• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಮುಂಬೈ ಹಿಂದಿಕ್ಕಿ, ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ಬೆಂಗಳೂರು

ಮುಂಬೈ ಹಿಂದಿಕ್ಕಿ, ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ಬೆಂಗಳೂರು

ಬಹುನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್‌ ಲೈನ್‌ ಇಂದು ಲೋಕಾರ್ಪಣೆಗೊಂಡಿದ್ದು, ಇದರೊಂದಿಗೆ ದೇಶದ ಎರಡನೇ ಅತ್ಯಂತ ಮೆಟ್ರೋ ಜಾಲ ಎಂಬ ಖ್ಯಾತಿಗೆ ಬೆಂಗಳೂರು ಮೆಟ್ರೋ ಪಾತ್ರವಾಗಿದೆ.

Written ByYashaswini V
Published: Nov 13, 2026, 15:37 IST|Updated: Nov 13, 2026, 15:39 IST
joinshare
ಮುಂಬೈ ಹಿಂದಿಕ್ಕಿ, ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲವಾದ ಬೆಂಗಳೂರು

About the Author

Yashaswini V

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?

2

ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುವ ಪಾಸ್‌ವರ್ಡ್ ಇಲ್ಲಿದೆ ನೋಡಿ

3

ಆಸಿಯಾ ಮೇಲೆ ಸೌಂದರ್ಯಾ ಶೆಟ್ಟಿ ಹಲ್ಲೆ! ಇಂದೇ ಬಿಗ್‌ ಬಾಸ್‌ನಿಂದ ಹೊರ ಹೋಗ್ತಾರಾ?

4

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

5

ಮುದ್ದು ಮಗಳ ಸಾವಿನ ನಂತರ ಬರಿಗಾಲಲ್ಲೇ ನಡೆಯುತ್ತಾರೆ ಈ ನಟ... ಕೋಟಿ ಕೋಟಿ ಒಡೆಯನಾದರೂ ಇದೆಂಥ ಸ್ಥಿತಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

ಬೆಂಗಳೂರು : ಬೆಂಗಳೂರಿನ ಬಹು ನೀರಿಕ್ಷಿತ ಪಿಂಕ್‌ ಲೈನ್ನ 7.5 ಕಿ. ಮೀ. ಉದ್ದದ ಎಲಿವೇಟೆಡ್‌ ಮಾರ್ಗ ಇಂದು ಲೋಕಾರ್ಪಣೆ ಆಗಿದ್ದು, ಇದರೊಂದಿಗೆ ನಮ್ಮ ಮೆಟ್ರೋ ಜಾಲದ ಒಟ್ಟು ಉದ್ದ 103.6 ಕಿ. ಮೀ. ಗೆ ಏರಿಕೆಯಾಗಿದೆ. ಈ ಸಾಧನೆಯ ಮೂಲಕ ಮುಂಬೈಯನ್ನು ಹಿಂದಿಕ್ಕಿರುವ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿಯ ನಂತರ ದೇಶದ ಎರಡನೇ ಅತಿ ದೊಡ್ಡ ಮೆಟ್ರೋ ಜಾಲ ಹೊಂದಿದ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನವೆಂಬರ್ 14ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಈ ನೂತನ ಮಾರ್ಗವು ಸಾರ್ವಜನಿಕರ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ.

ದೇಶದ ಮೆಟ್ರೋ ಜಾಲಗಳ ಹೋಲಿಕೆ:
ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ನಮ್ಮ ಮೆಟ್ರೋ ಅತಿ ವೇಗವಾಗಿ ಬೆಳೆದ ಹೆಗ್ಗಳಿಕೆಯನ್ನು ಹೊಂದಿದೆ. ನಮ್ಮ ಮೆಟೋಗಿಂತ ಮುಂಚೆಯೇ ಆರಂಭಗೊಂಡ ಹಲವು ನಗರಗಳ ಮೆಟ್ರೋ ಜಾಲಗಳನ್ನು ಬೆಂಗಳೂರು ಇಂದು ಮೀರಿಸಿದೆ. ದೇಶದ ಪ್ರಮುಖ ಮೆಟ್ರೋ ಜಾಲದ ಉದ್ದದ ವಿವರ ಈ ಕೆಳಗಿನಂತಿದೆ:
* ದೆಹಲಿ ಮೆಟ್ರೋ 374.5 ಕಿ.ಮೀ. ಜಾಲದೊಂದಿಗೆ ಮೊದಲ ಸ್ಥಾನದಲ್ಲಿದೆ.
* ಬೆಂಗಳೂರು ಮೆಟ್ರೋ: 103.6 ಕಿ.ಮೀ. ಎರಡನೇ ಸ್ಥಾನದಲ್ಲಿದೆ. 
* ಮುಂಬೈ ಮೆಟ್ರೋ: 102 ಕಿ.ಮೀ. (ಮುಂಬೈ 91 ಕಿ.ಮೀ. ಮತ್ತು ನವಿ ಮುಂಬೈ 11.1 ಕಿ.ಮೀ.)
* ಕೋಲ್ಕತ್ತಾ ಮೆಟ್ರೋ: 73 ರಿಂದ 74 ಕಿ.ಮೀ.
* ಹೈದರಾಬಾದ್ ಮೆಟ್ರೋ: 69 ಕಿ.ಮೀ.
* ಚೆನ್ನೈ ಮೆಟ್ರೋ: 68.7 ಕಿ.ಮೀ.
* ಅಹಮದಾಬಾದ್–ಗಾಂಧಿನಗರ: 65 ಕಿ.ಮೀ.
* ನಾಗ್ಪುರ ಮೆಟ್ರೋ: 38.2 ಕಿ.ಮೀ.
* ಪುಣೆ ಮೆಟ್ರೋ: 33 ಕಿ.ಮೀ

ಪಿಂಕ್‌ ಲೈನ್‌ ವಿಶೇಷತೆ ಏನು?
ಬನ್ನೇರುಘಟ್ಟ ರಸ್ತೆಯ ಉದ್ದಕ್ಕೂ ಸಾಗುವ ಎಸ್‌ ಜಿ ಪಾಳ್ಯದಿಂದ ಕಾಳೇನ ಅಗ್ರಹಾರದವರೆಗಿನ ಈ 7.5 ಕಿ.ಮೀ. ಎಲಿವೇಟೆಡ್‌ ಮಾರ್ಗವನ್ನು ಸುಮಾರು 3,470 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಒಟ್ಟು 6 ನಿಲ್ದಾಣಗಳಿದ್ದು, ದಕ್ಷಿಣ ಬೆಂಗಳೂರಿನ ಸಾವಿರಾರು ದೈನಂದಿನ ಪ್ರಯಾಣಿಕರ ಅನುಕೂಲಕ್ಕಾಗಿ ಕೈಗೆಟುಕುವ ದರವನ್ನು ನಿಗದಿಪಡಿಸಲಾಗಿದೆ. ಎಸ್.ಜಿ. ಪಾಳ್ಯದಿಂದ ಕಾಳೇನ ಅಗ್ರಹಾರದವರೆಗೆ ₹30, ಹುಳಿಮಾವು ಅಥವಾ ಐಐಎಂಬಿ ನಿಲ್ದಾಣದವರೆಗೆ ₹20 ಹಾಗೂ ಎನ್.ಎಸ್. ಪಾಳ್ಯದಿಂದ ಜೆ.ಪಿ. ನಗರ 4ನೇ ಹಂತದವರೆಗೆ ₹10 ಟಿಕೆಟ್ ದರವನ್ನು ನಿಗದಿ ಮಾಡಲಾಗಿದೆ.

ಈಗಾಗಲೇ ಚಾಲ್ತಿಯಲ್ಲಿರುವ ನೇರಳೆ, ಹಸಿರು ಹಾಗೂ ಹಳದಿ ಮಾರ್ಗದ ಬಳಿಕ ನೂತನವಾಗಿ ಗುಲಾಬಿ ಮಾರ್ಗ ನಮ್ಮ ಮೆಟ್ರೋ ಸೇರ್ಪಡೆಯಾಗುತ್ತಿದೆ. ಮೊದಲ ಹಂತದಲ್ಲಿ 7.5 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ ಉದ್ಘಾಟನೆಗೊಳ್ಳಲಿದ್ದು, ಶನಿವಾರದಿಂದ ವಾಣಿಜ್ಯ ಸಂಚಾರ ಆರಂಭವಾಗಲಿದೆ. 2027ರ ಮೇ ಅಂತ್ಯದೊಳಗಾಗಿ 13.75 ಕಿ.ಮೀ ಸುರಂಗ ಮಾರ್ಗ ಮುಕ್ತಗೊಳ್ಳುವ ನಿರೀಕ್ಷೆಯಿದೆ. ಒಟ್ಟಾರೆ ಗುಲಾಬಿ ಮಾರ್ಗ ಬೆಂಳೂರಿನ ದಕ್ಷಿಣ-ಉತ್ತರ ದಿಕ್ಕನ್ನು ಬೆಸೆಯಲಿದೆ. ಸದ್ಯಕ್ಕೆ ಇದು ಜಯದೇವ ಆಸ್ಪತ್ರೆ ಮೆಟ್ರೊ ನಿಲ್ದಾಣದಲ್ಲಿ ಹಳದಿ ಮಾರ್ಗವನ್ನು (ಆರ್‌.ವಿ.ರಸ್ತೆ-ಬೊಮ್ಮಸಂದ್ರ) ಸೇರಲಿದೆ. 
 

Add Zee News as a Preferred Source
TAGS:
Kannada News