SOCIAL MEDIA

Newsletter

PARTNER SITES
Select Language Select State

ಬೆಂಗಳೂರು ಉಸ್ತುವಾರಿಸಚಿವ ಕೃಷ್ಣ ಬೈರೇಗೌಡರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

ಇಂದು ಬೆಂಗಳೂರು ಉಸ್ತುವಾರಿಸಚಿವ ಕೃಷ್ಣ ಬೈರೇಗೌಡರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.

Written By Chetana Devarmani
Published: Sep 30, 2026, 11:43 PM IST | Updated: Sep 30, 2026, 11:45 PM IST
Join

ಬೆಂಗಳೂರು: ಅಧಿಕಾರಿಗಳಿಂದ ಕೆಲಸ ಮಾಡಿಸಿಯೇ ಮಾಡಿಸುತ್ತೇನೆ ಎಂದು ಪಣ ತೊಟ್ಟ ಕೃಷ್ಣ ಬೈರೇಗೌಡ ಇಂದು ಖುದ್ದು ಫೀಲ್ಡ್ ಗಿಳಿದರು. ಬೆಂಗಳೂರು ಹೊರ ವಲಯಗಳಲ್ಲಿರುವ ಐಟಿ ಹಬ್ ಗಳಿರುವ ಮಹದೇವಪುರ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಸ್ಥಳದಲ್ಲೇ ಪರಿಹಾರ ಕೂಡ ಸೂಚಿಸಿದರು.

ಅತ್ತಿಬೆಲೆ ಹೊಸಕೋಟೆ ರಸ್ತೆ ಪರಿಶೀಲನೆಗೆ ಮುನ್ನ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಕೃಷ್ಣ ಬೈರೇಗೌಡರು, ಮೆಟ್ರೋ, ಜಿಬಿಎ , ಲೋಕೋಪಯೋಗಿ ಇಲಾಖೆಗಳ ಜೊತೆ ಪರಿಶೀಲನೆ ನಡೆಸಿದರು. ದೊಮ್ಮಸಂದ್ರ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ಟ್ರಾಫಿಕ್ ಕಿರಿಕಿರಿ ಇಲ್ಲದಂತೆ ಮಳೆ ನೀರು ಹರಿಯಲು ವ್ಯವಸ್ಥಿತ ಒಳಚರಂಡಿ ಹರಿಯಲು ಕಾಮಗಾರಿ ನಡೆಸುವಂತೆ ಮೆಟ್ರೋ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ರು.ಇದೇ ವೇಳೆ ಟ್ರಾನ್ಸ್ ಫಾರಂ ಹಾಕೋಕೆ ನಿಮಗೆ ರಸ್ತೆ ತಿರುವೇ ಆಗಬೇಕ?ಎಂದು ಬೆಸ್ಕಾಂ ಅಧಿಕಾರಿಗಳಿಗೆ  ತರಾಟೆ ತೆಗೆದುಕೊಂಡರು..

ಇದೇ ವೇಳೆ ಅಧಿಕಾರಿಗಳಿಗೆ ಕೈ ಮುಗಿದು ಕೇಳ್ತೇನೆ ಇರೋ ಜಾಗಕ್ಕೆ ಜೆಲ್ಲಿ ಹಾಕಿ ಅಂದ್ರೆ ಏನೇನೋ ನೆಪ ಹೇಳ್ತೀರಲ್ರಿ? ಎಂದು ಕೆಆರ್ಐಡಿಎಲ್ ಅಧಿಕಾರಿಯನ್ನು ಸಚಿವ ಕೃಷ್ಣ ಬೈರೇಗೌಡರು ತರಾಟೆ ತೆಗೆದುಕೊಂಡರು. ಗುಂಜೂರು ಗ್ರಾಮದಲ್ಲಿ ರಸ್ತೆ ಪಕ್ಕದಲ್ಲೇ ಇರುವ ಟ್ರಾನ್ಸ್ಫಾರಮ್ ಅನ್ನು ಸ್ಥಳಾಂತರಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಸಚಿವ ಕೃಷ್ಣ ಬೈರೇಗೌಡರು,ಗುಂಜೂರು ಸರ್ಕಲ್ - ಸಿಡಿಪಿ ರಸ್ತೆ ಪರಿಶೀಲನೆ ನಡೆಸಿದರು.

ಇದೇ ವೇಳೆ  ರಸ್ತೆ ಒತ್ತುವರಿ ಮಾಡಿಕೊಂಡ ಅಂಗಡಿ ತೆರವು ಯಾಕೆ ಮಾಡಿಲ್ಲ..ಒತ್ತುವರಿ ಬರಿಗಣ್ಣಿಗೆ ಕಾಣ್ತಾ ಇದೆ ..ರೀ ಸ್ವಾಮಿ ನಾನು ಬಂದು ಒತ್ತುವರಿ ತೆರವು ಮಾಡಿ ಅಂತಾ ಹೇಳಬೇಕಾ?ಸುಮ್ಮನೆ ನನ್ನ ಪ್ರವೋಕ್ ಮಾಡಿ ಕೋಪ ಬರೆಸಬೇಡಿ ಎಇಇ ಎಇ ಗೆ ಕೆಬಿಜಿ ಕ್ಲಾಸ್ ತೆಗೆದುಕೊಂಡರು. ರಸ್ತೆ ಮೇಲೆ ಇಷ್ಟು ಮಣ್ಣಿನ ತ್ಯಾಜ್ಯ ಇದ್ದರೆ ಮಳೆ ನೀರು ಹೇಗೆ ಹೋಗಬೇಕು? ರಸ್ತೆ ಗುಂಡಿಗೆ ಪ್ಯಾಚ್ ಹಾಕಿದ್ರೂ ಉಪಯೋಗವೇನು?ಎಂದು ಅಧಿಕಾರಿಗಳ ಬಳಿ ಕೆಬಿಜಿ ಪ್ರಶ್ನಿಸಿದರು..

ವರ್ತೂರು ರಸ್ತೆ ಅಗಲೀಕರಣಕ್ಕೆ ಸೂಚನೆ ಬಳಿಕ ಖುದ್ದು ಟ್ರಾಫಿಕ್ ಜಾಮ್ ವೀಕ್ಷಿಸಿದ ಕೆಬಿಜಿ, ಬೇಗನೇ ಎಡಭಾಗದ ರಸ್ತೆ ಅಗಲೀರಣ ಮಾಡಿ ಎಂದು ಸೂಚಿಸಿದರು.ವರ್ತೂರು ಕೆರೆ ಏರಿ ರಸ್ತೆಯಲ್ಲಿ ಇಷ್ಟು ಜಾಗ ಇದ್ದ ಮೇಲೂ ಭೂ ಸ್ವಾಧೀನ ಏಕೆ? ಇಷ್ಟು ಜಾಗದಲ್ಲಿ ರಸ್ತೆ ಮಾಡೋಕಾಗಲ್ವ?*
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡರು.

ಇದೇ ವೇಳೆ ಮಾತನಾಡಿದ ಕೆಬಿಜಿ , ಶಾರ್ಟ್ ಟರ್ಮ್ ಪರಿಹಾರದ ಅಡಿ ಜಂಕಷನ್ ಗಳಲ್ಲಿರುವ ಟರ್ನಿಂಗ್ ಅಭಿವೃದ್ಧಿ ಹಾಗು ರಸ್ತೆ ಅಗಲೀಕರಣಕ್ಕೆ ಸೂಚನೆ ನೀಡಿದ್ದೇನೆ.ಕೆಲವೆಡೆ ಎಲ್ಲಿ ಭೂಸ್ವಾಧೀನ ಆಗಿದೆ ಅಲ್ಲಿ ರಸ್ತೆ ನಿರ್ಮಿಸುವ ಜೊತೆಗೆ ಅಕ್ಕಪಕ್ಕದ ಕನೆಕ್ಟಿಂಗ್ ರಸ್ತೆಗಳ ಡಾಂಬರೀಕರಣಕ್ಕೆ ಸೂಚಿಸಿದ್ದು, ಮುಂದೆ ದೊಮ್ಮ ಸಂದ್ರ ಕ್ರಾಸ್ ನಿಂದ ವೈಟ್ ಫೀಲ್ಡ್ ಮೆಟ್ರೊ ಮಾಡೋ ಪ್ಲಾನ್ ಜೊತೆಗೆ ಎಲೆಲಿವೇಟೆಟ್ ರೂಡ್ ಮಾಡಲು ಪ್ಲಾನ್ ಇದ್ದುವೊಂದಕ್ಕೊಂದು ಪೂರಕವಾಗಿರುವಂತೆ ಪ್ಲಾನ್ ಮಾಡಲು ಸೂಚಿಸಿರುವುದಾಗಿ ಕೆಬಿಜಿ ತಿಳಿಸಿದ್ದಾರೆ..

ಒಟ್ಟಾರೆ ಸಿಲಿಕಾನ್ ಸಿಟಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ಖುದ್ದು ರಸ್ತೆಗಿಳಿದು ಕಾರ್ಯನಿರ್ವಹಿಸುತ್ತಿರುವ ಕೃಷ್ಣ  ಬೈರೇಗೌಡ ಕಾರ್ಯಕ್ಕೆ ಜನಮೆಚ್ಚುಗೆಗೆ ಪಾತ್ರವಾಗಿದೆ ..
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES