ಪಿಂಕ್ ಲೈನ್ ಮೆಟ್ರೋಗೆ ಮೋದಿ ಚಾಲನೆ.. 100 ಕಿ.ಮೀ. ಗಡಿ ದಾಟಲಿದೆ ನಮ್ಮ ಮೆಟ್ರೋ ಜಾಲ.. ಕೊನೆಗೂ ಪಿಂಕ್ ಲೈನ್ ಪ್ರಯಾಣಿಕರ ಕನಸು ನನಸು..
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕಾಯುವಿಕೆಗೆ ಇಂದು ತೆರೆ ಬಿದಿದ್ದೆ. ನಮ್ಮ ಮೆಟ್ರೋ ಜಾಲ 100 ಕಿಲೋಮೀಟರ್ ಗಡಿ ದಾಟುವ ಐತಿಹಾಸಿಕ ಕ್ಷಣಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ.
ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕಾಯುವಿಕೆಗೆ ಇಂದು ತೆರೆ ಬೀಳಲಿದೆ. ನಮ್ಮ ಮೆಟ್ರೋ ಜಾಲ 100 ಕಿಲೋಮೀಟರ್ ಗಡಿ ದಾಟುವ ಐತಿಹಾಸಿಕ ಕ್ಷಣಕ್ಕೆ ಸಿಲಿಕಾನ್ ಸಿಟಿ ಸಾಕ್ಷಿಯಾಗಿದೆ. ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಮಾರ್ಗದ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದರು. ಒಟ್ಟು ಆರು ನಿಲ್ದಾಣಗಳು ಲೋಕಾರ್ಪಣೆಯಾಗಿದ್ದು, ನಾಳೆಯಿಂದಲೇ ಪ್ರಯಾಣಿಕರಿಗೆ ಮೆಟ್ರೋ ಸಂಚಾರಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ, ಯಾವೆಲ್ಲಾ ನಿಲ್ದಾಣಗಳು ಆರಂಭವಾಗಲಿವೆ? ಮೋದಿ ಮೆಟ್ರೋ ಪ್ರಯಾಣ ಹೇಗಿರಲಿದೆ? ಇಲ್ಲಿದೆ ಡಿಟೇಲ್ಸ್.
ಬೆಂಗಳೂರಿನ ಮೆಟ್ರೋ ಇತಿಹಾಸದಲ್ಲಿ ಇಂದು ಮಹತ್ವದ ಮೈಲಿಗಲ್ಲು. ಪಿಂಕ್ ಲೈನ್ ಮೆಟ್ರೋ ಮಾರ್ಗದ ಮೊದಲ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ಕೊಟ್ಟಿದ್ದಾರೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರವರೆಗೆ ಸುಮಾರು 7.5 ಕಿಲೋಮೀಟರ್ ಉದ್ದದ ಮಾರ್ಗ ಲೋಕಾರ್ಪಣೆಕೊಂಡಿದೆ.
ಪಿಂಕ್ ಲೈನ್‌ಗೆ ಚಾಲನೆ ನೀಡಿದ ಬಳಿಕ ಪ್ರಧಾನಿ ಮೋದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಗಮನ ಸೆಳೆದರು. ಎಸ್.ಜಿ. ಪಾಳ್ಯದಿಂದ ಬಿಳೇಕಹಳ್ಳಿ-ಐಐಎಂಬಿ ಮೆಟ್ರೋ ನಿಲ್ದಾಣದವರೆಗೆ ಸಂಚರಿಸಲಿದ್ದಾರೆ. ಈ ವೇಳೆ ರಾಜ್ಯಪಾಲೆ ಡಾ. ಸುಧಾ ಯಾದವ್, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೃಷ್ಣ ಬೈರೇಗೌಡ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು
ಆರು ನಿಲ್ದಾಣಗಳು ಲೋಕಾರ್ಪಣೆಇಂದು ಪಿಂಕ್ ಲೈನ್‌ನ ಆರು ಮೆಟ್ರೋ ನಿಲ್ದಾಣಗಳು ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿವೆ.ಎಸ್.ಜಿ. ಪಾಳ್ಯ (ಸುದ್ದುಗುಂಟೆ ಪಾಳ್ಯ),ಜಯದೇವ ಆಸ್ಪತ್ರೆ ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ, ಐಐಎಂಬಿ-ಬಿಳೇಕಹಳ್ಳಿ, ಹುಳಿಮಾವು ಕಾಳೇನ ಅಗ್ರಹಾರ.ಈ ಆರು ನಿಲ್ದಾಣಗಳ ಆರಂಭದಿಂದ ಈ ಭಾಗದ ಜನರ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ. ಶನಿವಾರ ಬೆಳಗ್ಗೆಯಿಂದ ಸಾರ್ವಜನಿಕರಿಗೆ ಮೆಟ್ರೋ ಸೇವೆ ಲಭ್ಯವಾಗಲಿದೆ.
ಮೂರು ನಿಲ್ದಾಣಗಳ ಹೆಸರು ಬದಲು
ಇನ್ನು ಪಿಂಕ್ ಲೈನ್‌ನ ಮೂರು ಮೆಟ್ರೋ ನಿಲ್ದಾಣಗಳ ಹೆಸರುಗಳನ್ನೂ ಬದಲಾಯಿಸಲಾಗಿದೆ. ತಾವರೆಕೆರೆ ನಿಲ್ದಾಣಕ್ಕೆ ಎಸ್.ಜಿ. ಪಾಳ್ಯ (ಸುದ್ದುಗುಂಟೆ ಪಾಳ್ಯ) ಎಂದು ಮರುನಾಮಕರಣ ಮಾಡಲಾಗಿದೆ. ಜೆ.ಪಿ. ನಗರ 4ನೇ ಹಂತ ನಿಲ್ದಾಣಕ್ಕೆ ಎನ್.ಎಸ್. ಪಾಳ್ಯ-ಜೆ.ಪಿ. ನಗರ 4ನೇ ಹಂತ ಹಾಗೂ ಐಐಎಂಬಿ ನಿಲ್ದಾಣಕ್ಕೆ ಐಐಎಂಬಿ-ಬಿಳೇಕಹಳ್ಳಿ ಎಂದು ಹೊಸ ಹೆಸರು ನೀಡಲಾಗಿದೆ.
ವಂದೇ ಭಾರತ್ ರೈಲಿಗೂ ಚಾಲನೆ
ಇದೇ ಕಾರ್ಯಕ್ರಮದಲ್ಲಿ ಮಡಗಾಂವ್-ಮಂಗಳೂರು-ಬೆಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಬಳಿಕ ಎಸ್‌ಎಂವಿಟಿ ರೈಲ್ವೆ ನಿಲ್ದಾಣದಿಂದ ರೈಲು ಮಡಗಾಂವ್ ಕಡೆಗೆ ಪ್ರಯಾಣ ಆರಂಭಿಸಲಿದೆ.
ಬಿಗಿ ಭದ್ರತೆ
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎಸ್.ಜಿ. ಪಾಳ್ಯ ಮೆಟ್ರೋ ನಿಲ್ದಾಣದ ಸುತ್ತಮುತ್ತ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ನಡೆಸಲಾಗಿತ್ತು. ಪಾದಚಾರಿ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಎಸ್‌ಪಿಜಿ ಮತ್ತು ಪೊಲೀಸ್ ಇಲಾಖೆ ಕಾನ್ವಾಯ್ ರಿಹರ್ಸಲ್ ಕೂಡ ನಡೆಸಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಕೆಲವು ರಸ್ತೆಗಳಲ್ಲಿ ಟ್ರಾಫಿಕ್ ನಿರ್ಬಂಧ ವಿಧಿಸಲಾಗಿತ್ತು
ಒಟ್ಟಿನಲ್ಲಿ, ಪಿಂಕ್ ಲೈನ್ ಮೆಟ್ರೋ ಆರಂಭದೊಂದಿಗೆ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ಸಿಗಲಿದೆ. ನಮ್ಮ ಮೆಟ್ರೋ ಜಾಲ 100 ಕಿಲೋಮೀಟರ್ ಗಡಿ ದಾಟುತ್ತಿರುವುದು ನಗರದ ಪಾಲಿಗೆ ಹೆಮ್ಮೆಯ ಕ್ಷಣ. ಹಲವು ವರ್ಷಗಳಿಂದ ಕಾಯುತ್ತಿದ್ದ ಪಿಂಕ್ ಲೈನ್ ಪ್ರಯಾಣಿಕರ ಕನಸು ಕೊನೆಗೂ ನನಸಾಗುತ್ತಿದೆ.