SOCIAL MEDIA

Newsletter

PARTNER SITES
Select Language Select State

ಫಸ್ಟ್‌ ಇಯರ್ B.Com ವಿದ್ಯಾರ್ಥಿಗೆ ಚಾಕು ಇರಿದು ಕೊ*ಲೆ.. ಈ ಘಟನೆಗೆ ಹುಡುಗಿ ಕಾರಣನಾ?

ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆದರೆ ಓದುವ ಸಮಯದಲ್ಲಿ ಮಕ್ಕಳು ಇಂತಹ ದಾರಿ ಹಿಡಿದರೆ ಮುಂದಿನ ಜನರೇಷನ್‌ ಏನು ಆಗುತ್ತದೆ.

Written By Bhimappa
Published: Oct 03, 2026, 05:16 PM IST | Updated: Oct 03, 2026, 05:21 PM IST
Image Credit: Bengaluru
Join

Bengaluru: ಮಾತು ಆಡಿದ್ರೆ ಹೋಯ್ತು, ಮುತ್ತು ಹೊಡೆದ್ರೆ ಹೋಯ್ತು ಅನ್ನೋ ಗಾದೆ ಮಾತಿದೆ. ಈ ಮಾತಿಗೆ ಸಾಕ್ಷಿಯಾಗಿದ್ದು ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದ ವಿದ್ಯಾರ್ಥಿ ಯೋಗೇಶ್ ಕೊಲೆ ಪ್ರಕರಣ. ಸ್ನೇಹಿತರ ನಡುವೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕರು ಸೇರಿ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಾತ್ರ ತಲೆಮರೆಸಿಕೊಂಡಿದ್ದಾನೆ.

ವಿದ್ಯಾರ್ಥಿ ಯೋಗೇಶ್ ಕೊಲೆ ಕೇಸ್‌ನಲ್ಲಿ
ಅಪ್ರಾಪ್ತರು ಸೇರಿ ನಾಲ್ವರ ಬಂಧನ..!
ಹುಡುಗಿ ವಿಷಯಕ್ಕೆ ಕಾಲೇಜಿನಿಂದ ಡಿಬಾರ್ ಆಗಿದ್ದವನಿಂದ ಕೃತ್ಯ..!

ಕಳೆದ ಬುಧವಾರ ಅನ್ನಪೂರ್ಣೇಶ್ವರಿ ನಗರದ ಖಾಸಗಿ ಕಾಲೇಜು ಬಳಿ ಫಸ್ಟ್‌ ಇಯರ್ ಬಿಕಾಂ ವಿದ್ಯಾರ್ಥಿ ಯೋಗೇಶ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಅಪ್ರಾಪ್ತ ಬಾಲಕರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕೇಸ್‌ಗೆ ಕಾರಣವಾಗಿದ್ದು ಒಂದು ಹುಡುಗಿ ಅನ್ನೋದು ಗೊತ್ತಾಗಿದೆ.

ಯೋಗೇಶ್ ಹಾಗೂ ಭುವನ್ ಸ್ನೇಹಿತರಾಗಿದ್ದರು. ಭುವನ್ ಕಾಲೇಜಿನ ಸೀನಿಯರ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಯುವತಿ ಭುವನ್‌ನ ಪ್ರೀತಿಯನ್ನು ನಿರಾಕರಿಸಿದ್ದಳು. ಇದೇ ಯುವತಿ ಬಗ್ಗೆ ಯೋಗೇಶ್ ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ಭುವನ್ ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಇದರಿಂದ ಕೋಪಗೊಂಡ ಭುವನ್, ಯೋಗೇಶ್ ಜೊತೆ ಮಾತನಾಡಲು ಸ್ನೇಹಿತರೊಂದಿಗೆ ಸೇರಿ ಆತನನ್ನು ಜಿಮ್ ಬಳಿ ಕರೆಸಿಕೊಂಡಿದ್ದ.

ಅಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ವೇಳೆ ಅಪ್ರಾಪ್ತ ಬಾಲಕನೊಬ್ಬ ಯೋಗೇಶ್‌ನ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಯೋಗೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಚಾಕು ಇರಿದಾಗ ಯೋಗೇಶ್‌ನ ಎದೆಯಿಂದ ರಕ್ತ ಬರುತ್ತಿತ್ತು. ನೋವಿನಿಂದ ಯೋಗೇಶ್‌ ಕಿರುಚಾಡುತ್ತಿದ್ದನು. ಇದರಿಂದ ಸ್ಥಳೀಯರಲ್ಲ ಗಾಬರಿಯಿಂದ ಏನಾಯಿತು ಎಂದು ನೋಡುತ್ತಿದ್ದರು. ಆನ್‌ಲೈನ್‌ನಲ್ಲಿ ಚಾಕು ಖರೀದಿಸಿದ್ದ ಚಾಕುವಿನಿಂದ ಹಲ್ಲೆ ಮಾಡಿದ್ದನು.

ಆರೋಪಿಗಳ ಪೈಕಿ ಓರ್ವ ಅಪ್ರಾಪ್ತ ಬಾಲಕ ಕಾಲೇಜಿನಲ್ಲಿ ಅಶಿಸ್ತಿನಿಂದ ವರ್ತಿಸಿದ್ದಾನೆ ಎಂಬ ಕಾರಣಕ್ಕೆ ಡಿಬಾರ್ ಆಗಿದ್ದನು. ಇದೇ ವೇಳೆ ಯುವತಿಯ ವಿಚಾರವನ್ನು ಮುಂದಿಟ್ಟುಕೊಂಡು ಭುವನ್, ಯೋಗೇಶ್ ತನ್ನನ್ನು ಬೈದಿದ್ದಾನೆ ಎಂದು ಹೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಅಪ್ರಾಪ್ತ ಬಾಲಕ ಆನ್‌ಲೈನ್‌ನಲ್ಲಿ ಚಾಕು ಖರೀದಿಸಿದ್ದನು. ಮಾತುಕತೆ ನಡೆಯುತ್ತಿದ್ದ ವೇಳೆ ಸದ್ದಿಲ್ಲದೆ ಯೋಗೇಶ್‌ಗೆ ಚಾಕುವಿನಿಂದ ಇರಿದು, ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಅಪ್ರಾಪ್ತ ಬಾಲಕರು ಹಾಗೂ ಮನೋಜ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಭುವನ್ ಮಾತ್ರ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ.

ಸದ್ಯ ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಜವಾದ ಕಾರಣವೇನು?, ಮೊದಲೇ ಕೊಲೆಗೆ ಸಂಚು ರೂಪಿಸಲಾಗಿತ್ತಾ? ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅದೆನೇ ಹೇಳಿ. ಸಣ್ಣ ಪುಟ್ಟ ಕಾರಣಗಳಿಗೆ ವಿದ್ಯಾರ್ಥಿಗಳೇ ಹೆಣ ಬೀಳಿಸುತ್ತಿದ್ದಾರೆ ಅಂದ್ರೆ ಯುವ ಸಮುದಾಯ ಎತ್ತ ಸಾಗುತ್ತಿದೆ ಎಂಬ ಅನುಮಾನ ಶುರುವಾಗುತ್ತಿದೆ. ಕಾಲೇಜು ಎಂದರೆ ಕೇವಲ ಲವ್‌, ಪ್ರೀತಿ ಒಂದೇ ಇರಲ್ಲ. ಚೆನ್ನಾಗಿ ವಿದ್ಯಾಭ್ಯಾಸ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆದರೆ ಓದುವ ಸಮಯದಲ್ಲಿ ಮಕ್ಕಳು ಇಂತಹ ದಾರಿ ಹಿಡಿದರೆ ಮುಂದಿನ ಜನರೇಷನ್‌ ಏನು ಆಗುತ್ತದೆ. ವಿದ್ಯಾರ್ಥಿಗಳ ನಡುವೆ ಗಲಾಟೆಗೆ ಯಾರು ಹೊಣೆ ಆಗುತ್ತಾರೆ. ಏಕೆಂದರೆ ಮನೆಯಲ್ಲಿ ಮಗ ಚೆನ್ನಾಗಿ ಓದಲಿಯೆಂದು ತಂದೆ, ತಾಯಿ ಕಳಿಸಿರುತ್ತಾರೆ. ಇತ್ತ ಕಾಲೇಜಿನಲ್ಲಿ ಶಿಕ್ಷಕರು ಅವರ ಪಾಠ ಅವರು ಮಾಡಿ ಹೋಗುತ್ತಾರೆ. ಇದರ ನಡುವೆ ನಡೆಯುವ ಇಂತಹ ಘಟನೆಗಳು ಮಕ್ಕಳನ್ನು ತಪ್ಪು ದಾರಿಗೆ ತಳ್ಳುತ್ತವೆ.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES