• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಕ್ರಿಮಿನಲ್ ಕೇಸ್ ಹಾಕಲು ರಾಷ್ಟ್ರಪತಿಗಳು ನಿರ್ದೇಶನ ಕೊಡಿ, ನಿಮ್ಮ ಮಧ್ಯ ಪ್ರವೇಶ ಯಾಕಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

ಕ್ರಿಮಿನಲ್ ಕೇಸ್ ಹಾಕಲು ರಾಷ್ಟ್ರಪತಿಗಳು ನಿರ್ದೇಶನ ಕೊಡಿ, ನಿಮ್ಮ ಮಧ್ಯ ಪ್ರವೇಶ ಯಾಕಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ

ಗ್ಯಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಎಸ್‌ಐಆರ್‌ ಸರಿಯಾಗಿ ನಡೆಯುತ್ತಿಲ್ಲ. ಗ್ಯಾನೇಶ್ ಕುಮಾರ್ ಅವರೇ ನೀವು ಯಾರು?, ಎಲೆಕ್ಷನ್ ಕಮೀಷನರೋ? ಕಲೆಕ್ಷನ್ ಕಮೀಷನರೋ ಹೇಳಬೇಕು.

Written ByBhimappa
Published: Sep 26, 2026, 04:48 PM IST|Updated: Sep 26, 2026, 04:53 PM IST
joinshare
ಕ್ರಿಮಿನಲ್ ಕೇಸ್ ಹಾಕಲು ರಾಷ್ಟ್ರಪತಿಗಳು ನಿರ್ದೇಶನ ಕೊಡಿ, ನಿಮ್ಮ ಮಧ್ಯ ಪ್ರವೇಶ ಯಾಕಿಲ್ಲ; ಮಾಜಿ ಸಿಎಂ ಸಿದ್ದರಾಮಯ್ಯ
Image Credit: siddaramaiah

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

ಬಿಗ್‌ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ಶಾಕ್‌! ಈ ವಾರ ಆ ಇಬ್ಬರು ಸ್ಪರ್ಧಿಗಳ ಬ್ಯಾಗ್‌ ಪ್ಯಾಕ್‌ ಫಿಕ್ಸ್!

2

ಈ ರೀತಿಯ ಮೀನು ಗರ್ಭಿಣಿಯರಿಗೆ ತುಂಬಾ ಅಪಾಯಕಾರಿ!.. ತಪ್ಪಿಯೂ ತಿನ್ನಲೇಬೇಡಿ

3

ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 13 ಮಕ್ಕಳು ಅಸ್ವಸ್ಥ..!

4

ಕುಮಟಾ-ಅಂಕೋಲಾ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವು!

5

ಅದೃಷ್ಟ ಬದಲಿಸುವ 15 ದಿನ..! ಬಾಬಾ ವಂಗ ಭವಿಷ್ಯವಾಣಿಯಂತೆ ಕುಂಭ ಸೇರಿದಂತೆ ಈ ರಾಶಿಗಳಿಗೆ ಶುಭಫಲ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Congress holds massive protest at Freedom Park: ಚುನಾವಣಾ ಆಯೋಗ ಮುಖ್ಯ ಆಯುಕ್ತರು ಮತ್ತು ಎಸ್‌ಐಆರ್ ವಿರೋಧಿಸಿ ಕಾಂಗ್ರೆಸ್ ಇವತ್ತು ಬೆಂಗಳೂರಿನಲ್ಲಿರುವ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡು ಮತದಾರ ಮತದಾನದ ಹಕ್ಕು ಕಸಿದುಕೊಳ್ಳುತ್ತಿದೆ ಎಂದು ಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಕಾಂಗ್ರೆಸ್ ನಾಯಕರು ನೇರ ವಾಕ್ ಪ್ರಹಾರ ನಡೆಸಿದರು.

SIR ವಿರುದ್ದ ಕಾಂಗ್ರೆಸ್ ವಾರ್ 
ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಆಗ್ರಹ 
ರಾಜ್ಯಾದ್ಯಂತ ಹೋರಾಟಕ್ಕೆ ಸಿಎಮ್ ಡಿಕೆಶಿ ಕರೆ

ಮತದಾರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ಮುಖ್ಯ ಚುನಾವಣಾ ಆಯುಕ್ತ ಮತದಾರರ ಹಕ್ಕು ಕಸಿದುಕೊಳ್ಳುತ್ತಾ ಇದಾರೆ ಎಂದು ಆರೋಪಿಸಿ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು. ಫ್ರೀಡಂ ಪಾರ್ಕ್‌ನಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಪ್ರತಿಕೃತಿ ಸುಟ್ಟು ಕೈ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌ ಅವರು, ನೀವು ನಂಬಿಕೆಯನ್ನ ಕಳೆದುಕೊಂಡಿದ್ದೀರಾ. ಮತಪಟ್ಟಿಯಲ್ಲಿ ಪಾರದರ್ಶಕತೆ ಇರಬೇಕು. ಅದಕ್ಕೆ ಮತದಾರರಿಗೆ ಹಕ್ಕು ಕೊಡಿಸೋ ಪ್ರಯತ್ನ ಮಾಡ್ತಿದ್ದಾರೆ. ಪ್ರತಿಯೊಂದು ಮತ ಅಮೂಲ್ಯವಾದುದ್ದು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ತಂದಿದ್ದೇವೆ. ನವೆಂಬರ್, ಡಿಸೆಂಬರ್ ಒಳಗೆ ಚುನಾವಣೆ ಮಾಡ್ತೇವೆ. ವೋಟರ್ ಲೀಸ್ಟ್ ಬರುತ್ತಲೇ ಚುನಾವಣೆ ಮಾಡ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಮೋಸದಿಂದ ನಡೆದ ಚುನಾವಣೆ ರದ್ದು ಮಾಡಬೇಕು. ಗ್ಯಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು. ರಾಜ್ಯದಲ್ಲಿ ಎಸ್‌ಐಆರ್‌ ಸರಿಯಾಗಿ ನಡೆಯುತ್ತಿಲ್ಲ. ಗ್ಯಾನೇಶ್ ಕುಮಾರ್ ಅವರೇ ನೀವು ಯಾರು?, ಎಲೆಕ್ಷನ್ ಕಮೀಷನರೋ? ಕಲೆಕ್ಷನ್ ಕಮೀಷನರೋ ಹೇಳಬೇಕು. ಪಾರ್ಲಿಮೆಂಟ್‌ನಲ್ಲಿ ಇದರ ಚರ್ಚೆ ಆಗಬೇಕು. ಜನರಲ್ಲಿ ‌ಅರಿವು ಮೂಡಿಸಬೇಕು. ಅಧಿಕಾರದ ವ್ಯಾಮೋಹ ಹೆಚ್ಚು ದಿನ ಇರಲ್ಲ. ಸೂರ್ಯ ಹುಟ್ಡುತ್ತಾನೆ ಮುಳುಗುತ್ತಾನೆ. ಪ್ರಧಾನಿಗೆ ನಾನು ಹೇಳ್ತೇನೆ, ಆಯುಕ್ತರ ವಜಾ ಆಗಬೇಕು. ಮತ್ತೆ ಎಸ್‌ಐಆರ್ ನಡೆಯಬೇಕು. ಹೋರಾಟ ಹಳ್ಳಿಗಳಿಗೂ ಹೋಗಬೇಕು ಎಂದು ಸಿಎಂ ಡಿ.ಕೆ ಶಿವಕುಮಾರ್‌ ಅವರು ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಗ್ಯಾನೇಶ್ ಕುಮಾರ್ ವಜಾ ಮಾಡೋದಷ್ಟೇ ಅಲ್ಲ. ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು. ನಾನು ರಾಷ್ಟ್ರಪತಿಗೆ ಕೇಳೋದು ಇಷ್ಟೇ, ಕ್ರಿಮಿನಲ್ ಕೇಸ್ ಹಾಕೋಕೆ ನಿರ್ದೇಶನ ಕೊಡಿ. ಪ್ರಧಾನಿ ಮೋದಿಗೆ 75 ವರ್ಷ ಆಯ್ತು. ಬೇರೆಯವರಿಗೆ 75 ವರ್ಷ ಲಾಸ್ಟ್ ಅಂತಾರೆ. ಪ್ರಧಾನಿ ನರೇಂದ್ರ ಮೋದಿ ಅವರು, ನಿಸ್ಪಕ್ಷಪಾತವಾಗಿ ಪ್ರಧಾನಿ ಆಗಿಲ್ಲ. ಮತಗಳನ್ನ ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದು, ಹಿಂಬಾಗಿಲಿನಿಂದ ಬಂದ ಪ್ರಧಾನಿಗೆ ನೈತಿಕ ಹಕ್ಕಿಲ್ಲ. ಪ್ರಧಾನಿಯಾಗಿ ಮುಂದುವರೆಯಲು ನೈತಿಕ ಹಕ್ಕಿಲ್ಲ. ಕೂಡಲೇ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಬೇಕು. ಗ್ಯಾನೇಶ್ ಕುಮಾರ್ ಅವರನ್ನ ವಾಜಾಗೊಳಿಸಬೇಕು. ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು..

ಇನ್ನೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರು ಮಾತನಾಡಿ, ಗ್ಯಾನೇಶ್ ಕುಮಾರ್ ಒಬ್ಬ ಅಜ್ಞಾನಿ. ಮೂವರು ಎಲೆಕ್ಷನ್ ಕಮೀಷನರ್ ಇದ್ದಾರೆ. ತಿರ್ಮಾನದ ವೇಳೆ ಎಲ್ಲರ ಒಪ್ಪಿಗೆ ಬೇಕು. ಇಬ್ಬರು ಕಮೀಷನರ್ ಆಕ್ಷೇಪ ಹೊರ ಹಾಕಿದ್ದಾರೆ. 14 ಬಾರಿ ಅವರು ಆಕ್ಷೇಪ ಹೊರ ಹಾಕಿದ್ದರು. ಆಕ್ಷೇಪಿಸಿದ್ರೂ ಗ್ಯಾನೇಶ್ ಅದನ್ನ ಒಪ್ಪಿಲ್ಲ. ಏಕಪಕ್ಷೀಯವಾಗಿ ಅವರು ನಡೆದುಕೊಂಡಿದ್ದಾರೆ. ಎಲೆಕ್ಷನ್ ಕಮೀಷ‌ನ್‌ಗೆ ಗೌಪ್ಯ ಮಾಹಿತಿ ಕೊಡ್ತಾರೆ. ಪ್ರಧಾನಿ ಮೋದಿ ಅವರು, ಅಮಿತ್ ಶಾ ಕೊಡ್ತಾರೆ. ಅವರ ಮಾತು ಕೇಳಿ 13 ಕೋಟಿ ಮತದಾರರನ್ನ ಬಿಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಐಆರ್ ವಿರುದ್ಧದ ಹೋರಾಟದ ಅಸ್ತ್ರವನ್ನು ಮತ್ತಷ್ಟು ಬಲಗೊಳಿಸಿರುವ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯಾದ್ಯಂತ ಹೋರಾಟ ಪ್ರಬಲಗೊಳಿಸುವ ಮೂಲಕ ಕಾಂಗ್ರೆಸ್ ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
 

Add Zee News as a Preferred Source
TAGS:
Congress