SOCIAL MEDIA

Newsletter

PARTNER SITES
Select Language Select State

ಮೈಸೂರು ದಸರಾ ವೈಭವದಂತೆ ಸಿಲಿಕಾನ್‌ ಸಿಟಿಯಲ್ಲೂ ಬೆಂಗಳೂರು ಜಾತ್ರೆ.. 10 ದಿನ ಹಬ್ಬವೋ ಹಬ್ಬ

ಇಲ್ಲಿ ನಮ್ಮದೇ ಆದ ಸಾಂಸ್ಕೃತಿಕ ಗತ್ತು ಕೂಡ ಇದೆ ಅನ್ನೋದನ್ನು ತೋರಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಿಎಂ ಸೂಚನೆಯಂತೆ ಭರ್ಜರಿ ಪ್ಲಾನ್ ಅನೌನ್ಸ್ ಮಾಡಿದ್ದಾರೆ.

Written By Bhimappa
Published: Oct 03, 2026, 05:33 PM IST | Updated: Oct 03, 2026, 05:39 PM IST
Image Credit: bengaluru_fair
Join

Bengaluru fair December 4 to 10 days: ಸಿಲಿಕಾನ್ ಸಿಟಿ ಅಂದ್ರೆ ಬರೀ ಟ್ರಾಫಿಕ್, ಬಿಲ್ಡಿಂಗ್‌ಗಳು, ಐಟಿ-ಬಿಟಿ ಅಷ್ಟೇ ಅಲ್ಲ, ನಮ್ಮ ಬೆಂಗಳೂರಿಗೂ ಅಂತದ್ದೇ ಆದ ಸಕ್ಕತ್ ರಿಚ್ ಕಲೆ, ಹಳೆ ಪರಂಪರೆ ಇದೆ. ಅದನ್ನೇ ತೋರಿಸೋಕೆ ನಮ್ಮ ಸರ್ಕಾರ ಮುಂದೆ ಬರುವ ಡಿಸೆಂಬರ್‌ ತಿಂಗಳಲ್ಲಿ ಬ್ರಹ್ಮಾಂಡವಾಗಿ ಬೆಂಗಳೂರು ಜಾತ್ರೆ ಮಾಡೋಕೆ ಹೊರಟಿದೆ. 10 ದಿನಗಳ ಕಾಲ ಸಿಟಿಯಾದ್ಯಂತ ಹಬ್ಬದ ವಾತಾವರಣ ಹೇಗಿರುತ್ತೆ ಗೊತ್ತಾ? ಇದರ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

ಸಿಲಿಕಾನ್ ಸಿಟಿ ಅಂದ್ರೆ ಕೇವಲ ಟೆಕ್ನಾಲಜಿ ಮಾತ್ರ ಅಲ್ಲ, ಇಲ್ಲಿ ನಮ್ಮದೇ ಆದ ಸಾಂಸ್ಕೃತಿಕ ಗತ್ತು ಕೂಡ ಇದೆ ಅನ್ನೋದನ್ನು ತೋರಿಸಲು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಸಿಎಂ ಸೂಚನೆಯಂತೆ ಭರ್ಜರಿ ಪ್ಲಾನ್ ಅನೌನ್ಸ್ ಮಾಡಿದ್ದಾರೆ. ಬರುವ ಡಿಸೆಂಬರ್ 4 ರಿಂದ ಸತತ 10 ದಿನಗಳ ಕಾಲ ಬೆಂಗಳೂರಿನಲ್ಲಿ ಮೈಸೂರು ದಸರಾ ವೈಭವದ ಮಾದರಿಯಲ್ಲೇ ಅದ್ಧೂರಿಯಾಗಿ ಬೆಂಗಳೂರು ಜಾತ್ರೆ ಆಯೋಜನೆ ಮಾಡಲಾಗ್ತಿದೆ. ಕರ್ನಾಟಕದ ಪ್ರತಿಯೊಂದು ಊರಲ್ಲೂ ಜಾತ್ರೆ ನಡೆಯುವ ಹಾಗೆ, ಇಡೀ ಬೆಂಗಳೂರನ್ನು ಒಂದು ದೊಡ್ಡ ಊರ ಹಬ್ಬದ ತರ ಮಾಡೋದು ಈ ಜಾತ್ರೆಯ ಮೇನ್ ಉದ್ದೇಶ.

ಈ ಜಾತ್ರೆ ಬರೀ ಸರ್ಕಾರದ ಪ್ರೋಗ್ರಾಮ್ ಅಲ್ಲ, ಬೆಂಗಳೂರಿನ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳು, ಐಟಿ ಕಂಪನಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರ ಜೊತೆ ಸೇರಿ ಈ ಹಬ್ಬವನ್ನು ಅದ್ದೂರಿಯಾಗಿ ಮಾಡಲಾಗ್ತಿದೆ. ಬೆಂಗಳೂರಿನ ಕೆರೆಗಳ ಸುತ್ತಮುತ್ತ ಸ್ಥಳೀಯರಿಂದಲೇ ಸ್ಪೆಷಲ್ ಕಾರ್ಯಕ್ರಮಗಳು ರಂಗಕರ್ಮಿಗಳು, ಕಲಾವಿದರು ಹಾಗೂ ದೇಶದ ಖ್ಯಾತ ಕ್ರೀಡಾಪಟುಗಳ ಭಾಗಿಯಾಗಲಿದ್ದಾರೆ. 500 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಬೆಂಗಳೂರಿನ ಹಳೆಯ ಗ್ರಾಮಗಳ ಪರಂಪರೆಯನ್ನು ಮುನ್ನೆಲೆಗೆ ತರುವುದು. ಬೆಂಗಳೂರಿನ ಹೋಟೆಲ್‌ಗಳ ಜೊತೆಗೆ ಕರ್ನಾಟಕದ ನಾನಾ ಭಾಗಗಳ ದೇಸಿ ಅಡುಗೆ ಹಾಗೂ ರುಚಿಕರ ಆಹಾರ ವೈವಿಧ್ಯದ ಪರಿಚಯ ಮಾಡಲಾಗುತ್ತದೆ.

