• हिन्दी
  • English
  • मराठी
  • বাংলা
  • தமிழ்
  • മലയാളം
  • ગુજરાતી
  • తెలుగు
  • ಕನ್ನಡ
  • ଓଡ଼ିଶା
  • Z Bharat
  • PHH
  • Business
  • WION
  • facebookyoutubetwitterwhatsapp
Zee Kannada News
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರು
  • /ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ.. ಟ್ರೆಕ್ಕಿಂಗ್‌ಗೆ ಹೋಗಿದ್ದ ಟೆಕ್ಕಿ, ಕಲ್ಲು ಕ್ವಾರಿಯ ನೀರಲ್ಲಿ ಮುಳುಗಿ ಸಾ*ವು

ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ.. ಟ್ರೆಕ್ಕಿಂಗ್‌ಗೆ ಹೋಗಿದ್ದ ಟೆಕ್ಕಿ, ಕಲ್ಲು ಕ್ವಾರಿಯ ನೀರಲ್ಲಿ ಮುಳುಗಿ ಸಾ*ವು

ಆಂಧ್ರಪ್ರದೇಶದ ವಿಜಯವಾಡ ಮೂಲದವರಾದ, ಪ್ರಸ್ತುತ ಬೆಂಗಳೂರಿನ ಹಲಸೂರಿನಲ್ಲಿ ವಾಸಿಸುತ್ತಿದ್ದ 30 ವರ್ಷದ ವಿನಯ್ ಎಂಬುವವರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Written ByBhimappa
Published: Oct 03, 2026, 03:38 PM IST|Updated: Oct 03, 2026, 03:44 PM IST
joinshare
ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯ.. ಟ್ರೆಕ್ಕಿಂಗ್‌ಗೆ ಹೋಗಿದ್ದ ಟೆಕ್ಕಿ, ಕಲ್ಲು ಕ್ವಾರಿಯ ನೀರಲ್ಲಿ ಮುಳುಗಿ ಸಾ*ವು
Image Credit: Bengaluru_Halasuru

About the Author

Bhimappa

Bhimappa

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಲಕ್ಷ್ಮೀದೇವಿಯ ಕೃಪೆ ಬೇಕಾ? ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತು ಇಡಿ, ಮನೆಯಲ್ಲಿ ಸುಖ ಸಮೃದ್ಧಿ ಜೊತೆ ಸಂಪತ್ತು ಹರಿದುಬರುತ್ತದೆ

ಲಕ್ಷ್ಮೀದೇವಿಯ ಕೃಪೆ ಬೇಕಾ? ಸಂಜೆ ಹೊಸ್ತಿಲ ಬಳಿ ಈ ಒಂದು ವಸ್ತು ಇಡಿ, ಮನೆಯಲ್ಲಿ ಸುಖ ಸಮೃದ್ಧಿ ಜೊತೆ ಸಂಪತ್ತು ಹರಿದುಬರುತ್ತದೆ

2

"ನಾನು ಮದುವೆಯಾಗಿದ್ದರೂ, ನನ್ನ ಗಂಡನಿಂದ ದೂರವಿದ್ದೇನೆ"

3

ಮದುವೆ ಬಟ್ಟೆಯಲ್ಲೇ ಸೌಂದರ್ಯ ಶ್ರದ್ಧಾಂಜಲಿ ಸಭೆಗೆ ಬಂದಿದ್ದ ಆ ನಟಿ ಯಾರು ಗೊತ್ತಾ?

4

ನಾಡಹಬ್ಬ ದಸರಾದಲ್ಲಿ ಈ ಬಾರಿ ಮಹತ್ವದ ಬದಲಾವಣೆ!

5

ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿ: 217 ತಾಲ್ಲೂಕುಗಳು ಬರಪೀಡಿತ, ₹7,142 ಕೋಟಿ ಪರಿಹಾರಕ್ಕೆ ಪ್ರಸ್ತಾವನೆ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Bengaluru Anekal Yellammana Doddi area trekking: ಗಾಂಧಿ ಜಯಂತಿ ರಜೆಯ ದಿನದಂದು ಸ್ನೇಹಿತರೊಂದಿಗೆ ಚಾರಣಕ್ಕೆ ಎಂದು ತೆರಳಿದ್ದ ಯುವ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು, ಆನೇಕಲ್ ತಾಲೂಕಿನ ಕಲ್ಲು ಕ್ವಾರಿಯೊಂದರ ಆಳವಾದ ನೀರಿನಲ್ಲಿ ಮುಳುಗಿ ದುರ್ಮರಣ ಹೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಬೆಂಗಳೂರಿನ ಹೊರವಲಯದಲ್ಲಿ ಈ ಘಟನೆ ನಡೆದಿದ್ದು ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಇದ್ದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆಯಿಂದಲೂ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹುಡುಕಾಡುತ್ತಿದ್ದರೂ ಮೃತದೇಹ ಪತ್ತೆ ಆಗುತ್ತಿಲ್ಲ. ಇದರಿಂದ ನಿರಂತರವಾಗಿ ಶೋಧಕಾರ್ಯ ಮುಂದುವರೆದಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಆಂಧ್ರಪ್ರದೇಶದ ವಿಜಯವಾಡ ಮೂಲದವರಾದ, ಪ್ರಸ್ತುತ ಬೆಂಗಳೂರಿನ ಹಲಸೂರಿನಲ್ಲಿ ವಾಸಿಸುತ್ತಿದ್ದ 30 ವರ್ಷದ ವಿನಯ್ ಎಂಬುವವರೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡದಿಂದ ವಲಸೆ ಬಂದಿದ್ದ ಇವರು ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಮೃತ ವಿನಯ್ ಅವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಟೆಕ್ಕಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆ ಇದ್ದಿದ್ದರಿಂದ, ವಿನಯ್ ಸೇರಿದಂತೆ ಒಟ್ಟು ಎಂಟು ಜನರ ಯುವಕರ ತಂಡ 'ಬಿ ಎಲ್ ಆರ್ ಹೈಕ್' BLR Hike ಎಂಬ ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು.

ಸಾಮಾಜಿಕ ಜಾಲತಾಣದ ಈ ಗುಂಪಿನ ಮೂಲಕ ಎಲ್ಲರೂ ಒಟ್ಟಾಗಿ ಚಾರಣಕ್ಕೆ Trekking ತೆರಳಲು ಪ್ಲಾನ್‌ ಮಾಡಿಕೊಂಡಿದ್ದರು. ಅದರಂತೆ, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಬಳಿ ಇರುವ ಯಲ್ಲಮ್ಮನ ದೊಡ್ಡಿ ಪ್ರದೇಶಕ್ಕೆ ಚಾರಣಕ್ಕಾಗಿ ಈ ಎಂಟು ಜನರ ತಂಡ ತೆರಳಿತ್ತು. ಆಳವಾದ ನೀರನ್ನು ಹೊಂದಿದ್ದ ಕಲ್ಲು ಕ್ವಾರಿಯ ಕಡೆಗೆ ವಿನಯ್ ಅವರು ಈಜಾಡುತ್ತಾ ಮುಂದೆ ಹೋಗಿದ್ದಾರೆ. ಇದೇ ವೇಳೆ ಇದ್ದಕ್ಕಿದ್ದಾಗೆ ನೀರಿನಲ್ಲಿ ಮುಳುಗಿದ್ದಾರೆ.  

ಈಜಾಡಲು ಹೋಗಿ ನಡೆದ ಅನಾಹುತ; ಚಾರಣದ ಬಳಿಕ ಸಂಜೆ ಸುಮಾರು 5:30ರ ಸುಮಾರಿಗೆ ಈ ಎಂಟು ಜನರ ತಂಡ ಜಿಗಣಿ ಬಳಿಯ ಯಲ್ಲಮ್ಮನ ದೊಡ್ಡಿಯಲ್ಲಿದ್ದ ಕಲ್ಲು ಕ್ವಾರಿ Stone Quarry ಪ್ರದೇಶಕ್ಕೆ ತೆರಳಿದೆ. ಆ ಸಂದರ್ಭದಲ್ಲಿ ಆಳವಾದ ನೀರನ್ನು ಹೊಂದಿದ್ದ ಕಲ್ಲು ಕ್ವಾರಿಯ ಕಡೆಗೆ ವಿನಯ್ ಅವರು ಈಜಾಡುತ್ತಾ ಹೋಗಿದ್ದಾರೆ. ನೀರಿನಲ್ಲಿ ಈಜಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರುಗಟ್ಟಿದ ಅನುಭವವಾಗಿ ವಿನಯ್ ಅವರು ಪರದಾಡಿದ್ದಾರೆ. ಇದನ್ನು ಗಮನಿಸಿದ ಅವರ ಜೊತೆಗಾರರು ಗಾಬರಿಗೆ ಒಳಗಾಗಿದ್ದಾರೆ. ಸ್ನೇಹಿತರು ಕೂಡಲೇ ನೀರಿನಿಂದ ಮೇಲೆ ಓಡಿ ಬಂದು ವಿನಯ್ ಮೇಲೆ ಬರುವುದನ್ನು ಕಾಯುತ್ತಾ ನಿಂತಿದ್ದಾರೆ. ಆದರೆ, ಎಷ್ಟೇ ಹೊತ್ತು ಕಳೆದರೂ ವಿನಯ್ ನೀರಿನಿಂದ ಮೇಲಕ್ಕೆ ಬಾರದೇ ನೀರಿನಲ್ಲೇ ಇನ್ನಷ್ಟು ಮುಳುಗಲಾರಂಭಿಸಿದರು.

ಅಗ್ನಿಶಾಮಕ ಸಿಬ್ಬಂದಿಯಿಂದ ತೀವ್ರ ಶೋಧ ಕಾರ್ಯ
ಯುವಕ ನಾಪತ್ತೆಯಾಗುತ್ತಿದ್ದಂತೆ ಗಾಬರಿಗೊಂಡ ಸಹಪಾಟಿಗಳು ತಕ್ಷಣವೇ ಜಿಗಣಿ ಪೊಲೀಸ್ ಠಾಣೆಗೆ ಧಾವಿಸಿ ಸಂಪೂರ್ಣ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಜಿಗಣಿ ಪೊಲೀಸರು ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗೆ ತುರ್ತು ಸಂದೇಶ ರವಾಯಿಸಿದ್ದಾರೆ. ಮಾಹಿತಿಯನ್ನು ಪಡೆದ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಬಂದಿದ್ದಾರೆ. ನಿನ್ನೆ ಸಂಜೆ ಇಡೀ ದಿನ ನೀರಿನಲ್ಲಿ ಮುಳುಗಿದ್ದ ಟೆಕ್ಕಿಯನ್ನು ಪತ್ತೆಹಚ್ಚಲು ಭಾರಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಕಲ್ಲು ಕ್ವಾರಿಯ ನೀರು ಬಹಳ ಆಳವಾಗಿದ್ದು, ಕತ್ತಲಾಗಿದ್ದರಿಂದ ನಿನ್ನೆ ಎಷ್ಟೇ ಹುಡುಕಾಡಿದರೂ ವಿನಯ್ ಮೃತದೇಹದ ಸುಳಿವು ಸಿಕ್ಕಿಲ್ಲ.

ಇಂದು ಬೆಳಗ್ಗೆಯಿಂದಲೂ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ವಿನಯ್‌ಗಾಗಿ ಮರುಹುಡುಕಾಟ ಮುಂದುವರಿಸಿದ್ದಾರೆ. ಘಟನಾ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನನ್ನ ಮಗನನ್ನು ಹುಡುಕಿಕೊಡಿ ಎಂದು ರೋಧಿಸುತ್ತಿದ್ದಾರೆ. ಇದನ್ನು ನೆರೆದವರಲ್ಲಿ ಕಣ್ಣೀರು ತರಿಸಿದೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಪತ್ತೆ ಆದ ಮೇಲೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
 

Add Zee News as a Preferred Source
TAGS:
Kannada News