಸ್ ಕೂಡ ಸರಿಯಾಗಿ ಫಾಲೋ ಮಾಡಿಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಪಿಜಿಗಳು ಹಾಗೂ ಹೋಟೆಲ್‌ಗಳ ಮೇಲೂ ರೇಡ್ ಮಾಡಿದ್ದ ಅಧಿಕಾರಿಗಳು, ಈಗ ಐಸ್‌ಕ್ರೀಮ್ ಬ್ರಾಂಡ್‌ಗಳ ಮೇಲೂ ಕಣ್ಣಿಟ್ಟಿರುವುದು ಕಳಪೆ ತಿಂಡಿ ತಿನ್ನುವ ಜನರನ್ನು ಬೆಚ್ಚಿಬೀಳಿಸಿದೆ.
ಒಟ್ಟಿನಲ್ಲಿ, ಬಾಯಿಗೆ ರುಚಿ ನೀಡುವ ಹೆಸರಲ್ಲಿ ಜನರಿಗೆ ವಿಷ ಉಣಿಸುತ್ತಿರುವ ಇಂತಹ ಫ್ಯಾಕ್ಟರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ. ನೀವೂ ಕೂಡ ಹೊರಗಡೆ ಐಸ್‌ಕ್ರೀಮ್ ಅಥವಾ ಪ್ಯಾಕೆಟ್ ಫುಡ್ ತಗೊಳ್ಳುವಾಗ ಎಕ್ಸ್‌ಪೈರಿ ಡೇಟ್ ಚೆಕ್ ಮಾಡ್ಕೊಳ್ಳೋದು ಮರೀಬೇಡಿ