SOCIAL MEDIA

Newsletter

PARTNER SITES
Select Language Select State

Pink Line Metro ಉದ್ಘಾಟನೆ ಯಾವಾಗ.. ಈ ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗೆ ಪತ್ರ ಬರೆದ CM

ಸಿಎಂ ಡಿ.ಕೆ ಶಿವಕುಮಾರ್‌ ಅವರು ಪಿಂಕ್‌ ಲೈನ್‌ನ IIM-B ಮೆಟ್ರೋ ಸ್ಟೇಷನ್‌ ಬದಲು, ಬಿಳೇಕಹಳ್ಳಿ IIM-B ಮೆಟ್ರೋ ಸ್ಟೇಷನ್‌ ಎಂದು ಮರುನಾಮಕರಣ ಮಾಡುವಂತೆ ಪಿಸಿ ಜಾಫರ್‌ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

Written By Bhimappa
Published: Oct 03, 2026, 02:29 PM IST | Updated: Oct 03, 2026, 02:32 PM IST
Image Credit: metro_namma
Join

CM D.K. Shivakumar Pink Line Metro: ಸಿಲಿಕಾನ್‌ ಸಿಟಿಯ ಅಂದ ಹೆಚ್ಚಿಸಿದ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿದೆ. ಈಗ ನಮ್ಮ ಮೆಟ್ರೋದ ಪಿಂಕ್ ಲೈನ್ ನಿಲ್ದಾಣಕ್ಕೆ ಸಾಧಕರ ಹೆಸರು ನಾಮಕರಣ ಮಾಡಲು ಮುಂದಾಗುತ್ತಿದೆ. ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್‌ ಲೈನ್ ಮೆಟ್ರೋ ಉದ್ಘಾಟನೆಗೆ ಜೋರು ಸಿದ್ಧತೆಗಳು ನಡೆದಿವೆ. ಇದೇ ತಿಂಗಳು ಪಿಂಕ್‌ ಲೈನ್ ಉದ್ಘಾಟನೆಗೆ ಸರ್ಕಾರದಿಂದ ತಯಾರಿ ನಡೆಯುತ್ತಿದೆ. ಅಕ್ಟೋಬರ್‌ 6, 7 ಮತ್ತು 8 ರಂದು ಸುರಕ್ಷತಾ ತಪಾಸಣೆಯನ್ನು ಕೇಂದ್ರ ರೈಲು ಸುರಕ್ಷತಾ ಆಯೋಗ ನಡೆಸಲಿದೆ.

ನಮ್ಮ ಮೆಟ್ರೋದ ಪಿಂಕ್‌ ಲೈನ್‌ ಮಾರ್ಗ ಎಂಜಿ ರಸ್ತೆ– ತಾವರೆಕೆರೆ ನಡುವಿನ 7.5 ಕಿಲೋ ಮೀಟರ್‌ವರೆಗೆ ಮಾರ್ಗ ಪರಿಶೀಲನೆ ನಡೆಸಲಾಗುತ್ತದೆ. ಸುರಕ್ಷತಾ ಕ್ರಮಗಳ ಬಗ್ಗೆ 3 ದಿನಗಳು ಅಧಿಕಾರಿಗಳಿಂದ ತಪಾಸಣೆ ನಡೆಯಲಿದೆ. ಎಂಜಿ ರಸ್ತೆ– ತಾವರೆಕೆರೆ ನಡುವಿನ 7.5 ಕಿ.ಮೀ. ಮಾರ್ಗ ಪರಿಶೀಲನೆ ವೇಳೆ ಮೆಟ್ರೋ ನಿಲ್ದಾಣಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ರೈಲು ಸುರಕ್ಷತಾ ಆಯೋಗದ ತಪಾಸಣೆ ಪೂರ್ಣಗೊಂಡ ಬಳಿಕ ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗುತ್ತದೆ.  

ಉದ್ಘಾಟನೆ ದಿನಾಂಕ ನಿಗದಿಗೆ ಕೇಂದ್ರ ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ನಮ್ಮ ಮೆಟ್ರೋದ ಪಿಂಕ್‌ ಲೈನ್‌ನ 6 ನಿಲ್ದಾಣಗಳಿಗೆ ಸಾಧಕರ ಹೆಸರು ಇಡುವ ಚಿಂತನೆ ಇದೆ. ಬಿಎಂಆರ್‌ಸಿಎಲ್ ಬಳಿ ಹಲವು ಸಾಧಕರ ಹೆಸರುಗಳ ಪ್ರಸ್ತಾವನೆ ಇರುವ ಹಿನ್ನಲೆಯಲ್ಲಿ ನಿಲ್ದಾಣಗಳಿಗೆ ವಿವಿಧ ಸಾಧಕರ ಹೆಸರು ನಾಮಕರಣ ಮಾಡುವ ಸಾಧ್ಯತೆ ಇದೆ.

ಅಲ್ಲದೇ ಸಿಎಂ ಡಿ.ಕೆ ಶಿವಕುಮಾರ್‌ ಅವರು ಪಿಂಕ್‌ ಲೈನ್‌ನ IIM-B ಮೆಟ್ರೋ ಸ್ಟೇಷನ್‌ ಬದಲು, ಬಿಳೇಕಹಳ್ಳಿ IIM-B ಮೆಟ್ರೋ ಸ್ಟೇಷನ್‌ ಎಂದು ಮರುನಾಮಕರಣ ಮಾಡುವಂತೆ ಪಿಸಿ ಜಾಫರ್‌ ಅವರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಬಿಳೇಕಹಳ್ಳಿ ಎನ್ನುವುದು ಸ್ಥಳೀಯವಾಗಿ ಮೊದಲಿನಿಂದಲೂ ಕರೆಯುತ್ತ ಬಂದ ಹೆಸರು ಆಗಿದೆ. ಹೀಗಾಗಿ ಸುತ್ತಮುತ್ತಲಿನ ಎಲ್ಲರಿಗೂ ಬಿಳೇಕಹಳ್ಳಿ ಚಿರಪರಿಚಿತ ಹೆಸರು ಆಗಿದೆ. ಹೀಗಾಗಿ ಬಿಳೇಕಹಳ್ಳಿ IIM-B ಮೆಟ್ರೋ ಸ್ಟೇಷನ್‌ ಎಂದು ಮರುನಾಮಕರಣ ಮಾಡುವಂತೆ ಸೂಚನೆ ನೀಡಿದ್ದಾರೆ.  

ಪಿಂಕ್ ಲೈನ್‌ನ IIM-B ಮೆಟ್ರೋ ನಿಲ್ದಾಣದ ಹೆಸರು ಬದಲಿಸಲು ಸಿಎಂ ಸೂಚನೆ

* IIM-B ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆಗೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
* ಪಿಂಕ್ ಲೈನ್‌ನ IIM-B ಮೆಟ್ರೋ ನಿಲ್ದಾಣವನ್ನು ಬಿಳೇಕಹಳ್ಳಿ–IIMB ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆ
* ಬಿಳೇಕಹಳ್ಳಿ ಸ್ಥಳೀಯರು ಹಾಗೂ ಕಾಂಗ್ರೆಸ್ ಮುಖಂಡರಿಂದ ನಿಲ್ದಾಣದ ಹೆಸರು ಬದಲಾವಣೆಗೆ ಬೇಡಿಕೆ
* ಸ್ಥಳೀಯ ಪ್ರದೇಶದ ಹೆಸರನ್ನು ಮೆಟ್ರೋ ನಿಲ್ದಾಣದ ಹೆಸರಿನೊಂದಿಗೆ ಸೇರಿಸುವಂತೆ ಒತ್ತಾಯ
* ಈ ಬೇಡಿಕೆಯ ಹಿನ್ನೆಲೆಯಲ್ಲಿ ನಿಲ್ದಾಣದ ಹೆಸರು ಬದಲಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸೂಚನೆ
* ಹೆಸರು ಬದಲಾವಣೆಗೆ ಸಂಬಂಧಿಸಿದಂತೆ ಸ್ಥಳೀಯರ ಬೇಡಿಕೆ ಹಾಗೂ ಪ್ರದೇಶದ ಹಿನ್ನೆಲೆಯನ್ನು ಪರಿಗಣಿಸಲಾಗಿದೆ
* ಪಿಂಕ್ ಲೈನ್‌ನ ಕಾಳೇನ ಅಗ್ರಹಾರ–ತಾವರೆಕೆರೆ 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ IIM ಬೆಂಗಳೂರು ಭಾಗದ ನಿಲ್ದಾಣವೂ ಇದೆ. 
* ಈ ಎಲಿವೇಟೆಡ್ ಮಾರ್ಗದ CMRS ಸುರಕ್ಷತಾ ಪರಿಶೀಲನೆ ಅಕ್ಟೋಬರ್ 6 ರಿಂದ 8 ರ ನಡುವೆ ನಡೆಯುವ ಸಾಧ್ಯತೆ ಇದೆ 
* ಇದೇ ವೇಳೆ ಪಿಂಕ್ ಲೈನ್‌ನ ಇತರೆ ಕೆಲವು ನಿಲ್ದಾಣಗಳ ಹೆಸರು ಬದಲಾವಣೆಗೂ ಬೇಡಿಕೆಗಳು ಕೇಳಿ ಬಂದಿವೆ
* ಬಿಟಿಎಂ ಲೇಔಟ್ ಶಾಸಕ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ಜೆ.ಪಿ ನಗರ 4ನೇ ಹಂತ, ತಾವರೆಕೆರೆ ಹಾಗೂ ಡೈರಿ ಸರ್ಕಲ್ ನಿಲ್ದಾಣಗಳ ಹೆಸರು ಬದಲಾವಣೆಗೆ ಪ್ರಸ್ತಾಪ ಮಾಡಿದ್ದಾರೆ. 
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES