BMTC bus: ಗಾಂಧಿ ಜಯಂತಿ.. ಅದರ ಬೆನ್ನಲ್ಲೇ ವೀಕೆಂಡ್.. ಹೀಗೆ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬಿಎಂಟಿಸಿ-ಕೆಎಸ್‌ಆರ್‌ಟಿಸಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಬರೋಬ್ಬರಿ 150 ಹೆಚ್ಚುವರಿ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿರ್ಧರಿಸಲಾಗಿದೆ. ಯಾವ ಊರಿಗೆ ಎಷ್ಟು ಬಸ್‌ಗಳು..? ಎಲ್ಲಿಂದ ಹೊರಡಲಿವೆ..? ಇಲ್ಲಿದೆ ಸಂಪೂರ್ಣ ಮಾಹಿತಿ.
ಸರಣಿ ರಜೆಗೆ ಬಸ್ ವ್ಯವಸ್ಥೆ
ಮಹಾತ್ಮ ಗಾಂಧಿ ಜಯಂತಿ ಹಾಗೂ ವಾರಾಂತ್ಯದ ಸರಣಿ ರಜೆ ಹಿನ್ನೆಲೆ ಬೆಂಗಳೂರಿನಿಂದ ಸ್ವಗ್ರಾಮಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ಬಿಎಂಟಿಸಿ ಹೆಚ್ಚುವರಿ ವಿಶೇಷ ಬಸ್‌ಗಳ ಕಾರ್ಯಾಚರಣೆಗೆ ಅಧಿಕೃತ ಆದೇಶ ನೀಡಿದೆ.ಒಟ್ಟು 150 ವಿಶೇಷ ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ.
ಮೆಜೆಸ್ಟಿಕ್‌ನಿಂದ 100 ವಿಶೇಷ ಬಸ್
ಕೆಂಪೇಗೌಡ ಬಸ್ ನಿಲ್ದಾಣ, ಮೆಜೆಸ್ಟಿಕ್‌ನಿಂದಲೇ 100 ವಿಶೇಷ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ.
ಶಿವಮೊಗ್ಗಕ್ಕೆ – 20 ಬಸ್
ದಾವಣಗೆರೆಗೆ – 10 ಬಸ್
ಚಿತ್ರದುರ್ಗಕ್ಕೆ – 10 ಬಸ್
ಹೊಸದುರ್ಗಕ್ಕೆ – 10 ಬಸ್
ಹೊಸಪೇಟೆಗೆ – 5 ಬಸ್
ಬಳ್ಳಾರಿಗೆ – 10 ಬಸ್
ಹಾಸನಕ್ಕೆ – 15 ಬಸ್
ಚಿಕ್ಕಮಗಳೂರಿಗೆ – 10 ಬಸ್
ಧರ್ಮಸ್ಥಳಕ್ಕೆ – 10 ಬಸ್
ಹೀಗೆ ಪ್ರಮುಖ ಜಿಲ್ಲೆಗಳು ಹಾಗೂ ಪ್ರವಾಸಿ-ಧಾರ್ಮಿಕ ಕ್ಷೇತ್ರಗಳಿಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಸ್ಯಾಟಲೈಟ್ ನಿಲ್ದಾಣದಿಂದ 50 ಬಸ್
ಇನ್ನು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣದಿಂದ 50 ವಿಶೇಷ ಬಸ್‌ಗಳು ಸಂಚರಿಸಲಿವೆ.ಮೈಸೂರಿಗೆ 25 ಬಸ್‌ಗಳು,mಮಳವಳ್ಳಿ ಹಾಗೂ ಕೊಳ್ಳೇಗಾಲಕ್ಕೆ 25 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಇದರೊಂದಿಗೆ ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಅಧಿಕಾರಿಗಳ ನಿಯೋಜನೆ
ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲಾಗಿದೆ.ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ, ಬಸ್‌ಗಳ ಲಭ್ಯತೆ ಹಾಗೂ ಸಂಚಾರ ಪರಿಸ್ಥಿತಿಯನ್ನು ಗಮನಿಸಲು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತರಿದ್ದು, ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಒಟ್ಟಿನಲ್ಲಿ ಗಾಂಧಿ ಜಯಂತಿ ಹಾಗೂ ವಾರಾಂತ್ಯದ ಸರಣಿ ರಜೆಗೆ ಊರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾರಿಗೆ ಇಲಾಖೆ ಸಜ್ಜಾಗಿದೆ. ಮೆಜೆಸ್ಟಿಕ್‌ನಿಂದ 100, ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣದಿಂದ 50 ಸೇರಿದಂತೆ ಒಟ್ಟು 150 ವಿಶೇಷ ಬಸ್‌ಗಳು ರಸ್ತೆಗಿಳಿಯಲಿವೆ.