ಈ ಹಿಂದೆ ಕೇವಲ 200 ಜನ ಸೇರುತ್ತಿದ್ದ ಕವಿಗೋಷ್ಠಿಯಂತಹ ಕಾರ್ಯಕ್ರಮಗಳನ್ನು ಈಗ 1,000ಕ್ಕೂ ಹೆಚ್ಚು ಜನ ಸೇರಿ ಹಬ್ಬದ ತರ ಆಚರಿಸುವ ಪ್ಲಾನ್ ಮಾಡಲಾಗಿದೆ. ಒಟ್ಟಾರೆಯಾಗಿ ಬರೋಬ್ಬರಿ 200 ರಿಂದ 300 ಕ್ಕೂ ಹೆಚ್ಚು ಡಿಫರೆಂಟ್ ಕಾರ್ಯಕ್ರಮಗಳು ಈ ಜಾತ್ರೆಯಲ್ಲಿ ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳ ಕಂಪ್ಲೀಟ್ ಡೀಟೇಲ್ಸ್ ಕೊಡೋಕೆ ಅಂತ ಶೀಘ್ರದಲ್ಲೇ ಒಂದು ಸ್ಪೆಷಲ್ ವೆಬ್‌ಸೈಟ್ ಕೂಡ ಲಾಂಚ್ ಮಾಡಲಿದ್ದು, ಹೆಚ್ಚಿನ ಕಾರ್ಯಕ್ರಮಗಳಿಗೆ ಯಾವುದೇ ನೊಂದಣಿ ಕಡ್ಡಾಯವಿಲ್ಲದೆ ಎಲ್ಲರೂ ಫ್ರೀಯಾಗಿ ಎಂಜಾಯ್ ಮಾಡಬಹುದು. ಎಲ್ಲರಿಗೂ ಉಚಿತ ಎಂಟ್ರಿ ಎಂದ ಮೇಲೆ ಜಾತ್ರೆಯ ಕಳೆ ಇನ್ನು ಕೇಳಬೇಕು. ವಿಜೃಂಭಣೆಯಿಂದ ಬೆಂಗಳೂರು ಜಾತ್ರೆ ನೆರವೇರುವುದಂತೂ ಗ್ಯಾರಂಟಿ. 

ಇನ್ನು ಈ ಬ್ರಹ್ಮಾಂಡ ಜಾತ್ರೆಗೆ ಕಲಾವಿದರ ಸಂಭಾವನೆ ಹಾಗೂ ವೇದಿಕೆ ನಿರ್ಮಾಣಕ್ಕಾಗಿಯೇ ಸುಮಾರು 15 ರಿಂದ 20 ಕೋಟಿ ರೂಪಾಯಿಗಳು ಅಷ್ಟು ಖರ್ಚು ಅಗುವ ಅಂದಾಜಿದೆ. ಐದು ನಗರ ಪಾಲಿಕೆಗಳಿಂದ ತಲಾ 1 ಕೋಟಿ ರೂಪಾಯಿಗಳು ಅನುದಾನದ ಜೊತೆಗೆ, ಬೆಂಗಳೂರಿನ ಬೆಸ್ಕಾಂ ಹಾಗೂ ಜಲಮಂಡಳಿ ಸೇರಿದಂತೆ ಸರ್ಕಾರದ ಹಲವು ಸಂಸ್ಥೆಗಳು ಕೈಜೋಡಿಸಿವೆ. ದೀರ್ಘಕಾಲ ಇಂತಹ ಕಾರ್ಯಕ್ರಮಗಳನ್ನು ಮಾಡೋದ್ರಿಂದ ಬೆಂಗಳೂರಿನ ಪ್ರವಾಸೋದ್ಯಮ ಕೂಡ ಸಕ್ಕತ್ ಬೆಳೆಯಲಿದೆ ಅಂತ ಸಚಿವರು ತಿಳಿಸಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಸಿಲಿಕಾನ್ ಸಿಟಿ ಮಂದಿಗೆ ಅಕ್ಕಪಕ್ಕದ ಊರ ಜಾತ್ರೆಯ ಮಜಾ ಕೊಡೋಕೆ ಬೆಂಗಳೂರು ಜಾತ್ರೆ ಸಜ್ಜಾಗ್ತಿದೆ. ನೀವೆಲ್ಲಾ ಈ ಹಬ್ಬದಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡೋಕೆ ರೆಡಿಯಾಗಿ ಬಿಡಿ ಅಂದಿದ್ದಾರೆ ಸಚಿವರು.

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES