SOCIAL MEDIA

Newsletter

PARTNER SITES
Select Language Select State

ಬೆಂಗಳೂರಿಗರೇ ಬಿಗ್‌ ಅಲರ್ಟ್‌..! ಇಂದಿನಿಂದ 60 ದಿನ ರೇಸ್‌ ಕೋರ್ಸ್‌ ರಸ್ತೆ ಬಂದ್‌; ಪರ್ಯಾಯ ಮಾರ್ಗಗಳಿವು!

Bengaluru race course road closed: ಬೆಂಗಳೂರು ಪ್ರಯಾಣಿಕರೇ ಗಮನಿಸಿ ಇಂದಿನಿಂದ ಅರವತ್ತು ದಿನ ರೇಸ್‌ಕೋರ್ಸ್‌ ರಸ್ತೆ ಬಂದ್‌ ಆಗಲಿದೆ.. ಇದಕ್ಕೆ ಪರ್ಯಾಯ ಮಾರ್ಗಗಳೇನು ಅಂತಾ ತಿಳಿಯಲು ಈ ಸ್ಟೋರಿ ಈ ಓದಿ.

Written By Ramya. R. Gowda
Published: Oct 05, 2026, 12:04 PM IST | Updated: Oct 05, 2026, 12:09 PM IST
Join

ಬೆಂಗಳೂರಿನ ವಾಹನ ಸವಾರರಿಗೆ ಬಿಗ್‌ ಅಲರ್ಟ್‌.. ರೇಸ್‌ ಕೋರ್ಸ್‌ ರಸ್ತೆ 60 ದಿನ ಬಂದ್‌ ಆಗಲಿದೆ. ವೈಟ್‌ಟಾಪಿಂಗ್ ಕಾಮಗಾರಿ ಹಿನ್ನೆಲೆ ಇಂದಿನಿಂದಲೇ ಸಂಚಾರ ನಿರ್ಬಂಧಿಸಲಾಗಿದೆ. ಮೌರ್ಯ ಜಂಕ್ಷನ್‌ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್‌ವರೆಗೆ ವಾಹನ ಸಂಚಾರ ಬಂದ್ ಆಗಿದ್ದು, ಪರ್ಯಾಯ ಮಾರ್ಗಗಳನ್ನೂ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಯಾವ ಮಾರ್ಗದಲ್ಲಿ ಸಂಚರಿಸಬೇಕು? ಯಾವ ಮಾರ್ಗದಲ್ಲಿ ನಿರ್ಬಂಧ ಇದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್‌..

ಬೆಂಗಳೂರಿಗರೇ.. ರೇಸ್‌ ಕೋರ್ಸ್‌ ರಸ್ತೆಯಲ್ಲಿ ಓಡಾಡುವ ಮುನ್ನ ಈ ಸುದ್ದಿ ತಿಳಿದುಕೊಳ್ಳಿ. ನಗರದ ಪ್ರಮುಖ ರಸ್ತೆಯಾಗಿರುವ ರೇಸ್‌ ಕೋರ್ಸ್‌ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಿಂದ ಮುಂದಿನ 60 ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಮೌರ್ಯ ಜಂಕ್ಷನ್‌ನಿಂದ ಹರೇ ಕೃಷ್ಣ ರಸ್ತೆ ಜಂಕ್ಷನ್‌ವರೆಗೆ ಸಂಚಾರ ನಿರ್ಬಂಧ ಇರಲಿದೆ.

ರೇಸ್‌ ಕೋರ್ಸ್‌ ರಸ್ತೆ ಬಂದ್‌
ವೈಟ್‌ಟಾಪಿಂಗ್ ಕಾಮಗಾರಿ
ಮೌರ್ಯ ಜಂಕ್ಷನ್‌ → ಹರೇ ಕೃಷ್ಣ ರಸ್ತೆ ಜಂಕ್ಷನ್‌

ಯಾವ ಮಾರ್ಗ ಬಂದ್?
ಶಿವಾನಂದ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ ತೆರಳುವ ವಾಹನಗಳಿಗೆ ಪ್ರವೇಶ ಇರುವುದಿಲ್ಲ.
ಅದೇ ರೀತಿ ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ ಹೋಗುವ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.
ಸಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುವ ಬಿಎಂಟಿಸಿ, ಖಾಸಗಿ ಬಸ್‌ಗಳು ಹಾಗೂ ಭಾರಿ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗಿದೆ.

ಪರ್ಯಾಯ ಮಾರ್ಗ??
ಸಂಕಿ ರಸ್ತೆಯಿಂದ ಕೆ.ಆರ್. ಮಾರ್ಕೆಟ್ ಕಡೆಗೆ ತೆರಳುವ ಬಸ್‌ಗಳು ಹಾಗೂ ಭಾರಿ ವಾಹನಗಳು ವಿಂಡ್ಸರ್ ಮ್ಯಾನರ್  ಎಲ್‌ಆರ್‌ಡಿಇ ಜಂಕ್ಷನ್  ಬಸವೇಶ್ವರ ಜಂಕ್ಷನ್ ಮಾರ್ಗವಾಗಿ ಸಾಗಬೇಕು.ಇನ್ನು ಮಜೆಸ್ಟಿಕ್ ಕಡೆಗೆ ಹೋಗುವ ವಾಹನಗಳು ಸಂಕಿ ರಸ್ತೆಯಿಂದ ಕುಮಾರ ಕೃಪಾ ರಸ್ತೆ ಮೂಲಕ ಶಿವಾನಂದ ವೃತ್ತ ತಲುಪಿ, ಅಲ್ಲಿಂದ ಬಲಕ್ಕೆ ತಿರುಗಿ ಎಸ್‌ಸಿ ರಸ್ತೆ ಮೂಲಕ ಮುಂದೆ ಸಾಗಬಹುದು. ಹಳೆಯ ಜೆಡಿಎಸ್ ಜಂಕ್ಷನ್‌ನಿಂದ ಟ್ರೈಲೈಟ್ ಜಂಕ್ಷನ್ ಕಡೆಗೆ ತೆರಳುವ ವಾಹನ ಸವಾರರು ರೇಸ್‌ವ್ಯೂ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ, ಕುಮಾರ ಕೃಪಾ ರಸ್ತೆಯ ಮೂಲಕ ಶಿವಾನಂದ ಜಂಕ್ಷನ್ ತಲುಪಬಹುದು. ಟ್ರೈಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್‌ ಕಡೆಗೆ ತೆರಳುವವರು ಶಿವಾನಂದ ಫ್ಲೈಓವರ್ ಟು   ನೆಹರೂ ವೃತ್ತ ಟುವಡ್ಸ್   ಎಸ್‌ಸಿ ರಸ್ತೆ ಮಾರ್ಗವಾಗಿ ಮಜೆಸ್ಟಿಕ್ ತಲುಪಬಹುದು.

ಒಟ್ಟಿನಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಹಿನ್ನೆಲೆ ರೇಸ್‌ ಕೋರ್ಸ್‌ ರಸ್ತೆ ಮುಂದಿನ 60 ದಿನ ಬಂದ್‌ ಆಗಿರಲಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಕಾಮಗಾರಿ ಅವಧಿಯಲ್ಲಿ ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES